Showing posts with label ಲಘು ಬರಹಗಳು. Show all posts
Showing posts with label ಲಘು ಬರಹಗಳು. Show all posts

23 October 2015

ಬದಲಾದ ಬಣ್ಣಗಳು

ಶ್ಯಾಮಲಾ ಮಾಧವ, ಮುಂಬೈ

ಎಷ್ಟೊಂದು ಸರಳವೂ ಸಹಜವೂ ಆಗಿದ್ದ ದಿನಗಳವು! ಕಾಲ ಕಾಲಕ್ಕೆ ಮಳೆ, ಚಳಿ, ಸೆಕೆ ಎಂದು ನಿಯಮಿತವಾಗಿದ್ದ ಋತುಮಾನ. ಅಂತೆಯೇ ಆವರ್ತನ ಗೊಳ್ಳುತ್ತಿದ್ದ ಕಾಲಯಾನ; ಸಹಜವಾಗಿಯೇ ತೆರೆದು ಕೊಳ್ಳುತ್ತಿದ್ದ ದಿನಮಾನ; ಅವರವರ ವೃತ್ತಿಯಲ್ಲಿ ವ್ಯಸ್ತರಾಗಿಯೂ, ಬಿಡುವಾಗಿಯೂ ಇರುತ್ತಿದ್ದ ಜನರ ಸರಳ ಜೀವನ. ಸರಳತೆಯೆಂಬುದು ನಮ್ಮ ಬದುಕಿನಿಂದ ಹೇಗೆ ಮಾಯವಾಗಿ ಹೋಯಿತಲ್ಲ ?!

ಸೂರ್ಯೋದಯದೊಂದಿಗೆ ಎಚ್ಚರಾಗಿ ಹಾಸಿಗೆ ಬಿಟ್ಟೇಳುತ್ತಿದ್ದ   ಸರಳ, ಸುಂದರ ದಿನಗಳು! "ಅಮಾವಾಸ್ಯೆಯ ಕರಾಳರಾತ್ರಿಯ ನಟ್ಟಿರುಳಿನ ಗಾಢಾಂಧಕಾರ!" ಎಂದು ಪತ್ತೇದಾರ ಪುರುಷೋತ್ತಮನ ಸಾಹಸಗಳಲ್ಲಿ ಓದುತ್ತಿದ್ದಾಗ ರಾತ್ರಿಯನ್ನು ನೆನೆದು ಗದಗುಟ್ಟುತ್ತಿದ್ದ ಹೃದಯ! ಈಗೆಲ್ಲಿಯ ಸೂರ್ಯೋದಯ? ಎಲ್ಲಿಯ ಗಾಢಾಂಧಕಾರ? ವಿದ್ಯುತ್ಹೌದು, ಮೊದಲ ಕಲ್ಪ್ರಿಟ್ , ನಮ್ಮ ಬಾಳು ಬೆಳಗಲು ಬಂದ ವಿದ್ಯುತ್ ಎಂದೇ ಹೇಳಬೇಕುವಿದ್ಯುತ್ ಬೆಳಕಲ್ಲಿ, ವಿದ್ಯುತ್ ಸಲಕರಣೆಗಳ ಬಿಡಲಾಗದ ನಂಟಿನಲ್ಲಿ, ಅಂಟಿನಲ್ಲಿ, ರಾತ್ರಿಯೆಂಬುದಿರದ ದಿನಗಳಿವು. ಮಧ್ಯರಾತ್ರಿ ಕಳೆದು ಯಾವ ಕಾಲಕ್ಕೋ ಮಲಗಲು ಹೋದರೆ, ಮತ್ತೂ ದೀರ್ಘ ಸಮಯ ನಿದ್ದೆ ಬರದಿರಲು ಕಾರಣ, ಟಿ.ವಿ., ಲ್ಯಾಪ್ಟಾಪ್ನಂತಹ ವಿದ್ಯುತ್ ಉಪಕರಣಗಳಿಗೆ ರಾತ್ರಿಯೂ ಅಂಟಿಕೊಂಡಿರುವುದೇ ಆಗಿದೆ ಎಂದು ಎಚ್ಚರಿಸುವ ವೈದ್ಯರು!

