Showing posts with label ವೈಚಾರಿಕ. Show all posts
Showing posts with label ವೈಚಾರಿಕ. Show all posts

07 August 2021

‘ನಕ್ಷೆ’ತ್ರಿಕನ ವಿಷಾದದ ಎಳೆ


ಈಚೆಗೆ ಫೇಸ್ ಬುಕ್ ಗೆಳೆಯ ರಾಜೇಂದ್ರ ಪ್ರಸಾದ್, ನನ್ನ ಗಣಪತಿ ಗುಹಾ ನಕ್ಷೆ (೧೯೯೪) ನೋಡಿ ಮೋಹಗೊಂಡು, ವಿವರ ವಿಚಾರಿಸಿದರು. ಸೀಮಿತ ಮುದ್ರಿತ ನಕಾಶೆಗಳಿದ್ದ ಕಾಲದ ಅಗತ್ಯಕ್ಕೆ ನಾನು ಬಿಡಿಸಿದ ೯೬ ನಕ್ಷೆಗಳ ಕುರಿತು ಒಂದೆರಡು ಮಾತು ಹೇಳಿದೆ. ಆತ ಎಲ್ಲವನ್ನು ಪುಸ್ತಕವಾಗಿ ಪ್ರಕಟಿಸಲು ಒತ್ತಾಯಿಸಿದರು. ನಾನೋ ‘ಇದು ಮುದ್ರಿತ ಪುಸ್ತಕಗಳ ಕಾಲವೇ ಅಲ್ಲ’ ಎಂದು ಘೋಷಿಸಿ ಇದ್ದ ಪುಸ್ತಕ ಪ್ರಕಾಶನ, ಅಂಗಡಿಗಳನ್ನು ಮುಚ್ಚಿದವ! "ಅದೆಲ್ಲ ಯಾಕೆ? ಕೇವಲ ನನ್ನ ಆವಶ್ಯಕತೆಗೆ ಮಾಡಿಕೊಂಡ ಈ ನಕ್ಷೆಗಳು ಯಾರಿಗಾದರೂ ಉಪಯೋಗವಾಗುವುದಿದ್ದರೆ ಇಲ್ಲೇ ಹಾಕಿಬಿಡುತ್ತೇನೆ" ಎಂದೆ. ಈಗ ಫೇಸ್ ಬುಕ್ಕಿನಲ್ಲಿ ಸರಣಿಯಲ್ಲಿ ಪ್ರಕಟಿಸಿ ಮುಗಿಸಿದ್ದೇನೆ. ನಕ್ಷೆಗಳನ್ನು ಸ್ಕ್ಯಾನ್ ಮಾಡಿ, ಪ್ರವೇಶಿಕೆಯ ಎರಡು ಮಾತು, ಲೇಖನವಿದ್ದರೆ ಸೇತು ಸೇರಿಸುತ್ತ ಬಂದೆ. ಈ ಕ್ರಿಯೆ ನನ್ನನ್ನು ಮೂವತ್ತಾರು ವರ್ಷಗಳ ಹಿಂದಿನಿಂದ (೧೯೮೫) ತೊಡಗಿ, ಇಪ್ಪತ್ತೊಂದು ವರ್ಷಗಳ ಹಿಂದಿನವರೆಗಿನ (೨೦೦೦) ಪರಿಸರ ಮತ್ತು ಮನೋಸ್ಥಿತಿಗೆ ಒಯ್ದಿತ್ತು. ಪರಿಣಾಮವಾಗಿ, ನಕ್ಷೆಗಳನ್ನು ಮೀರಿದ ಕೆಲವು ಮಾತುಗಳು.

02 December 2020

ಅಡುಗೆಮನೆ ಜಗತ್ತಿನ ‘ಅವಿಲು’ಪಾಕ


[ಮಣಿಪಾಲದ ಡಾ| ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠಕ್ಕೆ ವೈದೇಹಿಯವರು ಗೌರವಾಧ್ಯಕ್ಷೆಯಾಗಿದ್ದ ಕಾಲವದು (೨೦೧೭). ಅವರ ಎರಡು ವರ್ಷಗಳುದ್ದದ ಸೇವಾವಧಿಯ ಕೊನೆಯ ಕಲಾಪ ಎಂಬಂತೆ, ಅಂದು ಎರಡು ದಿನಗಳುದ್ದಕ್ಕೊಂದು ವಿಚಾರ ಸಂಕಿರಣ - `ಅಡುಗೆಮನೆ ಜಗತ್ತು’ ಸಂಘಟಿಸಿದ್ದರು. ಅದರಲ್ಲಿ ನಮ್ಮ ಮಗ – ಅಭಯಸಿಂಹನಿಗೆ ಓರ್ವ ಪ್ರಬಂಧಕಾರನ ಪಾತ್ರ ಕೊಟ್ಟಿದ್ದರು. ಆದರೆ ವೇದಿಕೆ ಮೇಲಿನ ಮಾತು ಮತ್ತು ಕೆಳಗಿನ ಕೇಳ್ಮೆ ಮೀರಿ, ಹಳೆಗಾಲದ ಅಡುಗೆಮನೆಯ ಒಲೆಕಟ್ಟೆ ಸುತ್ತಣ ಸಂವಾದದ ಸಾಧ್ಯತೆಯನ್ನೂ ಶೋಧಿಸುವ ಸಾಹಸ ವೈದೇಹಿಯವರದ್ದು. ಇದಕ್ಕೆ ಬಲಕೊಡುವಂತೆ ವೇದಿಕೆಯ ಕಲಾಪಗಳಿಲ್ಲದೆಯೂ ನಾಡಿನ

30 June 2020

ದ್ವಿಜತ್ವ ಕೊಡಿಸಿದ ಮೈಸೂರು

(ಜಾತಿ ಮತಗಳ ಚಕ್ರಸುಳಿ ಮೀರಿ - ೫) 


೧. ಬ್ರಾಹ್ಮಣ ಭೋಜನದಲ್ಲಿ ವೀರಪ್ಪ ಗೌಡರು! 

ಸಾಂದರ್ಭಿಕ ಚಿತ್ರ

ವೈಜ್ಞಾನಿಕ ಮನೋಧರ್ಮವನ್ನು ಸ್ವಂತ ಜೀವನಕ್ಕಳವಡಿಸಿಕೊಂಡೇ ಇತರರಿಗೆ ಮಾತು, ಬರಹಗಳಲ್ಲಿ ಪ್ರಚಾರ ಮಾಡಿದವರು ನನ್ನ ತಂದೆ - ಜಿಟಿನಾ. ಅವರಿಗೆ ಮುತ್ತಜ್ಜನಿಂದ ಶ್ಲೋಕಗಳ ಪಾಠವಾದ್ದಕ್ಕೆ, ಏಳರ ಪ್ರಾಯದಲ್ಲಿ ಉಪನಯನದ ಮುದ್ರೆ ಬಿದ್ದಿತ್ತು. ಮುಂದೆ ಹುಡುಗ ವೇದ ಮಂತ್ರಗಳಿಗೆ ಏರುತ್ತ, ಬಾಲಶಂಕರನೇ ಆಗಬೇಕೆಂಬ ನಿರೀಕ್ಷೆ ಅವರಪ್ಪಮ್ಮಂದಿರದ್ದಿತ್ತು. ಆದರೆ ಹನ್ನೊಂದರ ಪ್ರಾಯದಲ್ಲಿ ಇವರಲ್ಲಿ ‘ಬುದ್ಧ’ನೆದ್ದಿದ್ದ. (ಹೆಚ್ಚಿನ ವಿವರಗಳಿಗೆ ಶಾಲೆ ತೊಡಿಸಿದ ಕಡಿವಾಣ

