Showing posts with label ದೇವಸ್ಮರಣೆ. Show all posts
Showing posts with label ದೇವಸ್ಮರಣೆ. Show all posts

29 January 2018

ಕಿನ್ನಿಕಂಬಳವೆಂಬ ಹಳ್ಳಿಯ ಮಿನುಗು ತಾರೆ ಬಾಗಲೋಡಿ ದೇವರಾವ್


                                                                                                           - ಕೆ.ಪಿ.ರಾವ್ಕಂಡಂತೆ

 ಎಂಟನೆಯವಯಸ್ಸಿನದೇವರಾಯರುತಂದೆಬಾಗಲೋಡಿಕೃಷ್ಣರಾಯರೊಡನೆ.
(ಚಿತ್ರಕೃಪೆನರಸಿಂಗರೈಕಿನ್ನಿಕಂಬಳ. 1935 ಗ್ರೂಪ್ಫೋಟೋದಿಂದ.)
ಅರುವತ್ತು ತಲಪುವ ಮೊದಲೇ, ಜುಲೈ1985 ರಲ್ಲಿ ನಮ್ಮನ್ನಗಲಿದ ಬಾಗಲೋಡಿ ದೇವರಾವ್ಕನ್ನಡ ಸಣ್ಣ ಕಥೆಗಳ ಲೋಕದಲ್ಲಿ ತನ್ನದೇ ವಿಶಿಷ್ಟ ಛಾಪನ್ನು ಉಳಿಸಿಹೋದವರು. ಪ್ರಖರ ವೈಚಾರಿಕತೆಯೊಂದಿಗೆ ಉತ್ಕಟ ಮಾನವ ಪ್ರೇಮವನ್ನು ಅವಲಂಬಿಸಿದ, ಕರಾವಳಿಯ ಮಾತುಗಾರಿಕೆಯಲ್ಲಿ ಸಾಮಾನ್ಯವಾದ ವ್ಯಂಗ್ಯಮಿಶ್ರಿತ ಹಾಸ್ಯ ಪ್ರಜ್ಞೆಯ ಅವರ ಕಥೆಗಳು ಕನ್ನಡದ ಸಾರಸ್ವತ ಲೋಕಕ್ಕೆ ಪ್ರಮುಖ ಕೊಡುಗೆಯೆಂದು ನಾನು ಭಾವಿಸಿದ್ದೇನೆ. ಎಳವೆಯಲ್ಲಿ ಪಂಜೆಯವರಿಂದ ಕಥಾ ರಚನೆಯ ಸ್ಫೂರ್ತಿ ಪಡೆದು, ಮಾಸ್ತಿಯವರ ಪ್ರೋತ್ಸಾಹದಿಂದ ಕನ್ನಡ ಕಥೆಗಳ ಬರವಣಿಗೆಗೆ ಮೊದಲಿಟ್ಟ ದೇವರಾಯರು ಮರೆಯಲಾಗದ ಸಾಹಿತ್ಯ ಸೃಷ್ಟಿ ಮಾಡಿದರು. ಭಾಗ್ಯವಶಾತ್ದೇವರಾಯರೂ ನಾನೂ ಒಂದೇ ಊರಿಗೆ ಸೇರಿದವರು, ಪ್ರತ್ಯಕ್ಷ ಮತ್ತು ಪರೋಕ್ಷ ಗುರುವಾಗಿ ನನಗೆ ಕಲಿಕೆಯ ದಾರಿತೋರಿಸಿದವರು.

22 January 2018

ಆಧುನಿಕ ಯುಗದಲ್ಲಿ ಸಂಸ್ಕೃತದ ಉಪಯುಕ್ತತೆ


(ಬಾಗಲೋಡಿಯವರ ವೈಚಾರಿಕ ಚಿಂತನೆಗಳು ೨)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೨೦)
[ಮಂಗಳೂರು ವಿಶ್ವವಿದ್ಯಾಲಯದ ‘ಆಯುರ್ವೇದ ಭೂಷಣ ಎಂ.ವಿ. ಶಾಸ್ತ್ರೀ ಸ್ಮಾರಕ ಆಯುರ್ವೇದ ಮತ್ತು ಸಂಸ್ಕೃತ ಪೀಠ’ ಇದರ ವತಿಯಿಂದ ದೇವರಾಯರು ಮೂರನೆಯ ಆಹ್ವಾನಿತ ಉಪನ್ಯಾಸವನ್ನು ೧೫ ಮಾರ್ಚ್ ೧೯೮೫ರಂದು ನೀಡಿದರು - ಭಾಷೆ ಇಂಗ್ಲಿಷ್, ವಿಷಯ Utility of Sanskrit in Modern Age. ಧ್ವನಿ ಸುರುಳಿಯಲ್ಲಿ ದಾಖಲಾಗಿದ್ದ ಉಪನ್ಯಾಸದ ಪಾಠವನ್ನು ಲಿಪ್ಯಂತರಿಸಿ ಮುದ್ರಣಕ್ಕೆ ಅಣಿ ಮಾಡಿದವರು ಎಸ್. ಕೃಷ್ಣಮೂರ್ತಿ, ವಿ.ಆರ್. ಹೆಬ್ಬಾರ್ ಮತ್ತು ಪಿ. ಸೇತುಮಾಧವರಾವ್. ದೇವರಾಯರು ಅದೇ ತರುಣದಲ್ಲಿ ವಿಧಿವಶರಾದ್ದರಿಂದ (೨೫ ಜುಲೈ ೧೯೮೫) ಮುದ್ರಣ ಪ್ರತಿಯನ್ನು ಅವರು ಓದಿ ಪರಿಷ್ಕರಿಸುವುದು ಸಾಧ್ಯವಾಗಲಿಲ್ಲ. ಉಪನ್ಯಾಸದ ಹೊತ್ತಗೆಯನ್ನು ವಿಶ್ವವಿದ್ಯಾಲಯ ಪ್ರಕಟಿಸಿದೆ (೧೫ ಜನವರಿ ೧೯೮೯. BagaloDi Deva Ra0 - A profile ಎಂಬ ಲೇಖನವೂ (ಬರೆದವರು ಅವರ ಸೋದರಳಿಯ ಶ್ರೀ ವಿ. ರಘುಚಂದ್ರ ಹೆಬ್ಬಾರ್) ಇದರಲ್ಲಿದೆ. ಉಪನ್ಯಾಸದ ಪೂರ್ಣ ಪಾಠವನ್ನು ಇಲ್ಲಿ ಕೊಟ್ಟಿದೆ - ಜಿ.ಟಿ.ನಾ]

15 January 2018

ಅಮೆರಿಕದಲ್ಲಿ ನೀಗ್ರೊ ಜನರ ದುಃಖಪರಂಪರೆ

(ಬಾಗಲೋಡಿಯವರ ವೈಚಾರಿಕ ಚಿಂತನೆಗಳು ೧)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೧೯)

-ಬಾಗಲೋಡಿ ದೇವರಾವ್

[ಇದು ಜಾನ್ ಗುಂಥರ್ ಎಂಬ ಜಗದ್ವಿಖ್ಯಾತ ಗ್ರಂಥಕರ್ತನ ಇನ್ಸೈಡ್ ಯು.ಎಸ್.ಎ ಎಂಬ ಗ್ರಂಥದಿಂದ ಸಂಗೃಹೀತವಾದುದು. ಈತ ಇನ್ಸೈಡ್ ಯುರೋಪ್, ಇನ್ಸೈಡ್ ಏಷ್ಯಾ, ಇನ್ಸೈಡ್ ಲ್ಯಾಟಿನ್ ಅಮೆರಿಕಾ ಮೊದಲಾದ ಪುಸ್ತಕಗಳನ್ನೂ ಬರೆದಿದ್ದಾನೆ. ಸತ್ಯಸ್ಥಿತಿಯನ್ನು ನಿರ್ದಾಕ್ಷಿಣ್ಯವಾಗಿ ಬಯಲಿಗೆ ಎಳೆಯುವುದು ಈತನ ವೈಶಿಷ್ಟ್ಯ. 