18 October 2013

ನಾಲ್ಕು ಸಕ್ಕರೆ ಹನಿಗಳು

ಯಾವುದೇ ಸಿನಿಮಾ ಬಿಡುಗಡೆಗೆ ದಿನ ನಿಗದಿ ಎನ್ನುವುದು ಅಪ್ಪಟ ವಾಣಿಜ್ಯ ನಿಷ್ಕರ್ಶೆ. ಅಭಯ ತನ್ನ ಪುಣೆಯ ಕಲಿಕೆ ಮತ್ತು ಈಗಾಗಲೇ ಮೂರು ಸಿನಿಮಾಗಳಲ್ಲಿ (ಗುಬ್ಬಚ್ಚಿಗಳು, ಶಿಕಾರಿ - ಕನ್ನಡ ಮತು ಮಲಯಾಳದಲ್ಲಿ) ಗಳಿಸಿದ ಗಟ್ಟಿ ಅನುಭವದ ಮುನ್ನೆಲೆಯಲ್ಲಿ ಸ್ವಂತ ಕತೆ ಹಾಗೂ ನಿರ್ದೇಶನದಲ್ಲಿ ಕಥಾಚಿತ್ರ ‘ಸಕ್ಕರೆ’ ಅಚ್ಚನ್ನು ರುಚಿರುಚಿಯಾಗಿಯೇ ಕಟ್ಟಿದ್ದಾನೆ. ಯಶಸ್ಸಿನ ಅನೇಕಾನೇಕ ಉತ್ತುಂಗ ಶಿಖರಗಳನ್ನು ಏರಿದ ಗಣೇಶ್, ದೀಪಾಸನ್ನಿಧಿ, ಅನಂತನಾಗ್, ವಿನಯಾಪ್ರಸಾದ್, ಅಚ್ಯುತ, ಅನುಪ್ರಭಾಕರ್ ಮುಂತಾದ ನಟವೃಂದದ ಭಾವಾನುರಕ್ತಿ ‘ಸಕ್ಕರೆ’ಯಲ್ಲಿ ಹರಳುಗಟ್ಟಿ ನಿಂತಿದೆ. ಅಭಯನ ಪುಣೆ ಕಲಿಕೆಯಲ್ಲಿ ಕ್ಯಾಮರಾ ಸಹಪಾಠಿಯಾಗಿ ಮತ್ತೆ ಮೂರೂ ಚಿತ್ರಗಳಲ್ಲಿ ದೃಶ್ಯಸರ್ವಸ್ವವಾಗಿ ತೊಡಗಿಕೊಂಡ ವಿಕ್ರಂ ಶ್ರೀವಾಸ್ತವ ಇಲ್ಲೂ ಬೆರಗಿನ ಬೆಳಕಿನಾಟವನ್ನು ತುಂಬಿಕೊಟ್ಟಿದ್ದಾನೆ. ಪ್ರಾಕೃತಿಕವಿಲ್ಲದಲ್ಲಿ ದೃಶ್ಯ ಸೌಂದರ್ಯಕ್ಕೆ ವೈವಿಧ್ಯ ಕಟ್ಟಿಕೊಟ್ಟವರು ಶಶಿಧರ ಅಡಪ. ಅದಕ್ಕೆ ಶ್ರಾವ್ಯದಲ್ಲಿ ರಾಗದ ಮೆರುಗು ಕೊಡುವಲ್ಲಿ ಹರಿಕೃಷ್ಣ, ಸಾಹಿತ್ಯ ಭಾವ ಮಿಡಿಯುವಲ್ಲಿ ಜಯಂತ ಕಾಯ್ಕಿಣಿ ಮತ್ತು ಯೋಗರಾಜ ಭಟ್, ಚಲನೆಯ ಲಯ ಹಿಡಿಯುವಲ್ಲಿ ಹರ್ಷ ಮತ್ತು ಚಿನ್ನಿ ಪ್ರಕಾಶ್ ಹೆಸರಿಗೆ ತಕ್ಕಂತೆ ಅಸಾಮಾನ್ಯವನ್ನೇ ಸಾಧಿಸಿದ್ದಾರೆ. ಸೆನ್ಸಾರ್ ಯಾವ ಹಿಡಿತ ಹಿಂಜರಿಕೆಗಳಿಲ್ಲದೆ ಸಾರ್ವಜನಿಕ ವೀಕ್ಷಣೆಗೆ ಉತ್ತಮ ರಹದಾರಿಯನ್ನೇ ಕೊಟ್ಟಿದೆ. ಮೊದಲಾಗಿ ಬಿಡುಗಡೆಗೊಂಡ ಹಾಡುಗಳು ನಿರೀಕ್ಷೆ ಮೀರಿ ರಾಜ್ಯಾದ್ಯಂತ ಅನುರಣಿಸುತ್ತಿವೆ. ‘ಗೆಲ್ಲಿಸು’ವ ಮಂತ್ರಗಳು, ಪ್ರಚಾರ ತಂತ್ರಗಳ ಸಿದ್ಧಿ ಮೀಡಿಯಾ ಹೌಸಿಗೆ ಹೊಸತೇನೂ ಅಲ್ಲ. ಆದರೂ ನಿರ್ಮಾಪಕದ್ವಯರಾದ ಬಿ.ಸುರೇಶ್, ಶೈಲಜಾ ನಾಗ್ ಅವರಿಗೆ ‘ಸಕ್ಕರೆ’ ಬಿಡುಗಡೆಯ ದಿನ ನಿಗದಿಯಲ್ಲಿ ತಡವರಿಕೆ ಕಾಡಿದ್ದಿದ್ದರೆ ನಾನು ಮೊದಲೇ ಹೇಳಿದಂತೆ ವಾಣಿಜ್ಯ ವಹಿವಾಟಿನದು ಮಾತ್ರ. ಈಗ ಅದನ್ನೂ ಉತ್ತರಿಸಿ ಇಂದು (೧೮-೧೦-೨೦೧೩, ಶುಕ್ರವಾರ) ರಾಜ್ಯಾದ್ಯಂತ ಒಂದು ಅವಧಿಯಲ್ಲಿ ಕನಿಷ್ಠ ನೂರಕ್ಕೂ ಮಿಕ್ಕು ಬೆಳ್ಳಿತೆರೆಗಳಲ್ಲಿ ರಂಗಿನಾಟವಾಡಿ, ಲಕ್ಷಾಂತರ ಮನಗಳಲ್ಲಿ ಉತ್ಸಾಹದ ಉಕ್ಕೇರಿಸಲಿದೆ ‘ಸಕ್ಕರೆ.’ ಶುದ್ಧ ಮನರಂಜನೆಯ ಪ್ರವಾಹ ವಾರ, ತಿಂಗಳುಗಳ ಲೆಕ್ಕದಲ್ಲಿ ಜನಮನವನ್ನು ವ್ಯಾಪಿಸಲಿ ಎಂದು ಹಾರೈಸುವುದಷ್ಟೇ ನಮಗುಳಿದಿದೆ!

04 December 2012

ಎಂದೂ ಮುಗಿಯದ ಕಥಾಸರಣಿ!