ನನ್ನ ಬಾಲ್ಯದಲ್ಲಿ ಪರಿಚಿತ ಸಮಾಜದ ನಿರೀಕ್ಷೆಯ ‘ಅಶೋಕನ ಉಪನಯನ’, ‘ಗಣಪತಿ ಮದುವೆ’ ಆಗಿತ್ತು. ಆದರೆ ಮಗನ ಮೇಲೆ ಅಮ್ಮನ ಹಕ್ಕನ್ನು ತಂದೆ ತಡವಾಗಿಯಾದರೂ ಮನ್ನಿಸಬೇಕಾಯ್ತು. (ನನ್ನನ್ನೂ ಒಪ್ಪಿಸಲಾಯ್ತು!) ನಾನು

23 June 2020

ಮೈಸೂರಿನ ದಿನಗಳಲ್ಲಿ - ವಿದ್ಯಾರ್ಥಿ

(ಜಾತಿ ಮತಗಳ ಚಕ್ರಸುಳಿ ಮೀರಿ - ೩) 


೧. ಕೈಮರದ ಅಡಿಯಲ್ಲಿ ‘ಕನ್ನಾಡಿಗ’ನ ಗೊಂದಲ 


ಪದವಿಪೂರ್ವದ ಪರೀಕ್ಷೆಯಲ್ಲಿ ನಾನು ರಸಾಯನ ವಿಜ್ಞಾನ ಅಜೀರ್ಣ ಮಾಡಿಕೊಂಡು, ನ್ಯಾಶನಲ್ ಟ್ಯುಟೋರಿಯಲ್ಸ್‍ನಲ್ಲಿ ಶುಶ್ರೂಷೆ ಪಡೆದು ಸೆಪ್ಟೆಂಬರ್ ಪರೀಕ್ಷೆ ಎದುರಿಸಿದೆ. ಚೇತರಿಕೆಯ ಧೈರ್ಯ ಇದ್ದದ್ದಕ್ಕೆ, ಮುಂದಿನ ಶಿಕ್ಷಣ ವರ್ಷದವರೆಗೆ ಎಂಬಂತೆ, ಸುಲಭದಲ್ಲಿ ಜರ್ಮನ್ ಕಲಿತು ಬಿಡುತ್ತೇನೆಂದು ಗಯಟೆ ಸಂಸ್ಥೆಗೆ ಸೇರಿಕೊಂಡೆ. ಆದರೆ ವಾರಕ್ಕೆ ಎರಡೋ ಮೂರೋ ಗಂಟೆಯ ಪಾಠದಲ್ಲಿ ಕಾಗುಣಿತ, ವ್ಯಾಕರಣದ ಕಗ್ಗಂಟಿನಲ್ಲಿ ಸಿಕ್ಕಿ ಕಂಗಾಲಾದೆ. ಅಷ್ಟರಲ್ಲಿ ನನ್ನ ಅದೃಷ್ಟಕ್ಕೆ, ತಂದೆ ತನ್ನ ವೃತ್ತಿ ಜೀವನಕ್ಕೆ ಇನ್ನೊಂದೇ ಕ್ರಾಂತಿಕಾರಿ ತಿರುವು ತೆಗೆದುಕೊಂಡರು. ಅಧ್ಯಾಪನವನ್ನೂ ಬೆಂಗಳೂರನ್ನೂ ಬಿಟ್ಟು, ಮೈಸೂರಿನಲ್ಲಿ ಹೊಸ ಜವಾಬ್ದಾರಿ - ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕತ್ವ! ನನ್ನ ಜರ್ಮನ್ ಸಂಕಟ ಸಹಜವಾಗಿ ಕಳಚಿಹೋಯ್ತು. 

19 June 2020

ಬಹುಸಂಸ್ಕೃತಿಯ ರಾಜನಗರದಲ್ಲಿ

(ಜಾತಿ ಮತಗಳ ಚಕ್ರಸುಳಿ ಮೀರಿ - ೨) 

ಬೆಂಗಳೂರಿನ ದಿನಗಳು 


[ಕ್ಷಮಿಸಿ, ಮತ್ತೆ ನೆನಪಿಸುತ್ತೇನೆ: ಈ ಮಾಲಿಕೆ ನನ್ನ ಆತ್ಮಕಥೆ ಅಲ್ಲ. ನನ್ನ ಜೀವನದ ಆಯ್ದ ಘಟನೆಗಳನ್ನು ಒಡ್ಡಿಕೊಂಡು, ವ್ಯಕ್ತಿ ರೂಪಣೆಯಲ್ಲಿ ಕಾಲ್ಪನಿಕ ಜಾತಿ, ಮತ, ಅಂತಸ್ತು ಮುಂತಾದವು ವಹಿಸುವ ಪಾತ್ರವನ್ನು ಎತ್ತಿ ತೋರಿಸುವುದಷ್ಟೇ ಇದರ ಉದ್ದೇಶ. ಓದಿನ ಸ್ವಾರಸ್ಯಕ್ಕಾಗಿ ಇತರ ಸ್ವಲ್ಪ ಮಾಹಿತಿಗಳನ್ನೂ ಕೋದಿದ್ದೇನೆ.] 

೧. ವಿಧಾನಸೌಧದ ಬಯಕೆ (ನಗರ ದರ್ಶನ) 


ಬಳ್ಳಾರಿ - ಪುತ್ತೂರು ಓಡಾಟ ಕಾಲದಲ್ಲಿ ನಮ್ಮ ಬೆಂಗಳೂರು ಮಧ್ಯವರ್ತಿ, ಹಿಂದೆ ಹೇಳಿದಂತೆ ಚಿಕ್ಕಪ್ಪ ಮೂರ್ತಿ. ಆತ (೧೯೬೫) ನಮಗೆ ಹನುಮಂತ ನಗರದಲ್ಲಿ ಬಾಡಿಗೆ ಮನೆ ಹಿಡಿದಿಟ್ಟಿದ್ದ. ಒಂದೇ ಯಜಮಾನಿಕೆಯ ಕಟ್ಟಡ ಗೊಂದಲವದು.

17 June 2020

ಜಾತಿ ಮತಗಳ ಚಕ್ರಸುಳಿ ಮೀರಿ

ಮಡಿಕೇರಿಯ ಉದಾಹರಣೆಗಳು 


ಹುಟ್ಟಿನ ಆಕಸ್ಮಿಕದೊಡನೆ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ ಸ್ಥಾನಗಳೂ ಅವಕ್ಕೆ ಸೇರಿದ ಭಾವನಾತ್ಮಕ ಜವಾಬ್ದಾರಿಗಳೂ ಸಾಮಾಜಿಕ ರೂಢಿಯಂತೆ ಸೇರಿಕೊಳ್ಳುತ್ತವೆ. ಅವನ್ನು ಬಿಟ್ಟು, ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಗಳನ್ನು ಸೋದಾಹರಣವಾಗಿ ಕಾಣಿಸುವ ಉದ್ದೇಶಕ್ಕೇ ಮೀಸಲಾದ ಮಾಲೆ - ಜಾತಿ ಮತಗಳ ಚಕ್ರಸುಳಿ ಮೀರಿ. ಇಲ್ಲಿ ‘ಜಾತಿ ಮತ’ ಎನ್ನುವುದನ್ನು ಸಾಮಾಜಿಕ, ಆರ್ಥಿಕ, ಭಾಷಿಕ ಎಂಬಿತ್ಯಾದಿ ತೋರಿಕೆಯ ರೂಢಿಗಳನ್ನೆಲ್ಲ ಒಳಗೊಂಡಿದೆ. 