ಇದರೊಡನೆ ಅಮೆರಿಕ ದೇಶದ ನೀಗ್ರೋ ಸಂಘದ ಕಾರ್ಯದರ್ಶಿಯೂ ಶ್ರೇಷ್ಠ ಪತ್ರಿಕಾ ವ್ಯವಸಾಯಿಯೂ ಆದ ವಾಲ್ಟನ್ ವೈಟ್ ಮಹಾಶಯನ ಇನ್ವೆಸ್ಟಿಗೇಟ್ ಲಿಂಚಿಂಗ್ಸ್ ಎಂಬ ವರದಿಯಿಂದಲೂ ರಿಚರ್ಡ್ ರೈಟ್ ಎಂಬ ನೀಗ್ರೋ ಲೇಖಕನ ದಿ ಎಥಿಕ್ಸ್ ಆಫ್ ಲಿವಿಂಗ್ ಜಿಮ್ ಕ್ರೊ ಎಂಬ ಆತ್ಮಕಥೆಯ ಪ್ರಸಂಗಗಳಿಂದಲೂ ವಸ್ತುವನ್ನು ಸಂಗ್ರಹಿಸಿದೆ - ಲೇಖಕ]

ಈಗ ಮುಂದೆ ವಿವರಿಸುವ ನೀಗ್ರೋ ಜನರ ದುಃಖ ಪರಂಪರೆ ಚಾರಿತ್ರಿಕವಲ್ಲ. ಪ್ರಾಚೀನಕಾಲದ ಗತಪುರಾಣವಲ್ಲ. ಇದೇ ೨೦ನೆಯ ಶತಮಾನದ ಪ್ರಜಾಪ್ರಭುತ್ವದ ಯುಗದಲ್ಲಿ ಸ್ವಾತಂತ್ರ್ಯದ ನಾಡೆಂದು

08 January 2018

ಅನನ್ಯ ಕತೆಗಾರ ಬಾಗಲೋಡಿ

(ಮರಣೋತ್ತರ ನುಡಿನಮನಗಳು ೩)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೧೮)
- ಎಲ್.ಎಸ್. ಶೇಷಗಿರಿರಾವ್
ಆಧುನಿಕ ಕನ್ನಡ ಸಣ್ಣ ಕತೆಗಳ ಲೋಕದಲ್ಲಿ ‘ಅನನ್ಯ’ ಎನ್ನಿಸಿಕೊಳ್ಳುವ ಕಥೆಗಾರರು ಬಾಗಲೋಡಿ ದೇವರಾಯರು. ಬಾಗಲೋಡಿಯವರು ವ್ಯಂಗ್ಯವನ್ನು ಶಕ್ತವಾಗಿ ಬಳಸಿದರು. ಬಲುಮಟ್ಟಿಗೆ ಅವರ ಸಾಹಿತ್ಯಕ್ಕೆ ಬಣ್ಣವನ್ನು ಕೊಟ್ಟಿದ್ದು ವ್ಯಂಗ್ಯ ಎನ್ನುವ ಮಾತು ಪರಿಚಿತವಾದದ್ದು. ಆದರೆ ಅವರ ವಿಶಿಷ್ಟ ರೀತಿಯಲ್ಲಿ ವ್ಯಂಗ್ಯವನ್ನು ಬಳಸಿದ್ದನ್ನು ಕನ್ನಡ ಕಥಾಸಾಹಿತ್ಯದಲ್ಲಿ ಕಾಣಲಾರೆವು. ರಷ್ಯದ ದೊಯಸ್ತವಿಸ್ಕಿ, ಟಾಲ್ ಸ್ಟಾಯ್ ಇಂಥವರ ಕಥಾಸಾಹಿತ್ಯದಲ್ಲಿ ಕಾಣುವ ವ್ಯಂಗ್ಯ ಇದು. ಈ ವ್ಯಂಗ್ಯ ಬದುಕಿನ ವಿಶಿಷ್ಟ ದರ್ಶನದಿಂದ ಮೂಡಿದ್ದು. ಆ ದರ್ಶನ ಪ್ರಕಟವಾಗುವ ರೀತಿಗೆ ಅನಿವಾರ್ಯವಾದದ್ದು. ಬದುಕಿನ ಸಂಕೀರ್ಣವಾದ ಅನುಭವವನ್ನು ಹಿಡಿದಿಡಲು ಸಾಹಿತ್ಯ ಸೃಷ್ಟಿಸಿರುವ ಸಾಧನಗಳಲ್ಲಿ ಒಂದು ವ್ಯಂಗ್ಯ. ಒಂದು ಸನ್ನಿವೇಶದಲ್ಲಿ ಇರಬೇಕಾದ ಸ್ಥಿತಿಗಿಂತ ವಾಸ್ತವತೆ ಭಿನ್ನವಾಗಿದ್ದು, ಭಿನ್ನತೆ ಆಕ್ಷೇಪಾರ್ಹ ವಾದ ಎಂದು ಕಂಡಾಗ ವ್ಯಂಗ್ಯ ಮೂಡುತ್ತದೆ; ನೇರವಾಗಿ ರೂಪ ತಾಳುತ್ತಿರುವ ನಿರೂಪಣೆಗಿಂತ ವಾಸ್ತವ ಭಿನ್ನ ಎಂಬುದು ಹಲವು ರೀತಿಗಳಲ್ಲಿ - ಧ್ವನಿಯಿಂದ, ಧಾಟಿಯಿಂದ ಇತ್ಯಾದಿ ಪ್ರಕಟವಾಗುತ್ತದೆ. ಒಂದು ನಿರ್ದಿಷ್ಟ ಸಂದರ್ಭದಲ್ಲಿ ಇರಬೇಕಾದ ಸ್ಥಿತಿಯ ಕಲ್ಪನೆ ಬರೆಯುವವನಿಗೂ ಓದುವವನಿಗೂ ಸಾಮಾನ್ಯವಾಗಿದ್ದಾಗ ಬರೆಯುವವನ ಕಾರ್ಯ ಸುಲಭವಾಗುತ್ತದೆ. ಉದಾಹರಣೆಗೆ, ಕೈಲಾಸಂ ಅವರ ಟೊಳ್ಳುಗಟ್ಟಿಯಲ್ಲಿ ಮಕ್ಕಳ ಸ್ಕೂಲ್ ಮನೇಲಿ ಎನ್ನುವುದು ಇಬ್ಬರೂ ಸ್ವೀಕರಿಸುವ ವಾಸ್ತವವಾದ್ದರಿಂದ ನಾಟಕಕಾರ ತನ್ನ ಮನಸ್ಸಿನಲ್ಲಿರುವ ಸ್ಥಿತಿಯನ್ನು ಸೂಚಿಸುವ, ಪರೀಕ್ಷವಾಗಿ ಚಿತ್ರಿಸುವ ಅಗತ್ಯವಿರುವುದಿಲ್ಲ. ಹಾಗೆಯೇ ಸಮಾಜದ ಒಂದು ನಿರ್ದಿಷ್ಟ ದೋಷ, ಉದಾಹರಣೆಗೆ, ಅಸ್ಪೃಶ್ಯತೆ, ವ್ಯಂಗ್ಯದ ಗುರಿಯಾದಾಗ, ಬರೆಯುವವನು ಮತ್ತು ಓದುವವನು ಆಗಲೇ ಒಂದು ನಿಲುವನ್ನು ತಳೆದಿರುವುದರಿಂದ ವ್ಯಂಗ್ಯ ಪರಿಣಾಮವನ್ನು ಉಂಟುಮಾಡುವುದು ಸುಲಭವಾಗುತ್ತದೆ. ಆದರೆ ಸಂದರ್ಭ ವಿಶಾಲವಾದಷ್ಟು ಕತೆಗಾರ ವ್ಯಂಗ್ಯದಿಂದ ಪರಿಣಾಮವನ್ನು ಸಾಧಿಸುವುದು ಕಠಿಣವಾಗುತ್ತದೆ. ಬಾಗಲೋಡಿ ದೇವರಾಯರ ಅಸಾಧಾರಣ ಸಾಧನೆ ಬದುಕನ್ನೇ ಹಲವು ಕತೆಗಳಲ್ಲಿ ಸಂದರ್ಭವಾಗಿ ಸ್ವೀಕರಿಸಿ, ತಮ್ಮ ವಿಶಿಷ್ಟ ದರ್ಶನವನ್ನು ನಿರೂಪಿಸಹೊರಟು ಯಶಸ್ವಿಯಾಗುವುದು. ನನ್ನ ಅಭಿಪ್ರಾಯದಲ್ಲಿ, ಅವರ ಸಾಧನೆ ಆಶ್ಚರ್ಯವನ್ನುಂಟು ಮಾಡುವುದಕ್ಕೆ ಕಾರಣ, ಅವರು ತಮ್ಮ ಪ್ರಾರಂಭದ ಕತೆಗಳಲ್ಲಿಯೇ ಇದನ್ನು ಸಾಧಿಸಿದರು ಎನ್ನುವುದು.


