Showing posts with label ಸೈಕಲ್ ದಿನಚರಿ. Show all posts
Showing posts with label ಸೈಕಲ್ ದಿನಚರಿ. Show all posts

24 March 2019

ನರಹರಿಯುವ ಬೆಟ್ಟಕ್ಕೆ...

(ಸೈಕಲ್ ಸರ್ಕೀಟ್ ೪೬೩) 


ನೆನಪಿದೆಯಲ್ಲಾ, ನಿನ್ನೆ (ಫೇಸ್ ಬುಕ್ಕಿನ ಸೈಕಲ್ ಸರ್ಕೀಟ್ ೪೬೨ ನೋಡಿ) ಹೇಳಿದಂತೆ, ಇಂದು (೨೪-೩-೨೦೧೯) ನನ್ನ ಸೈಕಲ್ ಸವಾರಿ ಒಂಟಿಯಲ್ಲ, ಮಂಗಳೂರು ಬೈಸಿಕಲಿಗರ ಸಂಘಕ್ಕೆ ಜಂಟಿ. ತಂಡದ ಲಕ್ಷ್ಯ - ಬಂಟ್ವಾಳದಾಚಿನ ನರಹರಿಪರ್ವತ. ದಿನದ ಬೆಳಕು ಹರಿಯುವ ಮುನ್ನ, ಮೊದಲ ಪಾದದಲ್ಲೇ ಕಂಬಳದ
ಗದ್ದೆಯಿಂದ ಕದ್ರಿಗುಡ್ಡೆಯ ನೆತ್ತಿಗೆ ಒಂದು ಗುಣಿಸು ಒಂದು ಗೇರಿನಲ್ಲಿ ಏರುವ ಪಡಿಪಾಟಲು ನನ್ನದು! ಇದು ಪರೋಕ್ಷವಾಗಿ

14 May 2018

ಮೂಸೋಡೀ ರಕ್ಷಣೆ ?

"ಕೌಟುಂಬಿಕ ಕಲಾಪಗಳಲ್ಲಿ ಪುತ್ತೂರು, ಕೊಣನೂರು, ಬೆಂಗಳೂರು ಎಂದೆಲ್ಲಾ ಓಡಾಡಿ ಓಡಾಡೀ ನನ್ನನ್ನು ಮರೆತದ್ದಾ?" ಕೇಳಿತು ಸೈಕಲ್. "ಮರೆಯಲಾಗದ್ದು ಮತ್ತು ಮರೆಯಬಾರದ್ದೂ ತುಂಬಾ ಇದೆ" ಎಂದು ಅದನ್ನು ಸಮಾಧಾನಿಸುತ್ತ, ಇಂದು ಬೆಳಿಗ್ಗೆಯೇ ಸವಾರಿ ಹೊರಟೆ. ಆ ಮರೆಯಬಾರದ ವಿಚಾರ - ಕಳೆದ ತಿಂಗಳು ಬಂದ ಉಬ್ಬರದ ಅಲೆಗಳಿಂದ, ಈಗ ಬರುತ್ತಿರುವ ಅಕಾಲಿಕ ಮಳೆಯಿಂದ ಮೂಸೋಡಿಯ ರಶೀದ್ ಮನೆ ಏನಾಗಿರಬಹುದು, ಒಂದನ್ನೇ ಧ್ಯಾನಿಸುತ್ತ ಕಾಸರಗೋಡಿನತ್ತ ಪೆಡಲಿದೆ. ನಿನ್ನೆ ಸಂಜೆಯ

28 April 2018

ತುಳುಕಿದ ಸಾಗರ ಮತ್ತು ಅಂಚಿನ ನರಹುಳು

ಬೆಳಗ್ಗೆ ಪತ್ರಿಕೆ ನೋಡಿದ್ದೇ ಉಚ್ಚಿಲದತ್ತ ಸೈಕಲ್ಲೋಡಿಸಿದೆ (೨೩-೪-೧೮ ಸೈಕಲ್ ಸರ್ಕೀಟ್ ೪೦೧). ಭೂಕಂಪ, ಮಳೆ, ಚಂಡಮಾರುತಗಳ ಪ್ರಭಾವವಿಲ್ಲದೆಯೂ ಸಾಗರಬೋಗುಣಿ ಯಾಕೋ ತುಸು ಅಂಡು ಕುಸುಕಿತ್ತು. ಪರಿಣಾಮವಾಗಿ ಎರಡು ಆವರ್ತಗಳಲ್ಲಿ ತುಳುಕಿದ ಕಡಲು ಎಂದಿನಂತಲ್ಲದೆ ಈ ವಲಯದ ಮೀನುಗಾರಿಕಾ ದಾರಿಯವರೆಗೂ ನೆಲ ನೆಕ್ಕಿತ್ತು. ಆ ಅಗಾಧತೆಯ ಸ್ಪರ್ಷವೂ ಹುಲುಮಾನವ(ಅ?)ವ್ಯವಸ್ಥೆಗೆ ಕುಸಿಯುವ ಅನುಭವವನ್ನೇ ತರುತ್ತದೆ ಎನ್ನುವುದನ್ನು ಕೆಲವು ಕಡೆಗಳಲ್ಲಿ ಕಂಡೆ. ಬಟಪಾಡಿ
ಭೂಶಿರದಲ್ಲಿ ನಾಗರಿಕ ಹಾಳಮೂಳ ಪೇರಿಸಿ ‘ನಾವು’ ಎತ್ತರಿಸಿದ ನೆಲಕ್ಕೆ ಏರಿಬಂದ ಅಲೆಗಳು, ಎಲ್ಲವನ್ನು ಚಂದಕ್ಕೆ ಮರಳ ಸಮಾಧಿಗೊಳಪಡಿಸಿದ್ದವು. ನಮ್ಮ ತ್ರಿವೇಣೀ ಸರೋವರ (ಉಚ್ಚಿಲ, ತಲಪಾಡಿ ಮತ್ತು ಕುಂಜತ್ತೂರು ಹೊಳೆಗಳ ಸಂಗಮ) ಸಮುದ್ರಕ್ಕೆ ತೆರೆದುಕೊಂಡಿರಲಿಲ್ಲ. ಆದರೆ ನಡುವೆ ಇದ್ದ ಮರಳದಂಡೆಯ ಹಸಿರು ಮತ್ತು ಕಸರಾಶಿಯನ್ನಷ್ಟೂ ಉಬ್ಬರದಲೆಗಳು ನಿವಾರಿಸಿ, ಒಪ್ಪಗೊಳಿಸಿತ್ತು. ಹಾಗೇ ಸರೋವರದ ಸಂಪತ್ತಿಗಷ್ಟು ಉಪ್ಪುನೀರು ಬೆರೆತದ್ದೂ ಇರಬಹುದು. ಅದು
ಮೇಲ್ದಂಡೆಯ ಕೃಷಿ, ಜೀವನಕ್ಕೆಲ್ಲ ರಗಳೆ ಕೊಟ್ಟಿರಬಹುದು ಎಂದು ಬರಿದೇ ಊಹಿಸಿದೆ.

