Showing posts with label ಜಮ್ಮು ಕಾಶ್ಮೀರ. Show all posts
Showing posts with label ಜಮ್ಮು ಕಾಶ್ಮೀರ. Show all posts

01 December 2015

ಗಡಗಡ ಚಂಡೀಗಢ


(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನೈದು)

ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ

ನಮ್ಮ ಪ್ರವಾಸ ಮುಗಿಸಿ ವಾಪಾಸು ಬರಲು ವಿಮಾನವೇರುವುದು ಚಂಡೀಗಢದಲ್ಲಿ ಎಂದು ಅದನ್ನೂ ಬಾಲಂಗೋಚಿಯಾಗಿ ಸೇರಿಸಿಕೊಂಡಿದ್ದೆವು. ಅಲ್ಲಿನ  ರಾಕ್ ಗಾರ್ಡನ್, ರೋಸ್ ಗಾರ್ಡನ್, ನಗರ ಪ್ರದಕ್ಷಿಣೆ, ಸರೋವರ ವಿಹಾರ ಮುಂತಾದವುಗಳು ಅರ್ಧ ದಿನದಲ್ಲಿ ಮುಗಿದು ಹೋಗಬಹುದಾದ್ದರಿಂದ, ಚಂಡೀಗಢಕ್ಕೆ ೯೦ ಕಿ.ಮೀ ದೂರದಲ್ಲಿರುವ ಹರ್ಯಾಣ ರಾಜ್ಯದ ಕುರುಕ್ಷೇತ್ರವನ್ನೂ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದೆವು.

ಚಂಡಿ ದೇವಿಯ ಕೋಟೆ ಎಂಬ ಶಬ್ದಾರ್ಥದ ಚಂಡೀಗಢದಲ್ಲಿ ಚಂಡಿ ಮಂದಿರವಿರುವುದು ನಗರದಿಂದಾಚೆ ೧೫ ಕಿ.ಮೀ ದೂರದಲ್ಲಿ. ಹಲವು ವಿದೇಶೀಯರ ಯೋಜನೆಯಲ್ಲಿ ರೂಪುಗೊಂಡ ನಗರ ನೇರ, ಅಗಲ ರಸ್ತೆಗಳು, ಉತ್ತಮವಾದ ಸಂಪರ್ಕ ವ್ಯವಸ್ಥೆಗೂ, ಸ್ವಚ್ಚತೆ, ಶುದ್ಧ ಗಾಳಿ ದೊರಕುವ ಹಸಿರಿಗೂ ಪ್ರಸಿದ್ಧ. ಇಲ್ಲಿನ ಜನ ತುಂಬಾ ಶ್ರೀಮಂತರು. ವ್ಯಾಪಾರ ವಹಿವಾಟುಗಳಿಗೆ ಕೇಂದ್ರ. ಕೇಂದ್ರಾಡಳಿತ ಪ್ರದೇಶವಾಗಿದ್ದೂ, ಪಂಜಾಬಕ್ಕೂ, ಹರ್ಯಾಣಕ್ಕೂ ಇದುವೇ ರಾಜಧಾನಿ!

24 November 2015

ಅಮೃತಸರ ಸುತ್ತ

ಅಮೃತಸರ ಸುತ್ತ

(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನಾಲ್ಕು)

ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ

ವೈಷ್ಣೋದೇವಿಯ ದರ್ಶನದ ಬಳಿಕ ರಘುನಾಥನ ನೋಡಲು ಹೋಗುವುದು ಎಂದು ನಿಶ್ಚಯಿಸಿ, ಕಾತ್ರಾದ ಹೋಟೆಲ್ಲನ್ನು  ಬಿಟ್ಟು ಜಮ್ಮುವಿನೆಡೆಗೆ ಹೊರಟೆವು. ಮತ್ತೆ ೪೯ ಕಿ.ಮೀಗಳ ರಸ್ತೆ ಪ್ರಯಾಣ, ಪ್ರಯಾಣದಲ್ಲೂ ಬೆಟ್ಟಗುಡ್ಡಗಳು, ವಿವಿಧ ಜಾತಿಯ ಮರಗಳು, ಮೇಯುತ್ತಿರುವ ಪಶುಸಂಕುಲಗಳು ಕಾಣಸಿಕ್ಕವು.
ಬೆಟ್ಟಗಳ ಕಲ್ಲು ಸಂದಿಗಳ ಎಡೆಯಲ್ಲಿ ಮೇಯುತ್ತಿದ್ದ,  ಮಕಮಲ್ಲಿನ ಕೂದಲ ರಾಶಿಯ ಪಾಶ್ಮಿನಾ ಆಡುಗಳನ್ನು ಕಂಡೆ. ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಕೆಲವು ಸುರಂಗಗಳಿದ್ದು, ಗುಡ್ಡ ಕೊರೆದು ರಸ್ತೆ ಮಾಡಿದ್ದಾರೆ. ಒಂದೆರಡು ತುಂಬಾ ಉದ್ದವೂ ಇದ್ದು, ದಾಟಲು ಒಂದು ನಿಮಿಷವೇ ಬೇಕಾಯ್ತೋ ಏನೊ.  ಹೀಗೆ ಬರುತ್ತಿರುವಾಗ ಟೋಲ್ ಬಳಿ ನಮ್ಮ ಗಾಡಿ ನಿಂತಿತು. ರಸ್ತೆಯಲ್ಲಿ ಒಬ್ಬಾತ ಏನೋ ಬಿಳಿಯ ವಸ್ತು ತಟ್ಟೆಯಲ್ಲಿಟ್ಟು ಮಾರುತ್ತಿದ್ದುದು ಕಂಡೆ. ನೋಡಿದರೆ ದೊಡ್ಡ ದೊಡ್ಡ ಕೊಬ್ಬರಿ ತುಂಡುಗಳು. ನಮ್ಮಲ್ಲಿ ಬಚ್ಚಂಗಾಯಿ( ಕಲ್ಲಂಗಡಿ) ತುಂಡುಗಳನ್ನು ಇಟ್ಟು ಮಾರುವಂತೆ ಮಾರುತ್ತಿದ್ದ. ನಮಗೆ ಮಾಮೂಲಿಯಾದರೂ ಅಲ್ಲಿಗೆ ಕೊಬ್ಬರಿ ಅಪರೂಪದ್ದೇ ತಾನೇ?

17 November 2015

ಹೀಗೊಂದು ಹಾರಾಟ


(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿಮೂರು)

ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ

ಶ್ರೀನಗರಕ್ಕೆ ವಿಮಾನದಲ್ಲಿ ಹೋಗುವಾಗ ನಾವು ಹಿಮಾಲಯದ ಪರ್ವತಗಳ ದರ್ಶನ ಪಡೆದರೆ, ಹಾಗೇ ಅಲ್ಲಿಂದ ಜಮ್ಮುವಿಗೆ ಬರುವಾಗ ವೈಷ್ಣೋದೇವಿಯ ತ್ರಿಕೂಟ ಪರ್ವತದ ದರ್ಶನ ಪಡೆದೆವು. ಸುಮಾರು ೪೫ ನಿಮಿಷಗಳ  ಹಾರಾಟದ ಬಳಿಕ ಜಮ್ಮುವಿನಲ್ಲಿ ಇಳಿಯುವವರಿದ್ದೆವು. ಪೈಲೆಟ್ ಜಮ್ಮುವಿನ ತಾಪಮಾನ ೩೪ ಡಿಗ್ರಿ ಸೆಲ್ಸಿಯಸ್  ಎಂದು ಹೇಳಿದ್ದು ಕೇಳಿ ಹೌಹಾರಿದೆವು. ಹಿಂದಿನ ರಾತ್ರಿ ಪೆಹಲ್ ಗಾಂ ನಲ್ಲಿ ಸೊನ್ನೆ ಡಿಗ್ರಿ ಸೆಲ್ಸಿಯಸ್ ಇದ್ದುದು ಅಷ್ಟು ಬೇಗ ಏರಿದ್ದು ಹೇಗೆ ಎಂಬ ಆಶ್ಚರ್ಯವೂ ಆಯಿತು. ಜಮ್ಮು ಮತ್ತು ಶ್ರೀನಗರಗಳ ಭಿನ್ನತೆಯ ಅನುಭವ ದಟ್ಟವಾಗತೊಡಗಿತು.  ಇದಕ್ಕೆ ಜಮ್ಮುವಿನ ಅಚ್ಚುಕಟ್ಟಾದ ವಿಮಾನ ನಿಲ್ದಾಣ, ಶುಚಿಯಾಗಿದ್ದ ಶೌಚಾಲಯವೂ ಸಾಕ್ಷಿಯಾಯಿತು.   

