Showing posts with label ಪ್ರಾಕೃತಿಕ ಭಾರತ ಸೀಳೋಟ. Show all posts
Showing posts with label ಪ್ರಾಕೃತಿಕ ಭಾರತ ಸೀಳೋಟ. Show all posts

12 August 2020

ಸೀಳೋಟದ ಕೊನೆಗೊಂದು ಸೀಳು ನೋಟ

(ಪ್ರಾಕೃತಿಕ ಭಾರತ ಸೀಳೋಟ - ೧೩) 


ಪ್ರಾಕೃತಿಕ ಭಾರತದ ಸೀಳೋಟ ಯೋಜನೆಯಲ್ಲಿ ಆರಂಭದ ೨೫-೪-೯೦ ಮತ್ತು ಕೊನೆಯ ೨೭-೫-೯೦ ದಿನಾಂಕಗಳನ್ನು ಖಚಿತವಾಗಿಯೇ ನಿಶ್ಚೈಸಿದ್ದೆ. ಕಾರಣ ಸರಳ - ಹುಬ್ಬಳ್ಳಿ, ಭೋಪಾಲ ಮುಂತಾದ ಸ್ಥಳಗಳಲ್ಲಿ ನಮ್ಮನ್ನು ಕಾದು ಕುಳಿತವರನ್ನು ನಿಗದಿತ ದಿನಕ್ಕೆ ಮುಟ್ಟದೇ ಅಗೌರವಿಸಬಾರದು. ಮತ್ತು ಮಂಗಳೂರಿಗೆ ಮರಳಲು ರೈಲ್ವೇ ಕಾಯ್ದಿರಿಸುವಿಕೆ ವ್ಯರ್ಥವಾಗಬಾರದು. ಹಾಗೆ ಲಭ್ಯ ಮೂವತ್ಮೂರು ದಿನಗಳಲ್ಲಿ, ಬೈಕ್ ಯಾನ ಮತ್ತು ಸ್ಥಳ ಸಂದರ್ಶನದ ದಿನಗಳು ಮೂವತ್ತು ಮಾತ್ರ. ಹೆಚ್ಚುವರಿ ಮೂರು ದಿನಗಳನ್ನು ಮಾರ್ಗಕ್ರಮಣದ ಆಕಸ್ಮಿಕಗಳ ಹೊಂದಾಣಿಕೆಗೂ ದಿಲ್ಲಿ ದರ್ಶನಕ್ಕೂ ಮೀಸಲಿರಿಸಿದ್ದೆವು. ೨೪ರ ಅಪರಾಹ್ನವೇ ದಿಲ್ಲಿ ಸೇರಿದ್ದ ನಮಗೆ ವಿನಿಯೋಗಕ್ಕೆ ಸ್ಪಷ್ಟ ಮೂರು ದಿನಗಳು ಉಳಿದಿದ್ದವು. 

ಹನ್ನೊಂದು ದಿನಗಳ ಹಿಂದೆ ಬಾರದ ಅನೇಕ ಹೃದ್ಯವಾಗುವಂತ ಪತ್ರಗಳ ಪಠಣ

09 August 2020

ತಪ್ಪಿದ ಬದರಿ ಮತ್ತು ಮಾರ್ಗ ಕ್ರಮಣ

(ಪ್ರಾಕೃತಿಕ ಭಾರತ ಸೀಳೋಟ - ೧೨) 


ಕೇದಾರ ನಾಥದ ‘ವಿಜಯ’ಕ್ಕೆ ನಾನು ಅನುಭವಿಸಿದ ನೋವು ಹೆಚ್ಚೇ ಆಗಿತ್ತು. ಹಾಗಾಗಿ ಮರುದಿನದ ಬದರೀ ಯಾನದ ಯೋಚನೆಯನ್ನು ನಾನು ಮತ್ತು ದೇವಕಿ ಕೈ ಬಿಟ್ಟೆವು. ಸೋನ್ ಪ್ರಯಾಗಿನಿಂದ ಬದರಿಗೆ ಹೋಗಿ ಮರಳುವಲ್ಲಿ ಕವಲೂರಾಗಿ ಸಿಗುವ ಊರು ಕರ್ಣಪ್ರಯಾಗ್. ಅಲ್ಲಿ ನಮಗೆ ಎರಡು ದಿನದ ವಿಶ್ರಾಂತಿ, ಇತರರು ಬದರೀನಾಥಕ್ಕೆ. (ಇಂದು ದಾರಿಯ ಸಾಧ್ಯತೆಗಳು ತುಂಬ ಬದಲಿವೆ, ಬಿಡಿ.) ತಂಡವಾದರೂ ಸಾಕಷ್ಟು ಸೋತಿದ್ದುದರಿಂದ ಬೆಳಿಗ್ಗೆ (೨೦-೫-೯೦) ಸುಮಾರು ಎಂಟು ಗಂಟೆಯ ಹೊತ್ತಿಗೆ ಎಲ್ಲರು

