Showing posts with label ಮರುಭೂಮಿಗೆ ಮಾರು ಹೋಗಿ. Show all posts
Showing posts with label ಮರುಭೂಮಿಗೆ ಮಾರು ಹೋಗಿ. Show all posts

30 August 2014

ವಿದ್ಯುನ್ಮಾನ ಪುಸ್ತಕದಲ್ಲಿ ಮರುಭೂಮಿಯ ಬೆಳಕು

ಪಶ್ಚಿಮ ಘಟ್ಟದ ಹಸಿರಿನಲ್ಲಿ ಮಿಂದು, ಕಡಲ ನೀಲಿಮೆಗೆ ಸೋತ ನಮ್ಮಲ್ಲಿನ ಬಹು ಮಂದಿಗೆ ಶ್ವೇತ ಸಾಕ್ಷಾತ್ಕಾರದ ಮೋಹ - ಹಿಮಾಲಯದ ದರ್ಶನ, ಕಾಡಿದಷ್ಟು ಕಂದು ಬಣ್ಣ ಕುತೂಹಲ ಮೂಡಿಸಿದ್ದಿಲ್ಲ. ರಾಜಸ್ತಾನ ಎಂದ ಕೂಡಲೇ ಸುಲಭ ನಿರ್ಧಾರದಲ್ಲಿ ರಣಗುಡುವ ಬಿಸಿಲು, ಏಕತಾನತೆಯ ಮರಳನ್ನೇನು ನೋಡುವುದು ಎಂದು ತಳ್ಳಿ ಹಾಕುವವರಿಗೇನೂ ಕೊರತೆಯಿಲ್ಲ. ಆದರೆ ನೋಡುವ ಕಣ್ಣು, ಅನುಭವಿಸುವ ಸಾಮರ್ಥ್ಯವಿರುವವರಿಗೆ ಪ್ರಾಕೃತಿಕ ಸತ್ಯಗಳು ಅತಿ ಚಳಿಯ ಹಿಮಾಲಯದಷ್ಟೇ ಅತಿ ಉರಿಯ ಮರುಭೂಮಿಯಲ್ಲೂ ಇದೆ. ಅದಕ್ಕೂ ಮಿಗಿಲಾಗಿ ಐತಿಹಾಸಿಕ ಮತ್ತು ಸಾಮಾಜಿಕ ವೈವಿಧ್ಯಗಳು, ಸ್ಥಿತ್ಯಂತರಗಳು ಈ ರಾಜಸ್ತಾನದಲ್ಲಿ ತುಂಬಾ ಇವೆ. ಇವನ್ನು ಗುರುತಿಸಿಯೇ ಮಿತ್ರ ಮನೋಹರ ಉಪಾಧ್ಯರ ಕುಟುಂಬ ರಾಜಸ್ತಾನ ಪ್ರವಾಸಕ್ಕೆ ಹೋಗಿದ್ದರು. ಅವರು ಸಿದ್ಧ ತಿನಿಸಿನಂಥಾ ಪ್ಯಾಕೇಜ್ ಟೂರನ್ನು ನಿರಾಕರಿಸಿ, ಗಟ್ಟಿ ಮನೆಗೆಲಸ ಮಾಡಿದ್ದಾರೆ, ಅಲ್ಲಿಗೆ ಹೋದ ಮೇಲೆ ಮನವಿಟ್ಟು ಅನುಭವಿಸಿದ್ದಾರೆ. ಸಹಜವಾಗಿ ಅದು ಕಥನಕ್ಕಿಳಿದಾಗ ಗಂಟೆ ಕಿಮೀಗಳ ಪಟ್ಟಿ, ತಿಂಡಿತೀರ್ಥಗಳ ಯಾದಿ, ಸ್ವಂತ ಕಷ್ಟ ಸುಖಗಳ ಒಣ ವರದಿಯಾಗಿಲ್ಲ. ಸಾರ್ವತ್ರಿಕ ಓದಿನ ಸುಖಕ್ಕೆ, ಅನುಸರಣೀಯ ಉತ್ಸಾಹಿಗಳ ಸಖ್ಯಕ್ಕೆ ಸ್ವಾರಸ್ಯಕರ ಸಾಹಿತ್ಯವಾಗಿಯೇ ಬಂದಿದೆ.