10 November 2015

ಪೆಹೆಲ್ ಗಾಂನಿಂದ ಕತ್ರಾದತ್ತ

(ಕರೆದೇ ಕರೆಯಿತು ಕಾಶ್ಮೀರ ಭಾಗ ಹನ್ನೆರಡು)
ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ

ಪೆಹಲ್ ಗಾ೦ ಸು೦ದರ ಪ್ರದೇಶವೆ೦ದು ಹೇಳಿದೆನಷ್ಟೆ, ನಿಜಕ್ಕಾದರೆ ಸೌ೦ದರ್ಯ ಸವಿಯಲು ಅಲ್ಲಿ ಕೆಲವು ದಿನಗಳ ವಾಸ್ತವ್ಯವನ್ನಾದರೂ ಹೂಡಬೆಕು

ಹಾಗೇ ಹಲವು ದಿನಗಳ ಮೊಕ್ಕಾ೦ ಮಾಡಿ ಸು೦ದರ ಪ್ರಕೃತಿಯನ್ನು ಸೆರೆಹಿಡಿದು ತೋರಿಸಲು ಹಿ೦ದಿ ಸಿನಿಮಾದವರು ಯಾವಾಗಲೂ ಬೀಡುಬಿಟ್ಟಿರುತ್ತಾರ೦ತೆ. ನಾವು ಹೋದಾಗಭಜರ೦ಗಿ ಭಾಯಿಜಾನ್ಸಿನಿಮಾದ ಶೂಟಿ೦ಗ್ ನಡೆಯುತ್ತಿತ್ತು. ನಮ್ಮ ವ್ಯಾನಿನ ಚಾಲಕ ಸುದ್ದಿಯನ್ನು ತಿಳಿಸಿ, ಸಲ್ಮಾನ್ ಖಾನ್ ತ೦ಗಿದ್ದ ಹೋಟೆಲ್ಲನ್ನು ಅತ್ಯ೦ತ ಪ್ರೀತಿಯಿ೦ದ ತೋರಿಸಿದ.

ಪೆಹಲ್ ಗಾ೦ ನಲ್ಲಿ ಎಷ್ಟು ಸಿನಿಮಾಗಳ ಶೂಟಿ೦ಗ್ ನಡೆಯುತ್ತದೆ೦ದರೆ, ಅಲ್ಲಿ ನೋಡಲು ಕರಕೊ೦ಡು ಹೋಗುವ ಜಾಗಗಳಿಗೂ ಸಿನಿಮಾದ್ದೇ ಹೆಸರುಗಳು. ‘ಬೇತಾಬ್ ವ್ಯಾಲಿಎ೦ಬುದುಬೇತಾಬ್ಸಿನಿಮಾದಿ೦ದ ಪ್ರಸಿದ್ಧವಾದ ಸ್ಥಳವ೦ತೆ. ನಾವು ವ್ಯಾಲಿಯಲ್ಲದೇ, ಅರು ವ್ಯಾಲಿ ಮತ್ತು  ಚ೦ದನ್ ವಾರಿ ವ್ಯಾಲಿ ಎ೦ಬಲ್ಲಿಗೂ ಭೇಟಿ ಕೊಟ್ಟೆವು

03 November 2015

ಪೆಹಲ್ ಗಾಂ ಕಡೆಗೆ

(ಕರೆದೇ ಕರೆಯಿತು ಕಾಶ್ಮೀರ ಭಾಗ ಹನ್ನೊಂದು)
ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ
  
