Showing posts with label ಒಡಿಶಾದ ಒಡಲೊಳಗೆ. Show all posts
Showing posts with label ಒಡಿಶಾದ ಒಡಲೊಳಗೆ. Show all posts

28 August 2017

ಒಡಲೊಳಗೆ ಒಡಿಶಾ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ
ಒಡಿಶಾದ ಒಡಲೊಳಗೆ ಅಧ್ಯಾಯ (೧೦)


ಭುವನೇಶ್ವರದಲ್ಲಿ ಪ್ರಸಿದ್ಧ ದೇವಸ್ಥಾನಗಳಿದ್ದ ಹಾಗೇ ನೋಡಲೇಬೇಕಾದ ವಸ್ತುಸಂಗ್ರಹಾಲಯಗಳೂ ಇವೆ. ಒಂದೇ ದಿನದಲ್ಲಿ ವಿವರವಾಗಿ ಎಲ್ಲವನ್ನೂ ನೋಡಲು ಕಷ್ಟಸಾಧ್ಯ. ಹಾಗಾಗಿ ನಮ್ಮ ಪಟ್ಟಿಯಲ್ಲಿದ್ದ ಆದಿವಾಸಿ/ಬುಡಕಟ್ಟು ವಸ್ತು ಸಂಗ್ರಹಾಲಯ, ಜೀವವೈವಿಧ್ಯ ವಸ್ತು ಸಂಗ್ರಹಾಲಯ, ಒಡಿಶಾ ರಾಜ್ಯ ವಸ್ತು ಸಂಗ್ರಹಾಲಯಗಳ ಪೈಕಿ ಒಂದನ್ನು ಮಾತ್ರ ಆರಿಸಿಕೊಳ್ಳಬೇಕಾಗಿ ಬಂತು. 

21 August 2017

ಭೂ+ವನ+ಈಶ್ವರ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ
ಒಡಿಶಾದ ಒಡಲೊಳಗೆ ಅಧ್ಯಾಯ (೯)

ಭುವನೇಶ್ವರದಲ್ಲಿ ಈಗಾಗಲೇ ೩ ಇರುಳು ಕಳೆದಿದ್ದರೂ ನಗರ ಪ್ರದಕ್ಷಿಣೆಯಾಗಿರಲಿಲ್ಲ. ನವೆಂಬರ್ ೨೬ರ ದಿನವನ್ನು ಅದಕ್ಕಾಗಿಯೇ ಇಟ್ಟಿದ್ದೆವು. ಡ್ರೈವರ್ ಬದಲಾವಣೆಯಾಗಿ
ಅಂದು ನಮ್ಮನ್ನು ಚಾಲಕ ಸಂಗ್ರಾಮಸಿಂಗ್ ಸುತ್ತಿಸುವವನಿದ್ದ. ವ್ಯಾನ್ ಏರುವಾಗಲೇ ಆತ ಅನ್ವರ್ಥಕನಾಮಧಾರಿಯೆಂದು ಅರಿವಾಯಿತು. ಅದಾಗಲೇ ವ್ಯಾನಿನ ಹಿಂಬದಿ, ಹೋಟೆಲಿನ ಆವರಣ ಗೋಡೆಗೆ ಮುತ್ತಿಕ್ಕಿ ಕಿಟಿಕಿ ಗಾಜು ಪುಡಿಯಾಗಿತ್ತು. ಆ ದಿನ ನಾವು ನೋಡಲಿಕ್ಕಿರುವ ಜಾಗಗಳನ್ನು ಆತನಿಗೆ ತಿಳಿಸಿದೆ. ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ.