ಕೂಸಿಗಿಂತ ದೊಡ್ಡ ಕುಲಾವಿ ಅರ್ಥಾತ್ ಪೀಠಿಕೆ: ಅಭಯಸಿಂಹ (ಮಗ) ಸಕ್ಕರೆಹಿಡಿದುಕೊಂಡು (ಅವನ ನಿರ್ದೇಶನದ ಹೊಸ ಚಿತ್ರ) ಮಡಿಕೇರಿ ಚಿತ್ರೀಕರಣದ ಮೊಕ್ಕಾಂ ಮುಗಿಸಿ ಬೆಂಗಳೂರಿಗೆ ಮರಳಿದ್ದ. ಅವನ ನೇರ ಭಾಗವಹಿಸುವಿಕೆಯ ಕಲಾಪಗಳ ಒತ್ತಡ ಕಡಿಮೆಯಾಗಿ, ಹಾಡಿನ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ಇತ್ತ ಉದಯ ಟೀವಿಯಲ್ಲಿನ ಸೌಜನ್ಯ, ಕ್ಷಮಿಸಿ - ನಮ್ಮ ಸೊಸೆ ರಶ್ಮಿ, ತನ್ನ ಅಳಗುಳಿಮನೆ ಧಾರಾವಾಹಿಯ ಚಿತ್ರೀಕರಣದ ದಿನಾಂಕಗಳೂ ವಿರಳವಾಗಿ ಬರುತ್ತಿದ್ದುದರಿಂದ ಬಿಡುವಾಗಿದ್ದಳು. ನಾವಿಬ್ಬರು (ಹೆಂಡತಿ ದೇವಕಿಯೊಡನೆ) ಎರಡು ಮೂರು ದಿನಗಳ ಮಟ್ಟಿಗೆ ಬೆಂಗಳೂರಿಗೆ ಹೋಗಲು ಅಂದಾಜಿಸಿದೆವು.

27 November 2012

ಕಾಗದ ಮಡಚೋಣ


ಓರಿಗೆಮಿ - ಕಾಗದ ಮಡಚಿ ಆಕೃತಿ ಮೂಡಿಸುವ ಕಲೆ, ಇಂದು ನಮ್ಮ ಬಾಲಲೋಕದಲ್ಲಿ ಪಠ್ಯದ ಭಾಗವೇ ಆಗಿರುವ ಕ್ರೀಡೆಗೆ ಜಪಾನೀ ಹೆಸರು. ಇದರಲ್ಲಿ ನನಗೆ ಬಾಲ್ಯದಿಂದಲೂ ತಕ್ಕಮಟ್ಟಿಗೆ ಆಸಕ್ತಿ  ಇತ್ತು. (ಶಿವರಾಮ ಕಾರಂತರು ತಾವು ಸೇದಿ ಬಿಟ್ಟ ಸಿಗರೇಟ್ ಪ್ಯಾಕಿನ ಡಬ್ಬಿ, ಸೀಸದಲ್ಲಿ ವಿವಿಧ ಆಕೃತಿಗಳನ್ನು ಮಾಡಿಕೊಟ್ಟು ಮಕ್ಕಳನ್ನು ರಂಜಿಸುತ್ತಿದ್ದದ್ದು ನೆನಪಿದೆ.) ಅದರಲ್ಲೂ ಬಳ್ಳಾರಿ ಶಾಲೆಯಲ್ಲಿದ್ದಾಗ ಅಜಿತ್ ಡೇವಿಡ್ ಎನ್ನುವ ಸಹಪಾಠಿ ಮೂಲಕ ಕಲಿತ ಹಾರುವ ದೋಣಿ, ಚಿಕ್ಕಪ್ಪ ರಾಘವೇಂದ್ರನ ಮೂಲಕ ಕಲಿತ ಲಾಂಚ್, ನನ್ನದೇ ಆವಿಷ್ಕಾರ ಜೆಟ್ ಬೋಟ್ ಸಾಮಾನ್ಯವಾಗಿ ಯಾವ ಮಕ್ಕಳ ಕುತೂಹಲವನ್ನೂ ಹಿಡಿದಿಡುವುದು ನಿಶ್ಚಿತ. ಅಂಗಡಿಯಲ್ಲಿ ಪುರುಸೊತ್ತಿದ್ದಾಗ, ಗಿರಾಕಿಗಳು ಒಯ್ಯದ ಬಿಲ್ಲಿನ ತುಣುಕಿನಲ್ಲಿ ಇಂಥ ಒಂದೊಂದು ಮಾದರಿಯನ್ನು ನಾನು ಮಾಡಿಡುತ್ತಿದ್ದೆ. ಮತ್ತೆ ಬಂದ ಯಾವುದೇ ಮಕ್ಕಳಿಗೆ ಇದನ್ನು ಕೊಟ್ಟು ಮನಸ್ಸು ಗೆಲ್ಲುತ್ತಿದ್ದೆ. ಅವೆಲ್ಲಾ ನಮ್ಮ ಮೊನ್ನಿನ ಬೆಂಗಳೂರಿನ ಹಗಲು ಪ್ರಯಾಣದಲ್ಲಿ ಮರುಕಳಿಸಿದ್ದಕ್ಕೆ ಇಲ್ಲೊಂದಿಷ್ಟು!

26 October 2012

ಬತ್ತಿಯ ಬೆಂಬತ್ತಿ!