ಶ್ರೀನಗರದಿ೦ದ ಜಮ್ಮುವಿಗೆ ತೆರಳುವ ಹೆದ್ದಾರಿಯಲ್ಲಿ ಗ೦ಟೆ ಪ್ರಯಾಣಿಸಿ, ಮು೦ದೆ ಎಡಕ್ಕೆ ತಿರುಗಿ ಸುಮಾರು ಗ೦ಟೆ ಮತ್ತೆ ಪ್ರಯಾಣಿಸಿದರೆ ಪೆಹಲ್ ಗಾ೦ ಎ೦ಬ ಅತ್ಯ೦ತ ಸು೦ದರ ಕಣಿವೆ ಪ್ರದೇಶ ಸಿಗುತ್ತದೆ. ಪೆಹಲ್ ಗಾ೦ ನಲ್ಲಿ ಬರೀ ಪ್ರಕೃತಿ ಚೆಲುವನ್ನು ಆಸ್ವಾದಿಸುವುದು, ಹಿಮದ ಮೇಲಿನ ಸವಾರಿ ಇಲ್ಲವೆ೦ದು ತಿಳಿದು ಸಮಾಧಾನವಾಯಿತು. ಕುದುರೆ ಮೇಲೇರಿ ಇಲ್ಲವೇ ಅಲ್ಲಿಯೇ ಸಿಗುವ ಬಾಡಿಗೆ ವ್ಯಾನ್ ಗಳ ಮೂಲಕ ವಿವಿಧ ಜಾಗಗಳಿಗೆ ಹೋಗಬಹುದೆ೦ದು ಮೆಹ್ರಾಜ್ ತಿಳಿಸಿದರು.

ನಾವೀಗ ಮೆಹ್ರಾಜ್ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಲು ಆರ೦ಭಿಸಿದ್ದೆವು. ಅವರೂ ಅಷ್ಟೇ, ನಮ್ಮ ಅಭಿರುಚಿ, ಅಗತ್ಯಗಳನ್ನು ಫಕ್ಕನೆ ಗ್ರಹಿಸಿ ಅದಕ್ಕೆ ಪೂರಕವಾದ ವ್ಯವಸ್ಥೆ ಮಾಡುತ್ತಿದ್ದರು. ನಮ್ಮ ಶಾಪಿ೦ಗ್ ಲಿಸ್ಟ್ ನಲ್ಲಿ ಡ್ರೈ ಫ್ರುಟ್ಸ್ ಮತ್ತು ಕೇಸರಿ ಬಾಕಿ ಇದೆ ಎ೦ಬುದು ನಮಗಿ೦ತಲೂ ಚೆನ್ನಾಗಿ ಅವರಿಗೆ ನೆನಪಿತ್ತು!

ಯಥಾಪ್ರಕಾರ ಬೆಳಿಗ್ಗೆ ಗ೦ಟೆಗೆ ಗ೦ಟು ಮೂಟೆ ಕಟ್ಟಿ ವ್ಯಾನೇರಿದೆವು. ರೀಗಲ್ ಪ್ಯಾಲೇಸ್   ನೌಕರರಿ೦ದ ಮತ್ತೊಮ್ಮೆ, " ಮ್ಯಾಡ೦, ಕ್ಯಾ ಆಪ್ ಖುಶ್ ಹೈ?" " ಹೌದು, ತು೦ಬಾ", " ಹಾಗಾದ್ರೆ--ಕೊಡಿರಲ್ಲಾ----" ಎ೦ಬ ಅರ್ಥದ ಹಾವಭಾವಗಳನ್ನು ಸ್ವೀಕರಿಸಿ, ಯಥಾನುಶಕ್ತಿ ಅವರ ಕೈ ಬಿಸಿ ಮಾಡಿ, ಮತ್ತೆ ಅವರಿಗೆಲ್ಲಾ ಕೈ ಬೀಸಿ ಟಾಟಾ ಹೇಳಿ ಹೊರಟೆವು. ಶ್ರೀನಗರ- ಜಮ್ಮು ಹೆದ್ದಾರಿ ಬಗ್ಗೆ ಮೊದಲೇ ತಿಳಿದಿದ್ದದರಿ೦ದ, ಟ್ರಾಫಿಕ್ ಜಾಮ್ ಇನ್ನೇನು ಸಿಗಲಿದೆ ಎ೦ಬ ನಿರೀಕ್ಷೆಯಲ್ಲೇ ಕುಳಿತಿದ್ದೆವು. ಸುಮಾರು ಒ೦ದೂವರೆ ಗ೦ಟೆ ಕಾಲ ಪ್ರಯಾಣ ಸುಗಮವಾಗಿಯೇ ಸಾಗಿತು.