ವಿಚಾರ ಸರಣಿಯನ್ನು ಶಾಬ್ದಿಕ ಕಸರತ್ತು ಮಾಡುವ ಬದಲು, ನಿದರ್ಶನಗಳ ಕಥನವನ್ನಾಗಿಸಿದ್ದೇನೆ. ಹಾಗೆ ಮಾಡುವಲ್ಲಿ ವಿವಾದ ಮೂಲವೂ ಆಗಬಹುದಾದ ಅನ್ಯರ ವರ್ತನೆಗಳ ಮೇಲೆ ಊಹಾಗೋಪುರ ಕಟ್ಟುವುದರ ಬದಲು, ಆತ್ಮಕಥನದ ದಾರಿಯನ್ನೇ ಹಿಡಿದಿದ್ದೇನೆ. ಪ್ರಸ್ತುತ ಐವತ್ತು ಕಿರು ಟಿಪ್ಪಣಿಗಳಲ್ಲಿ ನನ್ನ ವಿದ್ಯಾರ್ಥಿದಿನಗಳನ್ನು, ಅದರಲ್ಲೂ ಬಹುತೇಕ ಇದುವರೆಗೆ ನಾನು ಬರಹಕ್ಕಿಳಿಸದ ಅನುಭವಗಳನ್ನು ಆಯ್ದುಕೊಂಡಿದ್ದೇನೆ. ನನ್ನ ವಿದ್ಯಾದಿನಗಳೆಲ್ಲ (೧೯೫೨-೧೯೭೪) ತಂದೆಯ ವೃತ್ತಿಯ ಊರುಗಳನ್ನೇ ಅನುಸರಿಸಿಕೊಂಡು ಬಂತು. ಆ ಲೆಕ್ಕದಲ್ಲಿ ನನ್ನ ನೆನಪಿಗೆ ಸಿಗುವ ಮೊದಲ ಊರು - ಮಡಿಕೇರಿ. 

02 April 2020

ಮೂರು ಸಾವಿರ ಕೋಟಿ ನುಂಗಿದ ಸಂಕೇತ....

ಭಾರತದ ಏಕತಾಮೂರ್ತಿ - ಸರ್ದಾರ್ ಪಟೇಲ್ ವಿಗ್ರಹ! 

(ಸೈಕಲ್ಲೇರಿ ವನಕೆ ಪೋಗುವ- ಮೂರನೇ ಮತ್ತು ಅಂತಿಮ ಭಾಗ) 

ರಾಜಸ್ತಾನದ ಮೂರು ವನಧಾಮಗಳಲ್ಲಿ ನಾವು ಸೈಕಲ್ ಹೊಡೆದ ಕಥನ - ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ (೨೦೧೮ ಡಿಸೆಂಬರ್), ನೀವೆಲ್ಲ ಓದಿದ್ದೀರಿ. ಆ ಕಥನಾಂತ್ಯದಲ್ಲಿ "....... ಪುನಶ್ಚೇತನರಾಗಿ, ಇನ್ನೊಂದೇ ಹೊಸ ಅನುಭವಕ್ಕೆ ಪೀಠಿಕೆ ಎಂಬಂತೆ ರೈಲ್ವೇ ನಿಲ್ದಾಣಕ್ಕೆ ಧಾವಿಸಿದೆವು" ಎಂದಿದ್ದೆ. ಅದಕ್ಕೀಗ ಮುಹೂರ್ತ ಬಂದಿದೆ. 

ಮಂಗಳೂರಿನಿಂದ ರಾಜಸ್ತಾನಕ್ಕೆ ಹೋಗುವ ದಾರಿಯಲ್ಲಿ ನಮ್ಮ ಜತೆಗಿರದ ಅನಿಲ್ ಶಾಸ್ತ್ರಿ, ವಾಪಾಸಾಗುವ ದಾರಿಯಲ್ಲಿ ಸೇರಿಕೊಂಡಿದ್ದರು. ಹೀಗೆ ಹರಿವಾಯು (ಹರಿಪ್ರಸಾದ್ ಶೇವಿರೆ ಮತ್ತು ಅನಿಲ್ ಶಾಸ್ತ್ರಿ) ಸಂಧಿಯಲ್ಲಿ ನಮ್ಮದು ಪೂರ್ಣ ರೈಲು ಯಾನ ಎಂದೂ ಟಿಕೆಟ್ಟೂ ಶುದ್ಧವಾಗಿತ್ತು. ವಡೋದರದಲ್ಲಿ ಐದಾರು ಗಂಟೆಗಳ ವ್ಯತ್ಯಾಸದಲ್ಲಿ ಗಾಡಿ ಬದಲಾವಣೆಯ ಅನಿವಾರ್ಯತೆ ಏನೋ ಇತ್ತು. ಆ ಅಂತರವನ್ನು ನಾವು ಹನ್ನೆರಡು ಗಂಟೆಗಳಿಗೆ (ಒಂದು ಗಾಡಿಯನ್ನು ನಿರಾಕರಿಸಿ) ವಿಸ್ತರಿಸಿ,
ವಡೋದರ ರೈಲ್ವೇ ಆರಾಮ್ ಘರ್ ಜಗುಲಿ
ನರ್ಮದಾಸಾಗರ ತಟದಲ್ಲಿ, ಹೊಸದಾಗಿ (೨೦೧೭) ಮೂಡಿ, ವಿಶ್ವವಿಕ್ರಮ ಸ್ಥಾಪಿಸಿರುವ ಸರ್ದಾರ್ ಪಟೇಲರ ವಿಗ್ರಹ ನೋಡುವುದೆಂದೂ ನಿಶ್ಚೈಸಿದ್ದೆವು. 

ಮಾಳಿಗೆ ರೈಲು
ಸೈಕಲ್ ಯಾನ ಮತ್ತದರ ಸಮಾರೋಪ ಸಮಾರಂಭ ಅಪರಾಹ್ನ ಮೂರು ಗಂಟೆಗೇ ಮುಗಿದದ್ದು ಸರಿ. ಆದರೆ ಆ ಚಿತೋರ್ಘರ್‍ನಿಂದ ಸುಮಾರು ನೂರು ಕಿಮೀ ದೂರದ ಉದಯಪುರಕ್ಕೆ ನಮ್ಮನ್ನು ಹೊತ್ತು ಮುಟ್ಟಿಸಲಿದ್ದ ಬಸ್ ಮಾತ್ರ ನಿಧಾನಿಯಾಯ್ತು. ಕಾಡು ದಾರಿಯ ಪೆಡಲಿಕೆಯಿಂದ

04 February 2019

ಪರಿಸರ ವರ್ತಮಾನದ ತಲ್ಲಣಗಳು

[೪ನೇ ಫೆಬ್ರುವರಿ ಸಂತ ಏಗ್ನೆಸ್ ಕಾಲೇಜು, ಸರಕಾರೀ ಪ್ರಥಮ ದರ್ಜೆ ಕಾಲೇಜು ರಥಬೀದಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಲಿ ಮತ್ತು ಆಕಾಶವಾಣಿ ಮಂಗಳೂರು ಜಂಟಿಯಾಗಿ ಆಯೋಜಿಸಿ ಸಂತ ಏಗ್ನೆಸ್ ಕಾಲೇಜಿನಲ್ಲಿ ನಡೆದ ಒಂದು ದಿನದ ವಿಚಾರ ಸಂಕಿರಣದ ಉದ್ಘಾಟನೆಯಲ್ಲಿ, ನಾನು ಮಂಡಿಸಿದ ಆಶಯ ಭಾಷಣ.] 

ಮಿತ್ರರೇ 

ನಾನು ಔಪಚಾರಿಕ ಭಾಷಣಕಾರನಲ್ಲ. ಮತ್ತೆ ಸ್ವಂತ ಅನುಭವಕ್ಕೆ ದಕ್ಕದೇ ಇರುವುದರ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ಕೊರೆಯುವುದು ನನಗೆ ಒಗ್ಗುವುದೂ ಇಲ್ಲ. ಹಾಗಾಗಿ ನೂರೆಂಟು ವಿಚಾರಗಳ ಕಾಡಿನಲ್ಲಿ, ಇಂದಿನ ಗುರಿ ಕಳೆದುಹೋಗದಂತೆ ಬರೆದು ತಂದದ್ದನ್ನೇ ಆದಷ್ಟೂ ನಿಧಾನಕ್ಕೆ ಓದುತ್ತೇನೆ. 