01 January 2018

ಹಾಮಾನಾ ಬರೆಯುತ್ತಾರೆ - ಬಾಗಲೋಡಿ ದೇವರಾಯ

(ಮರಣೋತ್ತರ ನುಡಿನಮನಗಳು ೨)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೧೭)
- ಹಾ.ಮಾ. ನಾಯಕ
ಸುಮಾರು ೧೯೪೨-೪೩ರ ಮಾತು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಇಂಟರ್‍ಮೀಡಿಯೆಟ್ ತರಗತಿಯ ಇಂಗ್ಲಿಷ್ ಪಾಠದ ಅವಧಿ. ದೊಡ್ಡ ಹಾಲು; ಮೂರು ನಾಲ್ಕು ತರಗತಿಗಳ ಹುಡುಗರು ಸೇರಿದ್ದಾರೆ. ಫಾದರ್ ಸಿಕ್ವೇರಾ ಆ ಹೊತ್ತು ತಮ್ಮ ಕಡತದಿಂದ ಆರಿಸಿ ಒಂದು ಪ್ರಬಂಧವನ್ನು ಓದಿದರು. ತಲೆದೂಗುವಂಥ ಬರವಣಿಗೆ. ಜೊತೆಗೆ ಸಿಕ್ವೇರಾ ಅವರ ಓದುಗಾರಿಕೆಯ ಆಕರ್ಷಣೆ. ಹುಡುಗರು ಮಂತ್ರಮುಗ್ಧರಾಗಿ ಕೇಳಿದರು. ಪ್ರಬಂಧವನ್ನು ಓದಿ ಮುಗಿಸಿ, ಸಿಕ್ವೇರಾ ತರಗತಿಯನ್ನು ಪ್ರಶ್ನಿಸಿದರು. "ಈ ಪ್ರಬಂಧವನ್ನು ಬರೆದವರು ಯಾರು?" ಯಾರು ಉತ್ತರ ಕೊಡಬೇಕು? ಕೊನೆಗೆ ಅವರೇ ಹೇಳಿದರು, "ಈ ಪ್ರಬಂಧ ಬರೆದವರು ಇದೇ ತರಗತಿಯ ವಿದ್ಯಾರ್ಥಿ ಬಿ. ದೇವರಾವ್." "ಯಾರು ದೇವರಾವ್?" ಫಾದರ್ ಸಿಕ್ವೇರಾ ಕೇಳಿದರು. ಹುಡುಗರೆಲ್ಲ ಕುತೂಹಲದಿಂದ ಆ ಕಡೆ ಈ ಕಡೆ ಕಣ್ಣಾಡಿಸತೊಡಗಿದರು. ಎದುರು ಸಾಲಿನಲ್ಲಿದ್ದ ಒಬ್ಬ ಸಣ್ಣ ಹುಡುಗ ಎದ್ದು ನಿಂತು ಹೇಳಿದ, "ನಾನೇ ದೇವರಾವ್". ಎಲ್ಲರಿಗೂ ಆಶ್ಚರ್ಯ. ಈ ಪೋರನಿಗೆ ಇಂಗ್ಲಿಷಿನ ಮೇಲೆ ಇಷ್ಟೊಂದು ಪ್ರಭುತ್ವವೇ ಎನ್ನುವುದು ಆಶ್ಚರ್ಯಕ್ಕೆ ಕಾರಣ. ಸಿಕ್ವೇರಾ ಹುಡುಗನನ್ನು ಕೇಳಿದರು, "ಈ ಪ್ರಬಂಧ ನೀನೇ ಸ್ವಂತವಾಗಿ ಬರೆದದ್ದೇ?" ಹುಡುಗ ದೃಢವಾದ ಧ್ವನಿಯಲ್ಲಿ ಹೇಳಿದ. "ಅಫ್ ಕೋರ್ಸ್! ಅನುಮಾನಕ್ಕೆ ಕಾರಣವೇನು?"

25 December 2017

ಮಿತ್ರ ದೇವರಾಯರು

(ಮರಣೋತ್ತರ ನುಡಿನಮನಗಳು ೧)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೧೬)
- ಕು.ಶಿ. ಹರಿದಾಸಭಟ್ಟ
ಮಿತ್ರ ಬಾಗಲೋಡಿ ದೇವರಾಯರು ಇಷ್ಟು ಬೇಗನೆ ನಮ್ಮ ಸ್ಮೃತಿಪಟಲಕ್ಕೆ ಸೇರುವರೆಂದು ಕಳೆದ ತಿಂಗಳು ತಾನೇ ಅವರನ್ನು ಉಡುಪಿ ಮಣಿಪಾಲಗಳಲ್ಲಿ ಕಂಡು ಮಾತನಾಡಿದ ಯಾರೂ ಊಹಿಸಲಾರರು. ಇಷ್ಟಮಿತ್ರ ಬಂಧುಬಳಗವನ್ನು ಕಂಡು ವಿದಾಯ ಹೇಳುವುದಕ್ಕಾಗಿಯೇ ಈ ಸಾರೆ ಅವರು ಬಂದ ಹಾಗಿತ್ತು. ಮರೆಯದೆ ಅವರು ನೋಡಿದವರ ಪೈಕಿ ಅವರ ಪ್ರಾಥಮಿಕ ಶಾಲಾ ಉಪಾಧ್ಯಾಯರೂ ಪ್ರೌಢಶಾಲಾ ಉಪಾಧ್ಯಾಯರೂ ಸೇರಿದ್ದು ಅವರ ಮನೋಧರ್ಮ ಹಾಗೂ ಜೀವನಧರ್ಮದ ದ್ಯೋತಕವಾದ್ದಾಗಿದೆ. ಸ್ವಾತಂತ್ರ್ಯಾನಂತರ ಸಿಕ್ಕ ಹಕ್ಕುಗಳ ಭರಾಟೆಯಲ್ಲಿ ಕೃತಜ್ಞತೆಯೆಂಬ ಕರ್ತವ್ಯ ಭಾಗವನ್ನು ಮರೆತುಬಿಡುವ ಈ ಕಾಲದಲ್ಲಿ ಶ್ರೀ ದೇವರಾಯರು ಭಾರತೀಯ ಸಂಸ್ಕೃತಿಯ ಒಂದು ಸಲ್ಲಕ್ಷಣವನ್ನು ಪ್ರತಿನಿಧಿಸಿದಂತೆ ತೋರುವುದು ಇಂಥ ಗುಣಗಳಿಂದ. ಶೈಕ್ಷಣಿಕ ವಲಯದಲ್ಲಿ ರ್ಯಾಂಕುಗಳಿಗೆ ಮಣೆ ಹಾಕಿದ್ದರಿಂದಲೋ ಗುಣಶೀಲಗಳನ್ನು ಅಳೆಯಲು ಅಂಕಗಳ ಮಾನದಂಡ ನಿರುಪಯುಕ್ತವೆಂಬುದರಿಂದಲೋ ಇತ್ತೀಚೆಗೆ ರ್ಯಾಂಕಿನಿಂದಲೇ ಒಬ್ಬ ವ್ಯಕ್ತಿ, ಒಂದು ಸಂಸ್ಥೆಯನ್ನು ಅಳೆಯುವುದು ರೂಢಿಯಾಗಿದೆ. ಇದು ಸರಿಯಲ್ಲ, ಮನುಷ್ಯನ ಚಾರಿತ್ಯದಲ್ಲಿ ಬೆಳೆಸಿಕೊಳ್ಳಬೇಕಾದ ಸದ್ಗುಣಗಳು ಹಲವುಂಟು - ಕೃತಜ್ಞತೆ ಅವುಗಳಲ್ಲಿ ಪರಮಶ್ರೇಷ್ಠವಾದದ್ದು ಎಂಬುದೇ ದೇವರಾಯರ ಸಾರ್ಥ ಬದುಕಿನ ಸಂದೇಶವೆನಿಸಬಹುದು.