ತಲೆಗೆರಡು ತಟ್ಟಿ ಗುಂಡಿ ಅದುಮಿದಾಗ, ನನ್ನ ಹತ್ತು ವರ್ಷ ಹಳೆಯ ಮರುಪೂರಣ ತಾಕತ್ತಿನ ಟಾರ್ಚ್ ಮಿಣಕು ಬೆಳಕೇನೋ ಕೊಟ್ಟಿತು. ಅದರ ಅವನತ ಪ್ರಕಾಶ ಶೂನ್ಯ ಮುಟ್ಟುವ ಮೊದಲು ನಮ್ಮ ಕಾಡ್ಮನೆಯ ಅಡುಗೆಮನೆ ಮೂಲೆಯಲ್ಲಿ ಮಂಕಳಂತೆ ಕೂತ ಬುಡ್ಡೀದೀಪ ಗುರುತಿಸಿಕೊಂಡೆ. (ಪದಮೂಲ ಹುಡುಕುವವರು ಇದು ಬೆಡ್ ಲ್ಯಾಂಪಿನ ತದ್ಭವ ಎನ್ನಬಹುದೋ ಏನೋ. ಆದರೆ ವಿಕಾಸಪಥದಲ್ಲಿ ಇಂದು ದೀಪಗಳ ನಿಂತಿರುವ ಎತ್ತರ ನೋಡುವಾಗ ಇದು ನಿಜಕ್ಕೂ ಮುದಿ/ಅಜ್ಜೀ ದೀಪವೇ ಸರಿ) ಕಾಡ್ಮನೆಗೆ ನಾವು ವಿದ್ಯುತ್ ಸಂಪರ್ಕ ಪಡೆದಿಲ್ಲ ಎನ್ನುವುದು ನಿಮಗೆ ಗೊತ್ತೇ ಇದೆ. ಹೀಗೆ ದೀಪ ಗುರುತಿಸಿಕೊಳ್ಳದೇ ಹಿಂದೊಮ್ಮೆ ನೆನಪಿನ ಬಲದಲ್ಲಿ ಕತ್ತಲಮೂಲೆಗೆ ನಾನು ಕೈಚಾಚಿದ್ದಿತ್ತು. ಆದರೆ ಕತ್ತಲೆಯಲ್ಲಿ ಆಳ, ಎತ್ತರದ ಹದ ಗುರುತಿಸುವಲ್ಲಿ ನಾವು ವಿಕಲಾಂಗರು. ತಪ್ಪಿದ ನನ್ನ ಕೈತಟ್ಟಿ ದೀಪ ಮಗುಚಿ ಎಣ್ಣೆ ಚೆಲ್ಲಿತ್ತು, ಚಿಮಣಿ ಚಿಪ್ಪಾ ಚೂರಾಗಿತ್ತು. ಮತ್ತಾ ಕುಪ್ಪಿ ಚೂರು ಶುದ್ಧಪಡಿಸುವ ರಾಮಾಯಣ ಯಾರಿಗೆ ಬೇಕು.

01 October 2011

ಚೋಕ್ರೀ ಬೆಳಗಾಂವೀ! (ದಿಬ್ಬಣದ ಎರಡನೇ ಹೆಜ್ಜೆ)

ಪ್ರಿಯ ನಾರಾಯಣಾ,

ಧರ್ಮಸ್ಥಳದಲ್ಲಿ ಪ್ರತಿ ವರ್ಷವೂ ತಾಳಿ, ಸೀರೆ, ಪಂಚೆ ಕೊಟ್ಟು ಉಚಿತ ವಿವಾಹಯೋಗ ಕಲ್ಪಿಸುವುದು ಯಾರಿಗೆ ಗೊತ್ತಿಲ್ಲ. ಮತ್ತೆ ಯಾವುದೇ ನೋಂದಣಿ ಇಲಾಖೆಯಲ್ಲಿ ಧರ್ಮನಿರಪೇಕ್ಷವಾಗಿ, ಕಾನೂನು ಪ್ರಕಾರ ದಾಂಪತ್ಯ ಸಂಬಂಧ ಕುದುರಿಸುವುದು ನಮಗೆ ತಿಳಿಯದ್ದೂ ಅಲ್ಲ, ತಿರಸ್ಕಾರವೂ ಇಲ್ಲ. (ಇಂಥವೇ ಆಶಯಗಳ ಒಂದು ಪರಿಷ್ಕೃತ ರೂಪ - ಕುವೆಂಪು ಪ್ರಣೀತ ‘ಮಂತ್ರ ಮಾಂಗಲ್ಯ.’ ಇದು ಮಾತ್ರ ನನಗೆ ಇಲಾಖಾ ನೋಂದಣಿಯ ಒಣಕುಂಟೆಗೆ ಸಾಂಪ್ರದಾಯಿಕತೆಯ ಚಿಗುರು, ಹೂ ಅಂಟಿಸುವ ಪ್ರಯತ್ನದ ಹಾಗೇ ಕಂಡದ್ದರಿಂದ ಅಷ್ಟು ಒಲವು ಮೂಡಲಿಲ್ಲ.) ಆದರೆ ಮದುವೆ ಹೇಗಾಗಬೇಕೆಂಬ ಸ್ವಾತಂತ್ರ್ಯ ಗಂಡು ಹೆತ್ತವರದೊಂದೇ ಅಲ್ಲವಲ್ಲಾ. ತೋರಿಕೆಗೆ ಒಂದು ಗಂಡಿಗೆ ಒಂದು ಹೆಣ್ಣು ಅಂದರೆ ಮದುವೆ. ಸ್ವಲ್ಪ ಯೋಚಿಸಿದರೆ ನಮ್ಮಲ್ಲೊಂದು ಸಮೂಹ ಚಿಂತನೆಯಿದ್ದಷ್ಟೇ ಬಲವಾಗಿ ಹೆಣ್ಣಿನ ಹಿಂದೆಯೂ ಇರಲೇಬೇಕು. ಮದುವೆ ಎರಡರ ಸಮಪಾಕಕ್ಕೆ ಕೇವಲ ನಾಂದಿ.

24 September 2011

ರಾಮೂಗೆ ಮದ್ವೆಯಂತೆ - ದಿಬ್ಬಣದ ಮೊದಲ ಹೆಜ್ಜೆ

ಪ್ರಿಯ ನಾರಾಯಣ (-ರಾವ್, ನನ್ನ ಓರ್ವ ಚಿಕ್ಕಪ್ಪ)