07 August 2020

ಟೆಹ್ರಿ ಅಣೆಕಟ್ಟು, ಕೇದಾರನಾಥ ವಿಜಯ!


(ಪ್ರಾಕೃತಿಕ ಭಾರತ ಸೀಳೋಟ - ೧೧) 

ಗೂಗಲ್ ಕೃಪೆ

ಭಾರತ ಸೀಳೋಟದ ಯೋಜನೆಯಲ್ಲಿ ನಾವು ಮಂಗಳೂರು ಬಿಡುವಂದು, ಅನ್ಯ ಮೂವರು ಗೆಳೆಯರು ದಿಲ್ಲಿಗೆ ನೇರ ಬಂದು, ತಂಡಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದರು. ಅವರಿಗೆ ನಮ್ಮೊಡನೆ ಚತುರ್ಧಾಮವಾದರೂ ಅನುಭವಿಸುವ ಹುಚ್ಚು ಹತ್ತಿತ್ತು. ಆದರೆ ಆ ತ್ರಿಮೂರ್ತಿಗಳು ನನ್ನ ನಿರೀಕ್ಷೆಯಂತೆ ಭೋಪಾಲಕ್ಕೆ, ಕೊನೆಗೆ ದಿಲ್ಲಿಗೂ ಪತ್ರ ಖಾತ್ರಿ ಕೊಡಲೇ ಇಲ್ಲ. ನಾವು ದಿಲ್ಲಿ ಬಿಡುವವರೆಗೂ ದಿಲ್ಲಿಗೆ ಬಂದಂತೇ ಇರಲಿಲ್ಲ. ದಿಲ್ಲಿಗೆ ಬಂದಿದ್ದ ನನ್ನ ತಂದೆಯ ಪತ್ರದಲ್ಲಿ ಅವರ ಗೊಂದಲಗಳಷ್ಟೇ ತಿಳಿದಿತ್ತು. 


ವಾಸ್ತವದಲ್ಲಿ, ನಾವು ದಿಲ್ಲಿ ಬಿಡುವ ದಿನ (೧೧-೫-೯೦), ಆ ಮೂವರು - ಕೆ. ಲಕ್ಷ್ಮೀನಾರಾಯಣ ರೆಡ್ಡಿ (ರೆಡ್ಡಿ) - ಪ್ರಾಧ್ಯಾಪಕ, ಮೋಹನ ಆಚಾರ್ಯ (ಮೋಹನ್) - ಕುಶಲ ಕರ್ಮಿ, ಮತ್ತು

05 August 2020

ಯಮುನೋತ್ರಿ, ಗಂಗೋತ್ರಿ, ಗೋಮುಖ

(ಪ್ರಾಕೃತಿಕ ಭಾರತ ಸೀಳೋಟ - ೧೦) 

ಯಮುನೋತ್ರಿಯಲ್ಲಿ ನಾವಿದ್ದ ದಿನಗಳಲ್ಲಿ ನಿಜ ಸೂರ್ಯ ದರ್ಶನಕ್ಕೆ ಮಂಜು, ಮೋಡ ಮತ್ತು ಒತ್ತಿನ ದೈತ್ಯ ಶಿಖರ ಶ್ರೇಣಿಗಳ ಪ್ರಭಾವ ಇದ್ದರೂ ಹಗಲಿನ ಪ್ರಕಾಶ ಬೆಳಿಗ್ಗೆ ಐದು ಗಂಟೆಗೇ ಸಿಗುತ್ತಿತ್ತು. ಆದರೆ ಜನ, ಕುದುರೆ, ಹೇಸರಗತ್ತೆ, ಕಾವಡಿ-ಬುಟ್ಟಿ ಹೊರುವವರು ಎಂಬ ವಿಪರೀತ ಸಂದಣಿ ಆರು ಗಂಟೆಗಷ್ಟೇ ತೊಡಗುವುದು ಎಂದು ತಿಳಿದಿದ್ದೆವು. ಹಾಗಾಗಿ ಸಮಯದ ಉಳಿತಾಯವನ್ನು ಲಕ್ಷಿಸಿ, (೧೪-೫-೯೦)

04 August 2020

ಹನುಮಾನ್ ಚಟ್ಟಿಯ ದುಂಧುಭಿ ವಧ!!