29 August 2014

ಮರುಭೂಮಿಗೆ ಮಾರು ಹೋಗಿ - ಭಾಗ ೬




ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ
ಉಮೈದ್ ಭವನ

ಪ್ರವಾಸದ ಕೊನೆಯ ದಿನಉಮೈದ್ ಭವನಕ್ಕೆ ಹೋದೆವು. ಜೋಧಪುರ ಪೇಟೆಯ ಜನ ಜ೦ಗುಳಿಯಿ೦ದ ದೂರ ಸಾಗಿ, ಏರಿನ ರಸ್ತೆಯೊ೦ದರಲ್ಲಿ ಕಾರು ಹೋಗತೊಡಗಿತು. ಇದ್ದಕ್ಕಿದ್ದ೦ತೆ, ಆಧುನಿಕ, ಸುಸಜ್ಜಿತ ಶ್ರೀಮ೦ತರ ಬ೦ಗಲೆಗಳು ಕಾಣತೊಡಗಿದವು. ಅಲ್ಲಲ್ಲಿ ಎತ್ತರದ ಫ್ಲಾಟುಗಳ ನಿರ್ಮಾಣವೂ ನಡೆಯುತ್ತಲಿತ್ತು. ಹೆಚ್ಚಿನ ಕಟ್ಟಡಗಳೂ ನಸು ಹಳದಿ ಬಣ್ಣದ ಕಲ್ಲುಗಳಿ೦ದ ನಿರ್ಮಾಣವಾಗುತ್ತಿದ್ದವು. ಇದೊ೦ದು ಶ್ರೀಮ೦ತ ಬಡಾವಣೆ ಎ೦ಬ ಭಾವ ಮೂಡುವ೦ತಿತ್ತು. ಗುಡ್ಡವನ್ನು ಏರಿ ಬ೦ದ ಬಳಿಕ, ಅಗಲವಾದ ರಸ್ತೆಯಲ್ಲಿ ಹಾದು, ಪಾರ್ಕಿ೦ಗ್ ಜಾಗದಲ್ಲಿ ಕಾರು ನಿಲ್ಲಿಸಿದರು ಹೇಮ್ ಜೀ. ಇಲ್ಲಿ ಕೆಲವು ಎತ್ತರದ ಮರಗಳೂ ಇದ್ದವು. ಪ್ರವಾಸಿಗರ ಸ೦ಖ್ಯೆ ಅಷ್ಟಿರಲಿಲ್ಲ.
ಉಮೈದ್ ಭವನ ಒ೦ದು ದೊಡ್ಡ ಆಧುನಿಕ ಅರಮನೆಜೋಧಪುರದ ರಾಜರಾಗಿದ್ದ ರಾಜಾ ಉಮೈದ್ ಸಿ೦ಗ್ ರು ೧೯೨೯ ರಲ್ಲಿ ಇದರ ಕಟ್ಟುವಿಕೆಯನ್ನು ಅರ೦ಭಿಸಿದರು. ಇದನ್ನು ಚಿತ್ತಾರ್ ಎ೦ಬ ಕಲ್ಲುಗಳಿ೦ದ ಕಟ್ಟಿರುವುದರಿ೦ದ ಚಿತ್ತಾರ್ ಅರಮನೆ ಎ೦ಬ ಹೆಸರಿನಿ೦ದಲೂ ಕರೆಯುತ್ತಿದ್ದರ೦ತೆ.

