Showing posts with label ಮೇಘಾಲಯ. Show all posts
Showing posts with label ಮೇಘಾಲಯ. Show all posts

22 March 2020

ಬಿದಿರ ಸೇತುವೆ ಸರಣಿ.......

ಮೇಘಾಲಯದ ಗಿರಿಕೊಳ್ಳಗಳಲ್ಲಿ - ೫ 

ಮೋಡಗಳ ನಾಡಿನ ವಾಹ್ಖೆನ್ ಹಳ್ಳಿಯ ಮಹಾಬಂಡೆ, ಮೌರಿಂಗ್ ಖಾಂಗ್, ಜಗದೇಕ ಬಂಡೆಸುಂದರಿಯನ್ನು ಪ್ರೇಮಿಸಿದ. ಆದರೆ ಎಂದಿನಂತೆ ಬಂಡೆಖಳನೊಬ್ಬ ಸುಂದರಿಯನ್ನು ತನ್ನ ವಶಮಾಡಿಕೊಂಡ. ಪರಮಸಾಹಸಿಯಾದ ಮೌರಿಂಗ್ ಖಾಂಗ್ ವೀರಪಂಥವನ್ನೇ ಆಯ್ದುಕೊಂಡ. ಸಂಭವಿಸಿದ ಭೀಕರ ಸಂಗ್ರಾಮದಲ್ಲಿ ಮೌರಿಂಗ್ಖಾಂಗ್ ಎಡಗೈ ಕಳೆದುಕೊಂಡರೂ ಖಳನ ರುಂಡ ಹಾರಿಸಿ, ವಿಜಯಮಾಲಿಕೆಯೊಂದಿಗೆ ಪ್ರಿಯತಮೆಯನ್ನು ವರಿಸಿದ. ಅಂದಿನಿಂದ ಇಂದಿನವರೆಗೂ ಸದಾ ಅಬ್ಬರದ ಆನಂದಘೋಷವಿಕ್ಕುವ ಉಮ್ರ್ಯೂ ನದಿಯ ತಟದಲ್ಲಿ ನಿಂತು, ಪರ್ವತ ಮಾಂಡಲಿಕರ ಸಭೆಗೊಟ್ಟು, ಬಂಡೆಗಳ ಮಹಾರಾಜನಾಗಿ ಮೌರಿಂಗ್ ಖಾಂಗ್ ಮೆರೆದಿದ್ದಾನೆ. ಆತನನ್ನು ತಾಗಿದಂತೆ
ನಿಂತ ವಿಜಯವಧು ಬಂಡೆ ಸುಂದರಿ, ಅನತಿದೂರದಲ್ಲಿ ರುಂಡ ಕಳಚಿದ ಬಂಡೆಖಳನ ಕಳೇವರ, ಇಂದಿಗೂ ಪ್ರೀತಿಯ ಅಮರತ್ವವನ್ನೂ ಶೌರ್ಯಗಾಥೆಯನ್ನೂ ಸಾರುತ್ತಲೇ ಇದ್ದಾರೆ. ವಾಹ್ಖೆನ್ನಿನ ಹುಲು ಮಾನವರು, ತಲೆತಲಾಂತರದಿಂದ ಹೊಳೆ, ಬಂಡೆ, ಗಿರಿ, ಕಾನು ಎಂದು ಜಾಡು ಮೂಡಿಸುತ್ತ ನಡೆದೇ ಈ ಬಂಡೆರಾಜನಿಗೆ ಗೌರವ ಸಲ್ಲಿಸುತ್ತಲೇ ಬಂದಿದ್ದಾರೆ. ಕಾಲದ ಮಹಿಮೆಯಲ್ಲಿ ವಿಶ್ವಪ್ರಸರಣಗೊಂಡ ಕತೆ, ಎಲ್ಲೆಲ್ಲಿಂದಲೋ ಚಾರಣಿಗರ ಸಾಹಸ ಕಾಣಿಕೆಯನ್ನೂ ಸಲ್ಲಿಸುವುದಿತ್ತು. ಆದರೆ ಕಳೆದೊಂದೆರಡು ವರ್ಷಗಳ ಹಿಂದೆ, ಸ್ಥಳೀಯ ಪ್ರಜಾವರ್ಗ (ಹಳ್ಳಿಜನ) ತಮಗೆ ಪರಂಪರೆಯಲ್ಲಿ ಸಿದ್ಧಿಸಿದ ಸೇತುಬಂಧನ ವಿದ್ಯಾ ಬಲದಲ್ಲಿ, ಬಂಡೆ ರಾಜನ ಸಂದರ್ಶನಕ್ಕೆ ಕಲ್ಪಿಸಿದ ನೂತನ ವೈಶಿಷ್ಟ್ಯವೇ - ಬಿದಿರ ಸೇತುವೆ ಸರಣಿ ಅಥವಾ ಇಂಗ್ಲಿಷಿನಲ್ಲಿ ಹೇಳುವಂತೆ ಬ್ಯಾಂಬೂ ಟ್ರಯಲ್!