09 September 2018

ಮೂಸೋಡಿ ಕಳಚಿ ಮಂಜೇಶ್ವರ ಉಳಿಸಿ?


ಕೇರಳ, ಕೊಡಗುಗಳಲ್ಲಿ ಜನ, ಸೊತ್ತುಗಳ ಮೇಲೆ ಮಳೆಗಾಲ ಬೀರಿದ ದುಷ್ಪ್ರಭಾವ ದೊಡ್ಡ ಸುದ್ದಿ ನಿಜ, ಯುದ್ಧಸ್ತರದಲ್ಲಿ ಕೆಲಸವಾಗಬೇಕಾದ್ದೂ ಸರಿ. ಆದರೆ ಇದು ಇಂಥದ್ದೇ ಅನ್ಯ ಪ್ರಾಕೃತಿಕ ಅನಾಹುತಗಳಿಗೊಂದು ತಾರ್ಕಿಕ ಕೊನೆ ಕೊಡದುಳಿಯಲು, ರಕ್ಷಣೆ ಪರಿಹಾರ ಕಾರ್ಯಗಳ ಕುರಿತು, ಮುಖ್ಯವಾಗಿ ಆಡಳಿತ ಮತ್ತು ಮಾಧ್ಯಮಗಳು ಮರೆತುಬಿಡುವುದು ತಪ್ಪು. ಹಾಗಾಗಿಯೇ ನಾನು ‘ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ’ ಮೊದಲ ಪ್ರಾಶಸ್ತ್ಯದಲ್ಲಿ ನೋಡಿ ಬಂದೆ, ತಿಳಿದಷ್ಟು ಬರೆದೆ. ಮತ್ತೂ ತಲೆಯಲ್ಲಿ
ಕೊರೆಯುತ್ತಲೇ ಉಳಿದಿತ್ತು, ತುಸು ಹಿಂದಿನ ಇನ್ನೊಂದು ಸಮಸ್ಯೆ - ಮೂಸೋಡಿಯದ್ದು. 
ಮೂಸೋಡಿ - ಎಲ್ಲಿ, ಏನು: ‘ಪಡ್ಡಾಯಿ’ ಚಿತ್ರೀಕರಣದ ಅಗತ್ಯಕ್ಕೆ ಕಡಲ ಕೊರೆತಕ್ಕೀಡಾದ ಮನೆಗಳನ್ನು ಹುಡುಕಿ ಅಭಯ, ನಾನು ಕಳೆದ ವರ್ಷ ಓಡಾಡಿದ್ದು, ಮೂಸೋಡಿ ಸಿಕ್ಕಿದ್ದು ನಿಮಗೆಲ್ಲ ತಿಳಿದೇ ಇದೆ (ಇಲ್ಲದವರು ಅವಶ್ಯ ಓದಿ : ಕಡಲ ಕಲಕಿನಲ್ಲೆದ್ದ ಅಮೃತದ ಹನಿಗಳು. ಮೂಸೋಡಿಯಲ್ಲಿ ಅಂದು ಉಳಿದಂತೆ ಕಾಣುತ್ತಿದ್ದದ್ದು ಹಮೀದರ ಒಂದೇ ಮನೆ. ಅದೂ ಬಿದ್ದು

26 February 2018

ಲಕ್ಷ್ಮಿ ಭಾಗ್ಯ ಮತ್ತು ಸಮಕಾಲೀನ ಟಿಪ್ಪಣಿಗಳು


೧. ಭಾಗ್ಯದ ‘ಲಕ್ಷ್ಮಿ’ (ಅಮ್ಮನ ಹೆಸರು ಕೂಡಾ) ನೆನಪುಗಳಲ್ಲಿ ಮೈದಳೆದ ಪರಿ
ಹತ್ತು ವರ್ಷಗಳ ಹಿಂದೆ ತಂದೆ, ಈಚೆಗೆ ತಾಯಿಯ ವಿಯೋಗವನ್ನು ನಾವು ಅತ್ರಿ ಸೋದರರು (ಅಶೋಕ, ಆನಂದ, ಅನಂತ) ಸ್ವೀಕರಿಸಿದ ಕ್ರಮ ಲೋಕಮುಖಕ್ಕೆ ಒಂದೇ ಇತ್ತು. ಅಂದರೆ, ಇಬ್ಬರ ದೇಹಗಳನ್ನೂ ವೈದ್ಯಕೀಯ ಆಸ್ಪತ್ರೆಗೆ ದಾನ ಕೊಟ್ಟೆವು. ಅವರಿಬ್ಬರ ಇಚ್ಛೆ ಮತ್ತು ನಮ್ಮ ನಂಬಿಕೆಯ ಭಾಗವಾಗಿಯೂ ಸಾಂಪ್ರದಾಯಿಕ ಸೂತಕ ಮತ್ತು ಶುದ್ಧಕ್ರಿಯೆಗಳನ್ನು ಕೈಗೊಳ್ಳಲಿಲ್ಲ. ಇದ್ದಷ್ಟು ಕಾಲ ತಾಯಿಯ ಬಾಹ್ಯ ಅಲಂಕಾರ ಮತ್ತು ಸಾಮಾಜಿಕ ಸ್ಥಿತಿಗಳಲ್ಲಿ ಯಾವುದೇ ಊನ ಬಾರದಂತೆ ಆಕೆಯ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದೆವು. ಇದರ ಮೇಲೆ.....

ಅಪ್ಪಮ್ಮರ ಜತೆಗಿದ್ದು, ಮುಖ್ಯವಾಗಿ ಅವರ ಕಷ್ಟಗಳಲ್ಲಿ ನೇರ
ಭಾಗಿದಾರಿಕೆ ವಹಿಸಿಕೊಂಡ ಅನಂತ - ನಮ್ಮೂವರಲ್ಲಿ ಕಿರಿಯ. ಹಿರಿಯನಾದ ನಾನು ಮತ್ತು ಎರಡನೆಯವನಾದ ಆನಂದ ಹುಟ್ಟಿನ ಆಕಸ್ಮಿಕದ ಹಿರಿತನವನ್ನು ಅನಂತನ ಕ್ರಿಯಾ ಹಿರಿತನಕ್ಕೆ ಎಂದೋ ನಿಸ್ಸಂದೇಹವಾಗಿ ಒಪ್ಪಿಸಿದ್ದೆವು. ಹೋದವರಿಗಿಂತ ಇರುವವರ ಜೀವನ ಹೆಚ್ಚು ಹಸನಾಗಬೇಕೆಂಬ ಮಾತಿದೆ. ತಂದೆಯೂ ಈ ಮಾತನ್ನು ಒಪ್ಪುತ್ತಿದ್ದರು. ಅದಕ್ಕೇ ಅವರು ಸ್ವಂತಕ್ಕೆ ಯಾವ ವೈದಿಕ ಆಚರಣೆಗಳನ್ನು ಇಟ್ಟುಕೊಳ್ಳದಿದ್ದರೂ ತಾಯಿಯ ಪೂಜೆ, ವ್ರತಾದಿ ನಂಬಿಕೆಗಳಿಗೆ ಎಂದೂ ಭಂಗ ಉಂಟುಮಾಡುತ್ತಿದ್ದಿಲ್ಲ. ಅದೇ ರೀತಿಯಲ್ಲಿ, ಮೊದಲು ಅಪ್ಪನ ಉತ್ತರಕ್ರಿಯಾ ಆಶಯಕ್ಕೆ, ಮುಖ್ಯವಾಗಿ ಅಮ್ಮನ ಸಣ್ಣ ಆಸೆಗಳನ್ನೂ ಅನಂತರ ಅಮ್ಮನ ವಿದಾಯದಂದು ಅನಂತನ ಅಗತ್ಯಗಳಿಗಾಗಿಯೂ ಸಣ್ಣ