16 April 2018

ಸೈಕಲ್ಲಿನಿಂದ ಸಕಲ ಸಂಚಾರಿವರೆಗೆ

(ಚಕ್ರೇಶ್ವರ ಪರೀಕ್ಷಿತ ೨೩)
ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ 

ಛಲ ಬಿಡದ ತ್ರಿವಿಕ್ರಮನಂತೆ ಸರ್ಕೀಟಿಗೆ ಸಜ್ಜುಗೊಂಡು ನಾನು ಸೈಕಲ್ ಕೊಟ್ಟಿಗೆಗೆ ಹೋದೆ. ಸೈಕಲ್ ಕತ್ತಲ ಮೂಲೆಯಲ್ಲಿ ಶೀರ್ಷಾಸನ ಮಾಡಿತ್ತು. ದೀಪ ಹಾಕಿ, ಕೀಲೆಣ್ಣೇ ಬಿಟ್ಟು ಸಮಾಧಾನಿಸಿದೆ. ಹೊರಗೆ ಆಕಾಶರಾಯ ಉತ್ತರಿಸಿದ “ಟ-ಠ-ಡ-ಢ-ಣ!” ಅರ್ಥವಾಗಲಿಲ್ವಾ - ಇಂದು ಸರ್ಕೀಟಿಗೆ ರಜೆ. ಅ(ಹ)ವಮಾನ ಶಾಸ್ತ್ರಿಗಳು ಹೇಳಿದ್ದು ನಿಜವಾದರೆ ಇನ್ನೆಂದು ಸೈಕಲ್ ಸರ್ಕಿಟೋ ತಿಳಿದಿಲ್ಲ :-( (೭-೬-೨೦೧೫) 


ವರುಣನ ಮೇಲೆ ತರಣಿ ವಿಜಯ ನೋಡಿ ನಾನು ನಿನ್ನೆ ಸೈಕಲ್ ಏರಿದ್ದೆ. ಲೇಡಿಹಿಲ್, ಕೊಟ್ಟಾರ, ಕೂಳೂರಿಗಾಗಿ ತಣ್ಣೀರುಬಾವಿಯತ್ತ ಹೊರಳಿದೆ. ಅದುವರೆಗೆ `ಮೊದಲ ಮಳೆ’ ಅನೇಕ ಕಡೆ ಚರಂಡಿ ಉಕ್ಕಿಸಿ ಕೊಟ್ಟ ಬೆದರಿಕೆಗಳ ಉತ್ತರಕ್ರಿಯೆಯಾಗಿ ಪೌರ ಕಾರ್ಮಿಕರು ಅರೆಮನಸ್ಕತೆಯಲ್ಲಿ ಕಳೆ ಕಿತ್ತು, ಇಲ್ಲದ ಚರಂಡಿ ಬಿಡಿಸುತ್ತಿದ್ದದ್ದು ಗಮನಿಸಿದ್ದೆ. ಆದರಿಲ್ಲಿ,

12 April 2018

ಮೂರು ಮೂರುಕಣ್ಣರ ಭೇಟಿ, ಮೊ.ಸೈಕಲ್ ಸರ್ಕೀಟಿನಲ್ಲಿ!


ಜಂಟಿ ಸೈಕಲ್ ಮಾರಿಹೋದ ಮೇಲೆ, ಒಂಟಿ ಸೈಕಲ್ಲೇರಿ ನಾ ಕಂಡ ಲೋಕದ ‘ಪ್ರಥಮಾನುಭವ ವರದಿ’ ದೇವಕಿಗೆ ಸಾಕಾಗುತ್ತಿರಲಿಲ್ಲ. ಅದನ್ನು ಸ್ವಲ್ಪ ತುಂಬಿಕೊಡುವಂತೆ ಕಳೆದ ವರ್ಷ (೭-೩-೨೦೧೭) ಇಂಥದ್ದೇ ಉರಿಬಿಸಿಲಿನಲ್ಲಿ ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ನಾವಿಬ್ಬರು ಮನೆಯಲ್ಲೇ ತಿಂಡಿ ಮುಗಿಸಿ ಮೋಟಾರ್ ಸೈಕಲ್ ಏರಿದೆವು. ತೊಕ್ಕೋಟು, ಕಿನ್ಯ ಅಡ್ಡ ರಸ್ತೆಗಾಗಿ ಮೊದಲ ಭೇಟಿ ಗೆಳೆಯ ಪ್ರಸನ್ನನ ಸಾವಯವ ಕೃಷಿಕ್ಷೇತ್ರ. ಇಲ್ಲಿಗೆ ಇದಕ್ಕೂ ಎರಡು ತಿಂಗಳ ಹಿಂದಿನ ನನ್ನೊಂದು ಸೈಕಲ್ ಸರ್ಕೀಟಿನ ಪೀಠಿಕೆ ಬೇಕಾಗುತ್ತದೆ: 

ಪ್ರಸನ್ನನ ಕುಟುಂಬ, ಕಿನ್ಯದ ಬಳಿ ಹತ್ತಿಪ್ಪತ್ತು ವರ್ಷಗಳ ಹಿಂದೆ ಅನುಕೂಲಕ್ಕೊದಗಿತೆಂದು ಮೂರು ತುಂಡು ಕುರುಚಲು ಕಾಡುಗುಡ್ಡೆ ಕೊಂಡಿದ್ದರು (ಒಟ್ಟು ವಿಸ್ತೀರ್ಣ ಒಂದೆರಡು ಎಕ್ರೆಯಿರಬಹುದು). ನನ್ನ ಸಹಜ ಸಸ್ಯ ಪುನರುಜ್ಜೀವನದ ಪ್ರಯೋಗವನ್ನು (ಅಭಯಾರಣ್ಯದ್ದು) ಪ್ರಸನ್ನ ಅನುಸರಿಸಲೆಂದು ನಾನು ಒತ್ತಾಯ ಹೇರಿದ್ದಿತ್ತು. ಆದರೆ ಆಗ ಅವನ ಕುಟುಂಬ ಸಣ್ಣದಾಗಿ ಹಣಪ್ರಪಂಚದಲ್ಲಿ ಕೈಕಟ್ಟಿದ್ದಕ್ಕೆ, ಹಾಗೇ ಬಿಟ್ಟಿದ್ದರು. ಇದ್ದಕ್ಕಿದ್ದಂತೆ ಮೂರು ತಿಂಗಳ ಹಿಂದೊಮ್ಮೆ ಪ್ರಸನ್ನ "ಕಿನ್ಯದ ಜಮೀನಿನಲ್ಲಿ ಕೃಷಿ

09 April 2018

ಸೈಕಲ್ ಆಗಬೇಕು ಸರಳತೆಯ ಸಂಕೇತ

(ಚಕ್ರೇಶ್ವರ ಪರೀಕ್ಷಿತ ೨೨)
ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ 


ಸೈಕಲ್ ತತ್ತ್ವಜ್ಞಾನ:
ಸರಳ, ಆರೋಗ್ಯಪೂರ್ಣ, ಮಿತವ್ಯಯಿ ಇತ್ಯಾದಿ ಖ್ಯಾತಿಯೊಡನೆ ಚಲಾವಣೆಗಿಳಿದ ಹೊಸ ತಲೆಮಾರಿನ ಸೈಕಲ್ ಸವಾರಿಯಲ್ಲಿ ದುಬಾರಿ ಸೈಕಲ್ಲುಗಳನ್ನೇನೋ ಗುಣಮಟ್ಟದಿಂದ ಸಮರ್ಥಿಸಿಕೊಳ್ಳಬಹುದು. ಆದರೆ ಚಟುವಟಿಕೆಗಳು – ಕೇವಲ ಕ್ರಮಿಸಿದ ಅಂತರಗಳ ದಾಖಲೆಗಾಗಿ, ತೀವ್ರ ಏರಿಳಕಲುಗಳನ್ನಷ್ಟೇ ಆಯ್ದು `ಜಯಿಸುವುದ'ಕ್ಕಾಗಿ ನಡೆಯುವುದು, ಅದರ `ಬೆಂಬಲ'ಕ್ಕಾಗಿ ಅಸಂಖ್ಯ ಪೆಟ್ರೋಲ್ ವಾಹನಗಳು ಓಡಾಡುವಂತಾಗುವುದು, ಆ ಸವಾರರು ನಿತ್ಯಾಹಾರ ಮೀರಿ ಶಕ್ತಿವರ್ಧಕಗಳನ್ನು
ಆಶ್ರಯಿಸುವುದು ಎಲ್ಲಾ ಸರಿ ಅಲ್ಲ. ಹತ್ತೆಂಟು ಸಲಕರಣೆಗಳನ್ನು ಸೈಕಲ್ಲಿಗೆ ಹೇರಿ ಸ್ವಾನುಭವಕ್ಕೆ ತೆರೆದುಕೊಳ್ಳುವುದಕ್ಕಿಂತ ಸ್ವಮೋಹದಲ್ಲಿ ಕಳೆದುಹೋಗುವುದು ನನಗಂತೂ ಹಿಡಿಸಿದ್ದೇ ಇಲ್ಲ. ಇಲ್ಲೆಲ್ಲ `ಪ್ರಕೃತಿಯೊಡನೆ ಸಂವಾದ' ಎನ್ನುವುದು ಕೇವಲ ಮಾತಿನ ಅಲಂಕಾರ, ವ್ಯಕ್ತಿ ಅಹಂಕಾರದ ಇನ್ನೊಂದು ರೂಪವಾಗಿಯೇ ಸೈಕಲ್ ಕಾಣುತ್ತದೆ. ಚಿತ್ರದಲ್ಲಿ ಹೇಗೋ ಬರವಣಿಗೆಯಲ್ಲೂ ‘ಸ್ವಂತೀ’ಗಳನ್ನು (selfie) ನಿರಾಕರಿಸಿ, ಸ್ವಾನುಭವದ ಮಿತಿಯಿದ್ದರೂ ಲೋಕಹಿತದ ದೃಷ್ಟಿಕೋನದಲ್ಲೇ ನನ್ನ ದೈನಂದಿನ ಸೈಕಲ್ ಸರ್ಕೀಟುಗಳು ರೂಪುಗೊಳ್ಳುತ್ತವೆ.