18 December 2017

ಕಾಣಲಾಗದ ದೇವ

(ಮರಣೋತ್ತರ ನುಡಿನಮನಗಳು ೪)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೧೫)
- ಎಂ. ರಾಮಚಂದ್ರ
ಕಳೆದ ಶತಮಾನದ ಐದನೆಯ ದಶಕದ ಪೂರ್ವಾರ್ಧ. ನಾನಾಗ ಹೈಸ್ಕೂಲು ವಿದ್ಯಾರ್ಥಿ. ಒಂದು ದಿನ ನನ್ನ ಕಿರಿಯ ಸಹಪಾಠಿಯೊಬ್ಬನ ಕೈಯಲ್ಲಿ ‘ಆರಾಧನಾ’ ಎಂಬ ಪುಸ್ತಕ ನೋಡಿದೆ. ‘ಏನಿದು ಆರಾಧನೆ’ ಎಂಬ ಕುತೂಹಲದಿಂದ ಮಿತ್ರನ ಕೈಯಿಂದ ಪುಸ್ತಕ ತೆಗೆದು ಪುಟ ತೆರೆದೆ - ಅದೊಂದು ಕಥಾಸಂಗ್ರಹ; ಲೇಖಕ ಬಾಗಲೋಡಿ ದೇವರಾಯ ಎಂಬುದು ಮುಖಪುಟದಲ್ಲೇ ಮುದ್ರಿತವಾಗಿತ್ತು. ಸಂಗ್ರಹದಲ್ಲಿದ್ದ ಕತೆಗಳ ಮೇಲೆ ಕಣ್ಣಾಡಿಸಿದೆ. ಅವುಗಳ ಶೀರ್ಷಿಕೆ, ಕಥಾವಸ್ತು, ನಿರೂಪಣ ವಿಧಾನ, ಭಾಷಾ ಶೈಲಿ ಎಲ್ಲದರಲ್ಲೂ ಒಂದು ನಾವೀನ್ಯವನ್ನು ಕಂಡೆ.

ನಾನು ಹೈಸ್ಕೂಲು ದಾಟಿ, ಮಂಗಳೂರಲ್ಲಿ ಅಲೋಶಿಯಸ್ ಕಾಲೇಜನ್ನು ಸೇರಿದೆ. ಹಾಸ್ಟೆಲ್ ನಿವಾಸಿಯಾದೆ. ನನ್ನ ಸಹವಾಸಿಯೊಬ್ಬನ ಹೆಸರಿನ ಹಿಂದೆ ‘ಬಾಗಲೋಡಿ’ ಎಂಬ ಸ್ಥಳನಾಮವಿತ್ತು. ಆಸಕ್ತಿಯಿಂದ ವಿಚಾರಿಸಿದಾಗ ಆತ ಬಾಗಲೋಡಿ ದೇವರಾಯರ ಸಂಬಂಧಿಯೆಂಬುದು ತಿಳಿಯಿತಲ್ಲದೆ, ದೇವರಾಯರ ಬಗ್ಗೆ ಹೆಚ್ಚಿನ ವಿವರಗಳು ಸಿಕ್ಕಿದುವು.

11 December 2017

ಬಾಗಲೋಡಿ ದೇವರಾಯರ ಸಂದರ್ಶನ

(ಬಾಗಲೋಡಿ ವಾಙ್ಮಯ ಸಮೀಕ್ಷೆ ೨)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೧೪)
ಎಸ್. ದಿವಾಕರ್

ಹಿಂದಕ್ಕೆ ಬಾಚಿದ ಹೇರಳ ಕಪ್ಪು ಕೂದಲು. ಅರ್ಧ ಮುಖವನ್ನೇ ಮರೆಮಾಡುವಂತೆ ಇರುವ, ಬಿಳಿದಾಗುತ್ತಿರುವ ಗಡ್ಡ. ಮಾತನಾಡತೊಡಗಿದರೆ ಆಗಾಗ ಧ್ಯಾನದಲ್ಲಿ ಇರುವಂತೆ ಅರೆಮುಚ್ಚುವ ಕಣ್ಣುಗಳು. ಐದೂಕಾಲು ಅಡಿ ಎತ್ತರದ ಸಪೂರ ದೇಹ. ಐವತ್ತೈದು ವರ್ಷ ವಯಸ್ಸಿನ ಬಾಗಲೋಡಿ ದೇವರಾಯರು ಮೂಲತಃ ದಕ್ಷಿಣ ಕನ್ನಡದವರು. ೧೯೪೫ - ೫೪ರ ಸುಮಾರಿನಲ್ಲಿ ಕೆಲವು ಅತ್ಯುತ್ತಮ ಸಣ್ಣ ಕತೆಗಳನ್ನು ಬರೆದವರು. ಹುಚ್ಚ ಮುನಸೀಫ ಮತ್ತು ಇತರ ಕತೆಗಳು (೧೯೪೯) ಮತ್ತು ಆರಾಧನಾ (೧೯೫೪) ಅವರ ಪ್ರಕಟಿತ ಕಥಾಸಂಗ್ರಹಗಳು.  ಸದ್ಯ ಬಲ್ಗೇರಿಯಾದಲ್ಲಿ ಭಾರತದ ರಾಯಭಾರಿಯಾಗಿರುವ ಅವರು ಇತ್ತೀಚೆಗೆ [೧೯೮೩] ಸ್ವಲ್ಪ ಕಾಲ ಬೆಂಗಳೂರಿಗೆ ಬಂದಿದ್ದರು. ಸಾಹಿತ್ಯದಿಂದ ಹಿಡಿದು ರಾಜಕಾರಣದವರೆಗೆ, ಸಂಸ್ಕೃತ ಭಾಷೆಯಿಂದ ಹಿಡಿದು ಸಮಾಜಶಾಸ್ತ್ರದವರೆಗೆ ಅನೇಕ ವಿಷಯಗಳ ಬಗ್ಗೆ ಅವರ ಕುತೂಹಲ ಹುಟ್ಟಿಸುವಂಥ ಮಾತು ಕೇಳುವುದೊಂದು ಅನುಭವ.

"ನಾನು ಬರೆದ ಮೊದಲ ಕತೆ ಶುದ್ಧ ಫಟಿಂಗ. ಅದು ೧೯೪೬ರಲ್ಲಿ ಜೀವನ ಪತ್ರಿಕೆಯಲ್ಲಿ ಪ್ರಕಟವಾಯಿತು" ಎನ್ನುವ ದೇವರಾಯರು ಸುಮಾರು ೨೮ ವರ್ಷಗಳನಂತರ, ಮೊನ್ನೆ ಮೊನ್ನೆ ಮೃಷ್ಟಾನ್ನ ಎಂಬ ಒಂದು ಕತೆ ಪ್ರಕಟಿಸಿದ್ದಾರೆ. ಇಷ್ಟು ದೀರ್ಘ ಕಾಲ ಅವರು ಕತೆ ಬರೆಯದಿರಲು ಕಾರಣ? ತಮ್ಮ ಎರಡು ಸಂಕಲನಗಳಿಗೆ ಸಿಕ್ಕಬೇಕಾದಷ್ಟು ವಿಮರ್ಶಾ ಮನ್ನಣೆ ಸಿಕ್ಕಲಿಲ್ಲವೆಂದೇ?