`ರಾಮುಗೆ (ನಾರಾಯಣನ ಹಿರಿಯ ಮಗ - ರಾಮಚಂದ್ರ ರಾವ್ ದ ಸೆಕೆಂಡ್!) ಹುಡುಗಿ ನಿಶ್ಚಯವಾಯ್ತಂತೆ, ಸದ್ಯದಲ್ಲೇ ಬದ್ಧವಂತೆ, ಅಜ್ಜಿಯ ವರ್ಷಾಂತಿಕವಾಗದೇ ಮದುವೆ ಇಲ್ಲ್ವಂತೆ...’ ಹೀಗೇ ಯೋಚನೆಗಳು ರೂಪುಗೊಳ್ಳುವ ಹಂತದಲ್ಲೇ (ಸೂಕ್ಷ್ಮ ಸಂದೇಶ, ಚರವಾಣಿ, ಮುಖವಾಣಿಗಳ ಹಾವಳಿಯಲ್ಲಿ) ಟಾಂಟಾಂ ದಟ್ಟವಾಗಿರುವಾಗ ನಿನ್ನ ದೂರವಾಣಿ ಕರೆ ಬಂತು. ಅನಧಿಕೃತ ತಿಳಿಸುವವರ ಉತ್ಸಾಹದಷ್ಟೇ ಅವಸರದಲ್ಲಿ ನಾನೂ ನಿನ್ನ ಮಾತಿಗು ಮುನ್ನ “ಗೊತ್ತು ಗೊತ್ತು, ಶುಭವಾಗಲಿ” ಎಂದು ಹೇಳಿ ಉದ್ದೇಶಪಡದೇ ಸ್ಮಾರ್ಟ್ ಆದದ್ದೂ ಆಯ್ತು! ಮತ್ತೆ ನೀನೇ “ಔಪಚಾರಿಕವಾಗಿಯಾದರೂ ನಾನು ಹೇಳಲೇಬೇಕು” ಎಂದು ನಯವಾಗಿ ಎಚ್ಚರಿಸಿ ಹೇಳಿದ ಮೇಲೂ ನನ್ನಪ್ಪ ಹೇಳಿದ ಮಾತನ್ನು ಮತ್ತೆ ಅವಸರದಲ್ಲೇ ನಾನು ಅನುಸರಿಸಿದ್ದಿರಬೇಕು. “ಸೆಪ್ಟೆಂಬರ್ ಹನ್ನೆರಡು, ಸೋಮವಾರಾ! ನನಗೆ ಕೆಲಸದ ದಿನವಲ್ವಾ. ನನ್ನ ಶುಭಾಶಯಗಳು ನಿಮ್ಮೊಡನುಂಟು” ಎಂದೇ ಮುಗಿಸಿಬಿಟ್ಟೆ.

31 July 2011

ಮಾತಾಡು ಇಂಡಿಯಾ ಮಾತಾಡು

ದೃಶ್ಯ ಒಂದು:
[ತೆರೆ ಸರಿಯುತ್ತಿರುವಂತೆ ಖಾಲೀ ಮುಖ ಹೊತ್ತ ತರುಣನೊಬ್ಬ ಪುಸ್ತಕ ವ್ಯಾಪಾರಿಯೊಬ್ಬನ ಗಲ್ಲಾದ ಎದುರು ಬಂದು ನಿಲ್ಲುತ್ತಾನೆ. ವ್ಯಾಪಾರಿ ‘ಏನ್ ಕೊಡ್ಲೀ’ ಎನ್ನುವಂತೆ ಹುಬ್ಬು ಹಾರಿಸುತ್ತಾನೆ. ತರುಣ ಏನೋ ಹುಡುಕುವವನಂತೆ ಆ ಈ ಕಿಸೆ ತಡಕಾಡುತ್ತಾ]
ತರುಣ: ಅತ್ರಿ ಬುಕ್ ಹೌಸ್!
ವ್ಯಾಪಾರಿ: ಹೂಂ, ಹೌಸ್ ಅಲ್ಲ ಸೆಂಟರ್. ಬಂದಾಯಿತಲ್ಲ, ಏನೀಗ?
ತ: ನಂಗೊಂದು ಪುಸ್ತಕದ ಬಗ್ಗೆ ಕೇಳಬೇಕಿತ್ತು
ವ್ಯಾ: ಕೇಳಿ.
ತ: ಅಯ್ಯೋ ಸಾರಿ, ಸಾರಿ [ಚರವಾಣಿ ತೆಗೆದು ಕಿರು ಸಂದೇಶದ ಗುಂಡಿ ಅದುಮಿ] ಪುಸ್ತ್ಕಾ (ಓದಲು ತಿಣುಕುತ್ತಾ) ‘ಮೇಣ, ಸೂಜೀ. . .’ ಅಲ್ಲಲ್ಲಾ ‘ಮೆಣಸೂ ಜೀರಿಗೆ. . .’
ವ್ಯಾ: ಅದೇನು ಜೀನಸು ಪಟ್ಟಿ? ಇಲ್ಲಿಲ್ಲ. ಇದು ಪುಸ್ತಕದಂಗಡಿ.

