Showing posts with label ವ್ಯಕ್ತಿಚಿತ್ರಗಳು. Show all posts
Showing posts with label ವ್ಯಕ್ತಿಚಿತ್ರಗಳು. Show all posts

23 May 2022

ಶತಾಯುಷಿ ಸಮ್ಮಾನ ಸಹಿತ ತ್ರಿವಳಿ ಸಂತೋಷ ಕೂಟ



"ಸುಮಾರು ಅರವತ್ತು ವರ್ಷಗಳ ಹಿಂದೆ, ಹುಟ್ಟಿನ ಆಕಸ್ಮಿಕಗಳ ಹಂಗಿಲ್ಲದೇ ನಾವು ಹನ್ನೊಂದು ಮಂದಿ ಎಳೆಯರು, ರಘುವಿನ ಮನೆಯಲ್ಲಿ ಸೇರುತ್ತಿದ್ದೆವು. ಅಲ್ಲಿ ಆಡದ ಮಾತಿಲ್ಲ, ಮಾಡದ ಚಟುವಟಿಕೆಗಳಿಲ್ಲ...." ಎಂದೇ ತೊಡಗಿತ್ತು ಎನ್.ಜಿ ಮೋಹನರ ಪ್ರಾಸ್ತಾವಿಕ ಮಾತುಗಳು. ಸಂದರ್ಭ - ಮೋಹನ್ನರ ತಾಯಿ - ವಸಂತಿ ಟೀಚರ್ ಅವರ ಜನ್ಮ ಶತಾಬ್ದಿ, ಅವರ ಪುಸ್ತಕ - ಬೀದಿ

ದೀಪದ ಬೆಳಕು, ಇದರ ಲೋಕಾರ್ಪಣ ಮತ್ತು ‘ದ ಅನಿರುದ್ಧ್ ಚಾರಿಟೆಬಲ್ ಟ್ರಸ್ಟ್’ ಉದ್ಘಾಟನೆ. ಎನ್.ಜಿ ಮೋಹನ್ ಮಂಗಳೂರಿನಲ್ಲಿ ಕೆಲವು ಔಷಧ ಕಂಪೆನಿಗಳ ಯಶಸ್ವೀ ಸಗಟು ವಿತರಕರು. ಈ ತ್ರಿವಳಿ ಸಂತೋಷಕೂಟವನ್ನು ಮೋಹನ್ ಅವರ ಕಂಪೆನಿ - ‘ಬೆಟಾ ಏಜನ್ಸೀಸ್ ಅಂಡ್ ಪ್ರಾಜೆಕ್ಟ್ಸ್ ಪ್ರೈ.ಲಿ’, ಅವರ ಪ್ರಿಯ ಶಿಕ್ಷಣ ಸಂಸ್ಥೆ ಸಂತ ಅಲೋಶಿಯಸ್ ಕಾಲೇಜ್ ಸಹಯೋಗ ಮತ್ತು ಸಭಾಂಗಣದಲ್ಲಿ (೧೫-೫-೨೦೨೨, ಆದಿತ್ಯವಾರ ಸಂಜೆ) ವ್ಯವಸ್ಥೆ ಮಾಡಿತ್ತು.

11 April 2022

ಸಸ್ಯ ತಪಸ್ವಿ ಗೋಪಾಲಕೃಷ್ಣ ಭಟ್


ಒಂದು ಪುಸ್ತಕ, ಒಂದು ನಮನ



ಡಾ| ಕಾಕುಂಜೆ ಗೋಪಾಲಕೃಷ್ಣ ಭಟ್ಟರ (ಕೆ.ಜಿ ಭಟ್) ಸಹಜ ಹಸನ್ಮುಖವನ್ನು ಹೊತ್ತ, ಹೊಳಪುಳ್ಳ ಉತ್ತಮ ಕಾಗದದ ನೂರಾ ಹದಿನಾರು ಪುಟಗಳ, ಅಸಂಖ್ಯ ಚಿತ್ರಗಳ ಪುಸ್ತಕ - ಟ್ಯಾಕ್ಸೋನೊಮಿ ಭಟ್ಟರ ಯಾನ. ನಿಜ ‘ಎಲೆಗಳ ಹಿಂದೆ’ ಬೀಳುವ ಗೀಳಿನ ಭಟ್ಟರ ವ್ಯಕ್ತಿತ್ವ ಸಾಮಾನ್ಯ ಲೋಕಮುಖಕ್ಕೆ, ಲೋಕೋಕ್ತಿಯಂತೆ ಎಲೆಯ ಮರೆಯಲ್ಲೇ ಉಳಿದಿತ್ತು. ಆ ಕೊರತೆಯನ್ನು ಕಿರಿದರಲ್ಲಿ ನೀಗಿಸುವ ಪ್ರಾಮಾಣಿಕ ಪ್ರಯತ್ನ ಈ ಪುಸ್ತಕ. ಗೋಪಾಲಕೃಷ್ಣ ಭಟ್ಟರು ಸ್ವಪ್ರಚಾರ ಬಿಡಿ, ಅವಶ್ಯವಿದ್ದಲ್ಲಿ ಯುಕ್ತ ಸ್ವಸ್ಥಾಪನೆಯನ್ನೂ ದೋಷ ಎನ್ನುವಂತೆಯೇ ನಿರಾಕರಿಸಿದ ನಿರ್ಮೋಹಿ. ಪುಸ್ತಕದ ಮುನ್ನುಡಿಕಾರ, ಪ್ರಕಾಶಕ - ಎನ್ ರಾಮನಾಥ್, ಒತ್ತು ಕೊಟ್ಟು

21 January 2022

ಡಾ| ಕೃಷ್ಣಮೋಹನ ಪ್ರಭು ಇನ್ನಿಲ್ಲ

(ಈ ಬರಹದ ಮೊದಲ ಪ್ರತಿಯನ್ನು ಐದು ಕಂತುಗಳ ಧಾರಾವಾಹಿಯಾಗಿ ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದ್ದೆ. ಇಲ್ಲಿ ಅವನ್ನು ಪರಿಷ್ಕರಿಸಿ ಸಂಕಲಿಸಿದ್ದೇನೆ. ಫೇಸ್ ಬುಕ್ಕಿನಲ್ಲಿ ವಿಷಾದ ವ್ಯಕ್ತಪಡಿಸಿದವರು, ತಮ್ಮ ವಲಯದ ಇನ್ನಷ್ಟು ಮಂದಿಗೆ ಮುಟ್ಟಿಸಿದವರು ನೂರಾರು. ಅಲ್ಲಿ ಬಂದ ಕೆಲವು ವಿಷಯಕ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರತಿಕ್ರಿಯಾ ಅಂಕಣದಲ್ಲಿ ಸೇರಿಸಿಕೊಳ್ಳುತ್ತಿದ್ದೇನೆ. ಹಾಗೇ ಸುದೀರ್ಘ ಟಿಪ್ಪಣಿಯನ್ನೇ ಕೊಟ್ಟ ‘ಪವಾಡ ವಿರೋಧಿ’ ನರೇಂದ್ರ ನಾಯಕ್ ಮತ್ತು ಹಿರಿಯ ವೈದ್ಯ ಮಿತ್ರ ಶ್ರೀನಿವಾಸ ಕಕ್ಕಿಲ್ಲಾಯರ ಬರಹಗಳನ್ನು, ಅವರ ಅನುಮತಿಯೊಡನೆ ಇದಕ್ಕೆ ಅನುಬಂಧಗಳಾಗಿ ಬಳಸಿಕೊಂಡಿದ್ದೇನೆ)