(ಪ್ರಾಕೃತಿಕ ಭಾರತ ಸೀಳೋಟ - ೯) 

ಕಾಗೆ ಹಾರಿದಂತೆ ಡೆಹ್ರಾಡೂನ್ - ಮಸ್ಸೂರಿ ಅಂತರ ಸುಮಾರು ಐದೂವರೆ ಕಿಮೀಯಾದರೂ ದಾರಿ ಮೂವತ್ತೈದು ಕಿಮೀ, ಗಳಿಸುವ ಔನ್ನತ್ಯ ಅಸಾಧಾರಣ ೫೭೩೦ ಅಡಿ. ಅದರಲ್ಲೂ ಸುಮಾರು ಅರ್ಧ ಅಂತರದ - ರಾಜಾಪುರಕ್ಕೆ (ಔ. ಸುಮಾರು ೩೫೭೦) ತಲಪುವಾಗ ೨೧೦೦ ಅಡಿಯನ್ನಷ್ಟೇ ಗಳಿಸಿದ್ದೆವು. ಮುಂದಿನದು ಇನ್ನೂ ಕಡಿದು ಎಂದು ತಿಳಿದು, ಅಲ್ಲೇ ಊಟ ಮುಗಿಸಿಕೊಂಡೆವು. ಅಪರಾಹ್ನದ ದಾರಿ ಬಲು ಸುರುಳಿ ಚಕ್ಕುಲಿಯಂತೆ ಸುತ್ತುತ್ತಿದ್ದಂತೆ, ಕ್ಷಣ ಕ್ಷಣಕ್ಕೂ ವಾತಾವರಣದಲ್ಲೂ ತಂಪು ಏರುತ್ತಿತ್ತು. ದಾರಿಯ ಈ ಭಾಗವನ್ನೇ ಹೀರೊಂಡಾ ಕಂಪೆನಿ ತನ್ನ ಜಾಹೀರಾತುಗಳೆಲ್ಲ ‘ಒಂದು ಲೀಟರ್ ಪೆಟ್ರೋಲ್ ದಾರಿ’ ಎಂದೇ ಮೆರೆಸುತ್ತಿದ್ದದ್ದು ನೆನಪಾಗಿತ್ತು. 

28 July 2020

ದಿಲ್ಲಿಯಿಂದ ಡೆಹ್ರಾಡೂನಿಗೆ...

(ಪ್ರಾಕೃತಿಕ ಭಾರತ ಸೀಳೋಟ - ೮) 


ದಿಲ್ಲಿ ದಾಳಿಗೆ (೯-೫-೯೦) ಬೆಳಿಗ್ಗೆ ಆರಕ್ಕೆ ನಾಂದಿಯೇನೋ ಹಾಡಿದೆವು. ಆದರೆ ನನ್ನ ಚಕ್ರವೊಂದು ನಿಟ್ಟುಸಿರು ಬಿಟ್ಟು, ಒಂದು ಗಂಟೆ ತಡವಾಗಿ ಮುಂದುವರಿದೆವು. ಆ ದಾರಿ ಖ್ಯಾತ ಪ್ರವಾಸೀ ತ್ರಿಕೋನದ ಬಲ ಭುಜ, ವಾಸ್ತವದಲ್ಲೂ ಬಹುತೇಕ ಸರಳ ರೇಖೆಯಂತೇ ಇದೆ. ಗಗನಗಾಮೀ ನಕ್ಷಾ ನೋಟದಲ್ಲಿ ಮಾತ್ರ ಉದ್ದಕ್ಕೂ ಯಮುನಾ ನದಿ ದೀರ್ಘ ಬಳಕುಗಳ ಸಾಂಗತ್ಯ ಕೊಡುತ್ತದೆ. ಮಾರ್ಗದ ಕಠೋರ ತಪೋನಿಷ್ಠೆಯನ್ನು ಮುರಿಯ ಬಂದ ಅಪ್ಸರೆಯಂತೆ ನಲಿದಿದೆ. ದಾರಿಗೆ ಈ ಅಲೌಕಿಕ ದೃಶ್ಯ ಅಗೋಚರವಾದ್ದರಿಂದ ಸುಮಾರು ಇನ್ನೂರು ಕಿಮೀ ಉದ್ದದ್ದ ದಿಲ್ಲಿಯ ಜಪವನ್ನೇ ನಾವು ಮಾಡಿಕೊಂಡಿದ್ದೆವು. ಸುಮಾರು ಮಧ್ಯಂತರದಲ್ಲಿದ್ದ ಏಕೈಕ ಬದಲಾವಣೆ ಮಥುರಾ. 