06 April 2018

‘ಕಡಲ ಗುಳಿಗೆ’ ದಿನೇಶ್ ಉಚ್ಚಿಲ

(ಚಿತ್ರ ನಿರ್ಮಾಣದ ಅನಧಿಕೃತ ಕಥನ - ೩)

(ಚಕ್ರೇಶ್ವರ ಪರೀಕ್ಷಿತ ೨೧)


ಅಭಯ ‘ಪಡ್ಡಾಯಿ’ ಚಿತ್ರ ಯೋಜನೆಯೊಡನೆ ಹೊರಟ ಮೊದಲಲ್ಲೇ ನಾವಿಬ್ಬರೂ ಭೇಟಿಯಾದ ವ್ಯಕ್ತಿ - ಕಣ್ವತೀರ್ಥದ ಬಳಿಯಿರುವ ದಿನೇಶ್ ಉಚ್ಚಿಲ. ಸುಮಾರು ಎರಡೂವರೆ ದಶಕಗಳ ಹಿಂದೆ ಇವರ ಚಾಮುಂಡೀ ಮೀನುಗಾರಿಕಾ ದೋಣಿ ಪಡೆಗಳೊಡನೆ ನಾವು ಸುಮಾರು ಇಪ್ಪತ್ತೈದು ಮಂದಿ ಆಳ ಸಮುದ್ರದ ಮೀನುಗಾರಿಕಾ ಅನುಭವ ನೋಡಲು ಹೋಗಿಬಂದದ್ದು ಅವಿಸ್ಮರಣೀಯ. (ನೋಡಿ: ಸಾಗರ ಸವಾರರು) ಒಂದು ಕಾಲದಲ್ಲಿ ಕಡಲಿನಲ್ಲಿ ಮೀನು ಗುರುತಿಸುವಲ್ಲಿ, ಬಲೆಬೀಸುವ ಜಾಣ್ಮೆ ಹಾಗೂ ತಾಕತ್ತಿನಲ್ಲಿ ಕಡಲ ಗುಳಿಗನೆಂದೇ ಖ್ಯಾತಿವೆತ್ತ ದಿನೇಶರು ಇಂದು ಪ್ರಾಯ ಸಹಜವಾಗಿ ಮೀನುಗಾರಿಕೆಯಿಂದ ನಿವೃತ್ತರಾಗಿ, ಅದೇ ಕಣ್ವತೀರ್ಥದ ಬಳಿಯ ಕಡಲಕಿನಾರೆಯ ಮನೆಯಲ್ಲೇ ಇದ್ದಾರೆ.

02 April 2018

ಕುತ್ತಿಗೆವರೆಗೆ ಹುಗಿದು, ಆನೆಯಿಂದ ಮೆಟ್ಟಿಸಿ....


(ಚಕ್ರೇಶ್ವರ ಪರೀಕ್ಷಿತ ೨೦)

ನಿನ್ನೆ ಸಂಜೆಯ ಸೈಕಲ್ ಸವಾರಿಗೆ ಪೀಠಿಕೆಯಾಗಿ ಒಂದು ಕತೆ:
ತೆನ್ನಾಲಿರಾಮನ ಮೇಲೆ ರಾಜದ್ರೋಹದ ಆರೋಪ ಬಂತು. ಅವನನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹುಗಿದು, ಆನೆಯಿಂದ ಮೆಟ್ಟಿಸಿ ಕೊಲ್ಲುವ ಆಜ್ಞೆ ಆಯ್ತು. ರಾಜಭಟರು ರಾಮನನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹುಗಿದು ನಿಲ್ಲಿಸಿ, ಆನೆ ತರಲು ಹೋದರು. ಇತ್ತ ಒಬ್ಬ ಗೂನನ ಸವಾರಿ ಬಂತು. ಆತ ಆಶ್ಚರ್ಯದಲ್ಲಿ ಕೇಳಿದ "ಏನಿದು?" ರಾಮ ಅರೆನಿಮೀಲಿತ ನೇತ್ರನಾಗಿ, ಗಂಭೀರಧ್ವನಿ ತೆಗೆದಿದ್ದಾನೆ "ಧ್ಯಾನ ಭಂಗ ಮಾಡಬೇಡ. ಇನ್ನೇನು ಕೆಲವೇ ಸೆಕೆಂಡುಗಳಲ್ಲಿ ನನ್ನ ಬೆನ್ನಹುರಿ ನೇರವಾಗಲಿದೆ!" ಅಪ್ರತಿಭ ಗೂನ ಆ ಸೆಕೆಂಡುಗಳು ಸಲ್ಲುವುದನ್ನು ಕಾದು, ಅವಸರವಸರವಾಗಿ ರಾಮನನ್ನು ಮಣ್ಣಬಂಧನದಿಂದ ಬಿಡಿಸಿದ. ಮತ್ತೆ

31 March 2018

ಸೀ ವಾಕ್, ಸನ್‍ಸೆಟ್ ಪಾಯಿಂಟ್ ಮತ್ತೆ.........?

ಚಕ್ರೇಶ್ವರ ಪರೀಕ್ಷಿತ - ೧೯


ಸಂಜೆಯ ಸೈಕಲ್ ಸವಾರಿ ತೊಕ್ಕೋಟಿಗೆ ಹೋಯ್ತು. ತೊಕ್ಕೋಟಿನ ರೈಲ್ವೇ ಮೇಲ್ಸೇತು ದಾಟಿದ್ದೇ ಬಲದ ಪೆರ್ಮನ್ನೂರಿಗಿಳಿದೆ. ಬಂದ ದಿಕ್ಕಿಗೇ ಮರಳಿದಂತೆ, ರೈಲ್ವೇ ಹಳಿಯ ಸಮಾನಾಂತರದ ದಾರಿಯನ್ನೇ ಆಯ್ದುಕೊಳ್ಳುತ್ತ ಹೋದೆ. ಸವೇರಪುರ್ಬುಗಳ (ನೋಡಿ: `ಸ್ವಚ್ಛತೆ’ಯ ಹಾದಿಯಲ್ಲಿ ನೇತ್ರಾವತಿಯ ನಾಡಿ ಮಿಡಿದು) ಮನೆಯ ಬಳಿ ಮತ್ತೆ ನೇತ್ರಾವತಿ ದರ್ಶನ.

30 March 2018

ಡೆಮಾಲಿಷ್ ಮಾಡಿ, ಹೊಸ್ತು ಕಟ್ಟಿ...