ಕೃಶಿ ತೊರೆ ಬತ್ತಿಹೋಯ್ತು

ಮಲೇಶ್ಯಾದಿಂದ ವೈದ್ಯಕೀಯ ಓದಿಗಾಗಿ ಅಸಂಖ್ಯ ವಿದ್ಯಾರ್ಥಿಗಳು ಮಂಗಳೂರು, ಮಣಿಪಾಲಕ್ಕೆ ಬರುತ್ತಿದ್ದ ಕಾಲವದು (ಸುಮಾರು ೧೯೮೪). ಆ ಬಳಗದ್ದೇ ಇದೊಂದು ಕುಡಿ ಎಂದೇ ನಾನೋರ್ವ ಧಡೂತಿ ತರುಣನನ್ನು ಭಾವಿಸಿದ್ದೆ. ಆದರೆ ಒಮ್ಮೆ ನಾನು ಇನ್ಯಾರದೋ ಜತೆ ಕನ್ನಡದಲ್ಲಿ ಮಾತಾಡುತ್ತಿದ್ದಾಗ, ಅಲ್ಲೇ ಇದ್ದ ಈತ ಅರ್ಥಪೂರ್ಣ ನಗೆ ಕೊಟ್ಟ! ಆಗ ತಿಳಿಯಿತು, ಈತ ಅಪ್ಪಟ ಕನ್ನಡಿಗ - ಸಮೀಪದ ಮೂಡಬಿದ್ರೆಯ ಕೃಷ್ಣಮೋಹನ ಪ್ರಭು; ಮಿತ್ರವಲಯಕ್ಕೆ ಕೃಶಿ. ಮುಂದೆ ನನ್ನ ಮಾತಿನ ಚಪಲಕ್ಕೋ, ಕೃಶಿಯದೇ ಮಿತಿಯರಿಯದ ಕುತೂಹಲಕ್ಕೋ ನಮ್ಮೊಳಗೆ ಅಪೂರ್ವ ಗೆಳೆತನದ ಬಂಧ ಏರ್ಪಟ್ಟಿತ್ತು. ಮತ್ತದು ಸುಮಾರು ಮೂವತ್ತೇಳು ವರ್ಷಗಳ ಉದ್ದಕ್ಕೆ ದೃಢವಾಗಿ ಬೆಳೆದಿತ್ತು. ಆದರೆ ಈಚೆಗೆ (೧೧-೧-೨೦೨೨) ತೀರಾ ಅನಿರೀಕ್ಷಿತವಾಗಿ, ಅಕಾಲಿಕವಾಗಿ ಮತ್ತು ಯಾವತ್ತಿಗೂ ಕಡಿದು ಹೋಯ್ತು; ಕೃಶಿ ಇನ್ನಿಲ್ಲ!

17 November 2021

ಆಷ್ಟಭುಜೆ ರಮಾದೇವಿಗೆ ನಮನ


ಚಿತ್ರ ಕೃಪೆ: ಅಭಿಜಿತ್ ಎಪಿಸಿ

"ದಿಬ್ಬಣ ವೆಂಕಪ್ಪು ಮನೆಗೆ ಬಂದಿದೆ" ಎಂದು ಕೇಳಿದಾಗ, ಹೊಸ ಚಡ್ಡಿ ಎಳೆದುಕೊಂಡು ಅರ್ಧ ಕಿಮೀ ದೂರದ ತೋಡಿನಾಚೆ ದಂಡೆಗೆ ಓಡಿದ ಐದರ ಹುಡುಗ ನಾನು. ಅಜ್ಜ - ಎಪಿ ಸುಬ್ಬಯ್ಯ, ಸಕಾಲದಲ್ಲೇ ಹಿರೀಮಗ - ತಿಮ್ಮಪ್ಪಯ್ಯನಿಗೆ ಮದುವೆಯನ್ನೇನೋ ಮಾಡಿದ್ದರು. ಆದರೆ ದುರದೃಷ್ಟಕ್ಕೆ ಪತ್ನಿ ಗಂಗಮ್ಮ, ಚೊಚ್ಚಲ ಹೆರಿಗೆಯಲ್ಲಿ ಮಗುವನ್ನಿತ್ತು (ಸುಬ್ಬಯ್ಯ ದ್ವಿತೀಯ), ಬಾಣಂತಿಸನ್ನಿಗೆ ಪ್ರಾಣ ನೀಗಿದ್ದರು. ಇಂಥ ಸ್ಥಿತಿಯಲ್ಲಿ ೨೯ರ ತರುಣನಿಗೆ, ೧೬ರ ನವವಧುವಾಗಿ ಬಂದವರು (೧೯೫೭) ವರ್ಮುಡಿಯ ರಮಾದೇವಿ. ತಿಮ್ಮಪ್ಪಯ್ಯ - ನನಗೆ ಸೋದರಮಾವ, ಹುಟ್ಟಿದಾರಭ್ಯ ರೂಢಿಸಿದಂತೆ ಏಕವಚನದ ಅಣ್ಣ. ಅದೇ ರೂಢಿಯ ಮುಂದುವರಿಕೆಯಾಗಿ ರಮಾದೇವಿ ಅತ್ತಿಗೆಯಾದರೂ ಬಂಧ ಬಹುವಚನದ್ದು! ಆದರೆ ಸಂದ ಆರು ದಶಕಗಳಿಗೂ ಮಿಕ್ಕ ಕಾಲದಲ್ಲಿ ಪರಸ್ಪರ ಪ್ರೀತ್ಯಾದರಗಳು ಗಾಢವೇ ಇದ್ದವು ಎನ್ನುವ ಅರಿವು ಮೂಡಿದ್ದು ಮಾತ್ರ ತೀರಾ ಈಚೆಗೆ!

28 May 2021

ಜಯಂತರಿಗೊಂದು ನುಡಿ ನಮನ


"ನಾನು ಜಯಂತ್+ಅ, ಜಯಂತ! ಏಗ್ನೆಸ್ (ಮಹಿಳಾ) ಕಾಲೇಜಿನ ಕೆಮಿಸ್ಟ್ರಿ ಅಧ್ಯಾಪಕ. ನಮ್ಮದು ಮಹಿಳಾ ಕಾಲೇಜಾದ್ದರಿಂದ ಬರಿಯ ಹೆಸರು ಕೇಳಿದವರು ‘ಜಯಂತಿ’ ಮಾಡಿಬಿಡ್ತಾರೆ..." ಎಂದು ನನ್ನಂಗಡಿಯ ಹೊಸ ಕಾಲದಲ್ಲಿ ಬಂದಿದ್ದವರು (೧೯೭೬ರ ಸುಮಾರಿಗೆ) ಮುಕ್ತ ನಗೆಯೊಡನೆ, ನಾಲ್ಕು ಹನಿ ಕಣ್ಣೀರು ಒರೆಸಿಕೊಳ್ಳುತ್ತ ಪರಿಚಯಿಸಿಕೊಂಡಿದ್ದರು. ಹೌದು, ಜಯಂತರಿಗೆ ಧಾರಾಳ ನಗೆಯೊಡನೆ ಕಣ್ಣೀರು ಬರುವ ಸಣ್ಣ ದೈಹಿಕ ಕೊರತೆಯಿತ್ತು. ಆದರೆ ಅವರ ಪರಿಚಯ ಬೆಳೆದಂತೆ, ಮೃದು ಮಾತು, ವೈವಿಧ್ಯಮಯ ಆಸಕ್ತಿ ಮತ್ತು ತನಗೆ ತಿಳಿದದ್ದನ್ನೆಲ್ಲ ಎಲ್ಲರಲ್ಲಿ ಹಂಚಿಕೊಳ್ಳುವಲ್ಲಿ ಇದ್ದ ಆನಂದವನ್ನು ಕಂಡಾಗ, ಅದು ಆನಂದಾಶ್ರುವೇ ಇರಬೇಕು!

17 September 2020

ಆರು ದಶಕಗಳ ಹಿಂದಿನ ಶಿಷ್ಯನ ಕಣ್ಣಲ್ಲಿ ಜಿಟಿನಾ


ಲೇಖಕ: ಹೊಂಡೆಲ್ ಪ್ರಸನ್ನ 

[ಅಮೆರಿಕಾದಲ್ಲಿರುವ ನನ್ನ ತಮ್ಮ - ಆನಂದವರ್ಧನ ಓದಿ, ಭಾರೀ ಕುಶಿಪಟ್ಟು "ನೋಡೋ" ಎಂದು ನನಗೂ ದೂಡಿದ ಲೇಖನವಿದು. ಪ್ರಸ್ತುತ ವೃತ್ತಿ, ವಾಸ್ತವ್ಯಗಳಲ್ಲಿ ನ್ಯೂ ಜೆರ್ಸಿಯ ಹೊಂಡೆಲ್ಲಿನಲ್ಲಿರುವ ಬಿ.ಎಸ್. ಪ್ರಸನ್ನ ಅಥವಾ ಬಾಲ ಪ್ರಸನ್ನರು ನಮಗೆ ಪೂರ್ವಪರಿಚಿತರಲ್ಲ. ಅವರು ವಿದ್ಯಾರ್ಥಿ ದೆಸೆಯಲ್ಲಿ (೧೯೬೦ರ ದಶಕ) ಬೆಂಗಳೂರಿನ ಸರಕಾರೀ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನನ್ನ ತಂದೆ - ಜಿಟಿನಾ ಶಿಷ್ಯರಂತೆ. ಪ್ರಸನ್ನರು ಆ