18 February 2010

ಮರುಬಳಕೆಯ ನಾಲ್ಕು ಪ್ರಹಸನಗಳು

ಪುಸ್ತಕ ಅಂಗಡಿಯಲ್ಲಿ ಕಾಗದದ ಮರುಬಳಕೆಯ ಅವಕಾಶ ಅಸಂಖ್ಯ. ಅವನ್ನು ಆಡುನುಡಿಯಲ್ಲೇ ಹೇಳುವುದಾದರೆ ಕ್ಯಾಟಲಾಗು (ಬರಿಯ ಪಟ್ಟಿಯಲ್ಲ, ಪ್ರಚಾರ ಸಾಹಿತ್ಯವೂ ಆಗಬಹುದು), ಇನ್ವಿಟೇಶನ್ನು (ಅಂಗಡಿಯಲ್ಲಿ ವಿತರಿಸಬೇಕೆಂಬ ಬೇಡಿಕೆಯ ಮೇಲೆ ಹೆಚ್ಚಿನ ಸಂಖ್ಯೆಯಲ್ಲೂ), ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್ ಮತ್ತು ವಿವಿಧ ಇನ್ಸ್ಟಿಟ್ಯೂಶನ್ನುಗಳ ಸೆಲ್ಫ್ ಎಡ್ರೆಸ್ಸ್‌ಡ್ ಕವರ್ಸ್ ನಿತ್ಯ ಬರುತ್ತಿರುತ್ತವೆ. ಎಲ್ಲಾ ಬೆಸ್ಟ್ ಪೇಪರ್, ಸೈಜ್ ಮತ್ತು ಎಷ್ಟೋ ಭಾಗ ನೀಟಾಗಿ ಬ್ಲ್ಯಾಂಕ್ ಕೂಡಾ ಇದ್ದೇ ಇರುತ್ತವೆ. ಬಿಲ್ಲುಗಳ (ಅನಾವಶ್ಯಕ) ಎಕ್ಸ್ಟ್ರಾ ಕಾಪೀಸ್ (ಹೆಚ್ಚುವರಿ ಪ್ರತಿಗಳ ಹಿಂಬದಿ), ಕವರಿಂಗ್ ಲೆಟರ್ರು (ಮೇಲ್ಮುಚ್ಚುವ ಪತ್ರ?), ಮತ್ತೆ (ಸಾರ್ವಜನಿಕ ಸಾಗಣೆಯಲ್ಲಿ ಕಳಿಸಿದ್ದಾದರೆ) ಡ್ಯುಪ್ಲಿಕೇಟೋ ಟ್ರಿಪ್ಲಿಕೇಟೋ ಪ್ರತಿಗಳಲ್ಲಿ ಡೆಲಿವರಿ ಚಲನ್ನು ಸಹಾ ಬರುತ್ತವೆ. (ಅವನ್ನೆಲ್ಲ ನೇರಾನೇರ ಕನ್ನಡ ಶಬ್ದಗಳಲ್ಲಿ ಹೇಳುವುದೂ ಒಂದೇ ದೇವಭಾಷೆ ಬಿಟ್ಟ ಪುರೋಹಿತನೂ ಒಂದೇ!) ಅಗತ್ಯಕ್ಕಿಂತ ಹೆಚ್ಚಿಗೆ ಔಪಚಾರಿಕತೆಗೇ ವ್ಯರ್ಥವಾಗುವ ಇವನ್ನೆಲ್ಲ ಆವಶ್ಯಕತೆಯ ನೆಲೆಯಲ್ಲಿ ಕಡಿತಕ್ಕೊಳಪಡಿಸಲು ನಾನು ಬಳಸುವ ಅಸ್ತ್ರ ಮರುಬಳಕೆ. (ಹೆಚ್ಚಿನ ವಿದ್ಯಾಸಂಸ್ಥೆಗಳು ಪಾವತಿ ಕಳಿಸಲು ಪೂರ್ವಮುದ್ರಿತ ಮೇಲ್ಮುಚ್ಚುವ ಪತ್ರಗಳನ್ನಿಟ್ಟುಕೊಂಡಿರುತ್ತವೆ. ಸಹಜವಾಗಿ ಅದರ ಖಾಲಿ ಜಾಗಗಳಲ್ಲಿ ಪಡೆಯುವವರ ಹೆಸರು, ವಿಳಾಸ, ಖಾತೆಯ ವಿವರ ತುಂಬಿಬಿಡುತ್ತಾರೆ. ಕೆಲವೊಮ್ಮೆ ಸಂಸ್ಥಾ ಮುಖ್ಯಸ್ಥನ ರುಜು ರಬ್ಬರ್ ಮೊಹರು ಇರುತ್ತದೆ. ನಾನು ಕಳಿಸಲೇ ಬೇಕಾದ ರಸೀದಿ ಜೊತೆಗೆ ಆ ಪತ್ರಗಳಲ್ಲೇ ಕೃತಜ್ಞತೆಯ ಒಂದು ಸಾಲು ಕೈಯಾರೆ ಬರೆದುಬಿಡುತ್ತೇನೆ. ‘ಇದು ಅವಮಾನಕಾರಿ’ ಎಂದೊಬ್ಬ ಪ್ರಾಂಶುಪಾಲ ನನಗೆ ಹೇಳಿ ಕಳಿಸಿದ್ದರೂ ನಾನು ವ್ರತ ಬದಲಿಸಿಲ್ಲ!) ಅದರಲ್ಲಿ ಲಕೋಟೆಗಳ ಮರುಬಳಕೆಯಲ್ಲಿ ಉಂಟಾದ ಮೂರು ರಸಪ್ರಸಂಗಗಳನ್ನು ಮಾತ್ರ ಇಲ್ಲಿ ವಿಸ್ತರಿಸುತ್ತೇನೆ.

17 October 2009

ಭೀಮ ಬಿದ್ದಾ ಮತ್ತೆರಡು ತಿರುಗೂಳಿ ವೃತ್ತಾಂತ

4ಇತಿಹಾಸದ ‘ಅಶೋಕ’ವನ್ನು ನನ್ನ ತಂದೆತಾಯಿಯರು ನನಗೆ ಕೊಟ್ಟದ್ದು ನಿಜ. ಆದರೆ ‘ಚಕ್ರವರ್ತಿ’ಯನ್ನೂ ಎಳೆದುಕೊಳ್ಳುವಂತಾದ್ದು ನನ್ನ ಹವ್ಯಾಸ ಬಲದಲ್ಲಿ. ದಕ್ಷಿಣ ಭಾರತದ ಒಂದು ಸಣ್ಣ ಅಂಶವನ್ನೂ ಸೇರಿಸಿದಂತೆ ಈ ವಲಯದ ನನ್ನ ಮೋಟಾರು ಸೈಕಲ್ ಪ್ರವಾಸ ಕಥನಗಳ ಸಂಕಲನವನ್ನು ನಾನೇ ‘ಚಕ್ರವರ್ತಿಗಳು’ ಎಂದು ಹೆಸರಿಸಿ, ಪ್ರಕಟಿಸಿದ್ದು (ಸದ್ಯ ಅದರೆಲ್ಲಾ ಪ್ರತಿಗಳು ಮಾರಿ ಮುಗಿದಿವೆ) ನಿಮಗೆ ತಿಳಿದೇ ಇರಬೇಕು. ಎಷ್ಟೋ ಬಾರಿ ನಾನು/ನನ್ನ ತಂಡ ಇನ್ನೊಂದೇ ಲಕ್ಷ್ಯಕ್ಕೆ ತಿರುಗಾಡಿದ್ದರೂ ಮಾರ್ಗಕ್ರಮಣದ ವೈಶಿಷ್ಟ್ಯ ದಾಖಲಾರ್ಹ. ಅಂಥ ಕೆಲವನ್ನು ಇಲ್ಲಿ ನೆನಪಿನಿಂದ ಹೆಕ್ಕಿ ಪೋಣಿಸುತ್ತೇನೆ.