ಚಕ್ರೇಶ್ವರ ಪರೀಕ್ಷಿತ - ೧೮


ಸಂಜೆ ಸೈಕಲ್ ಸುತ್ತಾಟ ಪಣಂಬೂರು ಕಡಲ ಕಿನಾರೆ ಮುಟ್ಟಿದಲ್ಲಿಂದ ತೊಡಗಿತು. ನಿರಂತರ ತೊಳತೊಳಸುತ್ತಿದ್ದ ಸಮುದ್ರದಲ್ಲಿ ಒಂದು ಕಣ್ಣು ಕೀಲಿಸಿದ್ದಂತೆ, ಹಿತವಾಗಿ ತೀಡುತ್ತಿದ್ದ  ಗಾಳಿಗೆ ಮೈಯೊಡ್ಡಿ ಪೆಡಲೊತ್ತುತ್ತಿದ್ದರೆ ಬೈಕಂಪಾಡಿ, ಹೊಸಬೆಟ್ಟು ಕವಲುಗಳು ಕಳೆದದ್ದೇ ಗೊತ್ತಾಗಲಿಲ್ಲ. ಮೊದಲು, ಪಣಂಬೂರಿನಲ್ಲಿ ಒಂದು ಕಂಟೇನರ್-ಸಂಪರ್ಕದಲ್ಲಿ ಪ್ರಗತಿ ವಿಚಾರಿಸಿಕೊಂಡಿದ್ದೆ. ಹಿಂದಿರುಗುವ ಮೊದಲು, ಎಂಸಿಎಫ್ ಹಿಂದೆಯಿದ್ದ ಇನ್ನೊಂದೇ ಕಂಟೇನರ್-ಸಂಪರ್ಕವನ್ನೂ ವಿಚಾರಿಸುವ ಅಗತ್ಯವಿತ್ತು. ಹಾಗಾಗಿ ಸುರತ್ಕಲ್ ಕವಲನ್ನು ಗುರುತಿಟ್ಟು, ಬಲ ಹೊರಳಿ, ಹೆದ್ದಾರಿ ಸೇರಿದೆ. ಮಂಗಳೂರುಮುಖಿಯಾಗಿ, ಎನ್ನೆಂಪೀಟೀ ವಸತಿ ಸಮೂಹ ಮತ್ತು ಶಾಲಾದಾರಿಯಲ್ಲಿ ಎಡ ಕವಲು ಹಿಡಿದೆ. ನೇರ ದಾರಿ ಉದ್ಯಮ ರಕ್ಷಣಾ ದಳದ ಕಚೇರಿಯಲ್ಲಿ ಬಹುತೇಕ ಮುಗಿದಂತಿತ್ತು. ಬಲದ ಕವಲಿಗಾಗಿ ಹೋಗಿ, ಅನಿವಾರ್ಯವಾಗಿ ಬಳಕೆ ತಪ್ಪಿ ಹೋದಂತಿದ್ದ ಪೂರ್ವ ದಿಶೆಗೆ ತಿರುಗಿಕೊಂಡೆ.  ಅಲ್ಲಿ ಈ ‘ಹಾಳೂರು’ ಕಾಣ ಸಿಕ್ಕಿತು!

26 March 2018

ಸೈಕಲ್ಲೇರಿ ಕಂಡ ಅಭಿವೃದ್ಧಿಯ ಕಥನಗಳು

(ಚಕ್ರೇಶ್ವರ ಪರೀಕ್ಷಿತ ೧೭) 
ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ 



ಬೆಪ್ಪನಾಗದ ಸೈಕಲ್ ಶಂಕರ: ಸೈಕಲ್ ಮಹಾಯಾನದ ಅಂತಿಮ ಕಂತಿಗೆ ಪ್ರತಿಕ್ರಿಯೆಯಲ್ಲಿ ಡಾ| ಜಗನ್ನಾಥ ರೈ, ಸಂದೀಪ್ “ನಾವು ಸೈಕಲ್ಲಿನ ಬಹೂಪಯೋಗವನ್ನು ಪ್ರೋತ್ಸಾಹಿಸುತ್ತಿಲ್ಲವೇನೋ...” ಎಂದು ಆತ್ಮಶೋಧಕ್ಕಿಳಿದಿದ್ದರು. “ಹಾಗಾದರೆ ನನ್ನ ಸೈಕಲ್ ಸರ್ಕೀಟ್ ಕೇವಲ ನನ್ನ ವ್ಯಾಯಾಮವೇ” ಎಂಬ ಯೋಚನೆಯಲ್ಲೇ ಸೈಕಲ್ ಮೆಟ್ಟತೊಡಗಿದೆ. ಪಂಪ್ವೆಲ್, ಪಡೀಲ್, ಪರಂಗಿಪೇಟೆ ಕಳೆಯುವವರೆಗೂ ನನಗೆ ದಾರಿ ಖರ್ಚಿಗೆ ಅದೇ ಒದಗಿತು! ಅಲ್ಲಿ ತುಂಬೆಯ ಹೊಸ ಅಣೆಕಟ್ಟು ನೋಡುವ ಮಿದುಳಲೆ ಬಂದದ್ದಕ್ಕೆ ನಿಂತೆ. ನೇತ್ರಾವತಿ ಹೋರಾಟಗಾರ, ಜೋಡುಮಾರ್ಗದ ಗೆಳೆಯ ಸುಂದರರಾಯರ ಕಿವಿ ಚರವಾಣಿಯಲ್ಲೇ ಕಚ್ಚಿ “ಬರ್ತೀರಾ” ಕೇಳಿದೆ. ಅವರು ಮಂಚಿಯ ಕಾರಂತೋತ್ಸವದಲ್ಲಿ `ಬೆಪ್ತಕ್ಕಡಿ ಭೋಳೇಶಂಕರ’ ನೋಡಲು ಹೊರಟು ನಿಂತಿದ್ದರು. ಇನ್ನು ಮುಂದುವರಿದು ವಾಪಾಸಾಗುವ ಕತ್ತಲ ದಾರಿಯಲ್ಲಿ ನಾನೂ ಅದೇ (ಬೆಪ್ತಕ್ಕಡಿ....) ಆಗುವುದು ಬೇಡವೆಂದು ಹಿಮ್ಮುಖನಾದೆ.

05 March 2018

ಆಭಾಳ ಪ್ರೀತಿಯೊಡನೆ ಬೆಂಗಳೂರು ಪ್ರದಕ್ಷಿಣೆ

(ಚಕ್ರೇಶ್ವರ ಪರೀಕ್ಷಿತ ೧೬)


೧. ಆಭಾ ಕರೆದಮೇಲೇ ಹೋಗದಿರಲಾದೀತೇ?:

ಅಭಯನ ‘ಪಡ್ಡಾಯಿ’ ಚಿತ್ರೀಕರಣದ ಉದ್ದಕ್ಕೆ ರಶ್ಮಿ (ಸೊಸೆ) ಆಭಾ (ಮೊಮ್ಮಗಳು) ನಮ್ಮೊಡನಿದ್ದರು. ನಮ್ಮ ಮನೆಯಲ್ಲೇ ಅವತರಿಸಿ, ಗಾಳಿಯನ್ನು ಕಲಕಿ ಝಾಡಿಸುತ್ತಿದ್ದಂತೆ ಬೆಂಗಳೂರಿಸಿದ್ದ ಮೊಮ್ಮಗು, ಈಗ ಮಗುಚಿ, ಹರಿಯುವಷ್ಟಾಗಿತ್ತು. ಸಹಜವಾಗಿ ಮನೆಯ ನೆಲದಲ್ಲಿ ವಿರಮಿಸಿದ್ದ ಡಬ್ಬಿ, ಚೀಲಗಳು ಹೆದರಿ ಕಾಲ್ಮಣೆ, ಮೇಜುಗಳನ್ನೇರಿ ಕುಳಿತವು. ಕಾಲೊರಸುಗಳು, ಬಟ್ಟೆದೋಟಿಗಳು ಬಚ್ಚಲು, ಹಿತ್ತಲು ಸೇರಿ ಬಾಗಿಲೆಳೆದುಕೊಂಡವು. ಆಭಾ ವಿಕಾಸಪಥದ ಮುಂದಿನ ನಾಲ್ಕೆಂಟು ದಿನಗಳು (ಸರೀಸೃಪಗಳು ನಾಲ್ಗಾಲಿನವಾದ) ಜೀವವಿಕಾಸ ಬೃಹನ್ನಾಟಕದ ಕಿರುರೂಪಕವೇ ಆಗಿತ್ತು. ಆಕೆ
ನಿರಾತಂಕವಾಗಿ ತೆವ
ಳುತ್ತಿದ್ದ ಕುರ್ಚಿಯ ತಳ ಈಗ ತಲೆಗೆ ಹೆಟ್ಟತೊಡಗಿತ್ತು; ನೆಲಕ್ಕೆ ಕೈಕೊಟ್ಟು ಎದೆ ಎತ್ತುತ್ತಿದ್ದಳು. ನುಸುಳಿ ಸಾಗುತ್ತಿದ್ದ ಟೀಪಾಯ್ ಸಂದು ಇರುಕಿಸಿತ್ತು; ನಾಲ್ಗಾಲು ತೊಡಗಿದ್ದಳು. ಕುರ್ಚಿ ಹತ್ತಿ ಕುಳಿತಳು, ಟೀಪಾಯ್ ಮೇಜುಗಳೆಲ್ಲವೂ ಕೈಯಾಸರೆಯಲ್ಲಿ ನಿಲ್ಲುವ ತಾಣಗಳಾದವು. ಅಗಮ್ಯವೆಂದೇ ಬಿಟ್ಟಿದ್ದ ಮಹಡಿಗೇರುವ ಸೋಪಾನಸರಣಿಯ ಬುಡಕ್ಕೆ ಹೋಗಿ ಈಗ ಆಕೆ “ಹತ್ತಿ” ಎಂದು ಮೊಣಕಾಲಿಕ್ಕಿದರೆ ಸಾಕು, ಬೆಂಗಾವಲಿನವರು ಥೇಟ್ ‘ವಿಕೆಟ್ ಕೀಪರ್’ಗಳಾಗಲೇಬೇಕು! ಎರಡೂ ಹಸ್ತ ಅರಳಿಸಿ ಹಿಂದುರುಳದಂತೆ ಕಾಯಲೇಬೇಕು. ನಾವು ತಿನ್ನುವ ಯಾವುದಕ್ಕೂ ಅವಳ ಪೂರ್ಣ ತೆರೆದ ಬಾಯಿ ಪಾಲು ಕೇಳುತ್ತಿತ್ತು. ಹಾಗೆಂದು ಕುಶಿ ಹೆಚ್ಚಿ ಯಾವುದನ್ನೂ ಇದ್ದಂತೆ ಕೊಡುವಂತಿಲ್ಲ; ಇರುವ ಮೂರೂವರೆ ಹಲ್ಲು ತಪ್ಪಿಸಿ ಗಂಟಲು ಕಟ್ಟಿಬಿಟ್ಟರೆ? ಮೆತ್ತಗಿನ ದೋಸೆ, ರೊಟ್ಟಿಯಾದರೂ ಹಿಸಿದು ಕೊಡಬೇಕು. ಚಕ್ಕುಲಿ, ಚಿಪ್ಸ್ ಕುಟ್ಟಾಣಿಗಿಕ್ಕಿ ಪುಡಿ ಮಾಡಿ ಕೊಟ್ಟರೆ "ಎಷ್ಟು ತಿಂದರೂ ಸಾಲದು"! "ಆಂ" (=ತಿನ್ತೇನೆ?) ಸೌಮ್ಯ ಅರ್ಜಿ, "ಆಂಪುಡ್ಕ" (=ತಿನ್ನುವುದನ್ನು ಕೊಡೋ?) ಹಕ್ಕೊತ್ತಾಯ!

05 February 2018

ಸೈಕಲ್ಲೇರಿ ಕಂಡ ಅಭಿವೃದ್ಧಿಯ ಕಥನಗಳು

(ಚಕ್ರೇಶ್ವರ ಪರೀಕ್ಷಿತ ೧೫)
ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ

ಬೆಪ್ಪನಾಗದ ಸೈಕಲ್ ಶಂಕರ: 
ಸೈಕಲ್ ಮಹಾಯಾನದ ಅಂತಿಮ ಕಂತಿಗೆ (ಬೆಂಗಳೂರು ಇನ್ನು ಹತ್ತಿರ) ಪ್ರತಿಕ್ರಿಯೆಯಲ್ಲಿ ಡಾ| ಜಗನ್ನಾಥ ರೈ, ಸಂದೀಪ್ “ನಾವು ಸೈಕಲ್ಲಿನ ಬಹೂಪಯೋಗವನ್ನು ಪ್ರೋತ್ಸಾಹಿಸುತ್ತಿಲ್ಲವೇನೋ...” ಎಂದು ಆತ್ಮಶೋಧಕ್ಕಿಳಿದಿದ್ದರು. “ಹಾಗಾದರೆ ನನ್ನ ಸೈಕಲ್ ಸರ್ಕೀಟ್ ಕೇವಲ ನನ್ನ ವ್ಯಾಯಾಮವೇ” ಎಂಬ ಯೋಚನೆಯಲ್ಲೇ ಸೈಕಲ್ ಮೆಟ್ಟತೊಡಗಿದೆ. ಪಂಪ್ವೆಲ್, ಪಡೀಲ್, ಪರಂಗಿಪೇಟೆ ಕಳೆಯುವವರೆಗೂ ನನಗೆ ದಾರಿ ಖರ್ಚಿಗೆ ಅದೇ ಒದಗಿತು! ಅಲ್ಲಿ ತುಂಬೆಯ ಹೊಸ ಅಣೆಕಟ್ಟು
ನೋಡುವ ಮಿದುಳಲೆ ಬಂದದ್ದಕ್ಕೆ ನಿಂತೆ. ನೇತ್ರಾವತಿ ಹೋರಾಟಗಾರ, ಜೋಡುಮಾರ್ಗದ ಗೆಳೆಯ ಸುಂದರರಾಯರ ಕಿವಿ ಕಚ್ಚಿ “ಬರ್ತೀರಾ” ಕೇಳಿದೆ. ಅವರು ಮಂಚಿಯ ಕಾರಂತೋತ್ಸವದಲ್ಲಿ `ಬೆಪ್ತಕ್ಕಡಿ ಭೋಳೇಶಂಕರ’ ನೋಡಲು ಹೊರಟು ನಿಂತಿದ್ದರು. ಇನ್ನು ಮುಂದುವರಿದು ವಾಪಾಸಾಗುವ ಕತ್ತಲ ದಾರಿಯಲ್ಲಿ ನಾನೂ ಅದೇ (ಬೆಪ್ತಕ್ಕಡಿ....) ಆಗುವುದು ಬೇಡವೆಂದು ಹಿಮ್ಮುಖನಾದೆ. 

20 December 2017

ಮೈಸೂರು ಸುತ್ತು, ನೆನಪನ್ನು ಹೊತ್ತು


(ಚಕ್ರೇಶ್ವರ ಪರೀಕ್ಷಿತ ೧೪)
ಮಂಗಳೂರಲ್ಲ, ಮೈಸೂರು ಯಾಕೆ?

ನನಗೆ ಹೇಳ್ಕೊಳ್ಳೋಕ್ ಒಂದೂರು ಮಡಿಕೇರಿ. ಅದು ನನ್ನ ಹುಟ್ಟೂರು. ಅಲ್ಲಿ ನಾನಿದ್ದದ್ದು ಮೊದಲ ಸುಮಾರು ಹತ್ತು ವರ್ಷ ಮಾತ್ರ. ಮತ್ತೆ ಎರಡು ವರ್ಷ ಬಳ್ಳಾರಿ, ಐದು ವರ್ಷ ಬೆಂಗಳೂರು, ಮತ್ತಷ್ಟೇ ವರ್ಷ ಮೈಸೂರು. ಅಲ್ಲಿಗೆ ನನ್ನ ವಿದ್ಯಾರ್ಥಿ ದೆಸೆ ಮುಗಿದಿತ್ತು. ಪ್ರಸ್ತುತ ನಲ್ವತ್ತಕ್ಕೂ ಮಿಕ್ಕು ವರ್ಷಗಳ ವೃತ್ತಿ ಹಾಗೂ ವಾಸದ ಬಲದಲ್ಲಿ ನಾನು ನಿಸ್ಸಂದೇಹವಾಗಿ ಮಂಗಳೂರಿಗ. ಆದರೂ ನನ್ನ ಮೂಲ ಕುಟುಂಬ ಮೈಸೂರಿನಲ್ಲಿ ಖಾಯಂ ನೆಲೆ ನಿಂತದ್ದರಿಂದ ನನ್ನ
ಜೀವನದಲ್ಲಿ ಅದಕ್ಕೆ ಮಹತ್ವ ಹೆಚ್ಚು. ಪ್ರಾಸಂಗಿಕವಾಗಿ ಮೈಸೂರು ನನಗೆ ಶೈಕ್ಷಣಿಕ ಉನ್ನತಿಯನ್ನು ಮಹಾರಾಜ ಕಾಲೇಜು ಹಾಗೂ ಮಾನಸಗಂಗೋತ್ರಿಯಲ್ಲಿ ಒದಗಿಸಿತು. ಇಲ್ಲೇ ಎನ್ಸಿಸಿ ಮತ್ತು ದಖ್ಖಣ ಪರ್ವತಾರೋಹಣ ಸಂಸ್ಥೆಯ ಹವ್ಯಾಸೀ ಚಟುವಟಿಕೆಗಳು ನನ್ನ ಮನೋಭೂಮಿಕೆಯನ್ನು ವೃತ್ತಿ ಸಾಹಸಕ್ಕೆ ಸಜ್ಜುಗೊಳಿಸಿದವು. ಎಲ್ಲಕ್ಕೂ ಮುಖ್ಯವಾಗಿ ತನ್ನ ಸಮೃದ್ಧ ಮತ್ತು ಸಹಜ ಪುಸ್ತಕ ಸಂಸ್ಕೃತಿಯಿಂದ, ನನ್ನ ವೃತ್ತಿಜೀವನಕ್ಕೆ ದೃಢ ಉಡ್ಡಯನ ಕೇಂದ್ರವಾಗಿ ನಿಂತದ್ದು ಮೈಸೂರು.