14 August 2017

ಗಿರಿಸಮುಚ್ಛಯಗಳು

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ
ಒಡಿಶಾದ ಒಡಲೊಳಗೆ ಅಧ್ಯಾಯ (೮)


ರತ್ನಗಿರಿ, ಲಲಿತಗಿರಿ, ಉದಯಗಿರಿ, ಪುಷ್ಪಗಿರಿಗಳೆಂಬ ಗಿರಿಸಮುಚ್ಚಯಗಳು ಬೌದ್ಧರ ಪ್ರಾಬಲ್ಯವಿದ್ದ ಜಾಗಗಳು. ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಚೀನೀ ಪ್ರವಾಸಿಗ ಹ್ಯೂ-ಯೆನ್-ತ್ಸಾಂಗ್ ನ ವರದಿಯಲ್ಲೂ ನಮೂದಿಸಲ್ಪಟ್ಟ ಜಾಗಗಳೆಂದು ಹೇಳುತ್ತಾರೆ. ಬೌದ್ಧರ ಚೈತ್ಯಗೃಹಗಳು, ವಿಹಾರಗಳು ಮತ್ತು ಸ್ತೂಪಗಳ ಸಮುಚ್ಚಯಗಳು ಇಲ್ಲಿವೆ. ಇಲ್ಲಿ ಬುದ್ಧನ ಕೂದಲು, ಹಲ್ಲು, ಮೂಳೆ ಹೀಗೆ ಕೆಲವು
ವಸ್ತುಗಳನ್ನು ಜೋಪಾನವಾಗಿಟ್ಟು ಹುಗಿದಿಟ್ಟ ಸ್ತೂಪಗಳಿವೆಯಂತೆ. ಈ ಸ್ತೂಪಗಳು ಮಣ್ಣಿನ ಇಟ್ಟಿಗೆಗಳಿಂದ ರಚಿತವಾದವು. ಉತ್ಖನನವೀರರಿಗೆ ಸ್ವರ್ಗವೆಂದೇ ಹೇಳಬಹುದಾದ ಜಾಗಗಳಿವು. ಎಷ್ಟೋ ವರ್ಷಗಳ ಕಾಲ ಬರೀ ಗುಡ್ಡ, ಮರ, ಕಾಡುಗಳೆಂದು ಪರಿಚಿತವಾಗಿದ್ದ ಜಾಗಗಳಲ್ಲಿ ಭೂಮಿಯನ್ನು ಅಗೆಯುತ್ತಾ ಹೋದಂತೆ ಆ ನೆಲದ ಅಡಿಯಲ್ಲಿದ್ದ ಎರಡು ಸಾವಿರಕ್ಕೂ ಹಿಂದಿನ ವರ್ಷಗಳ

07 August 2017

ಗಿರಿಗಳೆಡೆಗೆ ನಮ್ಮ ನಡಿಗೆ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ 
ಒಡಿಶಾದ ಒಡಲೊಳಗೆ ಅಧ್ಯಾಯ (೭) 


ನವೆಂಬರ್ ೨೫ರಂದು ಬೆಳಿಗ್ಗೆ ಬೇಗನೇ ತಯಾರಾದೆವು. ಅಂದು ನಾವು ಕ್ರಿಸ್ತಪೂರ್ವ ೨ನೆಯ ಶತಮಾನದ ಜೈನ ಮತ್ತು ಬೌದ್ಧ ವಾಸ್ತುಗಳಿಗೆ ಭೇಟಿಕೊಡುವ ಯೋಜನೆ ಹಾಕಿಕೊಂಡಿದ್ದೆವು. ಮೊದಲಿಗೆ ಭುವನೇಶ್ವರದಿಂದ ೮ ಕಿ.ಮೀ. ದೂರದಲ್ಲಿರುವ ಉದಯಗಿರಿ ಮತ್ತು ಖಂಡಗಿರಿಗಳಿಗೆ ಹೋದೆವು.