15 August 2020

ತೇನ್ ಸಿಂಗ್ ಬಿಳಿಮಲೆ ಮತ್ತು ‘ಕಾಗೆ ಮುಟ್ಟಿದ ನೀರು’

ಬಹುಮಂದಿಗೆ ಪಶ್ಚಿಮ ಘಟ್ಟದ ದಿಗ್ಗಜಗಳ (ಕುದುರೆಮುಖ, ಕುಮಾರ ಪರ್ವತ...) ಗಹನತೆ ಅಡಿ, ಮೀಟರ್‍ಗಳಲ್ಲಿ ಹೇಳಿದರೆ ಮುಟ್ಟುವುದಿಲ್ಲ. ಅವರಿಗೆ ನಿತ್ಯ ಕಾಣುವ ಬಲ್ಲೇರಿ, ಕಳಂಜಿಮಲೆ, ಬಿರುಮಲೆ, ಬಂಟಮಲೆಗಳೇ ನಿಜದ ಅಳತೆಗೋಲು. ನಾನು ಅವನ್ನೂ ಅನುಭವಿಸುವ ಸರಣಿಯಲ್ಲಿ, ಒಂದು ಮಳೆ ದಿನದ ಬೆಳಿಗ್ಗೆ ಬಂಟಮಲೆ ಆಯ್ದುಕೊಂಡಿದ್ದೆ. ತಂಡ ನಾಲ್ಕು ಬೈಕೇರಿ, ಪಂಜ ತಲಪಿತ್ತು. ಮತ್ತೆ ಅಲ್ಲಿ ಇಲ್ಲಿ ವಿಚಾರಿಸುತ್ತ ಸುಮಾರು ಹನ್ನೊಂದು ಕಿಮೀ ಕಳೆದು, ಬಿಳಿಮಲೆಯಲ್ಲಿದ್ದ ಪುರುಷೋತ್ತಮರ ಮನೆ ಸೇರಿದ್ದು ಒಂದು ಆಕಸ್ಮಿಕ. ಪುರುಷೋತ್ತಮರು ಆ ದಿನಗಳಲ್ಲಿ ಮಂಗಳೂರು ವಿವಿ ನಿಲಯದಲ್ಲಿದ್ದರು (೧೯೮೭). ಹಾಗಾಗಿ ಅವರು ನಮಗೆ ಮನೆಯಲ್ಲಿ ಸಿಗಲಿಲ್ಲ. ನಾವು ಬೈಕು, ಜಿಗಣೆಗೆ ಬೆದರಿದ ಅಭಯ, ಜತೆಗೆ ದೇವಕಿಯನ್ನು ಪುರುಷೋತ್ತಮರ ತಾಯಿಗೊಪ್ಪಿಸಿ, ಕಾಡು ನುಗ್ಗಿದ್ದೆವು. ಸುಮಾರು ಎರಡು ಗಂಟೆಯ ಅವಧಿಯಲ್ಲಿ, ಶಿಖರ ವಲಯವನ್ನು ತಲಪಿ ಸುತ್ತಾಡಿ, ಬುತ್ತಿಯೂಟ ಮಾಡಿ ಮುಗಿಸಿದ್ದೆವು. ಅನಂತರ ಉತ್ಸಾಹದಲ್ಲಿ ಇಳಿಯುತ್ತ ಮಳೆ, ಮಂಜು, ಹುಲ್ಲು, ಪೊದರುಗಳ ಫಿತೂರಿಯಲ್ಲಿ ದಿಕ್ಕು ತಪ್ಪಿ ತಲಪಿದ್ದು ಎದುರು ಮೈಯ ಏರಿಮಲೆ, ಗುತ್ತಿಗಾರು. ಮತ್ತೆ ಬಾಡಿಗೆ ವಾಹನ ಹಿಡಿದು ಪಂಜಕ್ಕಾಗಿ ಬಿಳಿಮಲೆ ಸೇರಿ, ಮರಳಿದ ಪ್ರಕರಣ ಸುಖಾಂತ ಸಾಹಸವೇ ಅನ್ನಿಸಿತ್ತು. ಆದರೆ.... 

03 July 2020

ಜಿಟಿ ನಾರಾಯಣ ರಾವ್ - ನನಗೆ ದಕ್ಕಿದ್ದು!

ಜಾತಿ ಮತಗಳ ಚಕ್ರ ಸುಳಿ ಮೀರಿ - ೬


ಹುಟ್ಟಿನ ಆಕಸ್ಮಿಕದೊಡನೇ ಸಮಾಜದಲ್ಲಿ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ ಸ್ಥಾನಗಳೂ ಭಾವನಾತ್ಮಕ ಜವಾಬ್ದಾರಿಗಳೂ ಸೇರಿಕೊಳ್ಳುತ್ತವೆ. ಅವನ್ನು ಹೊರತುಪಡಿಸಿ ಒಂದು ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಗಳನ್ನು ಸೋದಾಹರಣವಾಗಿ ಕಾಣಿಸುವ ಉದ್ದೇಶಕ್ಕೇ ಈ ಮಾಲಿಕೆಯನ್ನು ಮೀಸಲಾಗಿರಿಸಿದೆ. ಅದು ಒಂದು ಮಿತಿಯ ಆತ್ಮಕಥನವೂ ಆದದ್ದು ಆಕಸ್ಮಿಕ. ಆದರೆ ಈ ಕೊನೆಯಲ್ಲಿ, ನಾನು ‘ಮೀರಿದವು’ ಅಥವಾ ಸ್ವತಂತ್ರವೆಂದು ನಂಬಿದ ಪ್ರಭಾವಗಳೂ ಬಹುತೇಕ ‘ಮೂಲ ಆಕಸ್ಮಿಕ’ದ ಭಾಗವೇ ಆಗಿರುತ್ತದೆ ಎಂದರಿವಾಯ್ತು. ಅಂಥಾ ತಂದೆಯನ್ನೇ ತಿಳಿದುಕೊಳ್ಳುವ ಪ್ರಯತ್ನದೊಡನೆ, ನನ್ನ ವಿದ್ಯಾರ್ಥಿ ದಿನಗಳ ಉದಾಹರಣೆಗೇ ಸರಣಿಯನ್ನು ಮುಗಿಸುತ್ತಿದ್ದೇನೆ. 

26 March 2020

ಸದಾಶಿವ ನೀಲಕಂಠನಲ್ಲ!


ಚಿತ್ರ ಕೃಪೆ - ತಿಳಿದಿಲ್ಲ
ಆ ಬೆಳಿಗ್ಗೆ (ಸೆಪ್ಟೆಂಬರ್ ೧೧,೨೦೧೯) ಆಕಾಶದಲ್ಲಿ ಮೋಡ ಕಟ್ಟಿದ್ದು ನೋಡಿ ನಾನು ಸೈಕಲ್ ಸರ್ಕೀಟ್ ಕೈ ಬಿಟ್ಟಿದ್ದೆ. ಆದರೆ ಸುಮಾರು ಏಳೂವರೆಯ ಹೊತ್ತಿಗೆ ದೇವಕಿಗೆ ನಳಿನಿಯ ಫೋನ್ ಕರೆ ಬಂತು."ಅಶೋಕ ಭಾವ ಇದ್ದರೆ, ಕೂಡಲೇ ಬೈಕೇರಿ ನಮ್ಮನೆಗೆ ಬರಲಿ. ಸೈಕಲ್ ಬೇಡ". ನಾನು ದಡಬಡ ಬಟ್ಟೆ ಬದಲಿಸಿ, ಬೈಕ್ ತೆಗೆಯುವುದರೊಳಗೆ ದೇವಕಿ "ಏನು ವಿಷಯ" ಎಂದು ಕೇಳಿದ್ದಳು. "ಸದಾಶಿವ ಯೋಗಕ್ಕೆ ಹೋದವರು ಇನ್ನೂ ಬಂದಿಲ್ಲ. ಅದಕ್ಕೆ ಹೋಗುವಾಗ, ಎಂದಿನಂತೆ ಮೊಬೈಲ್ ತೆಗೆದುಕೊಂಡೂ ಹೋಗಿಲ್ಲವಾದ್ದರಿಂದ ವಿಚಾರಿಸುವ ಅವಕಾಶವೂ ಇಲ್ಲ. ನನಗೆ ತುಂಬ ಆತಂಕವಾಗಿದೆ" ಎಂದಷ್ಟೇ ಹೇಳಿದ್ದಳು. ಆತ ಎಲ್ಲೋ ಗೆಳೆಯರೊಡನೆ ಪಟ್ಟಾಂಗದಲ್ಲಿ ಸಮಯದ ಪರಿವೆ ತಪ್ಪಿಸಿಕೊಂಡಿರಬೇಕು ಎಂದುಕೊಳ್ಳುತ್ತಲೇ ನಾನು ಧಾವಿಸಿದೆ. ದಾರಿಯುದ್ದಕ್ಕೂ ನನ್ನ ಬಗೆಗಣ್ಣು, ನನ್ನಷ್ಟೇ ತರಾತುರಿಯಲ್ಲಿ ಮನೆಯತ್ತ ಸ್ಕೂಟರ್ ಓಡಿಸುವ ಸದಾಶಿವನನ್ನೇ ಕಾಣುತ್ತಿತ್ತು. ಆದರೆ ಬಿಜೈ ಹೊಸ ರಸ್ತೆಯಲ್ಲಿನ ‘ರಾಗ’ದಲ್ಲಿ ಸದಾಶಿವನಿರಲಿಲ್ಲ. ನಳಿನಿ ಬಾಗಿಲಿಗೆ ಬೀಗ ಹಾಕಿ, ಹೊರಡಲು ನಿಂತಿದ್ದವಳು, ಉಮ್ಮಳಿಸುತ್ತಿದ್ದ ದುಃಖವನ್ನು ನುಂಗಿಕೊಂಡು, ಸಣ್ಣದಾಗಿ ಪರಿಸ್ಥಿತಿ ಬಿಡಿಸಿಟ್ಟಳು.