04 December 2017

ಮಾನವೀಯತೆ - ಅಹಿಂಸೆ

(ಕಿನ್ನಿಕಂಬಳದ ಮೂಲಮೂರಿ ಮತ್ತು ಕರಾವಳಿಯ ಕಥನ - ಉತ್ತರಾರ್ಧ)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೧೩)
- ಕೆ. ಮಹಾಲಿಂಗ ಭಟ್
‘ಮಾನವೀಯತೆ - ಅಹಿಂಸೆ’ ಮೌಲ್ಯಗಳನ್ನು ಮರುಶೋಧಿಸುವ ಬಾಗಲೋಡಿ ಗುಣವೇ ಪವಾಡ ಪುರುಷದಂಥ ಪ್ರಸಿದ್ಧ ಕತೆಯನ್ನು ಕೊಟ್ಟಿದೆ. ಸಾಹಿತ್ಯ ಪರಿಷತ್ತಿಗಾಗಿ ಕೆ. ನರಸಿಂಹಮೂರ್ತಿ ಸಂಪಾದನೆಯಲ್ಲಿಯೂ (ಕೃತಿ: ಅತ್ಯುತ್ತಮ ಸಣ್ಣ ಕತೆಗಳು) ಗಿರಡ್ಡಿಯವರ ಮರೆಯಬಾರದ ಹಳೆಯ ಕತೆಗಳು ಸಂಕಲನದಲ್ಲಿಯೂ ಇದು ಬಂದಿದೆ. ಬಾಗಲೋಡಿಯವರು ಇತಿಹಾಸ ಲೋಕಕ್ಕೆ ಪ್ರವೇಶಿಸುವಾಗ ಕಾಲದ ಖಂಡಾಂತರಗಳನ್ನು ದಾಟಿ ನಿರ್ಮಿಸುವ ಪುರಾತನ ವಾತಾವರಣಕ್ಕೂ ಅವರದ್ದೇ ಆದ ಛಾಪೊಂದು ಇರುತ್ತವೆಂಬುದಕ್ಕೆ ಇದು ಸಾಕ್ಷಿ. ಸರ್ವಾರ್ಥಸಿದ್ಧಿ ಎಂಬ ಭಿಕ್ಕು, ತಾನು ಕೊಲೆಯ ಹಿಂಸೆಯೊಂದನ್ನು ನಡೆಸಿ ಅಹಿಂಸೆಯನ್ನು ಉಳಿಸಿದ್ದ ಸತ್ಯವನ್ನು ತನ್ನ ಕೊನೆಯುಸಿರಿನ ಜೊತೆಯಲ್ಲಿ ಸ್ಫೋಟಿಸುವ ಕತೆ ಇದು. ಹೆಸರುಗಳು, ಪರಿಭಾಷೆಗಳು, ವಿವರಗಳ ಮೂಲಕ ಬೌದ್ಧ ಚಾರಿತ್ರಿಕ ವಾತಾವರಣದ ಹಿನ್ನೆಲೆಯಲ್ಲಿ ಈ ಮಹಾನ್ ಅಹಿಂಸಾಮೂರ್ತಿ ಭಿಕ್ಕು ಕ್ರೂರ, ಮೂರ್ಖ ರಾಜನನ್ನು ಕೊಂದುಬಿಟ್ಟಿದ್ದ ಸತ್ಯವನ್ನು ಕತೆ ತೆರೆಯಿಸುತ್ತದೆ. "ನಾನೀ ಕಥೆಯನ್ನು ನಿನಗೆ ಹೇಳಿದುದು ಪಶ್ಚಾತ್ತಾಪದಿಂದಲ್ಲ, ಆತ್ಮಲಾಂಛನದಿಂದಲ್ಲ, ಸರ್ವಥಾ ಅಲ್ಲ.... ನಿನಗೆ ಕರ್ತವ್ಯಜ್ಞಾನಕ್ಕಾಗಿರಲಿ ಎಂದು ಹೇಳಿದ್ದೇನೆ," ಎನ್ನುತ್ತಾನೆ ಬೌದ್ಧ ಸಂನ್ಯಾಸಿ. ಅಹಿಂಸೆ ಕರುಣೆಗಳಂಥ ಭಿಕ್ಕುವಿನ ಮೂಲವಾಸನೆಗಳು ಇಲ್ಲಿ ಹೊಸ ಅರ್ಥ ಪಡೆದು ಹೊಳೆವ ‘ಪವಾಡ’ ಸಾಧಿಸುತ್ತವೆ. ದೇವರಾಯರ ವ್ಯಂಗ್ಯ ವಿನೋದವೂ ಚಾರಿತ್ರಿಕ ಕಾಲದ ನಿರ್ಮಾಣವೂ ಮಾನವೀಯತೆಯ ಪ್ರತಿಪಾದನೆಗಾಗಿ ‘ಮಾನಸಿಕ ದೂರ’ ಒಂದನ್ನು ನಿರ್ಮಿಸುತ್ತವೆ. ಈ ಒಂದು ವಿಶಿಷ್ಟ ‘ಓರೆನೋಟ’ದ ಮೂಲಕ ರೂಢಿಸಿಕೊಂಡ

27 November 2017

ಕಿನ್ನಿಕಂಬಳದ ಮೂಲಮೂರಿ ಮತ್ತು ಕರಾವಳಿಯ ಕಥನ

(ಬಾಗಲೋಡಿ ವಾಙ್ಮಯ ಸಮೀಕ್ಷೆ ೧)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)

(ಭಾಗ ೧೨)
- ಕೆ. ಮಹಾಲಿಂಗ ಭಟ್
ಬಾಗಲೋಡಿ ದೇವರಾಯರಿಗೂ ನನಗೂ ಇರುವ ನಂಟು ಮೂರು ಅವಿಭಾಜ್ಯ ಗಂಟುಗಳಿಂದಾದುದು: ನಾವಿಬ್ಬರೂ ಕರಾವಳಿಯ ಶಿಶುಗಳು, ಸಾಹಿತ್ಯಾರಾಧಕರು ಮತ್ತು ವೈಯಕ್ತಿಕವಾಗಿ ಅವರು ಅಂದು (೧೯೪೨-೪೪) ನಡೆದಾಡಿ ಬೆಳಗಿದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂದು (೨೦೦೩) ನಾನೊಬ್ಬ ಯುವ ಕನ್ನಡ ಉಪನ್ಯಾಸಕ. ಅವರನ್ನು ನಾನು ಕಂಡಿಲ್ಲ. ಪ್ರಿಸಮ್ ಸಂಸ್ಥೆ ಪ್ರಕಟಿಸಿರುವ (೨೦೦೦) ಬಾಗಲೋಡಿ ದೇವರಾಯ - ಸಮಗ್ರ ಕತೆಗಳು ಎಂಬ ಕೃತಿಯಲ್ಲಿ ಪ್ರಕಟವಾಗಿರುವ ಅವರ ಚಿಂತನೆಯ ಹೊಳಹು ಸೆಳವುಗಳನ್ನು ಆಧರಿಸಿ ಈ ಸಮೀಕ್ಷೆ ಮಾಡಿದ್ದೇನೆ. ಸಮಗ್ರ ಕತೆಗಳು ಸಂಕಲನದಲ್ಲಿ ಬಾಗಲೋಡಿಯವರ ೨೬ ಕತೆಗಳಿವೆ. ಅವರ ಕತೆಗಾರಿಕೆ ತಂತ್ರ ಹಿಂದಿನ ತಲೆಮಾರಿನದು - ಉದಾಹರಣೆಗೆ ಮಾಸ್ತಿಯವರಲ್ಲಿ ಪ್ರಕಟವಾಗುವ ಅನನ್ಯತೆ. ಆದರೆ ಕಲೆಗಾರಿಕೆ ಇಪ್ಪತ್ತನೆಯ ಶತಮಾನದ ಸೂಕ್ಷ್ಮತೆಗಳಿಗೆ ವಿಶಿಷ್ಟ ಸ್ಪಂದನ.

20 November 2017

Penchant for Enchanting Words

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೬)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೧೧)
- V. Gurumurti
Bagalodi Deva Rao was a genius. In his writings, words fell in place with effortless ease, conveying profound thoughts often laced with humour in pithy phrases. He was a mighty intellect with a wide spectrum of intersts. His heart was equally expansive and he had only good words of appreciation and encouragement to all.

As an admiring classmate of Bagalodi in the first honours I would like to recall one event of his college days.

One `Hervy' whom the English poet Alexander Pope did not particularly like, used to take asses' milk every day, for its medicinal value. Pope ridiculed him for this habit in one of his satirical pieces - I forget the actual lines. In answer to an examination question in English literature, annotation, Deva Rao quipped towards the end of his answer "POOR HERV'S VALETUDINARIAN DIET TOO IS MADE A DEBIT." The additional relevant point to remeber is, he took this examination, rushing to the hall, a couple of minutes late, straight from his French diploma classes at the University (of Madras) building some 18 miles away (from Tambaram.)

13 November 2017

The Young Student-Rebel

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೫)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೧೦)
- M. Panchappa
Bagalodi Deva Rao joined the BA (Hons) course in English language and literature in the Madras Christian College Tambaram (June 1944). A year earlier I had joined the same course. For a few hours in a week we had common periods. As both of us had hailed from Kannada-speaking areas - he from Mangalore and I from Bellary - our acquaintance grew apace. KS Haridasa Bhat was also our contemporary Kannadiga.

The impression which I have of the student Deva Rao is of a young intellectual with all the appropriate attendant features of mental nonconformity and physical nonrobustness. The latter was strengthened by one or two fingernails to which he had given full freedom to reach out beyond even his own grasp. He was at the top of the class all through.