01 May 2017

ಟ್ರಿನ್ ಟ್ರಿನ್ - ಮೈಸೂರನ್ನು ಆವರಿಸಿದ ಸೈಕಲ್ಲು

(ಚಕ್ರೇಶ್ವರ ಪರೀಕ್ಷಿತ ೧೩)

[ನನ್ನಮ್ಮ ಗಂಟುವಾತಕ್ಕೆ ಸೇರಿಬಂದ ವೃದ್ಧಾಪ್ಯದಿಂದ (೮೭ವರ್ಷ) ಬಹಳ ಬಳಲುತ್ತಲೇ ಇದ್ದಾಳೆ. ಆಕೆಯನ್ನು ಖಾಯಂ ಎನ್ನುವಂತೆ ಮೈಸೂರಿನ ಮನೆ – ಅತ್ರಿಯಲ್ಲಿ, ತಮ್ಮ – ಅನಂತವರ್ಧನ ಮತ್ತು ಅವನ ಹೆಂಡತಿ - ರುಕ್ಮಿಣಿಮಾಲಾ, ಉತ್ತಮ ವೈದ್ಯಕೀಯ ನೆರವಿನೊಡನೆ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಈಚೆಗೆ ಅವರಿಬ್ಬರಿಗೂ ಒಂದು ವಾರದ ಮಟ್ಟಿಗೆ ಪರವೂರಿಗೆ ಹೋಗುವ ಅನಿವಾರ್ಯತೆ ಬಂದಾಗ, ನಾವಿಬ್ಬರು ಅಲ್ಲಿಗೆ ಹೋಗಿ ಅಮ್ಮ ಮತ್ತು ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡಿದ್ದೆವು. ಆ ಅವಧಿಯಲ್ಲಿ ಅಮ್ಮನ ಅನುಪಾನ, ಆರೈಕೆಗಳನ್ನು ಪೂರ್ಣ ನಡೆಸಿದವಳು ದೇವಕಿ; ನಾನು ಹುಸಿ-ಧೈರ್ಯಕ್ಕಷ್ಟೇ ಇದ್ದವ! 

೧೯೬೯ ರಿಂದ ೧೯೭೪ ರವರೆಗೆ, ನನ್ನ ಕಾಲೇಜು ವಿದ್ಯಾಭ್ಯಾಸದ ದಿನಗಳಲ್ಲಿ ನಾನು ಕುಟುಂಬದ ಭಾಗವಾಗಿಯೇ ಮೈಸೂರಿನಲ್ಲೇ ಇದ್ದೆ. ಮೊದಲ ಎರಡು ವರ್ಷ ಸರಸ್ವತೀಪುರದ ೧೩ನೇ ಮುಖ್ಯರಸ್ತೆಯ ಬಾಡಿಗೆಮನೆಯಲ್ಲಿ, ಅನಂತರ ಕಾಮಾಕ್ಷೀ ಆಸ್ಪತ್ರೆ ರಸ್ತೆಯ ಸ್ವಂತಮನೆ – ಅತ್ರಿಯಲ್ಲಿ; ಆಗ ಅದು ನನ್ನ ಮನೆಯೂ ಆಗಿತ್ತು. ೧೯೭೪ರಲ್ಲಿ ಸ್ವೋದ್ಯೋಗ (ಅತ್ರಿ ಬುಕ್ ಸೆಂಟರ್) ನೆಚ್ಚಿ ನಾನು ಮಂಗಳೂರನ್ನಾರಿಸಿಕೊಂಡೆ. ಅಲ್ಲಿಂದ ನನ್ನ ಕೌಟುಂಬಿಕ ಸಂಬಂಧಗಳಲ್ಲಿ ಮೈಸೂರಮನೆ ನನಗೆ ಕೇವಲ ತವರ್ಮನೆ. ಕೌಟುಂಬಿಕ ಸಂಬಂಧಗಳಲ್ಲಿ ಯಾವ ಬದಲಾವಣೆ ಇಲ್ಲದಿದ್ದರೂ ನಾನಲ್ಲಿಗೆ ಅತಿಥಿ ಎನ್ನುವ ಭಾವ ಬರುತ್ತಿತ್ತು. ಇದರಿಂದುಂಟಾದ ನಿಷ್ಕ್ರಿಯೆಯನ್ನು ತಪ್ಪಿಸಲು, ಮೊನ್ನಿನ ವಾಸಾವಧಿಯಲ್ಲಿ, ಒಂದು ರಾತ್ರಿಗೆ ಎನ್ನುವಂತೆ ನಾನೊಬ್ಬನೇ ರೈಲುಯಾನದಲ್ಲಿ ಬೆಂಗಳೂರಿನ ಮಗನ ಮನೆಗೆ ಹೋಗಿ ಬಂದೆ. ಉಳಿದಂತೆ ರುಕ್ಮಿಣಿಯ ಗೇರ್ ಸೈಕಲ್ ಹಿಡಿದು ದಿನಕ್ಕೆ ಸುಮಾರು ಮೂರು ಗಂಟೆಯಂತೆ, ನಾಲ್ಕು ಸೈಕಲ್ ಸರ್ಕೀಟಿನಲ್ಲಿ ಮೈಸೂರು ದರ್ಶನ ನಡೆಸಿದೆ, ಮತ್ತೆ ರುಕ್ಮಿಣಿಯದ್ದೇ ಗಣಕ ಬಳಸಿ ಸಚಿತ್ರ ಟಿಪ್ಪಣಿಗಳನ್ನೂ ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದೆ. ಅವನ್ನೇ ಈಗ ಸಂಕಲಿಸಿ, ಪರಿಷ್ಕರಿಸಿ, ಸಂವರ್ಧಿಸಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಅಂಕಿಸಂಕಿಗಳ ಗೋಜಲಿಲ್ಲದೇ ಸುಮಾರು ನಾಲ್ಕು ದಶಕಗಳ ಕಾಲಪ್ರವಾಹದಲ್ಲಿ ಮೈಸೂರು ಕಡಿದದ್ದೆಷ್ಟು, ಕೂಡಿದ್ದೆಷ್ಟು ಎನ್ನುವ ಪರೋಕ್ಷ ದಾಖಲೆಯಾಗಿಯೂ ಇದು ನಿಮ್ಮ ಕುತೂಹಲಕ್ಕೆ ಆಹಾರವಾಗಬಹುದು ಎಂದು ನಾನು ನಂಬಿದ್ದೇನೆ.]