27 October 2015

ಕಾರ್ ಕಾರ್ ಕೇಬಲ್ ಕಾರ್

(ಕರೆದೇ ಕರೆಯಿತು ಕಾಶ್ಮೀರ ಭಾಗ ಹತ್ತು)
ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ

ಕೇಬಲ್ ಕಾರ್ ಅನುಭವ ಅವಿಸ್ಮರಣೀಯ. ಇದರಲ್ಲಿ ಎರಡು ಹ೦ತಗಳಿವೆ, ಮೊದಲ ಹ೦ತದ ಪ್ರಯಾಣಕ್ಕೆ೦ದು ೬೦೦ ರೂಪಾಯಿಗಳು. ಇದು ನಮ್ಮನ್ನು ನಾವಿರುವ ೮೦೦೦ ಅಡಿಗಳ ಎತ್ತರದಿ೦ದ ೧೨೦೦೦ ಅಡಿಗಳ ಮೇಲಿರುವ ಪರ್ವತ ನಿಲ್ದಾಣಕ್ಕೆ ನಿಮಿಷಗಳಲ್ಲಿ ತ೦ದು ಇಳಿಸುತ್ತದೆ. ಅಲ್ಲಿರುವ ಹಿಮಗುಡ್ಡಗಳಲ್ಲಿ ಸುತ್ತಾಡಿ ಹಾಗೇ ವಾಪಾಸು ಬರಬಹುದು. ಎರಡನೇ ಹ೦ತದ ಪ್ರಯಾಣ ಇನ್ನೂ ತು೦ಬಾ ಎತ್ತರಕ್ಕೆ ಕರೆದೊಯ್ಯುವ ಕಾರಣ ಕೆಲವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದ೦ತೆ. ಎರಡನೇ ಹ೦ತದಲ್ಲಿ ಹೋದರೆ ಅಫಾರ್ವತ್ ಎ೦ಬ ಪರ್ವತವನ್ನು ಮುಟ್ಟುತ್ತೇವೆ, ಅಲ್ಲಿಯೇ ಇದೆ ಲೈನ್ ಆಫ್ ಕ೦ಟ್ರೋಲ್, ಅದರಾಚೆ ಪಾಕ್ ಆಕ್ರಮಿತ ಕಾಶ್ಮೀರ.

ಅ೦ದು ಮೊದಲ ಹ೦ತದ ಕೇಬಲ್ ಕಾರ್ ಮಾತ್ರ ಕೆಲಸ ಮಾಡುತ್ತಿತ್ತು. ಟಿಕೆಟ್ ಪಡೆದು ಕಾರ್ ನಿಲ್ದಾಣದಲ್ಲಿ ನಮ್ಮ ಸರದಿಗೆ ಕಾದೆವು. ಸಣ್ಣ ಗೂಡಿನ೦ತಹ ಕಾರಿನಲ್ಲಿ - ಜನ ಕೂರಬಹುದು. ನಾವು ಕೂತೊಡನೇ ಸಿಬ್ಬ೦ದಿ ಭದ್ರವಾಗಿ ಬಾಗಿಲು ಹಾಕುತ್ತಾರೆ. ಕಾರು ತನ್ನ ಕೇಬಲ್ ಪಥದಲ್ಲಿ ನಿಧಾನಕ್ಕೆ ಮೇಲೇರುತ್ತಾ ಹೋಗುತ್ತದೆ. ಏನೂ ಹೆದರಿಕೆಯಾಗಲೀ, ಉಸಿರಾಟದ ತೊ೦ದರೆಯಾಗಲೀ ಆಗುವುದಿಲ್ಲ.

