Showing posts with label ಆನಂದವರ್ಧನ ಜಿ.ಎನ್. Show all posts
Showing posts with label ಆನಂದವರ್ಧನ ಜಿ.ಎನ್. Show all posts

03 June 2009

ಮತ್ತೆ ಅಂಡಮಾನ್ ಬಿಡಿ...

ನನ್ನ ಅಂಡಮಾನ್ ಕಥನದ ನಡುವೆ ಒಮ್ಮೆ ನಿಮ್ಮನ್ನೆಲ್ಲ ದಾರಿ ತಪ್ಪಿಸಿ ನನ್ನ ತಮ್ಮ ಆನಂದ ಕೇವಲ ಕುಟುಂಬಿಕರ ಓದಿಗಾಗಿ ಬರೆದಿದ್ದ ಮೆಕ್ಸಿಕೋ ಪ್ರವಾಸ ಕಥನದ ಎರಡನೇ ಮೂರು (೨/೩) ಉದ್ದಕ್ಕೆ ಒಯ್ದಿದ್ದೆ. ಏನೇನೂ ನಿರೀಕ್ಷೆಯಿಲ್ಲದೆ ಪ್ರಕಟವಾದ ಮತ್ತೆ ಅದಕ್ಕೆ ಬಂದ ಒಳ್ಳೆಯ ಪ್ರತಿಕ್ರಿಯೆಗಳನ್ನು ನೋಡಿ ಸ್ವತಃ ಆನಂದನೇ ಉಬ್ಬಿದ್ದನ್ನು ನೀವೆಲ್ಲಾ ಓದಿಯೇ ಇದ್ದೀರಿ. ಈಗ ಆನಂದ ಮೂರನೇ ಹಾಗೂ ಕೊನೆಯ ಕಂತನ್ನು ಕಳಿಸಿದ್ದಾನೆ. (ಆದರೆ ಮತ್ತೆ ಚಿತ್ರ ಕಳಿಸಿಲ್ಲ!) ಹಿಂದಿನ ಕಂತಿನಲ್ಲಿ ಹೇಳಿದಂತೆ ತೀರಾ ಅನಿವಾರ್ಯವಾದಲ್ಲಿ ಕಂಸದೊಳಗೆ ನಾನು ಅವಶ್ಯಕ ಟಿಪ್ಪಣಿಗಳನ್ನು ಮಾಡಿದ್ದೇನೆ. ಓದುವ ಸಂತೋಷ ನಿಮ್ಮದಾಗಲಿ.
ಅದಾಗಿ ಆನೊ೦ದಭಾವನು ಅಮ್ಮನಲ್ಲಿ ಬೇಡುವ ಆಶಿರ್ವಾದಗಳು,


ಶೀರ್ಶಿಕೆ: ಮೆಕ್ಸಿಕೊ ಪ್ರಾಯಾಣ, ಸಹಾಸಗಳು, ಹೊಸ ವರ್ಷ ಮತ್ತು ಇತರ ಕತೆಗಳು

ಬಾಗ ೩ ಮತ್ತು ಕಡೆಯ ಕ೦ತು


ನನ್ನ ಸ್ಕಾಲಿತ್ಯ ಪೂರ್ಣ ಕಾಗದ ಓದಿ ಓದಿ ನಿನ್ನ ಮತ್ತು ಇದನ್ನು ಓದಿದ ಇನ್ನಿತರ ಬ೦ಧು ಬಳಗದವರ ಕಾಗುಣಿತ ಎದವಟ್ಟು ಆಗಿರಬಹುದು!! ಅಲ್ಲದ? ಒ೦ದು ಸಣ್ಣಾ ಉಪಕತೆ. ನನ್ನ ಮಿತ್ರ ಮತ್ತು ಕಿರಿಯ ಸಹದ್ಯೋಗಿಯ ಹೆಸರು ಪೆರ್ರಿ. ಅವನು ಇಲ್ಲಿನ ಸ್ಥಳಿಯ ಬಿಳಿ ಮನುಜ. ನಾನು ಅವನ ನೇತಾರ. ದಿವಸದಲ್ಲಿ ೧೦ ಗ೦ಟೆ ಅವನಿಗೆ ನನ್ನ ಜೊತ್ತೆ ವ್ಯವಹರ. ನಾನು ಇ೦ಗ್ಲಿಶ್ ಮಾತಾಡುವಾಗ ಭಾರತದ ಕ್ರಮದಲ್ಲಿ ಮಾತಾಡುತ್ತೇನೆ (ಎಕ್ಸ್೦ಟ್) ಹಾಗೆ ಮಾತಾಡಿ ಮತಾಡಿ ಅವನ ಇ೦ಗ್ಲಿಷೇ ಹಾಳಾಗಿ ಹೋಯಿತು. ಅವನ ಹೆ೦ಡತಿಸಿಕ್ಕಿದವಳು ನನ್ನ ಹತ್ತಿರ ಅವಳ ಮತ್ತು ಮಕ್ಕಳ ಗೋಳು ಹೇಳಿಕೊ೦ಡಳು, ಹೀಗೆ ನನ್ನ ಕಾಗಾದ ಓದಿ ಓದಿ ನಿಮ್ಮಲ್ಲರ ಕನ್ನಡ ಹಾಳಾದರೆ ಎನ್ನ ಬೈಯೆಡಿ ದಾನೆ?