06 November 2017

A Genius Wasted

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೪)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೯)
- K. Raghavendra Rao
The title of this brief journey into the past, into the fabulous mid - 1940s, may sound some what negative but it is really not meant to be so. When I refer to a wasted genius, what I mean is the gap between potentiality and actuality, possibility and reality. Deva Rao was a genius, and I am using that term without reservation, and the full flowering of that genius did not take place for reasons over which Deva Rao himself had very little control. I shall return to this point later and right now let me begin at the begining, my first encounter of him.

When I joined the BA (Honours) course in English language and literature at Madras Christian College, Tambaram, in 1945, Deva Rao was already there in the second year of that three-year course. Even before I physically faced him, I had already heard about him as a legend. His contemporaries at the college referred to him with awe as a brilliant thinker and a master of English language, both spoken and written.

30 October 2017

ಉಣಿಸೊಂದು ಹೊರೆಯಿವಗೆ

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ - ೩ರ ಉತ್ತರಾರ್ಧ)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೮)
- ಜಿ.ಟಿ. ನಾರಾಯಣ ರಾವ್
ಕ್ರಿಶ್ಚಿಯನ್ ಕಾಲೇಜ್ ಹಾಸ್ಟೆಲ್ಲಿನ ಪುಷ್ಕಳ ಪೌಷ್ಟಿಕ ರುಚಿಕರ ಆಹಾರ ಸೇವನೆಯೂ ದೇವರಾಯರ ಎತ್ತರ, ಸುತ್ತಳತೆ ಅಥವಾ ಭಾರ ವೃದ್ಧಿಸಲು ಶಕ್ತವಾಗಲಿಲ್ಲ. ಅತಿ ಕ್ಷಿಪ್ರ ವೇಳೆಯಲ್ಲಿ ಅತ್ಯಲ್ಪ ಆಹಾರ ಸೇವನೆ, "ಬದುಕುವ ಓದುವ ಬರೆಯುವ ಎಲ್ಲ ಸಂತೋಷಕ್ಕಾಗಿ ಈ ತೊಂದರೆ ಅನುಭವಿಸಬೇಕು ನೋಡಿ!"
ಅವರ ಹೊಟ್ಟೆಯನ್ನೂ ಮಿದುಳು ಮೇದು ವಿಜೃಂಬಿಸುತ್ತಿದ್ದ ದೃಶ್ಯ ಕಂಡಾಗಲೆಲ್ಲ ಹುಟ್ಟಾ ಹೊಟ್ಟೆಬಾಕನೂ ತಿಂಡಿಪೋತನೂ ಆದ ನಾನು ಕೆಣಕುವುದಿತ್ತು. "ದಡ್ಡನಾದರೂ ದೊಡ್ಡನಾಗಿರಬೇಕು, ನನ್ನಂತೆ!"
"ಆತ್ಮ ಭರ್ತ್ಸನೆ ಸಲ್ಲದು. ಪರನಿಂದನೆ ಕೂಡ. ಅವರವರ ಸುಖದು:ಖ ಅವರವರಿಗೆ," ಅವರ ನಯ ನಿರಾಕರಣೆ. ಎಂದೂ ಅಣಕವಾಡಿದವರಲ್ಲ, ಮುಂದೆ ಅವರವರ ಸುಖದುಃಖ ಎಂಬ ಕತೆಯನ್ನೂ ಬರೆದರು. ನಿಜ; ಮುಪ್ಪಿನ ಷಡಕ್ಷರಿ ವಚನ -
ಅವರವರ ದರುಶನಕೆ
ಅವರವರ ವೇಷದಲಿ
ಅವರವರಿಗೆಲ್ಲ ಗುರು ನೀನೊಬ್ಬನೆ
ಅವರವರ ಭಾವಕ್ಕೆ
ಅವರವರ ಪೂಜೆಗಂ
ಅವರವರಿಗೆಲ್ಲ ಶಿವ ನೀನೊಬ್ಬನೆ


23 October 2017

ವಾಮನಮೂರ್ತಿ ತ್ರಿವಿಕ್ರಮ ಕೀರ್ತಿ

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೩)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೭)
- ಜಿ.ಟಿ. ನಾರಾಯಣ ರಾವ್
ದೂರದರ್ಶನ:
೧೯೪೦ರ ದಶಕಾರಂಭದಲ್ಲಿ ಕೊಡಗಿನಲ್ಲಿದ್ದುದು ಕೇವಲ ಮೂರು ಪ್ರೌಢಶಾಲೆಗಳು. ಮಡಕೇರಿಯಲ್ಲಿ ಎರಡು, ವಿರಾಜಪೇಟೆಯಲ್ಲಿ ಒಂದು. ಇವು ಮದ್ರಾಸ್ ಸರ್ಕಾರದ ಶಿಕ್ಷಣ ಮಂಡಳಿಗೆ ಸಂಯೋಜಿತವಾಗಿದ್ದುವು.

ಮಡಿಕೇರಿ ಸೆಂಟ್ರಲ್ ಹೈಸ್ಕೂಲಿನಿಂದ ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕೊಡಗು ಪ್ರಥಮನಾಗಿ ಉತ್ತಾರಿಸಿದೆ (೧೯೪೨). ಅದೇ ಜೂನಿನಲ್ಲಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿಗೆ ದಾಖಲಾದೆ. ಜೂನಿಯರ್ ಇಂಟರ್ಮೀಡಿಯೆಟ್ ಪಿಸಿಎಂ (ಭೌತ - ರಸಾಯನ - ಗಣಿತ ವಿಜ್ಞಾನಗಳು) ಜೋಡಣೆ. ಆಗ ಮೊದಲ ಭ್ರಮನಿರಸನವಾಯಿತು; ಸುಮಾರು ೧೦೦ ಯುವಚೇತನಗಳ ಈ ಸಮುದಾಯದಲ್ಲಿ ನನ್ನ ನೆಲೆ ೫೦ರ ಒಳಗೂ ಇರಲಿಲ್ಲ! ಕೊಡಗು ಪ್ರಥಮ ಮಂಗಳೂರು ಅಂತಿಮ!

16 October 2017

ಮುಟ್ಟಿದೆ ದಿಙ್ಮಂಡಲಗಳ ಅಂಚ

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೨)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೬)
- ಪಿ. ಸೇತುಮಾಧವರಾವ್

ದೇವರಾಯರ ಮತ್ತು ನನ್ನ ಸಂಬಂಧಗಳನ್ನು ಮೂರು ಕಾಲ ವಿಭಾಗಗಳಾಗಿ ಗುರುತಿಸಬಹುದು. ೧. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಾವು ಸಹಪಾಠಿಗಳಾಗಿದ್ದ ಎರಡು ವರ್ಷಗಳು ಮತ್ತು ಮದ್ರಾಸಿನಲ್ಲಿ ನಮ್ಮಿಬ್ಬರ ಆಂಗ್ಲಭಾಷೆಯ ಉನ್ನತ ಅಭ್ಯಾಸದ ಮೂರು ವರ್ಷಗಳು. ೨. ಮಂಗಳೂರು ಸರಕಾರಿ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ನಾವು ಸಹೋದ್ಯೋಗಿಗಳಾಗಿದ್ದ ಎರಡು ವರ್ಷಗಳು. ೩. ಭಾರತ ಸರಕಾರದ ವಿದೇಶಾಂಗ ಖಾತೆಯಲ್ಲಿ ದೇವರಾಯರು ಸೇವೆಗೈಯುತ್ತಿದ್ದ ಸುಮಾರು ೩೪ ವರ್ಷಗಳು.  (ಚಿತ್ರ: ಲೇಖಕ ಪಿ. ಸೇತುಮಾಧವ ರಾಯರದು)

ಬಾಗಲೋಡಿ ದೇವರಾವ್ ಮತ್ತು ನಾನು ೧೯೪೨ರಿಂದ ೧೯೪೪ರವರೆಗಿನ ಎರಡು ವರ್ಷಗಳ ಕಾಲ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಹಪಾಠಿಗಳು.ಆದರೆ ಆಗ ನಮ್ಮ ಒಡನಾಟ ಕಡಿಮೆ ಎನ್ನಬೇಕು. ೨೨೫ ವಿದ್ಯಾರ್ಥಿಗಳನ್ನು ಒಳಗೊಂಡ ಇಂಗ್ಲಿಷ್ ತರಗತಿ ಒಂದು

