(ಗೋವಿಂದಾಯ ನಮಃ ಭಾಗ ಎರಡು)
- ಎ.ಪಿ. ಗೌರೀಶಂಕರ
[ನಾಲ್ಕು ವಾರಗಳ ಹಿಂದೆ ಗತಿಸಿದ ನನ್ನ ಎರಡನೇ ಸೋದರಮಾವ - ಎ.ಪಿ. ಗೋವಿಂದಯ್ಯನವರ
ಸ್ಮೃತಿ ಮಾಲಿಕೆಯಲ್ಲಿ ಇದು ಮೂರನೇದು. ನನ್ನದು ಸೇರಿದಂತೆ ಹಿಂದಿನೆರಡು ಅಥವಾ ಮಾವನ ಮಗ ರಾಧಾಕೃಷ್ಣನದೂ
ಸೇರಿಸಿ ಹೇಳುವುದಿದ್ದರೆ ಮೂರರಲ್ಲೂ ಕನಿಷ್ಠ ಒಂದು ತಲೆಮಾರಿನ ಅಂತರದ ಬೆರಗಿದೆ. ಆದರೆ ಇಲ್ಲಿ ವರ್ಷಗಳ
ಲೆಕ್ಕದಲ್ಲಿ ಹೇಳುವುದಿದ್ದರೆ ಗೋವಿಂದನಿಗೆ ಸುಮಾರು ಎರಡೇ ವರ್ಷ ಕಿರಿಯ, ಬಾಲ್ಯದ ಬಹುತೇಕ ಸಿಹಿ ಕಹಿಗಳನ್ನು
ಒಟ್ಟಿಗೇ ಅನುಭವಿಸಿದ ಒತ್ತಿನ ತಮ್ಮ ಗೌರೀಶಂಕರರ ಅನುಭವ ಬೇರೇ ಸ್ತರದ್ದು. ಅದರ ಚಂದ ನೀವೇ ಓದಿ ನೋಡಿ
- ಅಶೋಕವರ್ಧನ]
ನಾನು ಮಂಗಳೂರಿನಿಂದ ಪುತ್ತೂರ ಬಳಿಯ ನಮ್ಮ ಹಳ್ಳಿಮನೆಗೆ (ಜಿಂಕೆ ಮನೆ)
ಹೋದಾಗೆಲ್ಲ, ಅಕ್ಕಪಕ್ಕದಲ್ಲೇ [ಚಿತ್ರ:ಸ್ವಂತ ಗ್ರಂಥಸಂಗ್ರಹದೆದುರು ಗೋವಿಂದ] ಮೂರೂ ಸೋದರರ ಮನೆಗಳಿಗೆ ಲೋಕಾಭಿರಾಮ ಮಾತುಕತೆಗೆಂದೇ
ಹೋಗುವುದಿತ್ತು. ನನ್ನ ಚಿಕ್ಕ - ಅಣ್ಣ ಗೋವಿಂದನಿಗೆ, ಎರಡು ಮೂರು ವರ್ಷಗಳ ಹಿಂದೆ ಧ್ವನಿ ಬಿದ್ದು
ಹೋಗಿತ್ತು. ಆ ನೆನಪಿನಲ್ಲೇ ಸುಮಾರು ಒಂದೂವರೆ ವರ್ಷದ ಹಿಂದೊಂದು ಸಂಜೆ,