18 March 2020

ಪ್ರವಾಸೋದ್ದಿಮೆ ಜಾಲದ ಸಣ್ಣಗೂಢದಲ್ಲಿ.....

ಮೇಘಾಲಯದ ಗಿರಿಕೊಳ್ಳಗಳಲ್ಲಿ - ೪ 

ಫೆಬ್ರವರಿ ಎಂಟರ ಬೆಳಗ್ಗಿನಿಂದ ಹನ್ನೆರಡರ ರಾತ್ರಿಯವರೆಗೆ ಎಲ್ಲರು ಯೂಥ್ ಹಾಸ್ಟೆಲ್ಸ್ ಯೋಜಿಸಿದ್ದ ಕಲಾಪಗಳಲ್ಲೇ ಭಾಗಿಯಾಗಿದ್ದೆವು. ಅದರ ಮೇಲೆ ಒಂದು ದಿನವನ್ನು ಅವರು ನಮ್ಮ ಸ್ವತಂತ್ರ ಓಡಾಟಕ್ಕೂ ಹಾಸ್ಟೆಲ್ಲಿನ ಎಲ್ಲ ಸೌಲಭ್ಯಗಳನ್ನು (ಬುತ್ತಿ ಒಯ್ಯುವ ಆಹಾರ ಸಹಿತ) ಉಚಿತವಾಗಿಯೇ ಮುಕ್ತಗೊಳಿಸಿದ್ದರು. ನಾವಾದರೂ (ಆರು ಮಂದಿ) ತಲೆಯೊಳಗೆ ಹತ್ತೆಂಟು ಹೆಸರುಗಳ ಗೋಜಲಷ್ಟೇ
ಇಟ್ಟುಕೊಂಡು, ಬೆಂಗಳೂರು ಹಾರಾಟಕ್ಕೆ (೧೬-೨) ಮುನ್ನ ನಾಲ್ಕು ಹಗಲುಗಳನ್ನೇ ಉಳಿಸಿಕೊಂಡಿದ್ದೆವು. ಸಂಘಟಕರ ಸಲಹೆ, ಇತರ ಶಿಬಿರವಾಸಿಗಳ ಒಲವು ನೋಡಿಕೊಂಡು, ಮೊದಲ ದಿನಕ್ಕೆ ಡಾವ್ಕೀಯಲ್ಲಿ ಉನ್ಗೊಟ್ ನದಿ ವಿಹಾರ, ಬಾಂಗ್ಲಾ ಗಡಿ ದರ್ಶನ ಮತ್ತು ಹಿಂದಿರುಗುವ ದಾರಿಯಲ್ಲಿ ‘ಸ್ವಚ್ಛ ಹಳ್ಳಿ’ ಎಂದೇ ಪ್ರಚಾರದಲ್ಲಿರುವ ಮೌಲಿನ್ನೊಂಗ್ ಭೇಟಿಗಳನ್ನು ಮುಖ್ಯ ಅಂಶವಾಗಿ ನಿಶ್ಚೈಸಿದೆವು. ನಮಗೆ ಕ್ರೆಂಪುರಿ ಗುಹೆ ತೋರಿಸುವಲ್ಲಿ ಹೆಚ್ಚಿನ ವಾಹನವಾಗಿ ಬಂದಿದ್ದ ವ್ಯಾನ್ (ಚಾಲಕ - ಡೇವಿಡ್) ನಿಕ್ಕಿ ಮಾಡಿದೆವು.