26 July 2020

ಜೈಪುರಕ್ಕೆ ಜೈ ಆಗ್ರಾವೂ ಸೈ

(ಪ್ರಾಕೃತಿಕ ಭಾರತ ಸೀಳೋಟ - ೭) 

‘ಹೊಟ್ಟೆ ಘಟ್ಟಿಯಿರಬೇಕು, ಘಟ್ಟ ಎದುರಾಗಬೇಕು’ ಸಾಹಸ ಯಾತ್ರೆಗಳಲ್ಲಿ ನನ್ನ ಅಭ್ಯಾಸ. ಬೆಳಿಗ್ಗೆ ನಾಲ್ಕು ಗಂಟೆಗೆ ಹೊರಡಬೇಕಾದರೂ ತಿಂಡಿ ಮಾಡಿಕೊಟ್ಟರೆ, ನಾನು ತಿಂದೇ ಹೊರಡುವವ. ಹಾಗೆಂದು ಒಂದೆರಡು ಗಂಟೆ ತಡವಾದರೆ ಕೈಕಾಲೇನು ಬಿದ್ದು ಹೋಗುವುದೂ ಇಲ್ಲ. ಅಂದು (೬-೫-೯೦) ರಣಥೊಂಬರಾ ಕೋಟೆಯನ್ನು ಬೆಳಿಗ್ಗೆ ನೋಡಿ ಬರುವ ಉತ್ಸಾಹದಲ್ಲಿ ತಿಂಡಿ ತಿಂದಿರಲಿಲ್ಲ. ವಾಪಾಸು ಬಂದು ಮುಂದಿನ ಪ್ರಯಾಣಕ್ಕಿಳಿಯುವಾಗ ಮಾತ್ರ (೧೦.೪೫), ಒಂದೆರಡಲ್ಲ ಮೂರ್ನಾಲ್ಕು ಗಂಟೆಗಳೇ ತಡವಾಗಿತ್ತು. ಮೊದಲು ಸಿಕ್ಕ ಧಾಬಾಕ್ಕೇ ನುಗ್ಗಿದೆವು.

24 July 2020

ಶಿವಪುರಿ ಮತ್ತು ರಣಥೊಂಬರಾದ ಹುಲಿಗಳು

(ಪ್ರಾಕೃತಿಕ ಭಾರತ ಸೀಳೋಟ - ೬) 


ಬಳಲಿಕೆಯೋ ತಿನಿಸಿನ ಎಡವಟ್ಟೋ ರಾತ್ರಿ ದೇವಕಿ ಒಂದೆರಡು ಬಾರಿ ವಾಂತಿ ಮಾಡಿದ್ದಳು. ಧಾರಾಳ ನೀರು ಮತ್ತು ಗೆಳೆಯ ಡಾ| ಕೃಷ್ಣಮೋಹನ್ ಕಟ್ಟಿಕೊಟ್ಟಿದ್ದ ಪ್ರಥಮ ಚಿಕಿತ್ಸೆ ಕಟ್ಟಿನಿಂದ ಒಂದು ಗುಳಿಗೆಯಲ್ಲಿ ಸುಮಾರು ಸುಧಾರಿಸಿದಳು. ಹಾಗೆಂದು ಬೆಳಗ್ಗಿನ (೪-೫-೯೦) ನಮ್ಮ ದಿನಚರಿಗೇನೂ ಬದಲಾವಣೆ ತರಬೇಕಾಗಲಿಲ್ಲ! ಆರೂ ಮುಕ್ಕಾಲಕ್ಕೆ ಭೋಪಾಲ್ ಬಿಟ್ಟು ‘ಶಿವಪುರಿ ವನಧಾಮ’ದತ್ತ, ಅಂದರೆ ಸುಮಾರು ಮುನ್ನೂರು ಕಿಮೀ ಗುರಿಗೆ ಧಾವಿಸಿದೆವು.