31 July 2017

ಪುರಿಯಿಂದ ಭುವನೇಶ್ವರಕ್ಕೆ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ 
ಒಡಿಶಾದ ಒಡಲೊಳಗೆ ಅಧ್ಯಾಯ (೬)


ಪೂರ್ವ ಕರಾವಳಿ, ಸಮುದ್ರ ತೀರದಲ್ಲೇ ವಸತಿಗೃಹ, ಅದೂ ಪೂರ್ವಕ್ಕೆ ತೆರೆದ ಬಾಲ್ಕನಿಯೆಂದ ಮೇಲೆ ಕೇಳಬೇಕೆ? ಅರುಣೋದಯಕ್ಕೂ ಮುಂಚಿನ ತಂಪು ಕಿರಣಗಳು ಎಂತಹ ಸೂರ್ಯವಂಶಿಯನ್ನೂ ಹಾಸಿಗೆಯಿಂದ ಸೀದಾ ಸಮುದ್ರ ತೀರಕ್ಕೇ ಎಳೆದೊಯ್ಯಬಲ್ಲವು.
ಪುರಿಯ ಸಮುದ್ರ ತೀರ ‘ಗೋಲ್ಡನ್ ಬೀಚ್’ ಎಂದೇ ಕರೆಸಿಕೊಳ್ಳುವ ಪ್ರಕೃತಿ ಸಂಪತ್ತು. ದಿನಕರನ ಕಿರಣ, ಶುಭ್ರ, ಮೃದು, ನಯವಾದ ಮರಳಿಗೆ ಬಿದ್ದು ಹೊಂಬಣ್ಣದ ಚಿತ್ತಾರ ರಚಿಸಿದರೆ, ಅಲೆಅಲೆಯಾಗಿ ನೊರೆನೊರೆಯಾಗಿ ಹೊಳೆಯುವ ರತ್ನಾಕರನ ತಂಪುತಂಪು ನೀರು ಕಾಲಿಗೆ ಮುತ್ತಿಕ್ಕಿ ಹಿಂದೆ

24 July 2017

ಕುರುಮಾ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ 
ಒಡಿಶಾದ ಒಡಲೊಳಗೆ ಅಧ್ಯಾಯ (೫)


ಕೋನಾರ್ಕದಿಂದ ಕುರುಮಾ ಕಡೆಗೆ ತೆರಳಬೇಕೆಂಬ ನಮ್ಮ ಅಭಿಪ್ರಾಯಕ್ಕೆ ಸಂತೋಷನ ಸಂತೋಷದ ಒಪ್ಪಿಗೆ ಇರಲಿಲ್ಲ. ಲೆಕ್ಕಾಚಾರಕ್ಕಿಂತ ಹೆಚ್ಚಿನ ದೂರಕ್ರಮಿಸಿದರೆ ಅದರ ಬಾಬ್ತಿನ ಹಣವನ್ನು ನಾವು ಕೊಡುತ್ತೇವೋ ಇಲ್ಲವೋ ಎಂಬ ಅನುಮಾನ ಅವನಿಗೆ ಇತ್ತೆನಿಸುತ್ತದೆ. ಕುರುಮಾ ಕೋನಾರ್ಕದಿಂದ ಸುಮಾರು ೮ ಕಿ.ಮೀ ದೂರದಲ್ಲಿರುವ ಹಳ್ಳಿ. ಪ್ರಸಿದ್ಧವಾದ ಜಾಗವೇನಲ್ಲ. ಒಂದೆರಡು ಕಿ.ಮೀ ದೂರ ಹೋದ ಮೇಲೆ ಕವಲು ದಾರಿ ಸಿಕ್ಕಿದಾಗ ನಾವು ಹೋಗಬೇಕಾದ ದಾರಿ ಯಾವುದೆಂದು ಸಂತೋಷನಿಗೆ ಗೊಂದಲವಾಯಿತು.

17 July 2017

ಅರ್ಕನಿಗೊಂದು ಅಚ್ಚರಿ- ಕೋನಾರ್ಕ!