16 March 2020

ಜಲಪಾತ ಸಾಮ್ರಾಜ್ಞಿ, ವಲ್ಲರೀ ಸೇತುಬಂಧ......

ಮೇಘಾಲಯದ ಗಿರಿಕೊಳ್ಳಗಳಲ್ಲಿ - ೩ 

ಲಿಕಾಯ್ ಹಾರಿಕೊಂಡ ಕೊಳ್ಳ ಇನ್ನೂ ಭೋರಿಟ್ಟು ಅಳುತ್ತಿದೆ! ಝರಿಯ ಧಾರಾ ಮೊತ್ತದಲ್ಲಿ, ರೋದನದ ತೀವ್ರತೆಯಲ್ಲಿ ಏರಿಳಿತವಿರಬಹುದು. ಹಾಗೆಂದು ಭರಿಸಿ ಸಮಾಧಾನಿಸುವ ಸುವಿಸ್ತಾರ ಹಸಿರು ಕಣಿವೆಯ ಔದಾರ್ಯ, ಮನ ಮಿಡಿದು ಎಲ್ಲೆಲ್ಲಿಂದಲೂ ಕಾಣ ಬರುವವರ ಸಂದಣಿ ಎಂದೂ ಕಡಿಮೆಯಾದದ್ದಿಲ್ಲ. ಮೂರನೇ ದಿನದ ಚಾರಣದ ಪ್ರಥಮ ಕಲಾಪವಾಗಿ, ಸೊಹ್ರಾದಿಂದ ಎರಡು ಕಂತುಗಳಲ್ಲಿ ವ್ಯಾನೇರಿ ಬಂದಿದ್ದ ನಾವೂ ಪ್ರಪಾತದ ಅಂಚಿನ ಕಟ್ಟೆಗಳಿಗೆ ಜೋತು ಬಿದ್ದು ಲಿಕಾಯ್ ವ್ಯಥೆಗೂ ಪ್ರಾಕೃತಿಕ ಸೌಂದರ್ಯಕ್ಕೂ ಹನಿಗಣ್ಣರಾದೆವು. 

13 March 2020

ಅತಿ ಮೋಹಕ ಜಲಪಾತ್ರೆಯ ಉದ್ದಕ್ಕೆ.....

ಮೇಘಾಲಯದ ಗಿರಿಕೊಳ್ಳಗಳಲ್ಲಿ - ೨ 

ಲೈಟ್ರಿಂಗ್ಲ್ಯು (Laitrynglew) ಶಿಬಿರತಾಣ - ಶಾಲಾವಠಾರವನ್ನು, ಕಳಚಿಕೊಳ್ಳುವಾಗ ಗಂಟೆ ಎಂಟೂವರೆ ಕಳೆದಿತ್ತು. ಅಂದು ಚಾರಣದಿನ. ಮೊದಲ ಸುಮಾರು ಕಾಲು ಗಂಟೆಯಷ್ಟೇ ನಾವು ಜನವಸತಿಯ ಹಿಂಚುಮುಂಚು ನಡೆದಿದ್ದೆವು. ಹಿಂದಿನ ದಿನ ಬಸ್ ಬಂದಿದ್ದ ಕಾಂಕ್-ಡಾಮರ್ ದಾರಿಯಲ್ಲಿ ನೇರ ಊರಿಗೇ ನುಗ್ಗಿ, ಹಿಮ್ಮುರಿ ತಿರುವು ತೆಗೆದೆವು. ಅಲ್ಲಿ ಸಿಕ್ಕ ಮೆಟ್ಟಿಲ ಸಾಲಿಳಿದೆವು. ವಾಸ್ತವದಲ್ಲಿ ಇದು ನಾವು ಶಿಬಿರ ಹೂಡಿದ್ದ ಶಾಲೆಯ ಹಿತ್ತಿಲಿನಾಚೆಗೇ
ಇರುವ ಸ್ವಲ್ಪವೇ ತಗ್ಗಿನ ಆದರೆ ವಿಸ್ತಾರ ಕಣಿವೆಯೇ ಆಗಿತ್ತು. ಈ ಸಾದಾಸೀದಾ ಬೋಳು ಗುಡ್ಡ ಇಳಿಯಲು ಹೀಗೆ ಸುತ್ತು ಹೊಡೆಯಬೇಕಿತ್ತೇ? ಅದೂ ಹಿಂದಿನ ದಿನ ಕ್ರೆಂಪುರಿ ಗುಹಾದ್ವಾರದ ಪಾತಾಳಕ್ಕೆ ಕಚ್ಚಾದಾರಿ ಇಳಿದು, ಹತ್ತಿ ಬಂದವರಿಗೆ ಅಸಾಧ್ಯವಾಗುತ್ತಿತ್ತೇ ಎಂದು ಸಣ್ಣ ನಗೆ ಬಾರದಿರಲಿಲ್ಲ. ಆದರೆ ನಡೆಯುತ್ತಿದ್ದಂತೆ ಇಲ್ಲಿನ ದರ್ಶನ ಬೇರೇ ಆಗತೊಡಗಿತ್ತು. 