21 July 2020

ಕೋಟೆ ರೂಪವತಿಯ ಘುಂಗಟ್ ಸರಿಸಿ

(ಪ್ರಾಕೃತಿಕ ಭಾರತ ಸೀಳೋಟ - ೫) 


ಅಂಗಡಿಯಲ್ಲಿ ಹಲವು ನಕ್ಷಾಪುಸ್ತಕಗಳಿಂದ ನಮ್ಮ ಸ್ವಾರ್ಥಾನುಕೂಲಿಯಾದ ಗೀಟುಗಳನ್ನು ಹೆಕ್ಕಿದ ಮಿಶ್ರಣವೇ ನನ್ನ ನಕಾಶೆ. ಆ ಲೆಕ್ಕದಲ್ಲಿ ನಮ್ಮ ಹೊಸದಿನದ (೧-೫-೯೦) ಲಕ್ಷ್ಯ - ರಾಣೀ ರೂಪಮತಿಯ ಅಮರ ಪ್ರೇಮ ಕತೆಗೂ ಸಾಕ್ಷಿಯಾದ ಮಾಂಡವಘಡ್ ಅಥವಾ ಮಾಂಡು. ಹಕ್ಕಿ ಹಾರಿದಂತೆ ಇದು ಮೇಲ್ಘಾಟಿನಿಂದ ಪಡುಬಡಗು ಅಥವಾ
ವಾಯವ್ಯಕ್ಕಿತ್ತು. ನನ್ನ ದಾರಿಯ ಅಂದಾಜಿನಂತೆ ನಾನೂರು ಕಿಮೀಯ ಓಟ. ಸಾಲದ್ದಕ್ಕೆ ಮಾಂಡು ಕೋಟೆಯಲ್ಲಿನ ಊಟ, ವಾಸ್ತವ್ಯದ ಅನುಕೂಲಗಳೂ ಅಸ್ಪಷ್ಟವಿದ್ದವು. 

19 July 2020

ಔರಂಗಾಬಾದ್, ಅಜಂತಾ, ಮೇಲ್ಘಾಟ್

(ಪ್ರಾಕೃತಿಕ ಭಾರತ ಸೀಳೋಟ - ೪) 


ಪ್ರವಾಸ ಕಥನವೆಂದರೆ ತಿರುಗಾಡೀ ದಿನಚರಿಯ ಪುಟವಲ್ಲ, ಭೇಟಿ ಕೊಟ್ಟ ಸ್ಥಳಗಳ ಪುರಾಣವಲ್ಲ, ಓಡಿದ ದಾರಿಯಲ್ಲ, ಕಂಡ ಚಿತ್ರವಲ್ಲ, ತಿನಿಸುಗಳ ಪಟ್ಟಿಯಲ್ಲ, ....ಅಲ್ಲ, ಅಲ್ಲ! ಅಷ್ಟನ್ನೇ ಕೊಟ್ಟರೆ ಒಳ್ಳೆಯ ಮಾಹಿತಿ, ವರದಿ ಆಗಬಹುದು. ಒಂದು ಕಾಲಕ್ಕೆ ಅಂಥವು ಅವಶ್ಯವಿದ್ದದ್ದೂ ಸರಿಯೇ (ಹ್ಯೂಯೆನ್‍ತ್ಸಾಂಗ್). ಆದರೆ ಇಂದು ಅಂತರ್ಜಾಲದಲ್ಲಿ ಮಾಹಿತಿಗಳ ಮಹಾಪೂರವೇ ಇದೆ, ವಿದ್ಯುನ್ಮಾನದ ಸಾಧ್ಯತೆಯಲ್ಲಿ ನಿಜಧ್ವನಿ, ಯಥಾವತ್ತು ಚಲಚಿತ್ರಗಳೇ ಧಾರಾಳ ಲಭ್ಯವಿದೆ. ಹಾಗಾಗಿ ಪ್ರಾಸಂಗಿಕವಾಗಿ ನಾನು ಅಲ್ಲಗಳೆದವನ್ನೆಲ್ಲ ಸೇರಿಸಿಕೊಂಡರೂ ಇನ್ನು ಹೆಚ್ಚಿನ ಲಕ್ಷ್ಯವನ್ನು ಸಾಧಿಸಬೇಕೆನ್ನುವುದು ನನ್ನ ಪ್ರವಾಸ ಕಥನಗಳ ತುಡಿತ. ಅಂದರೆ ನಿಷ್ಪಕ್ಷ ವರದಿಗಿಂತ, ಪ್ರವಾಸಿಯ ಪ್ರಾಮಾಣಿಕ ಪ್ರತಿಕ್ರಿಯೆ, ಅದಕ್ಕೆ ಯುಕ್ತ ಅಭಿವ್ಯಕ್ತಿ ಮೂಡಿಸುವುದರಲ್ಲಿ ನಾನು ಹೆಚ್ಚು ಆಸಕ್ತ. ಅಂಥಾ ಒಂದು ದೊಡ್ಡ ಹೆಸರಿನ ಉದಾಹರಣೆ ಕೊಡುವುದಾದಲ್ಲಿ -