19 February 2018

ಕಾಯಿಲ ಮನಸ್ಕತೆಗೆ ಪರಮಾನಂದ-ದಾರಿ


೧೯೯೦ರ ಏಪ್ರಿಲ್ ತಿಂಗಳ ಉರಿಉರಿ ಬೇಸಗೆಯಲ್ಲಿ, ನಾವು ಆರು ಜನ (ನನ್ನ ಬೆಂಗಾವಲಿಗೆ ದೇವಕಿ, ಉಳಿದಂತೆ ಬಾಲಕೃಷ್ಣ ಬೆನ್ನಿಗೆ ವೆಂಕಟ್ರಮಣ ಉಪಾಧ್ಯ ಮತ್ತು ವಿಷ್ಣು ನಾಯಕ್ ಬೆನ್ನಿಗೆ ರಾಜಶೇಖರ ರಾವ್), ಮೂರು ಮೋಟಾರ್ ಸೈಕಲ್ಲುಗಳಲ್ಲಿ, ಬಹುತೇಕ ಭಾರತವನ್ನು ನಡುವಿನಿಂದ ಉದ್ದಕ್ಕೆ ಸೀಳಿದಂತೆ ದಾರಿ, ಸ್ಥಳ ಆಯ್ದುಕೊಂಡು ಭಾರತ ದರ್ಶನಕ್ಕೆ ಹೊರಟಿದ್ದೆವು. (ಕ್ಷಮಿಸಿ, ಪ್ರವಾಸ ಕಥನ ಇನ್ನೂ ಬರೆಯುವುದಾಗಿಲ್ಲ, ಇದು ಆ ಉದ್ದೇಶದ್ದೂ ಅಲ್ಲ.) ದಿನಕ್ಕೆ ಸರಾಸರಿ ಮುನ್ನೂರೈವತ್ತು ಕಿಮೀ ಓಟ, ಸ್ಥಳವೀಕ್ಷಣೆ, ಬಹುತೇಕ ಸಿಕ್ಕ ತಿನಿಸು, ಹೋಟೆಲ್ ವಾಸ - ಚೆನ್ನಾಗಿಯೇ ಸಾಗಿತ್ತು. ಹುಬ್ಬಳ್ಳಿ, ಬಿಜಾಪುರ, ಶೋಲಾಪುರ, ಔರಂಗಾಬಾದ್, ಇಂದೋರ್, ಭೋಪಾಲ್, ಶಿಯೋಪುರ್, ಸವಾಯ್ ಮಾಧೋಪುರ್, ಜೈಪುರ್, ಆಗ್ರಾಕ್ಕಾಗಿ ದಿಲ್ಲಿ ಸಾಧಿಸಿದ್ದೆವು. ನಮ್ಮ ಬಹುತೇಕ ವೀಕ್ಷಣಾ ತಾಣಗಳೆಲ್ಲ ಪ್ರಾಕೃತಿಕ ಅಥವಾ ಐತಿಹಾಸಿಕ  ವೈಶಿಷ್ಟ್ಯಗಳೇ ಆದ್ದರಿಂದ ನಡಿಗೆಯ ಶ್ರಮವೂ ಏಪ್ರಿಲ್ ಮೇ ತಿಂಗಳ ಉರಿಬಿಸಿಲಿನ ಹೊಡೆತವೂ ಸಾಕಷ್ಟು ಇತ್ತು. ದಿಲ್ಲಿಯಲ್ಲಿ ‘ಬಸ್ ಪ್ಯಾಕೇಜ್’ನ ನಗರ ದರ್ಶನ, ಬೈಕುಗಳಿಗೊಂದು ಸಮಗ್ರ ಪುನಶ್ಚೇತನವೆಂದು ಎರಡೋ ಮೂರೋ ದಿನ ಬಿಡುವಿಟ್ಟುಕೊಂಡಿದ್ದೆವು. ಅಲ್ಲಿನ ಕೊನೆಯ ರಾತ್ರಿ ನನಗೆ, ಉಂಡದ್ದು ಹೆಚ್ಚುಕಮ್ಮಿಯಾಯ್ತೋ ಒಟ್ಟು ಪಯಣದ ಶ್ರಮ ಪ್ರತಿಫಲಿಸಿತೋ ಗೊತ್ತಿಲ್ಲ, ಒಂದೆರಡು ವಾಂತಿ, ಬೇಧಿ ಆಯ್ತು. ಬೆಳಿಗ್ಗೆ ಎಂದಿನ ಶಿಸ್ತು (ಸುಮಾರು ನಾಲ್ಕು- ಐದು ಗಂಟೆಗೇ ನಾವು ಹೊರಟುಬಿಡುತ್ತಿದ್ದೆವು) ಉಳಿಸಿಕೊಳ್ಳಲಾಗಲಿಲ್ಲ. ಆದರೆ ವೈದ್ಯಕೀಯ ಸಲಹೆಗೆ ಹೋಗದೆ, ಸ್ವಯಂ

05 December 2017

ಕಲ್ಯಾಣೋತ್ಸವಕ್ಕೊಂದು ಮಹಾಯಾನ



ನನ್ನ ಸೋದರಮಾವ ಎ.ಪಿ. ಗೌರೀಶಂಕರರ ಮಗಳು ಶೈಲಜ ಭಟ್ (ಉರುಫ್ ಶೈಲಗಾ!), ಮತ್ತವಳ ಗಂಡ - ಪುತ್ತೂರು ಮೂಲದ ಎಂ.ಎಸ್. ಭಟ್ಟರ ಮಗ, ಹಿರಿಯ ಉದ್ಯಮಿ ಶ್ಯಾಮಭಟ್, ಹೈದರಾಬಾದ್ ನಿವಾಸಿಗಳು. ಅವರ ಮಗಳು ಇಳಾ, ತನ್ನ ಬಿಟ್ಸ್ ಪಿಲಾನಿ ಸಹಪಾಠಿ ಋಷಿಲ್ ಜತೆ ಪರಸ್ಪರ ಅನುರಾಗದಲ್ಲಿ, ಮದುವೆಯ ಬಂಧ ಬಯಸಿದ್ದಳು. ಮಾರ್ವಾಡಿ ಸಂಪ್ರದಾಯದ ಋಷಿಲ್ಲನ ಕುಟುಂಬ ಮೂಲತಃ ಗುಜರಾಥಿನದ್ದು. ಅಜ್ಜಜ್ಜಿ - ಬೃಜಲಾಲ್ ಮತ್ತು ಸೂರ್ಯಕಾಂತ ತಾಪಡಿಯಾ, ಅಪ್ಪಮ್ಮ - ರಾಜೇಂದ್ರ ಕುಮಾರ್ ಮತ್ತು ಮೋನಿಕಾ ತಾಪಡಿಯಾ. ಅವರೆಲ್ಲ ವ್ಯವಹಾರಗಳ ಸೆಳವಿನಲ್ಲಿ ಕಳೆದೆರಡು ತಲೆಮಾರುಗಳಿಂದ ಹೈದರಾಬಾದಿಗಳೇ ಆಗಿದ್ದಾರೆ. ಈ ಎರಡೂ ಕುಟುಂಬಗಳು ವೈಚಾರಿಕ ಔದಾರ್ಯದಲ್ಲಿ ಮನುಷ್ಯ ಸಂಬಂಧವನ್ನಷ್ಟೇ ಗೌರವಿಸಿ, ನಿಶ್ಚೈಸಿದ್ದರಿಂದ ಇದೇ ೨೫ ನವೆಂಬರ್, ೨೦೧೭
ಶನಿವಾರದಂದು, ಹೈದರಾಬಾದಿನಲ್ಲಿ ಆತ್ಮೀಯ ಮದುವೆ ನಡೆಯಿತು. ಇದು ಹವ್ಯಕ ಮತ್ತು ಮಾರ್ವಾಡಿ ಸಂಪ್ರದಾಯಗಳ ಸುಂದರ ಕಸಿ. ಅದನ್ನು  ಸವಿಯುವಂತೆ ಊರಿನ ನಮಗೆ, ಅಂದರೆ ಸುಮಾರು ಮೂವತ್ತೆಂಟು ಮಂದಿ ಬಂಧು ಮಿತ್ರರಿಗೆ, ಶ್ಯಾಮನೇ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದ.