01 February 2009

ಪುಸ್ತಕೋದ್ಯಮ ಭಯಂಕರ ಆಕ್ರೋಶವರ್ಜನಕೃತ ಅಶೋಕ ಪುರಾಣಾಂತರ್ಗತ ಶ್ಮಶ್ರುಕೂರ್ಚಾಖ್ಯಾನ


ashoka

ವಿಶೇಷ ಸೂಚನೆ: ಇದು ಹೆಂಗಸರಿಗಲ್ಲ!

ಮೀಸೆ ಬರುವ ಮೊದಲು ಹೆಚ್ಚಿನ ಹುಡುಗರು ಕದ್ದುಮುಚ್ಚಿ ಅಪ್ಪನ ರೇಜರ್ ಮುಖದ ಮೇಲಾಡಿಸಿಕೊಂಡದ್ದಿರಬಹುದು. ಆದರೆ ಒಮ್ಮೆ ಬರತೊಡಗಿದ ಮೇಲೆ? ನನ್ನ ಅಜ್ಜ (ಮಾತಾಮಹ) ನಾನು ಎಳೆಮೀಸೆ ಬಿಟ್ಟಾಗ “ನಮ್ಮ ಕುಟುಂಬದಲ್ಲಿ ಯಾರೂ ಮೀಸೆ ಬಿಟ್ಟವರಲ್ಲ, ತೆಗೆದುಬಿಡು” ಎನ್ನುತ್ತಿದ್ದರು. ಇಂಗ್ಲಿಷ್ ಸ್ನಾತಕೋತ್ತರ ಪರೀಕ್ಷೆಯ ಅಂತಿಮ ವಿಧಿ `ಮುಖಾಮುಖಿ’ಯಲ್ಲಿ ನನಗೆ ಪರೀಕ್ಷೆ ಕೊಟ್ಟ ಮೂವರಲ್ಲಿ (ವಿಭಾಗ ಮುಖ್ಯಸ್ಥ ಸಿ.ಡಿ. ನರಸಿಂಹಯ್ಯ ಮತ್ತು ಎಚ್.ಎಚ್.ಅಣ್ಣೇ ಗೌಡರ ಜತೆಗೆ) ನನಗೆ ಸ್ನಾತಕ ತರಗತಿಗಳಲ್ಲೂ ಪಾಠ ಮಾಡಿದ್ದ ಸಿ.ಡಿ. ಗೋವಿಂದ ರಾವ್, ದಪ್ಪ ಚಾಳೀಸಿನ ಎಡೆಯಲ್ಲೂ ತುಂಟ ಕಣ್ಣು ಪಿಳುಕಿಸಿ “ಪೀಜೀಯಲ್ಲಿದ್ದುಕೊಂಡೂ ಹೀಗೆ ಮೀಸೆ ಉಳಿಸಿಕೊಂಡಿದ್ಯಲ್ಲಾ” ಎಂದು ಉದ್ಗರಿಸಿದ್ದರು. ನನಗೆ ಮದುವೆ ಆದ ಮೇಲೆ (ಪುಸ್ತಕೋದ್ಯಮದಲ್ಲಿ) ಪಿತೃಸಮಾನರಾದ ಡೀವೀಕೆ ಮೂರ್ತಿಯವರು “ಇನ್ನೇನು, ಮದುವೆಯಾಯ್ತಲ್ಲಾ. ಮೀಸೆ ತೆಗೆಸಿಬಿಡಿ, ಚೆನ್ನಾಗಿರಲ್ಲ” ಎಂದು ಬಹುಕಾಲ ಮಡುಗಟ್ಟಿದ್ದ ಏಕೈಕ ಅಸಮಾಧಾನದ ಕಟ್ಟೆಯೊಡೆದಿದ್ದರು.



02 November 2008

ಹೆಸರಿನಲ್ಲೇನಿದೆ...?

ನಿತ್ಯದಂತೆ ರಾತ್ರಿಯ ಟೀವೀ ವಾರ್ತೆ ಕೇಳಿ-ನೋಡುತ್ತಿದ್ದೆ. ಕೆಳ ಅಂಚಿನ ಸುದ್ದಿ ಸುರುಳಿ ಒಮ್ಮೆಗೇ ಸುದ್ಧಿ ಸ್ಫೋಟ ಹರಿಸತೊಡಗಿತು. `ಬೆಂಗಳೂರಿನಲ್ಲಿ ಹದಿನೈದು ಮಹಡಿಗಳ ಕಟ್ಟಡ ಕುಸಿತ...’ ಅಕ್ರಮ ರಚನೆ, ಅಪಘಾತ, ಕೊಲೆ ನಿತ್ಯ ಸಂಗತಿಗಳೇ ಆದ್ದರಿಂದ ನಿರ್ಲಿಪ್ತನಾಗಿಯೇ ಓದುತ್ತಿದ್ದೆ. `...ನಾಲ್ವರು ಗಾಯಾಳುಗಳು. ವೈದೇಹಿ ಆಸ್ಪತ್ರೆಗೆ...’ ಮನದ ಮೂಲೆಯಲ್ಲೆಲ್ಲೋ ಆತ್ಮೀಯ ಎಳೆಗೊಂದು ತೀವ್ರ ತುಯ್ತ. ಜಗ್ಗನೆದ್ದು ಒಳಗೆಲಸದಲ್ಲಿದ್ದ ಹೆಂಡತಿಗೆ “ಛೆ. ವೈದೇಹಿ accicidentನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರಂತೆ” ಆತಂಕ ದಾಟಿಸಿದೆ. ಅವಳಿಗೂ shock. ನಮ್ಮ ಪಕ್ಕದ ಮನೆಯ ಮಾವ ವೈದೇಹಿಗೆ ಆತ್ಮೀಯ ಕಾನೂನು ಸಲಹೆಗಾರ. ಅವರಿಗೆ ಹೋದ ಮರುಪ್ರಸಾರದಲ್ಲಿ “ಛೆ, ಕಟ್ಟಡ ಬಿತ್ತಂತೆ. ವೈದೇಹಿ ಬೆಂಗಳೂರಿಗೆ ಯಾವುದೋ ಸಭೆಗೆ ಹೋಗಿದ್ದಿರಬೇಕು, ಅಲ್ಲಿ ಸಿಕ್ಕಿಕೊಂಡಿದ್ದಾರೆ. ಈಗ ಆಸ್ಪತ್ರೆಗೆ ಹಾಕಿದ್ದಾರಂತೆ.” ಮಾವನಿಗೂ ಅವರ ಕ್ಷೇಮ ವಾರ್ತೆಯ ಕಾತರ. ಕಡತ ಕೆದರಿ ಮಣಿಪಾಲದ ಇರವಂತಿಗೆಗೆ (ವೈದೇಹಿಯವರ ಮನೆ) ಕೂಡಲೇ ದೂರವಾಣಿಸಿದರು. ಭಯದ ಬುಗ್ಗೆ ಫುಸ್ ಎನ್ನುವಂತೆ ವೈದೇಹಿಯೇ ಉತ್ತರಿಸಿದರು! ಸುದ್ಧಿ ಸುರುಳಿ ಮತೆ ಮತ್ತೆ ಹರಿಯುತ್ತಲೇ ಇತ್ತು `...ನಾಲ್ವರು ಗಾಯಾಳುಗಳು ವೈದೇಹಿ (ಎಂಬ) ಆಸ್ಪತ್ರೆಗೆ ದಾಖಲು..' ಹಿಂದೆಯೂ ಒಮ್ಮೆ ಹೀಗೇ ಆಗಿತ್ತು...