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ

ಒಡಿಶಾದ ಒಡಲೊಳಗೆ ಅಧ್ಯಾಯ (೪)

ಪುರಿಯಿಂದ ಬೆಳಿಗ್ಗೆ ಬೇಗನೆ ಹೊರಟು, ಮಹಾನದಿಯ ೨ ಕಿ.ಮೀ ಉದ್ದನೆಯ ಸೇತುವೆ ದಾಟಿ, ಬಂಗಾಳಕೊಲ್ಲಿ ತೀರದಲ್ಲಿ ಪ್ರಯಾಣಿಸುತ್ತಾ ಬಾಲುಕಾಂಡ ವನಧಾಮವನ್ನು ಹಾದು ೩೫ ಕಿ.ಮೀ ದೂರದ ಕೋನಾರ್ಕ ತಲಪಿದೆವು. 

ಕೋನಾರ್ಕ! ಇದನ್ನು ಏನೆಂದು ವರ್ಣಿಸಲಿ? ಅದ್ಭುತವೆಂದೇ? ವಾಸ್ತುಶಾಸ್ತ್ರದ ಉತ್ತುಂಗವೆಂದೇ? ಕಲೆಯಬಲೆಯೆಂದೇ? ಅಧ್ಯಾತ್ಮಶಕ್ತಿಕೇಂದ್ರವೆಂದೇ? ಸಂಪತ್ತಿನ ಆಗರವಾಗಿತ್ತೆಂದೇ? ರೇಖಾಗಣಿತವೆಂದೇ? ಖಗೋಳಶಾಸ್ತ್ರವೆಂದೇ? ಅಯಸ್ಕಾಂತ, ಲೋಹಶಾಸ್ತ್ರಗಳ ಪರಮೋಚ್ಚ ಜ್ನಾನಬಿಂದುವೆಂದೇ? ವಿಜ್ಞಾನದ ಮೇರು ಶಿಖರವೆಂದೇ? ಆಗಮಶಾಸ್ತ್ರ, ಪ್ರತಿಮಾ ಶಾಸ್ತ್ರಗಳ ಸಂಗಮವೆಂದೇ? ಕಲ್ಲಿನ ಕಾವ್ಯವೆಂದೇ? ವ್ಯಥೆಯ ಕಥೆಯೆಂದೇ? ದಾಖಲಾತಿಗಳ ದಾಖಲೆಯೆಂದೇ?

10 July 2017

ಪುರಿ ಎಂಬ ಬೆರಗಿನಪುರ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ 

ಒಡಿಶಾದ ಒಡಲೊಳಗೆ ಅಧ್ಯಾಯ (೩)

ಮಂಗಲ ಜೋಡಿಯಿಂದ ಹೊರಟ ನಾವು, ಅಂದು ಸಂಜೆಯೊಳಗೆ ಪುರಿಯನ್ನು ತಲಪಿ, ಜಗನ್ನಾಥನ ದರ್ಶನವನ್ನು ಪಡೆಯುವವರಿದ್ದೆವು. ಈ ಪ್ರಯಾಣವೂ ಒಡಿಶಾದ ಹಳ್ಳಿಜೀವನದ ದೃಶ್ಯಗಳನ್ನು ತೋರಿಸಿತು. ಕೆಲವು ಕಡೆ ಸರ್ಕಾರಿ ಶಾಲೆಗಳಿಂದ ಮಕ್ಕಳು ಮನೆಗಳಿಗೆ ತೆರಳುತ್ತಿದ್ದರು. ಹೆಚ್ಚಿನವರು ಅದರಲ್ಲೂ ಹೆಣ್ಮಕ್ಕಳು ಸಾಲಾಗಿ ಸೈಕಲ್ಲುಗಳನ್ನು ತುಳಿಯುತ್ತಾ ಸಾಗುತ್ತಿದ್ದ ದೃಶ್ಯ, ಸರಕಾರೀ ಯೋಜನೆಯ ಫಲ, ತಳ ಮುಟ್ಟಿದೆ ಎಂದು ಸೂಚಿಸುತ್ತಿತ್ತು. ಮಕ್ಕಳೆಲ್ಲಾ ಶುಭ್ರವಾದ ಸಮವಸ್ತ್ರಗಳಲ್ಲಿದ್ದರು. ಶಾಲೆ, ಆಸುಪಾಸು, ಹಳ್ಳಿಮನೆಗಳು, ರಸ್ತೆಗಳೆಲ್ಲಾ ಸರಳ, ಸ್ವಚ್ಚ, ಸುಂದರವಾಗಿದ್ದವು. ಹಲವು ಕಡೆ ಪುರಾತನ ದೇವಾಲಯಗಳಿದ್ದವು. ಹಿಂದಿನ ಕಾಲದಲ್ಲಿದ್ದಂತೇ, ಈಗಲೂ ಜನಜೀವನ, ಚಟುವಟಿಕೆ, ಆಚರಣೆಗಳು ದೇವಸ್ಥಾನಗಳಿಗೆ ಅನುಸರಿಸಿಕೊಂಡೇ ನಡೆಯುತ್ತಿವೆಯೇನೋ ಎಂದೆನಿಸಿತು. ಇದಕ್ಕೆ ಒಂದು ಸುಂದರ ಉದಾಹರಣೆಯೇ ಪುರಿಯ ಜಗನ್ನಾಥ.