17 July 2020

ಎಲ್ಲೋರಾ ದೌಲತ ಗಿರಿ

(ಪ್ರಾಕೃತಿಕ ಭಾರತ ಸೀಳೋಟ - ೩) 

ವಿಜಯಪುರ - ಹಲವು ಪಾಳೇಪಟ್ಟುಗಳ ಮಿಶ್ರಣದೊಡನೆಯೂ ಸುಮಾರು ಹನ್ನೊಂದನೇ ಶತಮಾನದಲ್ಲಿ, ಚಾಲುಕ್ಯರ ಆಡಳಿತದಲ್ಲಿ ಗಟ್ಟಿಯಾಗಿ ರೂಪು ಪಡೆದ ನಗರ. ಮುಘಲ್, ಬಹಮನೀ, ಆದಿಲ್ ಶಾಹೀ, ಹೈದರಾಬಾದ್ ನಿಜಾಂ, ಮರಾಠ, ಬ್ರಿಟಿಶ್...... ಆಡಳಿತಗಳ ಸುಳಿಗಳಲ್ಲಿ ಬೆಳೆದಿದೆ, ಬಳಲಿದೆ. ಅದರಲ್ಲಿ ಢಾಳಾಗಿ ಕಾಣುವ ಕೆಲವು ಸಾಕ್ಷಿಗಳನ್ನಾದರೂ ನೋಡಲು ನಾವು (೨೭-೪-೯೦ರ) ಬೆಳಗ್ಗೆ ಐದೂವರೆ ಗಂಟೆಗೇ ಹೊರಟೆವು. ಮುಂದೆ ಮೊಪೆಡ್ಡಿನಲ್ಲಿ ಜೋಶಿಯವರ ‘ಶಿಷ್ಯ’ ಸಿದ್ಧಣ್ಣ ಬಿರಾದಾರ್. ಹಿಂದೆ ಖಾಲೀ ಬೈಕುಗಳಲ್ಲಿ ನಾವಾರು.

15 July 2020

ವಿಜಯಪುರಕ್ಕೆ ಬಿಜಯಂಗೈದೆವು

(ಪ್ರಾಕೃತಿಕ ಭಾರತ ಸೀಳೋಟ - ೨)