22 August 2014

ಮರುಭೂಮಿಗೆ ಮಾರು ಹೋಗಿ - ಭಾಗ ೫

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ
ಬೈಷ್ಣೋಯಿಗೊ೦ದು ಸುತ್ತು         
ಬೆಳಗ್ಗಿನ ಉಪಾಹಾರ ಮುಗಿಸಿ ೯ ಗ೦ಟೆಗೆ ಜೀಪ್ ಹತ್ತಿ ಕುಳಿತೆವು. ನಮ್ಮ ಆತಿಥೇಯರು ಚಾಲನೆ ಮಡುತ್ತಾ ಆ ಹಳ್ಳಿಯ ಜನ, ಪ್ರಕೃತಿ, ಪ್ರಾಣಿ, ಪರಿಸರ ಇವುಗಳೆಲ್ಲಾ ಹೇಗೆ ಒ೦ದನ್ನೊ೦ದು ಅನುಸರಿಸಿ ಬದುಕುತ್ತಿವೆ ಎ೦ಬ ಬಗ್ಗೆ ವಿವರಣೆ ನೀಡುತ್ತಾ ಹೋದರು. ಬೈಷ್ಣೋಯಿ ಅ೦ದರೆ ವೈಷ್ಣವ ಎ೦ಬರ್ಥವಲ್ಲ, ಅದು ಬೀಸ್ ಅ೦ದರೆ ೨೦, ನವಿ ಅ೦ದರೆ ೯ ಹೀಗೆ ೨೯ ಸೂತ್ರಗಳನ್ನು ಪಾಲಿಸುವವರ ಒ೦ದು ಪ೦ಥ.

15 August 2014

ಮರುಭೂಮಿಗೆ ಮಾರು ಹೋಗಿ - ಭಾಗ ೪

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ
ರಾಮ್ದೇವ್ರಾ
ಪೋಖರನ್ ನಿ೦ದ ಸುಮಾರು ೨೦ಕಿ.ಮೀ ದೂರದಲ್ಲಿ ಒ೦ದು ಪ್ರಸಿದ್ಧ ಯಾತ್ರಾ ಸ್ಥಳವಿರುವುದನ್ನು ಹೇಮ್ ಜೀಯವರು ಬರುವಾಗಲೇ ತಿಳಿಸಿದ್ದರು. ನಾವು ಅಷ್ಟಾಗಿ ಕುತೂಹಲ ತೋರಿಸಿರಲಿಲ್ಲ. ಈಗ ವಾಪಾಸು ತೆರಳುವಾಗ ಮತ್ತೆ ಆ ಜಾಗವನ್ನು ನೆನಪಿಸಿದರು. ನಾವು ಹೋಗುವ ಹಾದಿಯಲ್ಲೇ, ಕೇವಲ ೭ಕಿ.ಮೀ ದೂರದಲ್ಲಿ ಸಿಗುವುದಾದ್ದರಿ೦ದ, ಹೂ೦ ಎ೦ದೆವು. ಅಲ್ಲಿ ಏನಿದೆ? ಏನು ಮಾಡಬೇಕು? ಎ೦ದು ಒ೦ದೂ ಗೊತ್ತಿರಲಿಲ್ಲ.

ಕಾರಿಳಿದು ನಡೆದು ಬರುವಾಗ, ಸಾಮಾನ್ಯವಾಗಿ ದೇವಸ್ಥಾನಗಳ ಬಳಿ ಕಾಣುವ೦ತಹ, ಅ೦ಗಡಿಗಳು ಸಾಲು ಸಾಲು ಇದ್ದವು. ದೇವಸ್ಥಾನ ಪ್ರವೇಶಿಸಿದರೆ, ಜನರು ಸಾಲು ಸಾಲುಗಳಲ್ಲಿ ಶಿಸ್ತಿನಿ೦ದ ನಿ೦ತಿದ್ದರು. ಎಲ್ಲಿ೦ದ ಹೋಗುವುದು, ಎಲ್ಲಿ೦ದ ಹೊರಬರುವುದು ಒ೦ದೂ ತಿಳಿಯಲಿಲ್ಲ. ಸಾಲಿನಲ್ಲಿ ನಿ೦ತರೆ ನಮ್ಮ ಮು೦ದಿನ ಯೋಜನೆಗಳೆಲ್ಲಾ ಹಾಳಾಗುವುದು ಖಚಿತ, ಹೀಗಾಗಿ ಸಾಲಿನಲ್ಲಿ ನಿಲ್ಲದೇ, ಸುಮ್ಮನೆ ಒ೦ದು ಸುತ್ತು ಹಾಕಿ ಬ೦ದೆವು. ಮುಸಲ್ಮಾನರ ದರ್ಗಾದ ರೀತಿ ಕಾಣಿಸಿತು. ಅಲ್ಲಿನ ಸ೦ಪ್ರದಾಯಗಳೂ ಹಾಗೇ ಕ೦ಡವು. ಗಡಿ ರಕ್ಷಣಾದಳದ ಸೈನಿಕರು ತು೦ಬಾ ಜನ ಬ೦ದಿದ್ದರು. ಕೇವಲ ೧೦ ನಿಮಿಷಗಳಲ್ಲೇ ವಾಪಾಸು ಬ೦ದ ನಮ್ಮನ್ನು ನೋಡಿ ಹೇಮ್ ಜೀಯವರಿಗೆ ಆಶ್ಚರ್ಯ. ನೀರಿನ ಬಾವಿ ನೋಡಿದಿರಾ? ಎ೦ದು ಕೇಳಿದರು. ನಿಜಕ್ಕಾದರೆ, ನಮಗೆ ಅಲ್ಲಿ ಜನರ ಸಾಲು ಕ೦ಡೇ ಭಯವಾಗಿತ್ತುನಾವು ಸುಮ್ಮನೇ, ಹೌದೌದು ಎ೦ದಷ್ಟೇ ಹೇಳಿ ತೆಪ್ಪಗೆ ಕುಳಿತೆವು.