09 September 2016

ಸೈಕಲ್ ಆಗಬೇಕು ಸರಳತೆಯ ಸಂಕೇತ

(ಚಕ್ರೇಶ್ವರ ಪರೀಕ್ಷಿತ ೧೨ ಅಥವಾ ದೈನಂದಿನ ಸೈಕಲ್ ಸರ್ಕೀಟಿನ ಹನ್ನೆರಡನೇ ಸಂಗ್ರಹ)

ಸರಳ, ಆರೋಗ್ಯಪೂರ್ಣ, ಮಿತವ್ಯಯಿ ಇತ್ಯಾದಿ ಖ್ಯಾತಿಯೊಡನೆ ಚಲಾವಣೆಗಿಳಿದ ಹೊಸ ತಲೆಮಾರಿನ ಸೈಕಲ್ ಸವಾರಿಯಲ್ಲಿ ದುಬಾರಿ ಸೈಕಲ್ಲುಗಳನ್ನೇನೋ ಗುಣಮಟ್ಟದಿಂದ ಸಮರ್ಥಿಸಿಕೊಳ್ಳಬಹುದು. ಆದರೆ ಚಟುವಟಿಕೆಗಳು – ಕೇವಲ ಕ್ರಮಿಸಿದ ಅಂತರಗಳ ದಾಖಲೆಗಾಗಿ, ತೀವ್ರ ಏರಿಳಕಲುಗಳನ್ನಷ್ಟೇ ಆಯ್ದು `ಜಯಿಸುವುದ'ಕ್ಕಾಗಿ ನಡೆಯುವುದು, ಅದರ `ಬೆಂಬಲ'ಕ್ಕಾಗಿ ಅಸಂಖ್ಯ ಪೆಟ್ರೋಲ್ ವಾಹನಗಳು ಓಡಾಡುವಂತಾಗುವುದು, ಆ ಸವಾರರು ನಿತ್ಯಾಹಾರ ಮೀರಿ ಶಕ್ತಿವರ್ಧಕಗಳನ್ನು ಆಶ್ರಯಿಸುವುದು ಎಲ್ಲಾ ಸರಿ ಅಲ್ಲ. ಹತ್ತೆಂಟು ಸಲಕರಣೆಗಳನ್ನು ಸೈಕಲ್ಲಿಗೆ ಹೇರಿ ಸ್ವಾನುಭವಕ್ಕೆ ತೆರೆದುಕೊಳ್ಳುವುದಕ್ಕಿಂತ ಸ್ವಮೋಹದಲ್ಲಿ ಕಳೆದುಹೋಗುವುದು ನನ್ಗಂತೂ ಹಿಡಿಸಿದ್ದೇ ಇಲ್ಲ. ಇಲ್ಲೆಲ್ಲ `ಪ್ರಕೃತಿಯೊಡನೆ ಸಂವಾದ' ಎನ್ನುವುದು ಕೇವಲ ಮಾತಿನ ಅಲಂಕಾರ, ವ್ಯಕ್ತಿ ಅಹಂಕಾರದ ಇನ್ನೊಂದು ರೂಪ. ಈ ದೃಷ್ಟಿಕೋನದಲ್ಲೇ ನನ್ನ ದೈನಂದಿನ ಸೈಕಲ್ ಸರ್ಕೀಟುಗಳು ರೂಪುಗೊಳ್ಳುತ್ತವೆ, ಹೆಚ್ಚಿನ ಸೋಸುಗಕ್ಕೆ ಹಾಕಿ ಇಲ್ಲಿಗೂ ಸಂಗ್ರಹಿಸಿ ಹಾಕುತ್ತೇನೆ. ಆ ಸರಣಿಯಲ್ಲಿ ಈಗ ಮತ್ತೊಂದಿಷ್ಟು ಟಿಪ್ಪಣಿಗಳು:

05 August 2016

ಸೈಕಲ್ಲೇರಿ ಕಂಡ ಅಭಿವೃದ್ಧಿಯ ಕಥನಗಳು


(ಚಕ್ರೇಶ್ವರ ಪರೀಕ್ಷಿತ ೧೧)
ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ

ಬೆಪ್ಪನಾಗದ ಸೈಕಲ್ ಶಂಕರ: ಸೈಕಲ್ ಮಹಾಯಾನ ಅಂತಿಮ ಕಂತಿಗೆ ಪ್ರತಿಕ್ರಿಯೆಯಲ್ಲಿ ಡಾ| ಜಗನ್ನಾಥ ರೈ, ಸಂದೀಪ್ನಾವು ಸೈಕಲ್ಲಿನ ಬಹೂಪಯೋಗವನ್ನು ಪ್ರೋತ್ಸಾಹಿಸುತ್ತಿಲ್ಲವೇನೋ...” ಎಂದು ಆತ್ಮಶೋಧಕ್ಕಿಳಿದಿದ್ದರು. “ಹಾಗಾದರೆ ನನ್ನ ಸೈಕಲ್ ಸರ್ಕೀಟ್ ಕೇವಲ ನನ್ನ ವ್ಯಾಯಾಮವೇಎಂಬ ಯೋಚನೆಯಲ್ಲೇ ಸೈಕಲ್ ಮೆಟ್ಟತೊಡಗಿದೆ. ಪಂಪ್ವೆಲ್, ಪಡೀಲ್, ಪರಂಗಿಪೇಟೆ ಕಳೆಯುವವರೆಗೂ ನನಗೆ ದಾರಿ ಖರ್ಚಿಗೆ ಅದೇ ಒದಗಿತು! ಅಲ್ಲಿ ತುಂಬೆಯ ಹೊಸ ಅಣೆಕಟ್ಟು ನೋಡುವ ಮಿದುಳಲೆ ಬಂದದ್ದಕ್ಕೆ ನಿಂತೆ. ನೇತ್ರಾವತಿ ಹೋರಾಟಗಾರ, ಜೋಡುಮಾರ್ಗದ ಗೆಳೆಯ ಸುಂದರರಾಯರ ಕಿವಿ ಕಚ್ಚಿಬರ್ತೀರಾಕೇಳಿದೆ. ಅವರು ಮಂಚಿಯ ಕಾರಂತೋತ್ಸವದಲ್ಲಿ `ಬೆಪ್ತಕ್ಕಡಿ ಭೋಳೇಶಂಕರನೋಡಲು ಹೊರಟು ನಿಂತಿದ್ದರು. ಇನ್ನು ಮುಂದುವರಿದು ವಾಪಾಸಾಗುವ ಕತ್ತಲ ದಾರಿಯಲ್ಲಿ ನಾನೂ ಅದೇ (ಬೆಪ್ತಕ್ಕಡಿ....) ಆಗುವುದು ಬೇಡವೆಂದು ಹಿಮ್ಮುಖನಾದೆ.

06 May 2016

ಸೈಕಲ್ಲಿನೊಂದಿಗೆ ಅಷ್ಟಾದಶವರ್ಣನೆ


(ಚಕ್ರೇಶ್ವರ ಪರೀಕ್ಷಿತ – ೧೦)

೧. ಕಾಗೆಯೂ ಹೂಜಿಯೂ ಬೀದಿ ನಾಟಕ
ಎತ್ತಿನಹೊಳೆ ಪಂಪ್ ಹೊಡಿಯುವವರ ಮುಖಕ್ಕೆ ಇಂದಿನ ನೇತ್ರಾವತಿಯ ನಾಲ್ಕು ಚಿತ್ರ ಹಿಡಿಯಲು ಸೈಕಲ್ಲೇರಿ ಬೆಳಗ್ಗೇ ಹೊರಟೆ. 
(ನೋಡಿ: ಎತ್ತಿನಹೊಳೆಯಲ್ಲಿ ಸುಳ್ಳಿನ ಪ್ರವಾಹ) ಪುತ್ತೂರು ದಾರಿಯಲ್ಲಿ ಅವಿರತ ಪೆಡಲೊತ್ತಿ ತುಂಬೆಯ ಬಿಯೆ-ಫಾದರ್ ಮುಲ್ಲರ್ ಆಸ್ಪತ್ರೆ ಬಳಿ ಬಲಕ್ಕೆ ಹೊರಳಿ ನದಿಪಾತ್ರೆಗಿಳಿದೆ. ಪಾತ್ರೆಯ ಉದ್ದಗಲಕ್ಕೂ ಮರಳೋ ಮರಳು. ಅಲ್ಪ ಸ್ವಲ್ಪ ನೀರಿದ್ದಲ್ಲೂ ಹೆಚ್ಚು ಕಾಣಿಸುವುದು ಬಂಡೆಗುಂಡುಗಳೇ. ಮುಂದಿನ ಚುನಾವಣೆಗೆ ಪುಡಾರಿಗಳು ಚಿಕ್ಕಬಳ್ಳಾಪುರಕ್ಕೆ `ನೇತ್ರಾವತಿಯ ನೀರು’ ಬೊಬ್ಬೆ ಹೊಡೆಯುವ ಬದಲು, ಹೂಜಿಯ ತಳದಲ್ಲಿದ್ದ ನೀರೆತ್ತಲು ಕಾಗೆ ಮಾಡಿದ ಉಪಾಯದಂತೆ ಅಲ್ಲಿನ ನಂದಿಬೆಟ್ಟವನ್ನು ಇಲ್ಲಿಗೆ ತಂದು ಮುಳುಗಿಸುವುದನ್ನು ಯೋಜಿಸಬಹುದು! ಹೋದಷ್ಟೇ ವೇಗವಾಗಿ ವಾಪಾಸು ಮನೆ ಸೇರಿದೆ. (೧೨--೨೦೧೫)