03 July 2017

ಮಂಗಲ ಜೋಡಿ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ 
ಒಡಿಶಾದ ಒಡಲೊಳಗೆ ಅಧ್ಯಾಯ (೨)

ನವೆಂಬರ ೨೨ ರ ಬೆಳಗ್ಗಿನಿಂದ ಆರಂಭವಾಗುವ ನಮ್ಮ ತಿರುಗಾಟ ಮಂಗಲಕರವಾಗಿರಲೆಂದು ಅದನ್ನು ಮಂಗಲಜೋಡಿಯಿಂದಲೇ ಆರಂಭಿಸಿದೆವು. ಹೆಚ್ಚೇನೂ ಪ್ರಸಿದ್ಧವಾಗಿಲ್ಲದ ಈ ಪಕ್ಷಿಧಾಮ ನಮ್ಮ ವೀಕ್ಷಣಾಸ್ಥಳಗಳ ಪಟ್ಟಿಗೆ ಸೇರ್ಪಡೆಯಾದದ್ದೇ ಒಂದು ಆಕಸ್ಮಿಕ.



26 June 2017

ಒಡಿಶಾಕ್ಕೆ ಸ್ವಾಗತ - ಸುಂದರ, ಪ್ರಶಾಂತ, ಉದಾತ್ತ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ - ಒಡಿಶಾದ ಒಡಲೊಳಗೆ (೧)

ಅದೊಂದು ಸುಂದರ ಸಂಜೆ. ದೂರದರ್ಶನ ಭಾರತಿಯಲ್ಲಿ (ಡಿಡಿಭಾರತಿ) ನೃತ್ಯೋತ್ಸವವೊಂದರ ನೇರ ಪ್ರಸಾರವಾಗುತ್ತಿತ್ತು. ಲಗುಬಗೆಯಲ್ಲಿ ಮನೆ ಕೆಲಸಗಳನ್ನು ಅರ್ಧಂಬರ್ಧ ಮಾಡಿ ಬಂದು ಕೂತವಳಿಗೆ ಸುಂದರ ಕೆತ್ತನೆಗಳ ದೇಗುಲದ ಹಿನ್ನೆಲೆಯಲ್ಲಿ, ನೂರಾರು ಸಭಿಕರ ಮುನ್ನೆಲೆಯಲ್ಲಿ ಪ್ರದರ್ಶಿತವಾಗುತ್ತಿದ್ದ ಒಡಿಸ್ಸೀ ನೃತ್ಯ ಮೋಡಿಮಾಡಿತ್ತು.