13 June 2019

ಗೌರೀಶಂಕರ - ಸೋದರಳಿಯನೊಬ್ಬನ ನೆನಪುಗಳು

ಎ.ಪಿ. ಗೌರೀಶಂಕರ ಇನ್ನಿಲ್ಲ - ೧ 

ಅಂದು (೧೦-೧-೨೦೧೯) ನನ್ನ ನಿತ್ಯದ ಸೈಕಲ್ ಸರ್ಕೀಟಿಗೆ ಬೆಳಿಗ್ಗೆಯೇ ಹೋಗಿದ್ದೆ. ನನ್ನ ಸೋದರ ಮಾವ ಎ.ಪಿ. ಗೌರೀಶಂಕರ (ಶ್ರೀಶೈಲ) ಹಾಗೂ ನನ್ನ (ಅಭಯಾದ್ರಿ) ಮನೆಗಳು ಸ್ವತಂತ್ರವೇ ಇದ್ದರೂ ರೂಢಿಯಲ್ಲಿ ಒಂದೇ ವಠಾರ ಎಂಬಂತೇ ಇವೆ. ಎರಡೂ ಮನೆಗೆ ನಂದಿನಿ ಹಾಲು ತಂದು ಕೊಡುವ ಜವಾಬ್ದಾರಿ ನನ್ನದು. ಹಾಗೇ ಸರ್ಕೀಟಿನ ಕೊನೆಯಲ್ಲಿ, ಎಂದಿನಂತೆ ನಮ್ಮೆರಡು ಮನೆಯ ಹಾಲು ಹಿಡಿದು ಬಂದವನೇ ನಿತ್ಯದಂತೆ ಗೇಟಿನ ಚಿಲಕದ ಛಳಕ್ಕಿನೊಡನೆ "ಪೇರ್ ಪೇರ್" (ಹಾಲು ಹಾಲೂ) ಕೂಗೂ ಹಾಕಿದ್ದೆ. ಮಾಮೂಲಿನಂತಾದರೆ ಒಳಗೆಲ್ಲೋ ಕೆಲಸದಲ್ಲಿರುವ (ಅತ್ತೆ) ದೊಡ್ಡ ದೇವಕಿ, ಕುಶಾಲಿಗೆ ಪ್ರತಿಧ್ವನಿ ಹಾಕುವುದಿತ್ತು. (ಮಾವ, ಎ.ಪಿ. ಗೌರೀ) ಶಂಕರನಿಗೆ ಈಚಿನ ದಿನಗಳಲ್ಲಿ ಕಿವಿ ದೂರವಾಗಿದ್ದರೂ ನನ್ನ ಧ್ವನಿಸ್ತರಕ್ಕೆ ಮಾತ್ರ ಲಯಸಾಧನೆ ಚೆನ್ನಾಗಿಯೇ ಇರುತ್ತಿತ್ತು. ಪದ್ಯಕ್ಕೆ ಎತ್ತುಗಡೆ ಗುರುತಿಸಿದ ಭಾಗವತನ ಉತ್ಸಾಹದಲ್ಲಿ ಅವನೂ "ಬಾಂದೆಯ್....... ಬಂದೇ..." ಪ್ರತಿಕೂಗು ಕೊಡುವುದೂ ಇತ್ತು. ಆದರೆ ಅಂದು ತಾರದಲ್ಲಿ ಕೇಳಿದ್ದು ಒಂದೇ, ದೊಡ್ಡ ಆರ್ತಸ್ವರ! 


20 May 2019

ಕೊನೆಯ ಕೊಂಡಿ ಕಳಚಿತು


ಎ.ಪಿ. ರಮಾನಾಥ ರಾವ್ - ನನ್ನ ನಾಲ್ವರು ಸೋದರ ಮಾವಂದಿರಲ್ಲಿ ಕೊನೆಯವರು ಮತ್ತು ಬದುಕಿದ್ದವರಲ್ಲೂ ಕೊನೆಯವರು, ಈಚೆಗೆ (೧೬-೫-೧೯) ತನ್ನ ೮೨ರ ಹರಯದಲ್ಲಿ, ತೀರಿಹೋದರು. ಬಳಕೆಯ ಸರಳತೆಯಲ್ಲಿ - ‘ರಾಮನಾಥ’, ವಿದ್ಯಾ ದಿನಗಳಲ್ಲಿ ಬಯಸಿ, ಮದ್ರಾಸಿನ (ಇಂದಿನ ಚೆನ್ನೈ) ಪಶುವೈದ್ಯಕೀಯ ಕಾಲೇಜು ಸೇರಿದ್ದ. ಆದರೆ ಪ್ರಯೋಗಕ್ಕಾಗಿ ನಡೆಯುತ್ತಿದ್ದ ಪ್ರಾಣಿ ಹಿಂಸೆ ನೋಡಲಾಗದ ಸಹಜ ಸಾಧು ಸ್ವಭಾವದಲ್ಲಿ ಮುದುರಿ, ಮನೆ ಸೇರಿಕೊಂಡ. ಪಾಲಿನಲ್ಲಿ ಬಂದ ಪಿತ್ರಾರ್ಜಿತ ನೆಲದಲ್ಲೇ (ಮರಿಕೆ ಬಯಲಿನಲ್ಲಿ ‘ಭೂತಗುರಿ’ ಪಾಲು) ನೆಲೆಸಿ, ಸರಳ ಕೃಷಿಕ, ಸಭ್ಯ ಸಾಮಾಜಿಕನಾಗಿಯೇ ಉಳಿದ. ರಾಮನಾಥ ನನಗಿಂತ ಸುಮಾರು ಹದಿನಾಲ್ಕು ವರ್ಷಕ್ಕೆ ಹಿರಿಯ ಹಾಗೂ ಪೂರ್ಣ ಗೌರವ ಪಾತ್ರನಾದರೂ ರೂಢಿಯಂತೆ ಏಕವಚನದ ಸಂಬೋಧನೆಯಲ್ಲೇ ಮುಂದುವರಿಸುತ್ತೇನೆ, ತಪ್ಪು ತಿಳಿಯಬೇಡಿ. 

