(ಚಕ್ರವರ್ತಿಗಳು
- ಆರನೆಯ ಸುತ್ತು)
ದೇವಕಿ
ಮುನಿಸಿಕೊಂಡಿದ್ದಳು.
“ಬೆಟ್ಟ
ಗುಡ್ಡ
ಏರ್ತೀರಿ, ಬಂದು
ಕೊಚ್ತೀರಿ, ಪೇಪರಿಗೆ
ಗೀಚ್ತೀರಿ, ನಮಗೆ
ಸಿಕ್ಕಿದ್ದೇನು?” ಒಂದರ್ಥದಲ್ಲಿ
ನಿಜ. ಮಗ
ಸಣ್ಣವನಾದ್ದರಿಂದ ಎಲ್ಲಾದಕ್ಕೂ ಒಯ್ಯುವುದು
ಅಸಾಧ್ಯ. ಸಹಜವಾಗಿ
ಅವನಿಗೆ
ಜೊತೆಯಾಗಿ ಈಕೆಯೂ
ನಿಲ್ಲುವುದು
ಅನಿವಾರ್ಯ. (ನಾನು
ನಿಂತರೆ
ಕಾರ್ಯಕ್ರಮವೇ
ಆಗುವುದಿಲ್ಲ!)
ಮಡದಿಯ
ದುಃಖವೂ
ನ್ಯಾಯವೇ
ಎಂದು
ಕಂಡು, ಅದೊಂದು
ಆದಿತ್ಯವಾರ (೨೭-೧೦-೧೯೮೫) ನಾಲ್ಕು
ಬೈಕೇರಿ
ಹೊರಟ
ನಮ್ಮ
ತಂಡ
ಬಹುತೇಕ
ದಂಪತಿಗಳದ್ದೇ.
ನಾನು, ನನ್ನ
ಹೆಂಡ್ತಿ, ಮತ್ಮಗು
ಯೆಜ್ದಿ
ಮೇಲಿದ್ದೆವು.
ಹಿಂದಿನಂತೇ
ಬಸವರಾಜು, ಶಾಂತಾ
ರಾಜದೂತನ
ಮೇಲೆ. [ಬಸವರಾಜು
ಇಂದು
ಹಿರಿಯ
ಪತ್ರಕರ್ತನಾಗಿ
ನಿವೃತ್ತ (ಮೈಸೂರಿನಲ್ಲಿದ್ದಾರೆ)
ಎನ್ನೋದೇ
ಹವ್ಯಾಸೀ
ಅಂಕಣಗಳ
ಸರಣಿ
ನೋಡುವಾಗ
ಹೆಚ್ಚು
ಪ್ರವೃತ್ತ
ಎನ್ನೋದೇ! ಇವರೀರ್ವರ
ಮಗ
ಮಿಲಿಂದ
ಸಿ.ಎಫ್.ಟಿ.ಆರೈ
ನೌಕರನಾದರೂ
ತಬ್ಲಾವಾದನದಲ್ಲಿ ಬಾಲಭಾಸ್ಕರ] ಮತ್ತೊಂದು ರಾಜದೂತನ
ಮೇಲೆ
ಚಾರ್ಲ್ಸ್, ಬ್ಯೂಲಾ [ತಲೆನೂರ್ಮಲೆ
ಘಾಟಿ, ಕರಿಕೆ
ದಾರಿಯಲ್ಲೆಲ್ಲ
ಬಂದ
ಅದೇ
ಚಾರ್ಲ್ಸ್
ಅಂದು
ಔಷಧ
ಕಂಪೆನಿಯೊಂದರ
ಪ್ರತಿನಿಧಿ. ಇಂದು
ಸ್ವೋದ್ಯೋಗೀ
ಮತ್ತು
ಅನಿಮಲ್
ಕೇರ್
ಟ್ರಸ್ಟಿನ
ತುರುಸಿನ
ಕಾರ್ಯಕರ್ತ. ಈತ
ನವವಿವಾಹಿತನಾಗಿ
ನಮಗೆ
ಪರಿಚಯಿಸುತ್ತಿದ್ದ ಬ್ಯೂಲಾ ಕಾಲೇಜ್
ಅಧ್ಯಾಪಿಕೆ. ಈಕೆ
ಇಂದು
ಅದೇ
ವೃತ್ತಿಯಲ್ಲಿ
ಹಿರಿತನದೊಡನೆ
ದಾಂಪತ್ಯದಲ್ಲಿ
ಎರಡು
ಮಕ್ಕಳ
ಅಮ್ಮನೂ
ಹೌದು] ಮತ್ತು
ಕೊನೆಯಲ್ಲಿ
ಜಾವಾದ
ಮೇಲೆ
ಅರವಿಂದ, ಬಾಲಾ. ಕ್ಷಮಿಸಿ, ಕೊನೆಯ
ಜೋಡಿ
ಮಾತ್ರ
ದಂಪತಿಗಳಲ್ಲ.
“ಶಾನುಭಾಗರ
ಮಗಳೂ... ಮದುವೆ
ಇಲ್ಲಾ
ಇನ್ನೂ”
ಎಂದು
ಹಾಡಿಕೊಂಡಿದ್ದ
ಪ್ರಾಯದ
ಅರವಿಂದರಾವ್
(ನೆನಪಿದೆಯಲ್ಲ,
ಅದೇ
ಜಂಕೂಸ್
ಇಂಡಿಯಾ...?) ಮತ್ತು
ಬಾಲಕೃಷ್ಣ! [ಅರವಿಂದ್
ಸದ್ಯ
‘ರಾಜಸಿಂಹ’
(ಲಯನ್
ಪ್ರೆಸಿಡೆಂಟ್),
ವೃತ್ತಿಯಲ್ಲಿ
ನೋವಾ
ಟೆಕ್
ಪ್ರಯೋಗಾಲಯದ
ಮುಖ್ಯಸ್ಥ, ಗಾಯತ್ರಿ
ಪತಿ
ಮತ್ತು
ಎರಡು
ಮಕ್ಕಳ
ಅಪ್ಪ. ಬಾಲಕೃಷ್ಣ
ಸೋಮಯಾಜಿ
ಮುಂಬೈಯಲ್ಲಿ
ಮಝಗಾಂವ್
ಡಾಕಿನ
ಹಿರಿಯ
ತಂತ್ರಜ್ಞ, ಉಷಾಪತಿ, ಅರ್ಪಿತಪಿತ.]