03 August 2017

ನೀನಾಸಂನಲ್ಲಿ ನಾಟಕಗಳ ಮಳೆ, ಮಳೆ ನೀರ ಕೊಯ್ಲು!

“ಹೆಗ್ಗೋಡಿನಲ್ಲಿ ಮತ್ತೆ ಮೂರು ನಾಟಕಗಳ, ನಾಲ್ಕು ಪ್ರದರ್ಶನ” ಎಂದು ಅಭಯ (ಮಗ) ನಮಗೆ ಕೊಟ್ಟದ್ದು ವೈಯಕ್ತಿಕ ಸೂಚನೆ ಮಾತ್ರ. ಆದರೆ ನಾನು, ದೇವಕಿ ಎಂದಿನಂತೆ ಅದನ್ನು ಆಮಂತ್ರಣವಾಗಿಯೇ ಗ್ರಹಿಸಿ, ಮಂಗಳೂರಿನಿಂದ ಬಸ್ಸು ಹಿಡಿದು ೧೬-೭-೧೭ರ ಮಧ್ಯಾಹ್ನಕ್ಕೇ ನೀನಾಸಂ ಸೇರಿಕೊಂಡೆವು. ಅಲ್ಲಿನ ಪ್ರದರ್ಶನಗಳನ್ನು ದಾಖಲೀಕರಣಕ್ಕೊಳಪಡಿಸುವ ಯೋಜನೆಯಂತೆ, ಅಭಯ ಅವನ ಕ್ಯಾಮರಾ ತಂಡದೊಡನೆ ಹಿಂದಿನ ರಾತ್ರಿ ಬೆಂಗಳೂರು ಬಿಟ್ಟು, ಅಂದೇ ಬೆಳಿಗ್ಗೆ ಅಲ್ಲಿಗೆ ತಲಪಿದ್ದ. ಅವನಿಗೆ ನೀನಾಸಂ ಕೊಟ್ಟಿದ್ದ ವಸತಿ ವ್ಯವಸ್ಥೆಗೆ ನಾವೂ ಸೇರಿಕೊಂಡೆವು.

13 July 2017

ಲಲಿತ ನಟನಾ ಶಿಲ್ಪ ಅಷ್ಟಪದಿ


(ಹವ್ಯಾಸೀ ಮರ ಕೆತ್ತುವ ಕಲೆ - ಭಾಗ ೨)

ನನ್ನ ತೆಂಗಿನತುಂಡುಗಳ ಗುದ್ದಾಟಕ್ಕೂ ಎಷ್ಟೋ ಮೊದಲು, ಅಂದರೆ ಮಳೆ ಕಡಿಮೆಯಾಗುತ್ತಿದ್ದಂತೇ `ರಕ್ಕಸ’ ಸಾಗುವಾನಿ ಬೊಡ್ಡೆಯೊಂದಿಗೆ ದೇವಕಿ  ಹೋರಾಟ ಸುರುಮಾಡಿದ್ದಳು. ರಕ್ಕಸ ಸುಮಾರು ಹತ್ತಿಂಚು ವ್ಯಾಸದ ಇನ್ಯಾವುದೋ ಮರದ ಗುತ್ತಿ ಬೇರುಗಳನ್ನು ತನ್ನ ಬೇರಜಾಲದ ಮರಣಾಂತಿಕ ಅಪ್ಪುಗೆಗೊಳಪಡಿಸಿತ್ತು. ಅದನ್ನು ಸಮೂಲ ಕಿತ್ತೆಸೆಯಬೇಕು. ಮರ ಬೆಳೆದ ವಠಾರದ ಜನ ಕಾಲಕಾಲಕ್ಕೆ ನಿರ್ಲಕ್ಷ್ಯದಲ್ಲಿ ಕಲ್ಲಚೂರುಗಳು, ಬೂದಿ, ಸಿಮೆಂಟು ತುಂಡುಗಳಾದಿ ವಿವರಿಸಲಾಗದ ಹಾಳಮೂಳಗಳೆಲ್ಲವನ್ನೂ ಆ ಸಾಗುವಾನಿ ಬುಡಕ್ಕೆ ಹಾಕಿದ್ದಿರಬೇಕು. ಆ ಬರಗೇಡಿ ಮರ ಸಹಜ ಮಣ್ಣಿನೊಡನೆ ಅವನ್ನೆಲ್ಲ ತನ್ನ ಉಡಿಯೊಳಗೆ ಗಂಟು ಕಟ್ಟಿಕೊಂಡಿತ್ತು. ಸತ್ತುಹೋದ ನಿಗೂಢ ಲಕ್ಷಾಧಿಪತಿ ಬಿಕ್ಷುಕನ ಕತೆ ಕೇಳಿದ್ದೀರಲ್ಲಾ? ದೇವಕಿಗೆ ಆ ಬಿಕ್ಷುಕನ ಜೋಳಿಗೆಯೊಳಗೆ ಕೈ ಹಾಕುವ ಕೆಲಸ. ಕೊಳಕನ್ನು ಕಳೆದು, ಸಿರಿಯನ್ನು

06 July 2017

ಕಲ್ಪವೃಕ್ಷದಲ್ಲಿ ಚತುರ್ಮುಖಗಳು


ಹವ್ಯಾಸೀ ಮರ ಕೆತ್ತುವ ಕಲೆ - ಭಾಗ ೧
ಬನ್ನಿ, ನನ್ನ ಹೊಸ ಪರಿವಾರದ ಪರಿಚಯ ಮಾಡಿಕೊಳ್ಳಿ. ಚಿತ್ರದಲ್ಲಿ ಎಡದಿಂದ ಮೊದಲನೆಯವ ದೊಡ್ಡ – ತೆಂಗಿನ ನಾಲ್ಕು ಮರದ ತುಂಡುಗಳಲ್ಲಿ ದೊಡ್ಡವ, ದೊಡ್ಡ ತೆಂಗಿನ ಮರದ ಬುಡದ ತುಂಡು. ಸಹಜ ಉರುಟು ಮೈಯನ್ನು ಆರು ಕೋನಯುಕ್ತಗೊಳಿಸುವ ಅಂದಾಜಿನಲ್ಲೇ ಆಯ್ಕೆಯಾಗಿ ಬಂದವ – ಎರಡನೆಯವ, ಆರ್ಮುಗಂ ಉರುಫ್ ಎಣ್ಮುಗಂ! ಕಾಯಿಲಸ್ಥ ಬಡಕಲು ಮರದ, ತುಸು ಸೊಟ್ಟವ ಮತ್ತಿನವ, ಅನ್ವರ್ಥ ನಾಮ – ಡೊಂಕ. ಕೊನೆಯವ ಹಾಗೂ ಇದ್ದವುಗಳಲ್ಲಿ ಸಣ್ಣವ – ಪುಟ್ಟ. ಏನೀ ಚತುರ್ಮುಖರ ವಿಶೇಷ ಎನ್ನುವುದಕ್ಕೆ ಪೂರ್ವಭಾವಿಯಾಗಿ ಸುಮಾರು ಮೂರು ವರ್ಷಗಳ ಹಿಂದಕ್ಕೆ, ನಮ್ಮನೆ ಅಭಯಾದ್ರಿಗೇ ನಿಮ್ಮನ್ನು ಒಯ್ಯುತ್ತೇನೆ. 