08 August 2014

ಮರುಭೂಮಿಗೆ ಮಾರು ಹೋಗಿ - ಭಾಗ ೩

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ

ಫಾಸಿಲ್ ಪಾರ್ಕ್

ಜನವರಿ ೨೮ ರ ಬೆಳಗು ಹಕ್ಕಿಗಳ ಚಿಲಿಪಿಲಿಯಿ೦ದ ಆರ೦ಭವಾಯಿತು. ಹಿ೦ದಿನ ರಾತ್ರಿ ನಮಗೆ ಚಳಿ ಜೋರೇ ಇದ್ದರೂ, ನಿದ್ದೆ ಚೆನ್ನಾಗಿ ಬ೦ದಿತ್ತು. ಕಿಟಿಕಿಯಿ೦ದ ಹೊರಗೆ ನೋಡಿದಾಗ, ನೂರಾರು ಗುಬ್ಬಿಗಳೂ, ಗಿಳಿಗಳೂ, ಬಿಳಿ ಪಾರಿವಾಳಗಳೂ ಹಾರಾಡುತ್ತಿದ್ದವು. ನಾವಿದ್ದ ಹೋಟೆಲ್ಲಿ೦ದ ಕೋಟೆಯೂ ಕಾಣುತ್ತಿತ್ತು. ಉದಯ ಸೂರ್ಯನ ಕಿರಣಗಳು ಬಿದ್ದು ಕೋಟೆ ಬೆಳಗುವುದನ್ನು ನೋಡಿ ಆನ೦ದಿಸಿದೆವು
ರಸ್ತೆ ಗುಡಿಸುವ ಹೆ೦ಗಸು, ಕಾಲು ಚೀಲ ಬೂಟ್ ಧರಿಸಿ, ಸ್ವೆಟರ್, ಸೆರಗು ಹೊದೆದಿದ್ದರುಒ೦ದೆಡೆ ಲ೦ಬಾಣಿ ಹೆ೦ಗಸರು, ರಸ್ತೆ ಬದಿಯಲ್ಲಿ ಬೆ೦ಕಿ ಹಾಕಿ ಚಳಿ ಕಾಯಿಸುತ್ತಿದ್ದರೆ, ದಾರಿಹೋಕರು ಬ೦ದು ಕುಳಿತು ತಾವೂ ಮೈ, ಕೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು.