07 August 2018

ರಾಘವೇಂದ್ರ ಉರಾಳರು ದಿನ ಮುಗಿಸಿದರು


ಏರಿಕಲ್ಲು ನೆತ್ತಿಯಲ್ಲಿ ಸೊಂಟಕ್ಕೆ ಕೈಕೊಟ್ಟು ಬಲಕೊನೆಯಲ್ಲಿ ನಿಂತವರು ಉರಾಳ
೧೯೭೫ರಲ್ಲಿ ನಾನು ಮಂಗಳೂರಿಗೆ ಬಂದಾಗ ವಾಸಕ್ಕೆ ನೆಲೆ ಕೊಟ್ಟದ್ದು ಸಂತ ಅಲೋಶಿಯಸ್ ಕಾಲೇಜಿನ ಹಾಸ್ಟೆಲ್ (ಬಿ.ವಿ. ಕೆದಿಲಾಯರ ಕೃಪೆ). ಆಗ ಅಲ್ಲಿದ್ದ ಹತ್ತಿಪ್ಪತ್ತು ದುಡಿಯುವ ಮಂದಿಗಳಲ್ಲಿ ಒಬ್ಬರಾಗಿ, ಅಷ್ಟೂ ಮಂದಿಗಿಂತ ಹಿರಿಯರಾದರೂ ವೈಚಾರಿಕವಾಗಿ ಸದಾ ಅತ್ಯಾಧುನಿಕರಾಗಿ, ಪರಿಚಯಕ್ಕೆ ಬಂದವರು - ಡಾ| ಕೆ. ರಾಘವೇಂದ್ರ ಉರಾಳ. ಇವರು ವೃತ್ತಿಯಲ್ಲಿ (ಸರಕಾರೀ) ಪಶುವೈದ್ಯನಾಗಿ ಊರೂರು ಸುತ್ತಿದರೂ ಖಾಯಂ ವಾಸ್ತವ್ಯಕ್ಕೆ ಹುಟ್ಟೂರು ಕೋಟ, ಮತ್ತಲ್ಲಿನೊಂದು ಶಾಲೆಯಲ್ಲಿ (ಉಡುಪಿಯ ಸಿಸಿಲಿ ಶಾಲೆ) ಅಧ್ಯಾಪಿಕೆಯಾಗಿದ್ದ ಮಡದಿ ಹಾಗೂ ಮೂರು ಮಕ್ಕಳಿಂದ ಕಳಚಿಕೊಂಡವರಲ್ಲ. ಹಾಗಾಗಿ ನಾನು ಕಂಡಂತೆ, ಇವರಿಗೆ ಐದು ದಿನ ಹಾಸ್ಟೆಲ್, ವಾರಾಂತ್ಯ ಮತ್ತು ವಿಶೇಷ ಸಂದರ್ಭಗಳಲ್ಲಿ ಕೋಟ ರೂಢಿಸಿತ್ತು. ನಾವು ಎರಡು-ಮೂರು ವರ್ಷ ಅಲೋಶಿಯಸ್ ಹಾಸ್ಟೆಲ್‍ನಲ್ಲಿದ್ದೆವು. ಕಾಲೇಜಿಗೆ ಸಂಬಂಧಿಸದವರು ಹಾಸ್ಟೆಲ್ ಬಿಡಬೇಕೆಂದು ಆಡಳಿತ ಮಂಡಳಿ

27 July 2018

ಕರುಣ ಸಂಜೀವ - ಸಂಜೀವ ಸುವರ್ಣ ಅಭಿನಂದನೆ

ದಿನಪೂರ್ತಿ ನಡೆದ ಅಭಿನಂದನಾ ಕಲಾಪಗಳ ಶುದ್ಧ  ವಿಡಿಯೋ ದಾಖಲೀಕರಣ - ಆರು ಭಾಗಗಳಲ್ಲಿ ಲಗತ್ತಿಸಲಾಗಿದೆ. ಹಾಗಾಗಿ ಈ ಬರಹ ವರದಿಯಲ್ಲ, ನನ್ನ ಅನಿಸಿಕೆಗಳು ಮಾತ್ರ


ಅದ್ವಿತೀಯ ಯಕ್ಷಗಾನ ಗುರು-ಕಲಾವಿದ ಬನ್ನಂಜೆ ಸಂಜೀವ ಸುವರ್ಣರಿಗಂದು (೧೫-೭-೧೮) ಅಭಿನಂದನ ಸಮಾರಂಭ - ಕರುಣ ಸಂಜೀವ. ಉಡುಪಿಯ ಪುರಭವನದಲ್ಲಿ ತುಸು ಬೇಗ ಎನ್ನುವ ಬೆಳಿಗ್ಗೆ ಒಂಬತ್ತೂವರೆ ಗಂಟೆಯ ಮುಹೂರ್ತದ ನಿರೀಕ್ಷೆಯಲ್ಲಿ ಎಲ್ಲೆಲ್ಲಿನ ಕಲಾಪ್ರೇಮಿಗಳು, ಸಂಜೀವರ ಅಸಂಖ್ಯ ಶಿಷ್ಯರು ಮತ್ತು ಅಭಿಮಾನಿಗಳು ಬಂದು ಸೇರುತ್ತಲೇ ಇದ್ದರು. ಮಳೆ ಬಿರಿದ ಲವಲವಿಕೆ, ಎದುರು ಜಗುಲಿಯಲ್ಲಿ ದೊಡ್ಡದಾದ ಹೂವಿನೆಸಳುಗಳನ್ನೇ ತುಂಬಿ ಮಾಡಿದ್ದ ದೊಡ್ಡ ಪುಷ್ಪ ವಿನ್ಯಾಸ, ಪಕ್ಕದ
ಭೋಜನಶಾಲೆಯಲ್ಲಿನ ಸರಳ ಉಪಾಹಾರ, ಎಲ್ಲೆಡೆ ಭಾರಿ ಸಂಭ್ರಮ. ಪ್ರೇಕ್ಷಾಂಗಣದಲ್ಲೂ ಜನ ಗಿಜಿಗುಟ್ಟಿ, ಬಹುತೇಕ ತುಂಬಿದ ಭಾವವೇ ಬಂದರೂ ಯಾಕೋ ನಾವು ಸಾಮಾನ್ಯ ಸಮ್ಮಾನ ಸಮಾರಂಭಗಳಲ್ಲಿ ಕಾಣುವ ಅಲಂಕಾರ ಸಾಮಗ್ರಿಗಳ ಸಂತೆ, ಉದಾರ ಕೊಡುಗೆಯಿತ್ತವರ ಸ್ಮರಣ ತಟ್ಟಿಗಳು, ಬೆಳಕಿನ ಹೊಳೆ ಕಾಣಲೇ ಇಲ್ಲ. ವೇದಿಕೆಯ ಮೇಲೆ ಆಚೀಚೆ ಎರಡು ತುಂಡು ಹಲಿಗೆ ಸರಳವಾಗಿ ಸಂದರ್ಭ ಸೂಚಿಸಿದರೆ, ನಡುವಣ ದೊಡ್ಡ ಹಲಿಗೆಯಲ್ಲಿ ಏನೋ ಅಮೂರ್ತ ಚಿತ್ರ. ಉಳಿದಂತೆ ಮಂಕು ಬೆಳಕಿನ ವೇದಿಕೆ

05 March 2018

ಆಭಾಳ ಪ್ರೀತಿಯೊಡನೆ ಬೆಂಗಳೂರು ಪ್ರದಕ್ಷಿಣೆ

(ಚಕ್ರೇಶ್ವರ ಪರೀಕ್ಷಿತ ೧೬)


೧. ಆಭಾ ಕರೆದಮೇಲೇ ಹೋಗದಿರಲಾದೀತೇ?:

ಅಭಯನ ‘ಪಡ್ಡಾಯಿ’ ಚಿತ್ರೀಕರಣದ ಉದ್ದಕ್ಕೆ ರಶ್ಮಿ (ಸೊಸೆ) ಆಭಾ (ಮೊಮ್ಮಗಳು) ನಮ್ಮೊಡನಿದ್ದರು. ನಮ್ಮ ಮನೆಯಲ್ಲೇ ಅವತರಿಸಿ, ಗಾಳಿಯನ್ನು ಕಲಕಿ ಝಾಡಿಸುತ್ತಿದ್ದಂತೆ ಬೆಂಗಳೂರಿಸಿದ್ದ ಮೊಮ್ಮಗು, ಈಗ ಮಗುಚಿ, ಹರಿಯುವಷ್ಟಾಗಿತ್ತು. ಸಹಜವಾಗಿ ಮನೆಯ ನೆಲದಲ್ಲಿ ವಿರಮಿಸಿದ್ದ ಡಬ್ಬಿ, ಚೀಲಗಳು ಹೆದರಿ ಕಾಲ್ಮಣೆ, ಮೇಜುಗಳನ್ನೇರಿ ಕುಳಿತವು. ಕಾಲೊರಸುಗಳು, ಬಟ್ಟೆದೋಟಿಗಳು ಬಚ್ಚಲು, ಹಿತ್ತಲು ಸೇರಿ ಬಾಗಿಲೆಳೆದುಕೊಂಡವು. ಆಭಾ ವಿಕಾಸಪಥದ ಮುಂದಿನ ನಾಲ್ಕೆಂಟು ದಿನಗಳು (ಸರೀಸೃಪಗಳು ನಾಲ್ಗಾಲಿನವಾದ) ಜೀವವಿಕಾಸ ಬೃಹನ್ನಾಟಕದ ಕಿರುರೂಪಕವೇ ಆಗಿತ್ತು. ಆಕೆ
ನಿರಾತಂಕವಾಗಿ ತೆವ
ಳುತ್ತಿದ್ದ ಕುರ್ಚಿಯ ತಳ ಈಗ ತಲೆಗೆ ಹೆಟ್ಟತೊಡಗಿತ್ತು; ನೆಲಕ್ಕೆ ಕೈಕೊಟ್ಟು ಎದೆ ಎತ್ತುತ್ತಿದ್ದಳು. ನುಸುಳಿ ಸಾಗುತ್ತಿದ್ದ ಟೀಪಾಯ್ ಸಂದು ಇರುಕಿಸಿತ್ತು; ನಾಲ್ಗಾಲು ತೊಡಗಿದ್ದಳು. ಕುರ್ಚಿ ಹತ್ತಿ ಕುಳಿತಳು, ಟೀಪಾಯ್ ಮೇಜುಗಳೆಲ್ಲವೂ ಕೈಯಾಸರೆಯಲ್ಲಿ ನಿಲ್ಲುವ ತಾಣಗಳಾದವು. ಅಗಮ್ಯವೆಂದೇ ಬಿಟ್ಟಿದ್ದ ಮಹಡಿಗೇರುವ ಸೋಪಾನಸರಣಿಯ ಬುಡಕ್ಕೆ ಹೋಗಿ ಈಗ ಆಕೆ “ಹತ್ತಿ” ಎಂದು ಮೊಣಕಾಲಿಕ್ಕಿದರೆ ಸಾಕು, ಬೆಂಗಾವಲಿನವರು ಥೇಟ್ ‘ವಿಕೆಟ್ ಕೀಪರ್’ಗಳಾಗಲೇಬೇಕು! ಎರಡೂ ಹಸ್ತ ಅರಳಿಸಿ ಹಿಂದುರುಳದಂತೆ ಕಾಯಲೇಬೇಕು. ನಾವು ತಿನ್ನುವ ಯಾವುದಕ್ಕೂ ಅವಳ ಪೂರ್ಣ ತೆರೆದ ಬಾಯಿ ಪಾಲು ಕೇಳುತ್ತಿತ್ತು. ಹಾಗೆಂದು ಕುಶಿ ಹೆಚ್ಚಿ ಯಾವುದನ್ನೂ ಇದ್ದಂತೆ ಕೊಡುವಂತಿಲ್ಲ; ಇರುವ ಮೂರೂವರೆ ಹಲ್ಲು ತಪ್ಪಿಸಿ ಗಂಟಲು ಕಟ್ಟಿಬಿಟ್ಟರೆ? ಮೆತ್ತಗಿನ ದೋಸೆ, ರೊಟ್ಟಿಯಾದರೂ ಹಿಸಿದು ಕೊಡಬೇಕು. ಚಕ್ಕುಲಿ, ಚಿಪ್ಸ್ ಕುಟ್ಟಾಣಿಗಿಕ್ಕಿ ಪುಡಿ ಮಾಡಿ ಕೊಟ್ಟರೆ "ಎಷ್ಟು ತಿಂದರೂ ಸಾಲದು"! "ಆಂ" (=ತಿನ್ತೇನೆ?) ಸೌಮ್ಯ ಅರ್ಜಿ, "ಆಂಪುಡ್ಕ" (=ತಿನ್ನುವುದನ್ನು ಕೊಡೋ?) ಹಕ್ಕೊತ್ತಾಯ!

26 February 2018

ಲಕ್ಷ್ಮಿ ಭಾಗ್ಯ ಮತ್ತು ಸಮಕಾಲೀನ ಟಿಪ್ಪಣಿಗಳು


೧. ಭಾಗ್ಯದ ‘ಲಕ್ಷ್ಮಿ’ (ಅಮ್ಮನ ಹೆಸರು ಕೂಡಾ) ನೆನಪುಗಳಲ್ಲಿ ಮೈದಳೆದ ಪರಿ
ಹತ್ತು ವರ್ಷಗಳ ಹಿಂದೆ ತಂದೆ, ಈಚೆಗೆ ತಾಯಿಯ ವಿಯೋಗವನ್ನು ನಾವು ಅತ್ರಿ ಸೋದರರು (ಅಶೋಕ, ಆನಂದ, ಅನಂತ) ಸ್ವೀಕರಿಸಿದ ಕ್ರಮ ಲೋಕಮುಖಕ್ಕೆ ಒಂದೇ ಇತ್ತು. ಅಂದರೆ, ಇಬ್ಬರ ದೇಹಗಳನ್ನೂ ವೈದ್ಯಕೀಯ ಆಸ್ಪತ್ರೆಗೆ ದಾನ ಕೊಟ್ಟೆವು. ಅವರಿಬ್ಬರ ಇಚ್ಛೆ ಮತ್ತು ನಮ್ಮ ನಂಬಿಕೆಯ ಭಾಗವಾಗಿಯೂ ಸಾಂಪ್ರದಾಯಿಕ ಸೂತಕ ಮತ್ತು ಶುದ್ಧಕ್ರಿಯೆಗಳನ್ನು ಕೈಗೊಳ್ಳಲಿಲ್ಲ. ಇದ್ದಷ್ಟು ಕಾಲ ತಾಯಿಯ ಬಾಹ್ಯ ಅಲಂಕಾರ ಮತ್ತು ಸಾಮಾಜಿಕ ಸ್ಥಿತಿಗಳಲ್ಲಿ ಯಾವುದೇ ಊನ ಬಾರದಂತೆ ಆಕೆಯ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದೆವು. ಇದರ ಮೇಲೆ.....

ಅಪ್ಪಮ್ಮರ ಜತೆಗಿದ್ದು, ಮುಖ್ಯವಾಗಿ ಅವರ ಕಷ್ಟಗಳಲ್ಲಿ ನೇರ
ಭಾಗಿದಾರಿಕೆ ವಹಿಸಿಕೊಂಡ ಅನಂತ - ನಮ್ಮೂವರಲ್ಲಿ ಕಿರಿಯ. ಹಿರಿಯನಾದ ನಾನು ಮತ್ತು ಎರಡನೆಯವನಾದ ಆನಂದ ಹುಟ್ಟಿನ ಆಕಸ್ಮಿಕದ ಹಿರಿತನವನ್ನು ಅನಂತನ ಕ್ರಿಯಾ ಹಿರಿತನಕ್ಕೆ ಎಂದೋ ನಿಸ್ಸಂದೇಹವಾಗಿ ಒಪ್ಪಿಸಿದ್ದೆವು. ಹೋದವರಿಗಿಂತ ಇರುವವರ ಜೀವನ ಹೆಚ್ಚು ಹಸನಾಗಬೇಕೆಂಬ ಮಾತಿದೆ. ತಂದೆಯೂ ಈ ಮಾತನ್ನು ಒಪ್ಪುತ್ತಿದ್ದರು. ಅದಕ್ಕೇ ಅವರು ಸ್ವಂತಕ್ಕೆ ಯಾವ ವೈದಿಕ ಆಚರಣೆಗಳನ್ನು ಇಟ್ಟುಕೊಳ್ಳದಿದ್ದರೂ ತಾಯಿಯ ಪೂಜೆ, ವ್ರತಾದಿ ನಂಬಿಕೆಗಳಿಗೆ ಎಂದೂ ಭಂಗ ಉಂಟುಮಾಡುತ್ತಿದ್ದಿಲ್ಲ. ಅದೇ ರೀತಿಯಲ್ಲಿ, ಮೊದಲು ಅಪ್ಪನ ಉತ್ತರಕ್ರಿಯಾ ಆಶಯಕ್ಕೆ, ಮುಖ್ಯವಾಗಿ ಅಮ್ಮನ ಸಣ್ಣ ಆಸೆಗಳನ್ನೂ ಅನಂತರ ಅಮ್ಮನ ವಿದಾಯದಂದು ಅನಂತನ ಅಗತ್ಯಗಳಿಗಾಗಿಯೂ ಸಣ್ಣ