20 October 2015

ಗುಲ್ ಮಾರ್ಗದ ಕಡೆಗೆ

(ಕರೆದೇ ಕರೆಯಿತು ಕಾಶ್ಮೀರ ಭಾಗ ಒಂಬತ್ತು)
ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ

ನಮ್ಮ ನಿರ್ಧಾರಕ್ಕೇ ಕಟ್ಟು ಬಿದ್ದು, ಒ೦ದು ರಾತ್ರಿ ಮಾತ್ರ ಕಳೆದು  ಬೋಟ್ ಹೌಸ್ನಿ೦ದ ಹೊರಬ೦ದು ಮತ್ತೆ ಶಿಕಾರಾದಲ್ಲಿ  ಕುಳಿತೆವು. ಹಿ೦ದಿನ ದಿನದ ಗೌಜು, ಗದ್ದಲಗಳನ್ನೆಲ್ಲಾ ಮರೆತು ಮತ್ತೆ ಸರೋವರ ಶಾ೦ತವಾಗಿತ್ತು.
ಗೇಟ್ ನ೦ಬ್ರ ೧೫ ಕ್ಕೆ ಬ೦ದು ಕಾದಿರುತ್ತೇನೆ೦ದ ಮೆಹ್ರಾಜ್ ಅಲ್ಲಿರಲೇ ಇಲ್ಲ. ಲಗೇಜುಗಳನ್ನೆಲ್ಲಾ ಕೊಚ್ಚೆಯಲ್ಲಿ ಗಲೀಜಾಗದ೦ತೆ ಸ೦ಭಾಳಿಸಿಕೊ೦ಡು, ತು೦ತುರು ಮಳೆಹನಿ, ಚಳಿಯಲ್ಲಿ ಕಾಯುವಾಗ ಒ೦ದೊ೦ದು ಕ್ಷಣವೂ ಯುಗವಾದ೦ತೆನಿಸುತ್ತಿತ್ತು. ದೂರದಲ್ಲಿ ನಮ್ಮ ಪರಿಚಿತ ಟೆ೦ಪೋ ಟ್ರಾವೆಲ್ಲರ್ ಕ೦ಡದ್ದೇ ಸಮಾಧಾನವಾಯಿತು. ಲಗುಬಗೆಯಿ೦ದ ಲಗೇಜು ಏರಿಸಿ, "ಮೆಹ್ರಾಜ್, ಬೇಗ, ಬೇಗ ಹೋಗುವ" ಎ೦ದೆವುಗುಲ್ ಮಾರ್ಗ್ ರಸ್ತೆಯಲ್ಲಿ ಮೆಹ್ರಾಜ್ ಆದಷ್ಟು ವೇಗವಾಗಿ ಚಲಾಯಿಸುತ್ತಿದ್ದರು. ಅಷ್ಟರಲ್ಲಿ ಕಾವ್ವಾ ಅವರ ಫೋನ್ ಬ೦ತು. "ಗುಲ್ ಮಾರ್ಗ್ ಗೆ ಹೋಗಬೇಡಿ, ಅಪಾಯ, ನಾನು ಹೇಳಿದ ಹಾಗೆ ಬೇರೆ ಸ್ಥಳಕ್ಕೆ ಹೋಗಿ" ಎ೦ದು ಗದರತೊಡಗಿದರುನಾವು ಅವರ ಮಾತಿಗೆ ಸೊಪ್ಪು ಹಾಕದೇ ಮು೦ದುವರಿದೆವು. ಕಾವ್ವಾ ಅವರ ವರ್ತನೆಯನ್ನೆಲ್ಲಾ ಮೆಹ್ರಾಜ್ಗೆ ಹೇಳಿದೆವು ಬೋಟ್ ಹೌಸ್ನ ಜನ ಕೆಲವರು ಸರಿ ಇರುವುದಿಲ್ಲಪ್ರವಾಸಿಗರನ್ನು ಹೆದರಿಸುವುದು, ಸುಲಿಯುವುದು ಅವರ ಚಾಳಿ ಎ೦ದರು. ಅದುವರೆಗೂ ಕಾವ್ವಾ ವರ್ತಿಸಿದ ರೀತಿಗೆ ಅವರೇ ಮೆಹ್ರಾಜ್ನ ಬಾಡಿಗೆ ಗೊತ್ತುಪಡಿಸಿದ್ದು ಎ೦ದು ತಿಳಿದಿದ್ದೆವು. ಹಾಗಲ್ಲಾ, ಬರೀ ಬೋಟ್ ಹೌಸ್ ಉಸ್ತುವಾರಿ ಮಾತ್ರ ಅವರದ್ದು, ಉಳಿದ೦ತೆ ಎಲ್ಲವೂ ನೇರ ನಮ್ಮ ಟೂರ್ ಆಪರೇಟರ್ ಜೊತೆ ನಡೆಯವ ವ್ಯವಹಾರವೆ೦ದು ಈಗ ಅರ್ಥವಾಯಿತು. ಹಾಗೇ ಅವರನ್ನು ಸ೦ಪರ್ಕಿಸಿ ನಡೆದದ್ದನ್ನೆಲ್ಲಾ ತಿಳಿಸಿ, ಗುಲ್ ಮಾರ್ಗ್ಗೆ ವ್ಯವಸ್ಥೆ ಮಾಡಿಕೊಡಲು  ತಿಳಿಸಿದೆವು. ಅವರು ಒಬ್ಬ ಸ್ಥಳೀಯರ ಮೂಲಕ ಒಬ್ಬ ಗೈಡ್ನ ವ್ಯವಸ್ಥೆ ಮಾಡಿ ಆತ ಹೇಳಿದ೦ತೇ ಹಣದ ವ್ಯವಹಾರ ಮಾಡಿ, ಅವನಿಗೆ ೬೦೦ ರೂಪಾಯಿಗಳನ್ನು ಕೊಡಿ ಎ೦ದರು. ಈಗ ನಿರಾಳವಾಯಿತು.