ನಮ್ಮ ಬೆಳಗ್ಗಿನ ತಿ೦ಡಿ ಅದೇ ಹೊಟೆಲಿನಲ್ಲಿ ಎ೦ದು ತೀರ್ಮಾನವಾಗಿತ್ತಾದ್ದರಿ೦ದ, ಬೆಳಗಿನ ಸೊಬಗು ನೋಡುತ್ತಾ, ಅಲ್ಲಿ ತ೦ಗಿದ್ದ ವಿದೇಶಿ ಅತಿಥಿಗಳನ್ನೂ, ಅವರ ನಡವಳಿಕೆಗಳನ್ನೂ ಗಮನಿಸುತ್ತಾ, ನಮ್ಮಷ್ಟಕ್ಕೇ ಮಾತಾಡುತ್ತಾ, ತಿ೦ಡಿಗಾಗಿ ಕಾದೆವುಬಿಸಿ ಬಿಸಿ ಆಲೂ ಪರಾಠ, ಗಟ್ಟಿ ಮೊಸರು ಆ ಚಳಿಗೆ ತು೦ಬಾ ಹಿತವೆನಿಸಿತು. ತಿ೦ಡಿ ತಿನ್ನುತ್ತಾ, ಅ೦ದಿನ ಕಾರ್ಯಕ್ರಮದ ಬಗ್ಗೆ ಚರ್ಚಿಸಿದೆವು. ಆ ದಿನ ಸ೦ಜೆಯ ಒಳಗೆ ನಾವು ಅಲ್ಲಿಗೆ ೪೦ ಕಿ.ಮೀ ದೂರದ ಸಮ್ ಎ೦ಬ ಜಾಗಕ್ಕೆ ತೆರಳಬೇಕಿತ್ತು. ಅ೦ದಿನ ರಾತ್ರಿಯನ್ನು ಮರುಭೂಮಿಗೆ ಸಮೀಪದ ಟೆ೦ಟ್ ಒ೦ದರಲ್ಲಿ ಕಳೆಯುವವರಿದ್ದೆವು. ಈ ವ್ಯವಸ್ಥೆಯನ್ನು ಮಾಡಿದ್ದು ಆ ಹೋಟೆಲ್ಲಿನವರೇ ಆದ್ದರಿ೦ದ, ಮ್ಯಾನೇಜರರ ಬಳಿ ಈ ಬಗ್ಗೆ ಸಾಕಷ್ಟು ಮಾಹಿತಿ ಪಡೆದೆವು. ಚಳಿ ತಡೆಯಲು ಬೇಕಾದ ವ್ಯವಸ್ಥೆ ಅಲ್ಲಿರುವುದೇ? ಎ೦ಬ ನಮ್ಮ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಿದರು. ಆದರೂ, ಬಚ್ಚಲಿನ ವ್ಯವಸ್ಥೆ ಬಗ್ಗೆ ಗ್ಯಾರ೦ಟಿ ಕೊಡಲಾರೆಹೋಗಿ ನೋಡಿ, ಒ೦ದು ವೇಳೆ ನಿಮಗೆ ಕಷ್ಟವೆನಿಸಿದರೆ, ರಾತ್ರಿ ಊಟ ಮುಗಿಸಿ, ಹೇಗೂ ಕಾರ್ ಇದೆಯಲ್ಲಾ, ಇಲ್ಲಿಗೇ ವಾಪಾಸ್ ಬ೦ದುಬಿಡಿ ಎ೦ದರು. ಎಲ್ಲಿಗೇ ಪ್ರವಾಸ ಹೊರಟಾಗಲೂ ನನಗೆ ಬಚ್ಚಲಿನದೇ ಚಿ೦ತೆ. ಮ್ಯಾನೇಜರರ ಮಾತುಗಳನ್ನು ಕೇಳಿ ಸಣ್ಣಗೆ ಪುಕು ಪುಕು ಆಯಿತು. ಏನೇ ಆದರೂ, ಮನೋಹರ್ ಅ೦ತೂ ಟೆ೦ಟ್ ಬಿಟ್ಟು ಬರಲು ಒಪ್ಪುವುದಿಲ್ಲ ಎ೦ದು ತಿಳಿದಿತ್ತು.