19 February 2018

ಕಾಯಿಲ ಮನಸ್ಕತೆಗೆ ಪರಮಾನಂದ-ದಾರಿ


೧೯೯೦ರ ಏಪ್ರಿಲ್ ತಿಂಗಳ ಉರಿಉರಿ ಬೇಸಗೆಯಲ್ಲಿ, ನಾವು ಆರು ಜನ (ನನ್ನ ಬೆಂಗಾವಲಿಗೆ ದೇವಕಿ, ಉಳಿದಂತೆ ಬಾಲಕೃಷ್ಣ ಬೆನ್ನಿಗೆ ವೆಂಕಟ್ರಮಣ ಉಪಾಧ್ಯ ಮತ್ತು ವಿಷ್ಣು ನಾಯಕ್ ಬೆನ್ನಿಗೆ ರಾಜಶೇಖರ ರಾವ್), ಮೂರು ಮೋಟಾರ್ ಸೈಕಲ್ಲುಗಳಲ್ಲಿ, ಬಹುತೇಕ ಭಾರತವನ್ನು ನಡುವಿನಿಂದ ಉದ್ದಕ್ಕೆ ಸೀಳಿದಂತೆ ದಾರಿ, ಸ್ಥಳ ಆಯ್ದುಕೊಂಡು ಭಾರತ ದರ್ಶನಕ್ಕೆ ಹೊರಟಿದ್ದೆವು. (ಕ್ಷಮಿಸಿ, ಪ್ರವಾಸ ಕಥನ ಇನ್ನೂ ಬರೆಯುವುದಾಗಿಲ್ಲ, ಇದು ಆ ಉದ್ದೇಶದ್ದೂ ಅಲ್ಲ.) ದಿನಕ್ಕೆ ಸರಾಸರಿ ಮುನ್ನೂರೈವತ್ತು ಕಿಮೀ ಓಟ, ಸ್ಥಳವೀಕ್ಷಣೆ, ಬಹುತೇಕ ಸಿಕ್ಕ ತಿನಿಸು, ಹೋಟೆಲ್ ವಾಸ - ಚೆನ್ನಾಗಿಯೇ ಸಾಗಿತ್ತು. ಹುಬ್ಬಳ್ಳಿ, ಬಿಜಾಪುರ, ಶೋಲಾಪುರ, ಔರಂಗಾಬಾದ್, ಇಂದೋರ್, ಭೋಪಾಲ್, ಶಿಯೋಪುರ್, ಸವಾಯ್ ಮಾಧೋಪುರ್, ಜೈಪುರ್, ಆಗ್ರಾಕ್ಕಾಗಿ ದಿಲ್ಲಿ ಸಾಧಿಸಿದ್ದೆವು. ನಮ್ಮ ಬಹುತೇಕ ವೀಕ್ಷಣಾ ತಾಣಗಳೆಲ್ಲ ಪ್ರಾಕೃತಿಕ ಅಥವಾ ಐತಿಹಾಸಿಕ  ವೈಶಿಷ್ಟ್ಯಗಳೇ ಆದ್ದರಿಂದ ನಡಿಗೆಯ ಶ್ರಮವೂ ಏಪ್ರಿಲ್ ಮೇ ತಿಂಗಳ ಉರಿಬಿಸಿಲಿನ ಹೊಡೆತವೂ ಸಾಕಷ್ಟು ಇತ್ತು. ದಿಲ್ಲಿಯಲ್ಲಿ ‘ಬಸ್ ಪ್ಯಾಕೇಜ್’ನ ನಗರ ದರ್ಶನ, ಬೈಕುಗಳಿಗೊಂದು ಸಮಗ್ರ ಪುನಶ್ಚೇತನವೆಂದು ಎರಡೋ ಮೂರೋ ದಿನ ಬಿಡುವಿಟ್ಟುಕೊಂಡಿದ್ದೆವು. ಅಲ್ಲಿನ ಕೊನೆಯ ರಾತ್ರಿ ನನಗೆ, ಉಂಡದ್ದು ಹೆಚ್ಚುಕಮ್ಮಿಯಾಯ್ತೋ ಒಟ್ಟು ಪಯಣದ ಶ್ರಮ ಪ್ರತಿಫಲಿಸಿತೋ ಗೊತ್ತಿಲ್ಲ, ಒಂದೆರಡು ವಾಂತಿ, ಬೇಧಿ ಆಯ್ತು. ಬೆಳಿಗ್ಗೆ ಎಂದಿನ ಶಿಸ್ತು (ಸುಮಾರು ನಾಲ್ಕು- ಐದು ಗಂಟೆಗೇ ನಾವು ಹೊರಟುಬಿಡುತ್ತಿದ್ದೆವು) ಉಳಿಸಿಕೊಳ್ಳಲಾಗಲಿಲ್ಲ. ಆದರೆ ವೈದ್ಯಕೀಯ ಸಲಹೆಗೆ ಹೋಗದೆ, ಸ್ವಯಂ

29 January 2018

ಕಿನ್ನಿಕಂಬಳವೆಂಬ ಹಳ್ಳಿಯ ಮಿನುಗು ತಾರೆ ಬಾಗಲೋಡಿ ದೇವರಾವ್


                                                                                                           - ಕೆ.ಪಿ.ರಾವ್ಕಂಡಂತೆ

 ಎಂಟನೆಯವಯಸ್ಸಿನದೇವರಾಯರುತಂದೆಬಾಗಲೋಡಿಕೃಷ್ಣರಾಯರೊಡನೆ.
(ಚಿತ್ರಕೃಪೆನರಸಿಂಗರೈಕಿನ್ನಿಕಂಬಳ. 1935 ಗ್ರೂಪ್ಫೋಟೋದಿಂದ.)
ಅರುವತ್ತು ತಲಪುವ ಮೊದಲೇ, ಜುಲೈ1985 ರಲ್ಲಿ ನಮ್ಮನ್ನಗಲಿದ ಬಾಗಲೋಡಿ ದೇವರಾವ್ಕನ್ನಡ ಸಣ್ಣ ಕಥೆಗಳ ಲೋಕದಲ್ಲಿ ತನ್ನದೇ ವಿಶಿಷ್ಟ ಛಾಪನ್ನು ಉಳಿಸಿಹೋದವರು. ಪ್ರಖರ ವೈಚಾರಿಕತೆಯೊಂದಿಗೆ ಉತ್ಕಟ ಮಾನವ ಪ್ರೇಮವನ್ನು ಅವಲಂಬಿಸಿದ, ಕರಾವಳಿಯ ಮಾತುಗಾರಿಕೆಯಲ್ಲಿ ಸಾಮಾನ್ಯವಾದ ವ್ಯಂಗ್ಯಮಿಶ್ರಿತ ಹಾಸ್ಯ ಪ್ರಜ್ಞೆಯ ಅವರ ಕಥೆಗಳು ಕನ್ನಡದ ಸಾರಸ್ವತ ಲೋಕಕ್ಕೆ ಪ್ರಮುಖ ಕೊಡುಗೆಯೆಂದು ನಾನು ಭಾವಿಸಿದ್ದೇನೆ. ಎಳವೆಯಲ್ಲಿ ಪಂಜೆಯವರಿಂದ ಕಥಾ ರಚನೆಯ ಸ್ಫೂರ್ತಿ ಪಡೆದು, ಮಾಸ್ತಿಯವರ ಪ್ರೋತ್ಸಾಹದಿಂದ ಕನ್ನಡ ಕಥೆಗಳ ಬರವಣಿಗೆಗೆ ಮೊದಲಿಟ್ಟ ದೇವರಾಯರು ಮರೆಯಲಾಗದ ಸಾಹಿತ್ಯ ಸೃಷ್ಟಿ ಮಾಡಿದರು. ಭಾಗ್ಯವಶಾತ್ದೇವರಾಯರೂ ನಾನೂ ಒಂದೇ ಊರಿಗೆ ಸೇರಿದವರು, ಪ್ರತ್ಯಕ್ಷ ಮತ್ತು ಪರೋಕ್ಷ ಗುರುವಾಗಿ ನನಗೆ ಕಲಿಕೆಯ ದಾರಿತೋರಿಸಿದವರು.