11 March 2020

ಮೇಘಾಲಯದ ಗಿರಿಕೊಳ್ಳಗಳಲ್ಲಿ

ಯೂಥ್ ಹಾಸ್ಟೆಲ್ಸ್ ಅನುಸಂಧಾನ - ೧ 


"ಪ್ರಾಯ ಅರವತ್ತು ಮೀರಿದವರು ಯೂಥ್ ಅಲ್ಲ, ಪ್ರವೇಶ ಇಲ್ಲ" ಎನ್ನುತ್ತದೆ ಯೂಥ್ ಹಾಸ್ಟೆಲ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ವೈಎಚ್ಚೇಐ). "ಆದರೆ ಭಾಗಿಗಳ ಸಾಧನೆ, ಚಟುಲತೆ ನೋಡಿ ಯಾರನ್ನೂ ಸ್ವಾಗತಿಸುತ್ತದೆ" ಎಂದು ಗಟ್ಟಿಯಾಗಿ ಹೇಳಿ, ಸುಮಾರು ಆರು ತಿಂಗಳಿಗೂ ಮೊದಲೇ ಮೈಸೂರು ಯೂಥ್ ಹಾಸ್ಟೆಲ್ ಸದಸ್ಯತನ ಕೊಡಿಸಿ, ‘ಮೇಘಾಲಯ ಚಾರಣ ಹಾಗೂ ಗುಹಾನ್ವೇಷಣೆ’ಗೆ
ನಮ್ಮಿಬ್ಬರ (ದೇವಕೀ ಸಮೇತ ಬೆಮರ್ನಾಥ!) ಭವಿಷ್ಯ ಬೆಸೆದವಳು ತಮ್ಮನ ಹೆಂಡತಿ - ರುಕ್ಮಿಣಿಮಾಲಾ. ತಮ್ಮ ಅನಂತವರ್ಧನ, ಆರೋಗ್ಯಪಾಲನೆಗಾಗಿ ಯೋಗ, ಚಾಮುಂಡಿ ಬೆಟ್ಟ ಏರೋಣವೆಲ್ಲ ಮಾಡುವವನೇ. ಆದರೂ ಸಾಹಸ, ಪ್ರವಾಸಗಳಲ್ಲೆಲ್ಲ ಕನಿಷ್ಠ ಆಸಕ್ತ. ನಮ್ಮಿಬ್ಬರ ನೆಪ ಮಾಡಿ ರುಕ್ಮಿಣಿ ಮೇಘಾಲಯಕ್ಕೆ ಅನಂತನನ್ನೂ ಹೊರಡಿಸಿದ್ದಳು. ಪ್ರಾಥಮಿಕ ಹಂತದ ಹೋಗಿ ಬರುವ (ತಲಾ ರೂ ೧೧,೦೦೦) ವಿಮಾನ ಸ್ಥಾನ ಕಾಯ್ದಿರಿಸುವ ಕಾಲಕ್ಕೆ ರುಕ್ಮಿಣಿಯ (ಬೆಂಗಳೂರಿನ) ತಂಗಿ ಮತ್ತು ಆಕೆಯ ಗೆಳತಿ