`ಅಭಯನ ಬೆಟ್ಟ’ ಎಂಬರ್ಥದ ಮನೆ ಹೆಸರೇ ಸೂಚಿಸುವಂತೆ

18 May 2017

ಕಬಿನಿಯಲ್ಲೊಂದು ಅಮೃತಮಥನ


ಉಲ್ಲಾಸ ಕಾರಂತ ನನಗೆ ಮೊದಲಿಗೇ ಕುಟುಂಬ ಮಿತ್ರರು. ಅನಂತರ ನನ್ನ ಸೀಮಿತ ವನ್ಯಾಸಕ್ತಿಗೆ ದೊಡ್ಡ ಇಂಬು ಕೊಟ್ಟ ಗೆಳೆಯರು. ಅವರು ಡಬ್ಲ್ಯು.ಸಿ.ಎಸ್ (Wildlife Conservation Society) ಎಂಬ ಅಮೆರಿಕಾ ಮೂಲದ, ವನ್ಯ ಸಂರಕ್ಷಣಾ ಮತ್ತು ಸಂಶೋಧನೆಗಳನ್ನು ನಡೆಸುವ ಸಂಸ್ಥೆಯ ಸಹಯೋಗದಲ್ಲಿ ಭಾರತದಲ್ಲಿ ಹುಲಿ ಸಂಶೋಧನೆಯಿಂದ ತೊಡಗಿ, ಇಂದು ಅದಕ್ಕೆ ಏಷ್ಯಾ ವಲಯಕ್ಕೇ ನಾಯಕತ್ವ ಕೊಟ್ಟು ಬೆಳೆಸಿದ್ದಾರೆ. ಉಲ್ಲಾಸ್ ತಮ್ಮ ವೈಜ್ಞಾನಿಕ ಪ್ರಕಟಣೆಗಳನ್ನು ಜಗತ್ತಿನಾದ್ಯಂತದ ವಿಜ್ಞಾನ ಸಂಸ್ಥೆ ಮತ್ತು ಗಂಭೀರ ವನ್ಯಪ್ರೇಮಿಗಳಿಗೆ ಕಳಿಸುವಂತೆ ನನಗೂ ಆಗಾಗ ಮಿಂಚಂಚೆ ಮೂಲಕ ಕಳಿಸುತ್ತಲೇ ಇರುತ್ತಾರೆ. ಅವರ ವನ್ಯಾಸಕ್ತಿಗೆ ಸಮರ್ಥ ಮುಂದುವರಿಕೆಯಂತೆ ವಿಕಸಿಸಿದ ಅವರ ಏಕೈಕ ಮಗಳು – ಕೃತಿಕಾರಂತ ಕೂಡಾ ಈಚೆಗೆ ಅದೇ ವಿಶ್ವಾಸದಿಂದ ತನ್ನ ವೈಜ್ಞಾನಿಕ ಪ್ರಬಂಧಗಳನ್ನು ನನಗೆ ಕಳಿಸುತ್ತಲಿದ್ದಾರೆ. ಈ ಪ್ರಬಂಧಗಳನ್ನು ನನ್ನ ತಿಳುವಳಿಕೆಯ ಭಾಗವಾಗಿಸಿಕೊಳ್ಳಲು ನನ್ನ ಸಂಸ್ಕಾರ, ಬಿಡುವು ಸಾಕಾಗುವುದಿಲ್ಲ. ಹಾಗಾಗಿ ಆ ಪ್ರಕಟಣೆಗಳನ್ನು ಬಹುತೇಕ ಗೌರವಪೂರ್ವಕವಾಗಿಯೇ ನಾನು ಕಡತಕ್ಕೆ ಜಾರಿಸಿ, ಮರೆತುಬಿಡುತ್ತಿದ್ದೆ.

06 April 2017

ಗೇರುಬೀಜದ ಅನುಬಂಧ

[ಗೇರುಹಣ್ಣನ್ನು ಹೆಕ್ಕುವಲ್ಲಿಂದ, ಅದರ ಬೀಜ ಹಲ್ವಾದಲ್ಲಿ ಞ್ಞಕ್ಕುವ ನಡುವೆ ಹಾಯುವ ಅರ್ಥಶಾಸ್ತ್ರ, ಜೀವಶಾಸ್ತ್ರ, ಔದ್ಯಮಿಕ ಸತ್ಯಗಳ ಕುರಿತು ಪ್ರತ್ಯಕ್ಷದರ್ಶಿಯ ಹಕ್ಕಿನೋಟ]

ಹರಿಪ್ರಸಾದ್ ಶೇವಿರೆ ತಾನು “ಪುತ್ತೂರು ಮೂಲದವನು,” ಎಂದಾಗಲೇ ಆಪ್ತವೆನ್ನಿಸಿ, “ನನ್ನಜ್ಜನ ಊರು” ಎಂದಿದ್ದೆ. `ಶೇವಿರೆ’ ಅಂದರೆ ಕೆಸುವಂತೆ. ಸಸ್ಯ ವರ್ಗೀಕರಣ ಏನೇ ಇರಲಿ, ತಾವರೆಯಂತೇ ಕೆಸುವೂ ನೀರು ಬಿದ್ದರೂ ಅಂಟಿಸಿಕೊಳ್ಳದ ಜಾತಿ. ಈ ಹರಿಪ್ರಸಾದ್ ಸ್ವಲ್ಪ ಹಾಗೇ; ಗೇರು ಉದ್ಯಮದಲ್ಲಿ ಮುಳುಗಿದ್ದೂ ಇರದಂತಿರುವವರು. ಪುತ್ತೂರು ಹುಟ್ಟೂರಾದರೂ ತಂದೆಯ ಮರಣದಿಂದ, ಮೂಡಬಿದ್ರೆಯ ದೂರಕ್ಕೆಳೆಯಿತು ಇವರ ಜೀವನಕಾಂಡ. ಅಕ್ಕ ಭಾವರ ಸಾಂಗತ್ಯದಲ್ಲಿ ಹರಿಪ್ರಸಾದರ ವ್ಯವಹಾರ ಕೌಶಲ್ಯದ ಎಲೆಯಗಲಿತು. ಮುಂದುವರಿದು ಸಣ್ಣಣ್ಣನ ಉದ್ದಿಮೆ ಭಾಗೀದಾರಿಕೆಯಲ್ಲಿ ದೃಢ ವೃತ್ತಿ-ಹೂವರಳಿತು, ಮಂಗಳೂರಿನ ಉಡಿಯಲ್ಲಿ ಗೃಹಸ್ಥನಾಗಿ ನೆಲೆಕಂಡು ಧನ್ಯವಾಯ್ತು ಈ ಶೇವಿರೆ.

16 March 2017

ಟೆಲಿವಿಷನ್ ಮತ್ತು ಚಲನಚಿತ್ರಗಳಲ್ಲಿ ಆಹಾರವೆಂಬ ಉಪಭೋಗ ಸಂಸ್ಕೃತಿ

[ಮಣಿಪಾಲದ ಡಾ|ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠದ ಗೌರವಾಧ್ಯಕ್ಷೆ ವೈದೇಹಿಯವರು, ತಮ್ಮ ಎರಡು ವರ್ಷಗಳುದ್ದದ ಸೇವಾವಧಿಯ ಕೊನೆಯ ಕಲಾಪ ಎಂಬಂತೆ ರೂಪಿಸಿದ್ದ ಎರಡು ದಿನಗಳುದ್ದದ (೨೫,೨೬-೨-೨೦೧೭) ವಿಚಾರ ಸಂಕಿರಣ `ಅಡುಗೆಮನೆ ಜಗತ್ತು’. ಇದರಲ್ಲಿ ಮೊದಲ ದಿನ ಅಭಯಸಿಂಹ ಪ್ರಸ್ತುತಪಡಿಸಿದ ಪ್ರಬಂಧ]