22 January 2018

ಆಧುನಿಕ ಯುಗದಲ್ಲಿ ಸಂಸ್ಕೃತದ ಉಪಯುಕ್ತತೆ


(ಬಾಗಲೋಡಿಯವರ ವೈಚಾರಿಕ ಚಿಂತನೆಗಳು ೨)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೨೦)
[ಮಂಗಳೂರು ವಿಶ್ವವಿದ್ಯಾಲಯದ ‘ಆಯುರ್ವೇದ ಭೂಷಣ ಎಂ.ವಿ. ಶಾಸ್ತ್ರೀ ಸ್ಮಾರಕ ಆಯುರ್ವೇದ ಮತ್ತು ಸಂಸ್ಕೃತ ಪೀಠ’ ಇದರ ವತಿಯಿಂದ ದೇವರಾಯರು ಮೂರನೆಯ ಆಹ್ವಾನಿತ ಉಪನ್ಯಾಸವನ್ನು ೧೫ ಮಾರ್ಚ್ ೧೯೮೫ರಂದು ನೀಡಿದರು - ಭಾಷೆ ಇಂಗ್ಲಿಷ್, ವಿಷಯ Utility of Sanskrit in Modern Age. ಧ್ವನಿ ಸುರುಳಿಯಲ್ಲಿ ದಾಖಲಾಗಿದ್ದ ಉಪನ್ಯಾಸದ ಪಾಠವನ್ನು ಲಿಪ್ಯಂತರಿಸಿ ಮುದ್ರಣಕ್ಕೆ ಅಣಿ ಮಾಡಿದವರು ಎಸ್. ಕೃಷ್ಣಮೂರ್ತಿ, ವಿ.ಆರ್. ಹೆಬ್ಬಾರ್ ಮತ್ತು ಪಿ. ಸೇತುಮಾಧವರಾವ್. ದೇವರಾಯರು ಅದೇ ತರುಣದಲ್ಲಿ ವಿಧಿವಶರಾದ್ದರಿಂದ (೨೫ ಜುಲೈ ೧೯೮೫) ಮುದ್ರಣ ಪ್ರತಿಯನ್ನು ಅವರು ಓದಿ ಪರಿಷ್ಕರಿಸುವುದು ಸಾಧ್ಯವಾಗಲಿಲ್ಲ. ಉಪನ್ಯಾಸದ ಹೊತ್ತಗೆಯನ್ನು ವಿಶ್ವವಿದ್ಯಾಲಯ ಪ್ರಕಟಿಸಿದೆ (೧೫ ಜನವರಿ ೧೯೮೯. BagaloDi Deva Ra0 - A profile ಎಂಬ ಲೇಖನವೂ (ಬರೆದವರು ಅವರ ಸೋದರಳಿಯ ಶ್ರೀ ವಿ. ರಘುಚಂದ್ರ ಹೆಬ್ಬಾರ್) ಇದರಲ್ಲಿದೆ. ಉಪನ್ಯಾಸದ ಪೂರ್ಣ ಪಾಠವನ್ನು ಇಲ್ಲಿ ಕೊಟ್ಟಿದೆ - ಜಿ.ಟಿ.ನಾ]

15 January 2018

ಅಮೆರಿಕದಲ್ಲಿ ನೀಗ್ರೊ ಜನರ ದುಃಖಪರಂಪರೆ

(ಬಾಗಲೋಡಿಯವರ ವೈಚಾರಿಕ ಚಿಂತನೆಗಳು ೧)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೧೯)

-ಬಾಗಲೋಡಿ ದೇವರಾವ್

[ಇದು ಜಾನ್ ಗುಂಥರ್ ಎಂಬ ಜಗದ್ವಿಖ್ಯಾತ ಗ್ರಂಥಕರ್ತನ ಇನ್ಸೈಡ್ ಯು.ಎಸ್.ಎ ಎಂಬ ಗ್ರಂಥದಿಂದ ಸಂಗೃಹೀತವಾದುದು. ಈತ ಇನ್ಸೈಡ್ ಯುರೋಪ್, ಇನ್ಸೈಡ್ ಏಷ್ಯಾ, ಇನ್ಸೈಡ್ ಲ್ಯಾಟಿನ್ ಅಮೆರಿಕಾ ಮೊದಲಾದ ಪುಸ್ತಕಗಳನ್ನೂ ಬರೆದಿದ್ದಾನೆ. ಸತ್ಯಸ್ಥಿತಿಯನ್ನು ನಿರ್ದಾಕ್ಷಿಣ್ಯವಾಗಿ ಬಯಲಿಗೆ ಎಳೆಯುವುದು ಈತನ ವೈಶಿಷ್ಟ್ಯ. 

ಇದರೊಡನೆ ಅಮೆರಿಕ ದೇಶದ ನೀಗ್ರೋ ಸಂಘದ ಕಾರ್ಯದರ್ಶಿಯೂ ಶ್ರೇಷ್ಠ ಪತ್ರಿಕಾ ವ್ಯವಸಾಯಿಯೂ ಆದ ವಾಲ್ಟನ್ ವೈಟ್ ಮಹಾಶಯನ ಇನ್ವೆಸ್ಟಿಗೇಟ್ ಲಿಂಚಿಂಗ್ಸ್ ಎಂಬ ವರದಿಯಿಂದಲೂ ರಿಚರ್ಡ್ ರೈಟ್ ಎಂಬ ನೀಗ್ರೋ ಲೇಖಕನ ದಿ ಎಥಿಕ್ಸ್ ಆಫ್ ಲಿವಿಂಗ್ ಜಿಮ್ ಕ್ರೊ ಎಂಬ ಆತ್ಮಕಥೆಯ ಪ್ರಸಂಗಗಳಿಂದಲೂ ವಸ್ತುವನ್ನು ಸಂಗ್ರಹಿಸಿದೆ - ಲೇಖಕ]

ಈಗ ಮುಂದೆ ವಿವರಿಸುವ ನೀಗ್ರೋ ಜನರ ದುಃಖ ಪರಂಪರೆ ಚಾರಿತ್ರಿಕವಲ್ಲ. ಪ್ರಾಚೀನಕಾಲದ ಗತಪುರಾಣವಲ್ಲ. ಇದೇ ೨೦ನೆಯ ಶತಮಾನದ ಪ್ರಜಾಪ್ರಭುತ್ವದ ಯುಗದಲ್ಲಿ ಸ್ವಾತಂತ್ರ್ಯದ ನಾಡೆಂದು

11 January 2018

ಅಮ್ಮನ ವಿದಾಯದೊಡನೆ ಉಕ್ಕಿದ ನುಡಿಗಳು

ಜೀವನವೇ ಶಿಕ್ಷಣ, ಮನೆಯೇ ಪಾಠಶಾಲೆ ಎನ್ನುವ ಕಲ್ಪನೆಯಲ್ಲಿ ಮಕ್ಕಳಾದ ನಮಗೆ (ಅಶೋಕ, ಆನಂದ ಮತ್ತು ಅನಂತ - ವರ್ಧನರುಗಳಿಗೆ) ಅಪ್ಪ - ಜಿ.ಟಿ.ನಾರಾಯಣ ರಾವ್, ಸದಾ ಘನ ಆದರ್ಶವಾಗಿದ್ದರು. ಆದರ್ಶವನ್ನು ಸಾಧಿಸುವ ದಿಶೆಯಲ್ಲಿ ಮೊನ್ನೆಯವರೆಗೂ (೧-೧-೨೦೧೮), ಅಂದರೆ ತನ್ನ ೮೭ನೇ ಹರಯದವರೆಗೂ ನಿರಂತರ ಸಮನ್ವಯಕಾರಳಾಗಿ ನಿಂತಾಕೆ ಅಮ್ಮ - ಜಿ. ಲಕ್ಷ್ಮಿ ನಾ. ರಾವ್. ಅಪ್ಪ ಸ್ವಂತ ಅನುಷ್ಠಾನಕ್ಕೇ - ಪರೋಪದೇಶಕ್ಕಲ್ಲ - ರೂಢಿಸಿಕೊಂಡ ಕಠಿಣ ಶಿಸ್ತು, ತಾಯಿಯನ್ನೂ ಸೇರಿಸಿದಂತೆ ನಮ್ಮೆಲ್ಲರನ್ನು ಗಾಢವಾಗಿಯೇ ಪ್ರಭಾವಿಸಿತ್ತು. ಅದನ್ನು ತಮ್ಮ ಮದುವೆಯಾದಂದಿನಿಂದ (೧೯೫೧), ಅಂದರೆ ೬೬ ವರ್ಷಗಳ ಉದ್ದಕ್ಕೂ ಒಂದಿಷ್ಟೂ ಕುಂದಿಲ್ಲದಂತೆ ಕೌಟುಂಬಿಕ ನಿರ್ವಹಣಾ ಸೂತ್ರವಾಗಿಸಿದಾಕೆ ಅಮ್ಮ.