02 May 2009

ಮೆಕ್ಸಿಕೋಕ್ಕೆ ಬನ್ನಿ ಅಂಡಮಾನ್ ಇರಲಿ

ದಾರಿ ತಪ್ಪಿದ ಪತ್ರ-ಪ್ರವಾಸ ಕಥನ  (ಅಂಡಮಾನ್ ಆರನೇ ಭಾಗ?)

ನನ್ನೊಬ್ಬ ತಮ್ಮ ಆನಂದವರ್ಧನ, ನನಗಿಂತ ಐದುವರ್ಷ ಕಿರಿಯ, ಬಾಲ್ಯದಲ್ಲೇ ನನ್ನ ಎನ್ಸಿಸಿ ಬೂಟಿನೊಳಗೇ ಕಾಲು ತೂರಿದ್ದ. ಬಂಡೆ ಹತ್ತುವಲ್ಲಿ ನಾವು ಒಂದೇ ಹಗ್ಗದವರು. ನಾನು ಸ್ನಾತಕೋತ್ತರ ಅಧ್ಯಯನವಿಷಯವಾಗಿ ಇಂಗ್ಲಿಷ್ ಸಾಹಿತ್ಯ ಹಿಡಿದೆ. ಆದರೆ ಅದಕ್ಕೆ ಕೊಂಡ ಗ್ರಂಥ ರಾಶಿಯ ನಿಜ ಓದುಗ (ಇಂಜಿನಿಯರಿಂಗ್ ವಿದ್ಯಾರ್ಥಿ) ಆನಂದ. ಕೆರೆಯಲ್ಲಿ ನನ್ನದು ನಾಯಿಮುಳುಗು, ಅವನದು ಅತ್ಯುನ್ನತ ಜಿಗಿಹಲಗೆ ಮಟ್ಟದ್ದು. ಹೀಗೆ ಹೇಳಿದಷ್ಟೂ ಮುಗಿಯದ ನನ್ನ ‘ಬಹುಹುಚ್ಚುಗಳ’ ನಿಕಟ ಅನುಯಾಯಿ ಆನಂದ. ಅವನ ಮೊದಲ ಅಮೆರಿಕಾ ಭೇಟಿಯ ವಾಪಾಸಾತಿಯಂದು ಅಯಾಚಿತವಾಗಿ ನನಗೆ ತಂದಿತ್ತ ಕೊಡುಗೆ ಗುಡಾರ ಇಂದಿಗೂ ಯಾವುದೇ ಕಾಡಿನಲ್ಲಿ ನನಗೆ ಅರೆಮನೆ. ಆನಂದನ ಕುಟುಂಬ ಇಂದು ಅಮೆರಿಕಾದ ಪ್ರಜೆಗಳು. ಆದರೆ ಗುಡ್ಡೆಹತ್ತುವ ಕುಟುಂಬ (ನಮ್ಮ ಹೆಸರಿನ ಜಿ= ಗುಡ್ಡೆಹಿತ್ಲು, ಕುಟುಂಬ ನಾಮ) ಚಾಳಿ ನಮಗಿಬ್ಬರಿಗೆ ಇನ್ನೂ ಸ್ಪರ್ಧಾತ್ಮಕವಾಗಿ ಒಂದೇ! ಅವನು ಊರಿನ (ಪೋರ್ಟ್‌ಲ್ಯಾಂಡ್) ಹತ್ತೆಂಟು ಮಂಜಿನಬೆಟ್ಟಗಳನ್ನು ಏರಿ, ಸೈಕಲ್ ಪ್ರವಾಸ ಹೋಗಿ ಅದ್ಭುತ ಚಿತ್ರಗಳೊಡನೆ, ನನಗೆ ಹೊಟ್ಟೆಕಿಚ್ಚಾಗುವಂತೆ ಪತ್ರ ಬರೆಯುತ್ತಿರುತ್ತಾನೆ. ಅದರಲ್ಲೊಂದನ್ನು ಸಾರ್ವಜನಿಕ ಓದಿನ ಕುಶಿಗಾಗಿ, ಸಣ್ಣ ಪೀಠಿಕೆಯೊಡನೆ ಕೆಳಗೆ ಕೊಡುತ್ತಿದ್ದೇನೆ.