07 October 2008

ಎನ್ = ನಾಮಾಂತರ?

ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯ ಹೊಸ ಪುಸ್ತಕ (- ಗುಜರಾತಿನ ವ್ಯಂಗ್ಯ ಕಿರುಗತೆಗಳು - ಅನುವಾದಕ ಡಿ.ಎನ್ ಶ್ರೀನಾಥ್) ಅನಾವರಣದ ಆಮಂತ್ರಣ ಬಂದಿತ್ತು. ಮಾಲಿಕ ಪ್ರಕಾಶ್ ಕಂಬತ್ತಳ್ಳಿ ವಿಳಾಸ ಬರೆಯುವಲ್ಲಿ ನನ್ನ ಹೆಸರಿನ ಇನಿಶಿಯಲ್ಸ್ನಲ್ಲಿ `ಎನ್ ಅಕ್ಷರ ಬಿಟ್ಟಿದ್ದರು. ಅದಕ್ಕೆ ಕೂಡಲೇ ಅದೇ ಕವರಿನ ಮೇಲೆ ನಾನು ಗೀಚಿದ್ದರ ಪರಿಷ್ಕೃತ ರೂಪ:

15 September 2008

ಪುಸ್ತಕ ಚೋರನೂ ಅಶೋಕನೆಂಬ ರಿಸಿಯೂ...

ಅದೊಂದು ಬೆಳಿಗ್ಗೆ ನನ್ನ ಪುಸ್ತಕ ಮಳಿಗೆಯಲ್ಲಿ ಒಮ್ಮೆಲೆ ನಾಲ್ಕೈದು ಜನ, ಅದರಲ್ಲೂ ಕೆಲವು ಎರಡು ಮೂರು ಜನರ ಗುಂಪುಗಳು ನನ್ನ ಮೇಜನ್ನು ಬಿಲ್ಲಿಗಾಗಿ ಮುತ್ತಿಗೆ ಹಾಕಿದ್ದವು. ಇವುಗಳ ಎಡೆಯಲ್ಲಿ ನನ್ನಿಂದಲೇ ಬಲಕ್ಕೆ ಅಂದರೆ ಶೋಕೇಸಿನ ಕನ್ನಡಿಯ ಆಚೆಗೆ ಏನೋ ಅಸಹಜ ಚಲನೆ ಕಂಡಂತಾಗಿ ತಿರುಗಿ ನೋಡಿದೆ. ಎಂದಿನ ಪರಿಚಿತ ಮುಖ - ಕಪ್ಪು ಛಾಯೆಯ ಕನ್ನಡಕ ಹಾಕಿದ ಹರಕು ಗಡ್ಡದವ - ಗಡ್ಡು, ಎಂದಿಟ್ಟುಕೊಳ್ಳಿ. ಇಲ್ಲೇ ನಮ್ಮ ನೆರೆಕರೆಯಲ್ಲೇ ಎಲ್ಲೋ ಕೆಲಸ ಮಾಡಿಕೊಂಡು, ನನಗೆ ಎದುರು ಸಿಕ್ಕಾಗೆಲ್ಲಾ ನಮಸ್ಕಾರ ಕೊಟ್ಟುಕೊಂಡು, ಆಗೀಗ ಅಂಗಡಿಗೂ ನುಗ್ಗಿಕೊಂಡಿದ್ದವ ವಿಚಿತ್ರ ಭಂಗಿಯಲ್ಲಿದ್ದ. ಆತನ ಕೈಗೆಲ್ಲಿಂದ ಬಂತೋ ಗೊತ್ತಿಲ್ಲ, health in your hands ಪುಸ್ತಕದ ಪುಟ ತಿರುವುತ್ತಿದ್ದ. ನಾನು ತಿರುಗಿ ನೋಡಿದ್ದು ಗಮನಿಸಿದ ಮೇಲೆ ಆತ ಹಾಗೇ ಬಗ್ಗಿ ಬಾಗಿಲ ಕಂಡಿಯಲ್ಲೇ ಕೈಚಾಚಿ ಪುಸ್ತಕವನ್ನು ಶೋಕೇಸಿನ ಹಲಗೆಯಲ್ಲಿ ಇಟ್ಟು, ಸೊಂಯ್ಕ್ ಅಂತ ಅಂಗಡಿಯ ಒಳಗೇ ಹೋದ. ನಾನು ಮತ್ತೆ ನಿರ್ಯೋಚನೆಯಿಂದ ಕೆಲಸದಲ್ಲಿ ಮುಂದುವರಿದೆ.