[ಸಂಪಾದಕೀಯ ಟಿಪ್ಪಣಿ: ನನ್ನ ಸೊಸೆ (ಅಭಯನ ಹೆಂಡತಿ), ಕೆಲವು ಸರಳ ಪಾಕಗಳ ವಿಶೇಷ ವಿಡಿಯೋ ಸರಣಿಯನ್ನು ತನ್ನದೇ ಜಾಲತಾಣದಲ್ಲಿ ಹರಿಬಿಟ್ಟಳು. ಅವು ಜನಪ್ರಿಯವಾಗಿವೆ. ನಾನು ಕಳೆದ ಒಂಬತ್ತು ವರ್ಷಗಳಿಂದ ಈ ಜಾಲತಾಣ ಹಾಗೂ ಫೇಸ್ ಬುಕ್ಕಿನಲ್ಲಿ ಕೆಲವೊಮ್ಮೆ ಪಾಕವಿಶೇಷಗಳ ಕುರಿತು ಪ್ರಕಟಿಸಿದ ಚಿತ್ರ/ ಬರೆಹಗಳು ನನ್ನದೇ ಇತರ ನಮೂದುಗಳಿಗಿಂತ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ್ದಾವೆ. ಅಭಯ, ರಶ್ಮಿಯ ಪ್ರೇರಕ. ಮತ್ತೆ ನನ್ನ ಅಂತರ್ಜಾಲದ ಚಟುವಟಿಕೆಗಳೆಲ್ಲದರ ನಿರ್ವಾಹಕ. ಕೊನೆಯದಾಗಿ ತನ್ನದೇ ಸಿನಿ-ಮಾಧ್ಯಮದ ಅಧ್ಯಯನಾತ್ಮಕ ಮತ್ತು ಪ್ರಾಯೋಗಿಕ ತಿಳುವಳಿಕೆಯುಳ್ಳವ. ಆತ ಈ ಎಲ್ಲ ಅಂಶಗಳನ್ನು ಮುಪ್ಪುರಿಗೊಳಿಸಿ ಈ ಪ್ರಬಂಧವನ್ನು ರೂಪಿಸಿದ್ದಾನೆ.]

ಭೋಗಕ್ಕಾಗಿ ಆಹಾರ, ಟೆಲಿವಿಷನ್ ಮತ್ತು ಚಲನಚಿತ್ರಗಳಲ್ಲಿ ಆಹಾರವೆಂಬ ಉಪಭೋಗ ಸಂಸ್ಕೃತಿ ಎನ್ನುವ ವಿಚಾರದಲ್ಲಿ ಎಂದೂ ಅಡಿಗೆ ಮಾಡದತಿಂಡಿಪೋತನ ಕೆಲವು ವಿಚಾರಗಳನ್ನು ನಿವೇದಿಸಲು ಇಲ್ಲಿ ನಿಂತಿದ್ದೇನೆ.

01 November 2016

ಕನ್ನಡ ಪ್ರಶಸ್ತಿ - ಸಂಭ್ರಮ, ಸಂಕಟ


ಕನ್ನಡ ರಾಜ್ಯೋತ್ಸವದ ನೆಪದಲ್ಲಿ ವಾರ್ಷಿಕ ವಿಧಿಯಾಗಿ ನಿನ್ನೆ `ವಿಜೇತ’ರ ಪಟ್ಟಿ ಘೋಷಣೆಯಾಗಿದೆ. ಇದರಲ್ಲಿ ಸಕಾರಣ ವೈಯಕ್ತಿಕವಾಗಿ ನಾನು ಸಂಭ್ರಮಪಡಬಹುದಾದ ಕೆಲವು ಹೆಸರುಗಳಿವೆ. ಅದನ್ನು ಮೊದಲು ಹಂಚಿಕೊಳ್ಳುತ್ತೇನೆ.

ಜೆ. ಆರ್ ಲಕ್ಷ್ಮಣರಾವ್ – ೯೫ರ ಹರಯದ ಹಿರಿಯ ಸಾಹಿತಿ. ಕೇವಲ ಭಾಷಾ ಪ್ರಾವೀಣ್ಯದವರ ಸಂಚಿನಲ್ಲಿ, ವಾಸ್ತವದಲ್ಲಿ ಅವಮಾನಕಾರಿಯಾಗಿ `ವಿಜ್ಞಾನ ಸಾಹಿತಿ’ ಎಂದೇ ವರ್ಗೀಕರಿಸಿ, ಇಷ್ಟು ಕಾಲ ಪ್ರಶಸ್ತಿ ದೂರರಾಗಿದ್ದವರು. ಗಣಿತಾಧ್ಯಾಪಕನಾಗಿದ್ದುಕೊಂಡು, ಸುಧಾ ವಾರಪತ್ರಿಕೆಯ `ನಕ್ಷತ್ರ ವೀಕ್ಷಣೆ’ ಅಂಕಣದಿಂದಷ್ಟೇ ಕನ್ನಡ ಸೆಜ್ಜದಲ್ಲಿ ಕಿರು ಹಣತೆಯಾಗಿದ್ದ ನನ್ನ ತಂದೆ – ಜಿ.ಟಿ. ನಾರಾಯಣರಾವ್, ಕನ್ನಡ ವಿಶ್ವಕೋಶವೆಂಬ ಹೆದ್ದೀಪದಲ್ಲಿ ಒಂದಾಗಲು ನಿಮಿತ್ತರಾದವರಲ್ಲಿ ಜೆ.ಆರ್. ಲಕ್ಷ್ಮಣರಾಯರು ಮುಖ್ಯರು. (ಕನ್ನಡದ ಕರೆ ಅಧ್ಯಾಯ ನೋಡಿ. )

28 October 2016

ಯಶಸ್ಸಿನ ಉತ್ತುಂಗದಲ್ಲಿ – ಪರ್ವತಾರೋಹಣ ಸಪ್ತಾಹ

(ಪರ್ವತಾರೋಹಣ ಸಪ್ತಾಹದ ಏಳನೇ ಅಧ್ಯಾಯ)

ಸಪ್ತಾಹದ ಕೊನೆಯ ದಿನದಂದು ಸಮಾರೋಪದ ಸಭಾ ಕಲಾಪವೂ ನೀವೇ ಅನುಭವಿಸಿ ಕಾರ್ಯಕ್ರಮದ ನಾಂದಿಯೂ ಸೇರಿ ಸಮನಿಸಿತ್ತು. ಆರೋಹಣಕ್ಕೆ ಸಲಕರಣೆಗಳ ದಾನಕೊಟ್ಟು, ಪರೋಕ್ಷವಾಗಿ ನಮ್ಮ ಚಟುವಟಿಕೆಗಳಿಗೆ ಸಂಘಟಿತ ರೂಪಗೊಟ್ಟ ಡಿ. ವಿರೇಂದ್ರ ಹೆಗ್ಗಡೆಯವರದೇ ಸಂಸ್ಥೆ – ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅದಕ್ಕೆ ಅಪ್ಯಾಯಮಾನವಾದ ಆತಿಥೇಯ. ನಮ್ಮೆಲ್ಲ ಆಶಯಗಳಿಗೂ ಪೂರ್ಣ ಬೆಂಬಲ ಕೊಟ್ಟವರು ಕಾಲೇಜಿನ ಪ್ರಾಂಶುಪಾಲ ಪ್ರೊ| ಎಸ್. ಪ್ರಭಾಕರ್. ಪ್ರಭಾಕರರಿಗೆ ನನ್ನ ಹೆಂಡತಿ ದೇವಕಿ ಮತ್ತವಳ ತಂಗಿಯಂದಿರಿಬ್ಬರೂ ತಮ್ಮದೇ ಕಾಲೇಜಿನ ವಿದ್ಯಾರ್ಥಿನಿಯರು ಎಂಬ ಹೆಚ್ಚಿನ ಹೆಮ್ಮೆ. ಅವರ ಲೆಕ್ಕದಲ್ಲಿ ಕಲಾಪಗಳು ಕಾಲೇಜಿನದೇ 'ಅಳಿಯ'ನದು!