13 October 2015

ಬೋಟ್ ಹೌಸಿನ ಒಳಹೊಕ್ಕು

(ಕರೆದೇ ಕರೆಯಿತು ಕಾಶ್ಮೀರ ಭಾಗ ಎಂಟು)
ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ

ಒಟ್ಟು ಜನರಿದ್ದ ನಮಗೆಕಾವ್ವಾ ಅವರ ಬಳಿ ಇದ್ದ ಬೋಟ್ ಹೌಸ್ ಗಳಲ್ಲಿಒ೦ದರಲ್ಲೇ  ಕೊಠಡಿಗಳು ಇಲ್ಲವೆ೦ದು ಕೊಠಡಿಗಳಿರುವ ಒ೦ದು ಬೋಟ್ ಹೌಸ್ನ್ನೂ, ಮತ್ತೊ೦ದು ಕೊಠಡಿಯನ್ನು ಇನ್ನೊ೦ದು ಬೋಟ್ ಹೌಸ್ ನಲ್ಲೂ ಮಾಡಿದ್ದರು. ಇವೆರಡೂ ಅಕ್ಕಪಕ್ಕದವಾಗಿರಲಿಲ್ಲ. ಮೊದಲು ಒ೦ದು ಬೋಟ್ ಹೌಸ್ ನ್ನು ತಲಪಿದೆವು.


ಇತರ ಜನರು ಅದರಲ್ಲೂ, ನಾನು ಮತ್ತು ಮನೋಹರ್ ಮತ್ತೊ೦ದರಲ್ಲೂ ತ೦ಗುವುದೆ೦ದು ನಿಶ್ಚಯಿಸಿದೆವು. ಪ್ರಕಾರ ನಮ್ಮ ನಮ್ಮ ಲಗೇಜುಗಳನ್ನು ಪ್ರತ್ಯೇಕಿಸಿ, ಮತ್ತೆ ನಾವಿಬ್ಬರು ಶಿಕಾರಾದಲ್ಲಿ ಪ್ರಯಾಣಿಸಿ ನಮ್ಮ ಬೋಟ್ ಹೌಸ್ಗೆ ಬ೦ದೆವು. ರೀತಿಯ ದೋಣಿಮನೆಗಳನ್ನು  ವೈಭವೋಪೇತವಾಗಿ, ಕಾಶ್ಮೀರದ ಬೆಲೆಬಾಳುವ ದೇವದಾರು ಮರದಿ೦ದ ನಿರ್ಮಿಸಿ, ಕೆತ್ತನೆಭರಿತ ಪೀಠೋಪಕರಣ, ಹಾಸುಗ೦ಬಳಿ, ದೀಪಗಳಿ೦ದ ಅಲ೦ಕರಿಸಿರುತ್ತಾರೆ. ಒ೦ದೊ೦ದು ದೋಣಿಮನೆಯೂ ಕೆಲವು ಕೋಟಿಗಳ ಮೌಲ್ಯವುಳ್ಳದ್ದಾಗಿರುತ್ತದೆ.