19 February 2016

ಸೈಕಲ್ ಅಭಿಯಾನಗಳು


(ಚಕ್ರೇಶ್ವರ ಪರೀಕ್ಷಿತ ೯)

ಪೀಠಿಕೆ: ಬಡವರ ವಾಹನವಾಗಿ ಹುಟ್ಟಿ, ಬಹುಮುಖೀ ಬೆಳವಣಿಗೆಗಳನ್ನು ಕಂಡ ಯಂತ್ರ ಸೈಕಲ್. ಮುಂದುವರಿದಂತೆ ಶ್ರಮರಹಿತ ಸುಖದ ಬೆಂಬತ್ತಿ ಅದೇ ಸೈಕಲ್ ತತ್ತ್ವಕ್ಕೆ ಸ್ವಯಂಚಲೀ ಯಂತ್ರ ಸೇರಿಸುತ್ತ ನಾಗರಿಕತೆ ಬಹು ದೂರವೇ ಬಂದಿದೆ.
ಆದರೆ ಜತೆಗೇ ಸ್ವಯಂಚಲೀ ಯಂತ್ರದ ಇಂಧನ, ಹಲವು ಮುಖಗಳ ಪರಿಸರ ದೂಷಣೆ ಏರುತ್ತ  ಹೋಯ್ತು. ಎಲ್ಲಕ್ಕೂ ಮುಖ್ಯವಾಗಿ `ಶ್ರಮರಹಿತ’ ಎನ್ನುವುದು `ವ್ಯಾಯಾಮರಹಿತ’ ಎಂಬ ಕಾಯಿಲೆ ಮೂಲ ಸ್ಥಿತಿಗೆ ಕಾರಣವಾದಾಗ ಮತ್ತೆ ಸರಳ ಸೈಕಲ್ಲಿಗೇ ಮರಳುವಂತಾಯ್ತು.

21 August 2015

ಚಕ್ರದುರುಳಿನೊಡನೆ ಬಿಚ್ಚಿಕೊಂಡ ಸತ್ಯಗಳು

(ಚಕ್ರೇಶ್ವರ ಪರೀಕ್ಷಿತ - ೮)

[ನಿತ್ಯದ ಸೈಕಲ್ ಸವಾರಿ ನನಗೆ ವ್ಯಾಯಾಮದೊಡನೆ ಲೋಕಜ್ಞಾನಕ್ಕೊಂದು ಕಿಟಕಿಯೂ ಸಾಮಾಜಿಕ ಜವಾಬ್ದಾರಿಯತ್ತ ಒಂದು ಪ್ರೇರಕ ಶಕ್ತಿಯೂ ಆಗಿ ಒದಗುತ್ತಲೇ ಇದೆ. ಅಂದಂದಿನ ಅನುಭವವನ್ನು ನಾನು ಫೇಸ್ ಬುಕ್ಕಿನಲ್ಲಿ ಸೈಕಲ್ ಸರ್ಕೀಟೆಂದೋ ಕಟ್ಟೆಪುರಾಣವೆಂದೋ ದಾಖಲಿಸುತ್ತಿರುವುದನ್ನು ಕಂಡವರು ಬಹುಮಂದಿ, ಓದಿದವರು ಕೆಲ ಮಂದಿ, ಪ್ರತಿಕ್ರಿಯಿಸಿದವರು ಬೆರಳೆಣಿಕೆಯವರು, ಕೊನೆಗೆ ತಮ್ಮ ಪರಿಚಯದ ವಲಯದಲ್ಲೂ ಪ್ರಚುರಿಸಿದವರೂ ಒಬ್ಬಿಬ್ಬರಿದ್ದಾರೆ. ದೈನಿಕ ಪತ್ರಿಕೆಗಳಲ್ಲಿ ಬಂದ ವಿಚಾರಗಳು ಎಷ್ಟು ಗಂಭೀರವಿದ್ದರೂ ಬಹುತೇಕ ಮರುದಿನಕ್ಕೆ ಗಜೇಟಿಗೆ (ರದ್ದಿ) ಸಂದು ಹೋಗುವಂತದ್ದೇ ಸ್ಥಿತಿ ಫೇಸ್ ಬುಕ್ಕಿನದು. ವಿಷಯವಾರು ವಿಂಗಡಣೆ, ಸುಲಭ ಆಕರವಾಗಿ ಒದಗುವ ಸ್ಥಿತಿಗಳು ಅಲ್ಲಿ ಕಷ್ಟ ಸಾಧ್ಯ. ಮತ್ತೆ ಅಲ್ಲಿನ ಬರೆಹವೂ ಕಾಲಿಕವೂ ಅವಸರದ್ದೂ ಆಗುವುದಿದೆ. ಅವುಗಳಲ್ಲಿ ಒಂದಷ್ಟನ್ನು ಆಯ್ದು, ಪರಿಷ್ಕರಿಸಿ ಜಾಲತಾಣದಲ್ಲಿ ನೆಲೆನಿಲ್ಲಿಸುವ ಕೆಲಸವನ್ನು ಈ ಹಿಂದೆ `ಚಕ್ರೇಶ್ವರ ಪರೀಕ್ಷಿತ’ ಮಾಲಿಕೆಯಲ್ಲಿ ಮಾಡಿದಂತೆ, ಅದರದೇ ಇನ್ನೊಂದು ಕಂತಾಗಿ ಈಗ ಹದಿನಾರು ಟಿಪ್ಪಣಿಗಳನ್ನು (ಅವುಗಳು ಪ್ರಕಟವಾದ ದಿನಾಂಕಗಳನ್ನು ಅಲ್ಲಲ್ಲೇ ಕಾಣಿಸಿದೆ)  ಇಲ್ಲಿ ಸಂಕಲಿಸಿದ್ದೇನೆ. ನೆನಪಿರಲಿ, ಈ ಟಿಪ್ಪಣಿಗಳು ಸ್ವತಂತ್ರ ಬರೆಹಗಳಾದರೂ ಆಶಯ - ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ಮಾತ್ರ. ದಯವಿಟ್ಟು ಇದನ್ನು ನನ್ನ ಹೆಚ್ಚುಗಾರಿಕೆ ಎಂದು ಕಾಣಬೇಡಿ. ಉತ್ತಮ ಸಮಾಜ ನಿರ್ಮಾಣಕ್ಕೆ ನಿಮ್ಮ ಅನುಭವ ಮತ್ತು ವಿಚಾರಗಳನ್ನು ಸೇರಿಸಲು ಅವಕಾಶ ಎಂದೇ ಭಾವಿಸಿ. ತಪ್ಪಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ತೋರಿ, ವೈಚಾರಿಕ ವಿಶ್ಲೇಷಣೆಯಿಂದ ಸಮೃದ್ಧಗೊಳಿಸಿ ಹೀಗೊಂದು ದಾಖಲೀಕರಣದ ಮೌಲ್ಯವರ್ಧನೆಗೆ ಕಾರಣರಾಗುತ್ತೀರಿ ಎಂದು ಭಾವಿಸುತ್ತೇನೆ.]