09 October 2017

ಕ್ರಿಶ್ಚಿಯನ್ ಕಾಲೇಜಿನ ಕ್ವಥನಭಾಂಡದಲ್ಲಿ

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೧)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೫)
- ಕುಶಿ ಹರಿದಾಸ ಭಟ್ಟ

[ಉಡುಪಿಯ ಶೈಕ್ಷಣಿಕ-ಸಾಂಸ್ಕೃತಿಕ-ಸಾಮಾಜಿಕ ದ್ರಷ್ಟಾರರಾಗಿ ರಾರಾಜಿಸಲಿದ್ದ ಕುಶಿ ಮತ್ತು ಕನ್ನದ ಕಥಾಲೋಕಕ್ಕೆ “ಪ್ರಜ್ವಲಿಸುವ ಮಹದುಲ್ಕೆಯ ತೆರದಲಿ” (ಕುವೆಂಪು) ಪ್ರವೇಶಿಸಿದ ಹಾಗೂ ಭಾರತದ ಭಾವೀ ರಾಯಭಾರಿಯಾಗಿ ವಿಜೃಂಭಿಸಲಿದ್ದ ಬಾಗಲೋಡಿ ಎಂಬ `ದ್ರವ್ಯ’ಗಳು ಕ್ರಿಶ್ಚಿಯನ್ ಕಾಲೇಜಿನ ಕ್ವಥನ ಭಾಂಡದಲ್ಲಿ ರೂಪಾಂತರಗೊಂಡ `ಸಿದ್ಧಪಾಕ’ಗಳು, ಪ್ರಸಿದ್ಧ ಸೀಮಾ ಪ್ರತಿಭೆಗಳು – ಜಿಟಿನಾ]

೧೯೪೬ನೆಯ ಜೂನ್ ೨೩ರಿಂದ ೧೯೪೯ನೆಯ ಏಪ್ರಿಲ್ ವರೆಗೆ ತಾಂಬರಂನಲ್ಲಿ ಕಳೆದ ಕಾಲೇಜ್ ದಿನಗಳು ನನ್ನ ಜನ್ಮ ವೃತ್ತಾಂತದ ಸ್ವರ್ಣಪುಟಗಳಾಗಿದ್ದುವು. ಪಾಠಪ್ರವಚನದ ಮೂಲಕ ಕಲಿತದ್ದಕ್ಕಿಂತ ಹೆಚ್ಚಾಗಿ ಓರಗೆಯ ಗೆಳೆಯರಿಂದ, ಕಾಲೇಜಿನ ವಿಶಿಷ್ಟ ಸನ್ನಿವೇಶದಿಂದ, ಸಮಕಾಲೀನ ವಿದ್ಯಮಾನಗಳ ಪ್ರಭಾವದಿಂದ ಅನುಭವ ಗಳಿಸಿದೆ. ಎಲ್ಲ ಅನುಭವಗಳಿಗು ಮನಸ್ಸು ತೆರೆದಿಟ್ಟೆ. ೧೯೪೬-೪೭ ಸ್ವಾತ್ರಂತ್ರ್ಯಪೂರ್ವದ ಒಂದು ವರ್ಷ ಭಾರತದ ರಾಜಕೀಯ ರಂಗ ಪ್ರಕ್ಷುಬ್ಧವಾಗಿತ್ತಲ್ಲವೇ? ಆದರೆ ಕ್ರಿಶ್ಚಿಯನ್ ಕಾಲೇಜಿನ ಪರಿಸರ ಶಾಂತವಾಗಿತ್ತು. ಕಾಲೇಜಿನ ವರಿಷ್ಠರಾದ ಸ್ಕಾಟಿಷ್ ಮಿಶನಿನ ಗುರುಗಳೂ ಪ್ರೊಫೆಸರರುಗಳೂ ಬ್ರಿಟಿಷ್ ಸಾಮ್ರಾಜ್ಯದ ಅವಸಾನ ಸಮೀಪಿಸಿದ್ದನ್ನು ನಿಚ್ಚಳವಾಗಿ ಅರಿತು ಹೊಸ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಾಗುತ್ತಿದರು. “ಎಷ್ಟು ಬೇಕಾದರೂ

02 October 2017

ಆವ ಧೂಳಿನೊಳಾವ ಚೈತನ್ಯ ಕಣವೋ!

ಸೋದರಳಿಯಂದಿರ ಬಂಧ ಸಂಬಂಧಗಳು - ೨
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೪)
- ಎಂ. ಅರವಿಂದ ಶರ್ಮ

ಬಾಗಲೋಡಿ ದೇವರಾಯರ ಅಕ್ಕನ (ರಾಜೀವಿ) ಮಗ ನಾನು. ಅವರು ಕಿನ್ನಿಕಂಬಳದ ಶಾಲೆಯಲ್ಲಿ ೮ನೇ ತರಗತಿ ಮುಗಿಸಿ `ಉನ್ನತ ವ್ಯಾಸಂಗ’ ಮಾಡುವ ಸಲುವಾಗಿ ಮಂಗಳೂರಿನ ನಮ್ಮ ಬಾಡಿಗೆ ಬಿಡಾರದ ಗೂಡು ಸೇರಿದರು – ೧೯೩೦ರ ದಶಕದಲ್ಲಿ. ಅಂದಿನ ಎಲ್ಲ ನಿಮ್ನ ಮಧ್ಯಮ ವರ್ಗಗಳವರಂತೆ ನಮ್ಮದು ಕೂಡ ಹಿರಿ ಕುಟುಂಬ. ಕಡಿಮೆ ವರಮಾನ, ಆದರೂ ಸ್ವಾಭಿಮಾನ ಮತು ವಿದ್ಯಾದಾಹದೀಪ್ತ. ನನ್ನ ತಂದೆ ಖಾಸಗಿ ಆಯುರ್ವೇದ ವೈದ್ಯರು. ಇವರ ಮತ್ತು ದೇವರಾಯರ ಅಣ್ಣ ಶ್ರೀಶರಾಯರ ಅಲ್ಪ ಆದಾಯವೇ ಸಂಸಾರದ ಆರ್ಥಿಕ ಆಧಾರ. ಶ್ರೀಶರಾಯರು ಒಂದು ಬಂಡಸಾಲೆಯಲ್ಲಿ ಕಾರಕೂನ.


ನಾವು ನಾಲ್ವರ ಜೊತೆಗೆ ನಮ್ಮ ಮನೆಯಲ್ಲಿ ದೇವರಾಯರ ತಂಗಿ (ಅನಸೂಯಾ ದೇವಿ), ನಮ್ಮ ತಾಯಿಯ ಚಿಕ್ಕಮ್ಮ ಮತ್ತು ಅಕ್ಕನ ಮಕ್ಕಳು ಕೂಡ ಇದ್ದರು. ಯಾವುದೇ ದಿವಸ ಸರಾಸರಿಯಲ್ಲಿ ಐವರು ವಿದ್ಯಾರ್ಥಿಗಳು ನಮ್ಮಲ್ಲಿಯ ಸದಸ್ಯರು. ಇವರ ಜೊತೆಗೆ ಸ್ವಂತ ಕೆಲಸಕ್ಕಾಗಿ ಮಂಗಳೂರಿಗೆ ಬರುತ್ತಿದ್ದ ನಂಟರಿಷ್ಟರ ಭೇಟಿ, ವಾಸ್ತವ್ಯ ಸದಾ ಇದ್ದದ್ದೇ. ಇವಾವುವೂ ನನ್ನ ತಾಯಿಯ ಮತ್ತು ಶ್ರೀಶಮಾವನ ಔದಾರ್ಯ ದೃಷ್ಟಿಗೆ ಸಮಸ್ಯೆಯೇ ಆಗಲಿಲ್ಲ. ಸ್ವತಃ ಆಸ್ತಮಾ ರೋಗಿಯಾಗಿ ದುರ್ಬಲಿಯಾಗಿದ್ದ ಈ ಮಾವ ಅಂದು ತಮ್ಮ ಬಳಿಗೆ ಬಂದವರಿಗೆ ನೀಡಿದ ಅಭಯ ಹಸ್ತ ಅವಿಸ್ಮರಣೀಯ. ಇವರು ಅವಿವಾಹಿತರಾಗಿಯೇ ಉಳಿದರು. ವಸುಧೈವ ಕುಟುಂಬಕಂ ತತ್ತ್ವವನ್ನು ಅನುಷ್ಠಾನಿಸಿದರು.