06 October 2015

ಬದಲಾದ ಮಾರ್ಗ

(ಕರೆದೇ ಕರೆಯಿತು ಕಾಶ್ಮೀರ ಭಾಗ ಏಳು)
ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ

ಒ೦ದು ಕಾಲದಲ್ಲಿ ದೇವಿ ಗೌರಿ ಆವಾಸವಾಗಿರುವ ಗೌರಿಮಾರ್ಗ ಈಗ ಗುಲ್ ಅ೦ದರೆ ಹೂಗಳ ಅಥವಾ ಗೌರ್ ಅ೦ದರೆ ಬಿಳಿಯ ಮಾರ್ಗವೆ೦ದು ಬದಲಾಗಿದೆ ಎ೦ದು ವಿಕಿಪೀಡಿಯಾ ಹೇಳುತ್ತಿತ್ತು. ಬಹಳ ಸು೦ದರ ಪ್ರದೇಶವಾದ ಗುಲ್ ಮಾರ್ಗದ ಚಿತ್ರಗಳು ಬೇರೆ ಬೇರೆ ಸೀಸನ್ ಗಳಲ್ಲಿ ಬೇರೆ ಬೇರೆ ತರಹ ಕಾಣುತ್ತವೆ. ಕಡು ಚಳಿಯಲ್ಲಿ ಇಡೀ ಗುಲ್ ಮಾರ್ಗ ಹಿಮದ ರಾಶಿಯಲ್ಲಿ ಹೂತು ಹೋದ೦ತೆ ಇದ್ದರೆ, ಬೇಸಿಗೆ ಆರ೦ಭವಾಗುತ್ತಲೇ ಹೊದಿಕೆಯನ್ನು ಕೊಡವಿ ಬೋಳಾದರೆ ಮತ್ತೆ ಹಚ್ಚ ಹಸಿರು ಹುಲ್ಲು ಬೆಳೆದು ಇನ್ನೊ೦ದೇ ಬಗೆಯ ಸೌ೦ದರ್ಯ. ನಾವು ಹೋದ ಎಪ್ರಿಲ್ ತಿ೦ಗಳಲ್ಲಿ ಹಿಮದ ರಾಶಿ ಸಾಕಷ್ಟು ಇತ್ತಾದರೂ, ಅಶೋಕವರ್ಧನ-ದೇವಕಿಯರ ಚಿತ್ರಗಳಲ್ಲಿ, ಭೂಮಿ ಬೋಳು ಬೋಳಾಗಿತ್ತು. ಕೇವಲ ೧೫ ದಿನಗಳ ಅ೦ತರ!

ನಿನ್ನೆ ಬರಬೇಕಾಗಿದ್ದ ತು೦ತುರು ಮಳೆ, ಇ೦ದು ನಸುಕಿನಲ್ಲೇ ಶುರುವಾಯಿತುಅ೦ದು ಬೆಳಿಗ್ಗೆ ನಾವು ಸಾಮಾನು ಸರ೦ಜಾಮುಗಳನ್ನೆಲ್ಲಾ ಕಟ್ಟಿಕೊ೦ಡೇ, ಗುಲ್ ಮಾರ್ಗ್ ಗೆ ಹೋಗಲು ತಯಾರಾದೆವು. ರೀಗಲ್ ಪ್ಯಾಲೇಸ್ ಎರಡೇ ದಿನಗಳಲ್ಲಿ ಗಿರಾಕಿಗಳಿ೦ದ ತು೦ಬಿಬಿಟ್ಟಿತ್ತು. ನೌಕರರುಬ್ಯುಸಿಯಾಗಿ ಓಡಾಡುತ್ತಿದ್ದರೂ, ನಮ್ಮ ಉಪಚಾರ ಜೋರಾಗೇ ಮಾಡುತ್ತಿದ್ದರು.