ಸಾಹಸಯಾನದುದ್ದಕ್ಕೂ ಬೆಳಗ್ಗೆ ಹೊರಡುವಲ್ಲಿ ಹಿಂದಿನದ ಸುಸ್ತು ಅಥವಾ ನಿದ್ರೆ ಬಾಕಿ ನಮ್ಮನ್ನು ಕಾಡದಂತೆ ನೋಡಿಕೊಂಡೆವು. ನಾಲ್ಕೈದು ಗಂಟೆಗೇ ಎದ್ದು ಪ್ರಾತಃ ಕರ್ಮಗಳನ್ನು ಮುಗಿಸಿ, ಉಷಃ ಕಾಲದಲ್ಲೇ ಬೈಕ್‍ಗಳು ಗುಡುಗುಡಿಸುವುದನ್ನು ರೂಢಿಸಿಕೊಂಡೆವು. ಇದಕ್ಕೆ ಹುಬ್ಬಳ್ಳಿಯ ಮುಂಜಾವೇ ಸಾಕ್ಷಿ. ಹುಬ್ಬಳ್ಳಿಯ ವಾಸದ ನೆಲೆಯೇನೋ ಸೌಕರ್ಯಪೂರ್ಣ ದೃಢ ಹಾಗೂ ಸುಂದರವಾಗಿಯೇ ಇತ್ತು. ಆದರೆ ಅದರ ಹೆಸರಿನಲ್ಲಿದ್ದ
(ಮಧುಕುಂಜ) ಸಿಹಿಗೆ, ಗೆಳೆಯರು ಕೊಟ್ಟ ಪೇಢೆಯ ಪರಿಮಳ ಸೇರಿತೋ ಎನ್ನುವಂತೆ, ಅದೆಲ್ಲಿಂದಲೋ ಕಚ್ಚುವ ಇರುವೆಗಳ ಸಾಲು ಬಂದು, ನಮ್ಮ ಹಾಸೆಲ್ಲ ವ್ಯಾಪಿಸಿ "ನಿದ್ರಿಸದಿರು ವೀರಾ..." ಎಂದು ತುಂಬ ಸತಾಯಿಸಿತು. ಅವನ್ನು ಸುಧಾರಿಸಿ ನಿಶ್ಚಿಂತರಾಗುವುದರೊಳಗೆ ಊರ ಸೊಳ್ಳೆಗಳ ಕವಾಯತು ಶುರು. ರಾತ್ರಿಯುದ್ದಕ್ಕೆ "ಉತ್ತಿಷ್ಠ ಉತ್ತಿಷ್ಠ" ಎಂಬ ಜಾಗೃತಿಯ ಕರೆ! 

ಹಾಗೂ ರಾತ್ರಿಯ ಕೊನೆಯ ಜಾವದ ಮಂಪರು

13 July 2020

ಪ್ರಾಕೃತಿಕ ಭಾರತದ ಸೀಳೋಟ

ಮಂಗಳೂರು - ಹುಬ್ಬಳ್ಳಿ, ಪೀಠಿಕೆ ಸಹಿತ (ಭಾಗ - ೧)

ಷಣ್ಮುಖರು

ಕಳೆದ ಶತಮಾನದ ಕೊನೆಯ ದಶಕ, ನಿಖರವಾಗಿ ೧೯೯೦ರ ಏಪ್ರಿಲ್ ೨೫ನೇ ಬುಧವಾರ ಬೆಳಿಗ್ಗೆ ಆರೂವರೆ ಗಂಟೆ. ಗೆಳೆಯರೇ ಆದ ಯಜ್ಞ, ರೋಹಿತ್ ರಾವ್, ಮೋಹನ್, ಪ್ರಸನ್ನ, ಇಂದುಶೇಖರ, ಬೋಸ್ ಮೊದಲಾದವರು ಟ್ಯಾಗೋರ್ ಉದ್ಯಾನವನದೆದುರು, ನಾವು ಊರು ಬಿಡುವುದನ್ನು ಖಾತ್ರಿ ಪಡಿಸಿಕೊಳ್ಳಲೆಂಬಂತೆ ಬಂದಿದ್ದರು. ನಾವು ಆರು ಮಂದಿ (ಐದು ಗಂಡು, ಒಂದು ಹೆಣ್ಣು), ದೀರ್ಘ ಪ್ರಯಾಣಕ್ಕೆ ಮತ್ತು ವಾಸ್ತವ್ಯಕ್ಕೆ ಅಗತ್ಯವಾದ ಮಿತ ಸಾಮಾನುಗಳ ಹೊರೆ ಹೊತ್ತ ಮೂರು ಹೀರೋ ಹೊಂಡಾ ಮೋಟಾರ್ ಬೈಕ್‍ಗಳನ್ನೇರಿ (೧೦೦ ಸಿಸಿ) ಹೊರಟಿದ್ದೆವು. ಗಡಿಯಾರದ ಮೂರೂ ಮುಳ್ಳುಗಳು ಒಂದರ ಮೇಲೊಂದಾಗುವ ವೇಳೆಗೆ ಬಾವುಟ ಗುಡ್ಡೆಯ ಮೇಲೆ ಸಾಂಕೇತಿಕ ಬಾವುಟ ಹಾರಿತು, ಮೂರೂ ವಾಹನಗಳು ಒಂದರ ಹಿಂದೊಂದರಂತೆ ಅಖಿಲ ಭಾರತದ ಲಕ್ಷ್ಯವಿಟ್ಟುಕೊಂಡು ಚಿಮ್ಮಿದ್ದವು.