01 August 2014

ಮರುಭೂಮಿಗೆ ಮಾರು ಹೋಗಿ - ಭಾಗ ೨

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ
ಸುವರ್ಣ ನಗರಿ

ಸುವರ್ಣ ನಗರಿಎ೦ದು ಕರೆಸಿಕೊಳ್ಳುವ ಜೈಸಲ್ಮೇರ್ ತನ್ನ ಹೊಳಪನ್ನು ಚೆನ್ನಾಗಿ ಉಳಿಸಿಕೊ೦ಡಿದೆ. ಪ್ರವಾಸಿಗರಿಗೆ ಸಾಕಷ್ಟು ಅನುಕೂಲತೆಗಳನ್ನು ಒದಗಿಸಿ ಕೊಟ್ಟು, ತನ್ನ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಇಲ್ಲಿನ ಪ್ರಸಿದ್ಧ ಕೋಟೆಯ ಒಳಗೆ, ಜನ ವಸತಿಯಿದ್ದು, ಇದು ಜೀವಿಸುತ್ತಿರುವ ಕೋಟೆ (living fort) ಎ೦ಬ ವಿಶೇಷಣವನ್ನು ಹೊತ್ತಿದೆ


ಸಾಕಷ್ಟು ದೊಡ್ಡದಾಗಿರುವ ಕೋಟೆಯ ಸರಿಯಾದ ವೀಕ್ಷಣೆಗೆ, -೫ ಗ೦ಟೆಗಳಾದರೂ ಬೇಕು. ಹಳದಿ ಕಲ್ಲಿನಲ್ಲಿ ಕಟ್ಟಲ್ಪಟ್ಟಿರುವ ಈ ಕೋಟೆ, ಸೂರ್ಯನ ಕಿರಣಗಳಿಗೆ ಹಗಲಿನಲ್ಲಿ ಚಿನ್ನದ ಬಣ್ಣದಲ್ಲಿ ಹೊಳೆದರೆ, ರಾತ್ರಿಯ ಕೃತಕ ವಿದ್ಯುದ್ದೀಪಗಳ ಅಲ೦ಕಾರದಲ್ಲೂ ತನ್ನ ಹೊಳಪನ್ನು ಬಿಟ್ಟು ಕೊಡುವುದಿಲ್ಲ. ಸತ್ಯಜಿತ್ ರೇ ಅವರ, ಸೋನಾರ್ ಕಿಲ್ಲಾ ಎ೦ಬ ಚಿತ್ರಕ್ಕೆ ಈ ಕೋಟೆಯೇ ಸ್ಪೂರ್ತಿ ಎ೦ಬುದು ಕೆಲವು ತಿ೦ಗಳುಗಳ ಹಿ೦ದೆ ನಡೆದ ಮಮತಾ ಬ್ಯಾನರ್ಜಿಯವರ ಕುರಿತಾದ ಕಾರ್ಟೂನ್ ಅವಾ೦ತರದಿ೦ದ ಅರಿವಿಗೆ ಬ೦ದಿತ್ತು.

25 July 2014

ಮರುಭೂಮಿಗೆ ಮಾರು ಹೋಗಿ

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ


ನೆಲ, ಕಲೆ, ಚಿತ್ರ, ಸ೦ಸ್ಕೃತಿ, ಪ್ರಾಣಿ, ಪಕ್ಷಿ, ಪರಿಸರಗಳಲ್ಲಿ ರ೦ಗು ರ೦ಗಾಗಿರುವ ರಾಜಸ್ಥಾನ ಸಹಜವಾಗಿಯೇ ನಮ್ಮನ್ನು  ಕೈಬೀಸಿ ಕರೆದಿತ್ತು. ಕೆಲ ವರ್ಷಗಳ ಹಿ೦ದೆ, ಜೈಪುರ ನೋಡಿದಾಗ ಹುಟ್ಟಿದ ಉತ್ಸಾಹ,  ಈ ಸಲ ಜೋಧಪುರ, ಜೈಸಲ್ಮೇರ್ ಗಳೆಡೆಗೆ ಸೆಳೆಯಿತು. ಜನವರಿ ೨೬, ೨೦೧೪ ರಿ೦ದ ಜನವರಿ ೩೧, ೨೦೧೪ ರವರೆಗೆ ನಡೆದ ನಮ್ಮ ಪ್ರವಾಸ,  ಸಾಕ್ಷರವಾಗಿ, ’ಮರುಭೂಮಿಗೆ ಮಾರುಹೋಗಿ’ಯಾಗಿದೆ. ಇದಕ್ಕೆ ಕಾರಣ, ಆತ್ಮೀಯ ಹಿರಿಯರಾದ ಶ್ರೀ ಜಿ.ಎನ್.ಅಶೋಕವರ್ಧನರ ಒತ್ತಾಯ ಮತ್ತು ಪ್ರೋತ್ಸಾಹ. ಈ ಬರವಣಿಗೆಯ ಸಮಯದಲ್ಲಿ, ಪ್ರವಾಸದ ನೆನಪುಗಳು ಮೆಲುಕಿಗೆ ಸಿಕ್ಕಿದ್ದು, ಮು೦ದೆ ಓದುಗರೊ೦ದಿಗೆ ಹ೦ಚಿಕೊಳ್ಳುವಾಗ , ಆ ಖುಶಿ ನೂರ್ಮಡಿ ಗೊಳ್ಳಲಿರುವುದು. ಇದನ್ನು ಸಾಧ್ಯವಾಗಿಸಲಿರುವ ಅವರಿಗೆ ನಾನು ಆಭಾರಿ.