25 September 2017

ಅಳಿಯನ ಅಳಿಯದ ನೆನಪುಗಳು

(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೩)
ಸೋದರಳಿಯಂದಿರ ಬಂಧ ಸಂಬಂಧಗಳು ೧
- ವಿ. ರಘುಚಂದ್ರ ಹೆಬ್ಬಾರ್
ಸಂಕ್ಷಿಪ್ತ ಜೀವನ ಚಿತ್ರ
ಬಾಗಲೋಡಿ ದೇವರಾಯರು ನನ್ನ ಸೋದರಮಾವ. ಅವರ ಅಕ್ಕ ಇಂದಿರಾ ನನ್ನ ತಾಯಿ. ದಕ್ಷಿಣ ಕನ್ನದ ಜಿಲ್ಲೆಯ ಕಿನ್ನಿಕಂಬಳ ಇವರ ಜನ್ಮ ಸ್ಥಳ (ಫೆಬ್ರುವರಿ ೨೮, ೧೯೨೭). ತಂದೆ ಕೃಷ್ಣರಾಯರು (೧೮೯೩-೧೯೭೫) ಅಲ್ಲಿಯ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು. ತಾಯಿ ಲಕ್ಷ್ಮಿ (೧೮೯೮-೧೯೩೨). ೧೯೩೨ರಲ್ಲಿ ಈಕೆಯ ಮರಣಾನಂತರ ಕೃಷ್ಣರಾಯರು ಎರಡನೆಯ ಮದುವೆ ಆದರು. ದ್ವಿತೀಯ ಪತ್ನಿಯ ಹೆಸರು ಕೃಷ್ಣವೇಣಿ.

ಕೃಷ್ಣರಾಯರೊಬ್ಬ ಆದರ್ಶ ಗುರು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂತೆ ಅನೇಕ ಯಶಸ್ವೀ ಪ್ರಯೋಗಗಳನ್ನು ನಿರ್ವಹಿಸಿದ ಕುಶಲಿ. ದೇವಮಾವನೊಬ್ಬ ಆಜನ್ಮ ಜೀನಿಯಸ್ – ಯಾವುದೇ ತರಗತಿಯ ಅವಧಿ ಪೂರ್ತಿಗೊಳ್ಳುವ ಮೊದಲೇ ಮೇಲಿನದಕ್ಕೆ ಜಿಗಿಯುತ್ತಿದ್ದ ಬಾಲಪ್ರತಿಭೆ. ಪ್ರತಿಯೊಂದು ತರಗತಿಯಲ್ಲಿಯೂ ಈತನದು ಅಗ್ರಸ್ಥಾನ. (ಅಪ್ಪ - ಕೃಷ್ಣರಾಯರ ಮಡಿಲಲ್ಲಿ ಕುಳಿತ ಬಾಲ - ದೇವರಾಯರ ಚಿತ್ರದ ಸಂಗ್ರಹ ನರಸಿಂಗ ರೈ, ಕೃಪೆ: ಕೆ.ಪಿ. ರಾವ್)

ಮಂಗಳೂರಿನ ಗಣಪತಿ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಅಲ್ಲಿಯ ಆದರ್ಶ ಮುಖ್ಯೋಪಾಧ್ಯಾಯ ಎಂ.ಎಸ್. ಏಕಾಂಬರರಾಯರ ನೆಚ್ಚಿನ ವಿದ್ಯಾರ್ಥಿಯಾಗಿ ಎಸೆಸೆಲ್ಸಿ ಮುಗಿಸಿದರು (೧೯೪೨). ಮುಂದಿನ ಎರಡು ವರ್ಷ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ಮೀಡಿಯೇಟ್ ಅಧ್ಯಯನ (೧೯೪೨-೪೪); ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಇವರು ಆಯ್ದುಕೊಂಡಿದ್ದ ಐಚ್ಛಿಕ ವಿಷಯಗಳು. ಹಿಂದಿ ದ್ವಿತೀಯ ಭಾಷೆ, ಕಾಲೇಜಿನ ಭಾಷಣ, ಲೇಖನ ಸ್ಪರ್ಧೆಗಳಲ್ಲಿ ಇವರು ಸದಾ ಮುಂದು.


18 September 2017

ಶ್ರದ್ಧಾಂಜಲಿಯ ಹನಿ

ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೨)
 ಏರ್ಯ ಲಕ್ಷ್ಮೀನಾರಾಯಣ ಆಳ್ವರ ಮುನ್ನುಡಿ
ಯಾವುದೋ ಒಂದು ಶುಭ ಗಳಿಗೆಯಲ್ಲಿ `ಅಭಿರುಚಿ ಬಂಟ್ವಾಳ’ ಇವರು ಬಾಗಲೋಡಿ ದೇವರಾಯರ ಸಂಸ್ಮರಣ ಕಾರ್ಯಕ್ರಮವನ್ನು ಹಮ್ಮಿಕೊಂಡರು (೧೧-೧೦-೨೦೦೨). ಅಂದು ಬಾಗಲೋಡಿಯವರ ಪರಿಚಯ ಇದೆ ಎಂಬ ನೆಲೆಯಲ್ಲಿ ಪ್ರಧಾನ ಭಾಷಣಗಾರರಾಗಿ ಕನ್ನಡದ ಹಿರಿಯ ಲೇಖಕ, ಚಿಂತಕ ಜಿ.ಟಿ. ನಾರಾಯಣರಾಯರನ್ನು ಕರೆದಿದ್ದರು. ಅಧ್ಯಕ್ಷನಾಗಿ ಸ್ಥಳೀಯನಾದ ನನ್ನನ್ನು ಆಹ್ವಾನಿಸಿದ್ದರು. ಬಾಗಲೋಡಿಯವರ ಕಥೆಗಳ ಕುರಿತು ಮಾತಾಡಲು ಮಹಾಲಿಂಗಭಟ್ಟರನ್ನು ಬರಹೇಳಿದ್ದರು.

ಅಂದು ಜಿಟಿಯವರು ಬಾಗಲೋಡಿಯವರ ಕಾಲೇಜು ವಿದ್ಯಾರ್ಥಿ ಕಾಲದಿಂದ ಹಿಡಿದು ಕೊನೆಯ ದಿನಗಳವರೆಗಿನ, ತಮಗೆ ನೇರವಾದ ಸಂಪರ್ಕದಿಂದ ತಿಳಿದ ಘಟನೆಗಳ ಸುರುಳಿಯನ್ನು, ತಮ್ಮದೇ ಪ್ರಬುದ್ಧ ಧಾಟಿಯಲ್ಲಿ ಬಿಚ್ಚುತ್ತ ಹೋದಂತೆ, ನೆರೆದ ಶ್ರೋತೃಗಳೆಲ್ಲ ಭಾವವಶರಾಗಿದ್ದರು. ಕನ್ನಡ ಸಾರಸ್ವ ಲೋಕದ ಅನನ್ಯ ಪ್ರತಿಭಾವಂತ ಲೇಖಕನೊಬ್ಬನ ಮರೆಯಲ್ಲಿದ್ದ ಬಾಳಿನ ಅನಾವರಣವನ್ನು ಸಮರ್ಥರೀತಿಯಲ್ಲಿ ಜಿಟಿಯವರು ನಡೆಸಿದ್ದರು. ಬಾಗಲೋಡಿಯವರ ಅಷ್ಟು ಸಮೀಪದ ಸಂಪರ್ಕ ಇವರಿಗೆ ಇತ್ತು ಎಂಬುದು ನನಗೆ ಆ ತನಕ ತಿಳಿದಿರಲಿಲ್ಲ. ಅವರ ಕಥಾಸಾಹಿತ್ಯದಿಂದ ಅತ್ಯಂತ ಪ್ರಭಾವಿತನಾಗಿದ್ದ ನಾನಂತೂ ನಾರಾಯಣರಾಯರ ಅನುಭವ ಮಾತಿನ ಮೂಲಕ ಚಿತ್ರಿತವಾಗುತ್ತಿದ್ದ ಬಾಗಲೋಡಿಯವರ ಬದುಕನ್ನು ಅನುಭವಿಸುವುದರಲ್ಲಿ ತನ್ಮಯನಾಗಿದ್ದೆ.