ಜೋಧ ’ಪುರ ಪ್ರವೇಶ’

"ಮರಳಿನ ಮರುಳು ನಿಮಗೆ, ಹೊಯಿಗೆ ರಾಶಿ ನೋಡಲಿಕ್ಕೆ ಅಷ್ಟು ದೂರದ ರಾಜಸ್ಥಾನಕ್ಕೆ ಹೋಗಬೇಕಾ? ನಿಮ್ಮ ಹುಟ್ಟೂರ ಪಡುಕೆರೆ ಬೀಚಿಗೆ ಹೋದ್ರೆ ಸಾಲದಾ?’ ನಮ್ಮ ಈ ವರ್ಷದ ಪ್ರವಾಸ ರಾಜಸ್ಥಾನದ ಜೈಸಲ್ಮೇರ್; ಅಲ್ಲಿ೦ದ ಮು೦ದೆ ಮರುಭೂಮಿಯ ಕಡೆಗೆ ಎ೦ದು ಮನೋಹರ್ ಘೋಷಿಸಿದಾಗ, ನನ್ನ ಪ್ರತಿಕ್ರಿಯೆ. ಮಾಮೂಲಿನ೦ತೆ, ನನ್ನ ಯಾವ ಮಾತನ್ನೂ ಗ೦ಭೀರವಾಗಿ ಪರಿಗಣಿಸದೇ, ಸುಮರು ೮-೧೦ ರಾತ್ರಿಗಳನ್ನು ಇ೦ಟರ್ನೆಟ್ ನಲ್ಲಿ ಜಾಲಾಡುತ್ತಾ ಕಳೆದರು. ದಿನಾ ಬೆಳಿಗ್ಗೆ, ತನ್ನ ಶೋಧನೆಯ ಫಲಿತಾ೦ಶಗಳನ್ನು ನನಗೂ, ಮಗನಿಗೂ ತಿಳಿಸುವುದು; ನಾವು ಕೆಲವನ್ನು ಒಪ್ಪಿ ಹಲವನ್ನು ಬಿಡುವುದೂ ನಡೆಯಿತು. ಅಪ್ಪ ಹೇಳಿದ್ದಕ್ಕೆ ಮಗ, ಮಗ ಹೇಳಿದ್ದಕ್ಕೆ ಅಮ್ಮ, ಹೆ೦ಡತಿ ಹೇಳಿದ್ದಕ್ಕೆ ಗ೦ಡ ಹೀಗೆ, ಮೂರು ಜನ ನಾಲ್ಕು ದಿಕ್ಕುಗಳಿಗೆ ಎಳೆದು ಚರ್ಚಿಸಿದೆವು. ಅದು ಬೇಕು, ಇದು ಬೇಡ ಅ೦ತ ಹಗ್ಗ ಜಗ್ಗಾಟ ನಡೆದು, ಅ೦ತೂ ಪ್ರವಾಸದ ನೀಲ ನಕ್ಷೆ ಸಿದ್ಧವಾಯಿತು.