Showing posts with label ನೀನಾಸಂ. Show all posts
Showing posts with label ನೀನಾಸಂ. Show all posts

07 April 2021

ರಂಗಪುರುಷನ ಸಾಕ್ಷಾತ್ಕಾರ ನೋಡುವ ನೆಪದಲ್ಲಿ


೧. ಕಥನಾರಂಭದಲ್ಲಿ

ನೀನಾಸಂ ಮತ್ತು ಸಂಚಿ ಫೌಂಡೇಶನ್ ಸಹಯೋಗದ ವಿಡಿಯೋ ದಾಖಲೀಕರಣದ ಕತೆಗಳು ನಿಮಗೆ ಹೊಸದೇನಲ್ಲ. (ನೋಡಿ: ಸಿನಿಮಾವಲ್ಲ, ದಾಖಲೀಕರಣ) ಅಂಥದ್ದೇ ಯೋಜನೆಯ ಭಾಗವಾಗಿ ೨೦೧೯ರ ಒಂದು ದಾಖಲೀಕರಣಕ್ಕೆ ಜತೆಗೊಟ್ಟ ನನಗೆ, ಅಯಾಚಿತವಾಗಿ ಆ ವರ್ಷದ ನೀನಾಸಂ ರಂಗ ಶಾಲೆಯ ಹೊಸ ವಿದ್ಯಾರ್ಥಿಗಳ ಮೊದಲ ದಿನವನ್ನೂ ನೋಡುವ ಅವಕಾಶ ಒದಗಿತ್ತು. (ನೋಡಿ: ನೀನಾಸಂ ಕಥನ ಮಾಲಿಕೆ...) ಅಂದು ಪ್ರಾಸಂಗಿಕವಾಗಿ, ಆದರೆ ಶುದ್ಧ ಪ್ರಾಯೋಗಿಕವಾಗಿ ಕೆವಿ ಅಕ್ಷರ ಮಾತಾಡುತ್ತಾ (ವಿದ್ಯಾರ್ಥಿಗಳನ್ನು ಉದ್ದೇಶಿಸಿ) "ನೀವೆಲ್ಲ ವರ್ಷದ ಕೊನೆಯಲ್ಲಿ ದಶ ಶಿರನನ್ನು ಮೀರಿಸಿದ ರಂಗಪುರುಷನನ್ನು ಇಲ್ಲಿ ರೂಪಿಸಬೇಕು..." ಎಂದಿದ್ದರು. ಆದರೆ ನಿಮಗೆಲ್ಲ ತಿಳಿದಂತೆ, ‘ಕೋವಿಡ್’ ಮಹಾಮಾರಿಯ ಗೊಂದಲದಲ್ಲಿ ಇಲ್ಲೂ ವಿದ್ಯಾವರ್ಷ ಮೊಟಕುಗೊಂಡಿತ್ತು.ಈಚೆಗೆ ಸರಕಾರದ ಬಿಗಿತಗಳು ಕಡಿಮೆಯಾದ ಮೇಲೆ, ನೀನಾಸಂ ಕಡಿದ ಎಳೆಗಳನ್ನು ಜೋಡಿಸಿ, ಆ ಬಳಗದ ಶಿಕ್ಷಣವನ್ನು ಪೂರ್ಣಗೊಳಿಸಿತ್ತು. ಮತ್ತದನ್ನು ಸಣ್ಣದಾಗಿ ಲೋಕಕ್ಕೆ ಸಾರುವಂತೆ ಎರಡು ದಿನಗಳ ನಾಟಕೋತ್ಸವ ಹಮ್ಮಿಕೊಂಡಿತ್ತು. ಹೀಗೆ ಮೈದಳೆದ ಸುಮಾರು ಇಪ್ಪತ್ತು ತಲೆಗಳ (ವಿದ್ಯಾರ್ಥಿ ಸಂಖ್ಯೆ) ರಂಗಪುರುಷನ ಎರಡು ಅವತಾರಗಳನ್ನು (ಪರಮಪದ ಸೋಪಾನಪಟ ಮತ್ತು ಮಳ್ಳಗಿಂಪೆಲ್) ಕ್ಯಾಮರಾದಲ್ಲಿ ಹಿಡಿಯಲು, ಅತ್ತ ಬೆಂಗಳೂರಿನಿಂದ ಅಭಯನ ಬಳಗ ಹದಿನೇಳರ ರಾತ್ರಿ ಬಸ್ ಹಿಡಿದಿತ್ತು. ‘ಮಗನನ್ನು ಕರೆದರೆ ಪೋಷಕರು ಮುಫತ್ತು’ ಎಂದು ನೀನಾಸಂ ತಿಳಿದರೂ ಸರಿ, ಎಂದು ಇತ್ತ ಮಂಗಳೂರಿನಿಂದ ನಾವೂ ಹೊರಟೆವು. ಹೊಸ ಎರಡು ನಾಟಕಗಳನ್ನು ಕಣ್ದುಂಬಿಕೊಳ್ಳುವುದರೊಡನೆ, ನಮ್ಮ ತಿರುಗಾಡಿತನಕ್ಕೊಪ್ಪುವಂತೆ (ಹೀರೊ ಹೊಂಡಾ ಸೂಪರ್ ಸ್ಪ್ಲೆಂಡರ್ - ೧೨೫ ಸಿಸಿ) ಬೈಕೇರಿದ್ದೆವು.


೨. ಹೀಗೊಬ್ಬ ಚಾಯ್ವಾಲಾ

ಸೋಮಾರಿ ಅರುಣ ಜಡ ಕಳೆದು, ಲೋಕವನ್ನು ಹುರಿಯಲು ಕಾವೇರಿಸುವ ಮೊದಲು ನಾವು ಪಡುಬಿದ್ರೆಗಾಗಿ ಕಾರ್ಕಳ ಮುಟ್ಟಿದ್ದೆವು. ಕಾರ್ಕಳದ ಹೊರಬಳಸಿನ ರಸ್ತೆಯಲ್ಲಿದ್ದ ಸಣ್ಣ ಹೋಟೆಲಿಗೆ ನುಗ್ಗಿದೆವು. ಬಟವಾಡೆ ಹಿರಿಯ ಎದುರು

06 November 2019

ಇನ್ನೊಂದು ಸಂಸ್ಕೃತಿ ಶಿಬಿರದ ನಿರೀಕ್ಷೆಯಲ್ಲಿ...

(ನೀನಾಸಂ ಕಥನ ಮಾಲಿಕೆ ೪) 

ನಿನ್ನೆ ಕಂಡದ್ದು

"ನಡು ಬೇಸಗೆಯಿರುಳ ನಲ್ಗನಸುಗಳನ್ನು ಯಾವುದೋ ಕೌಟುಂಬಿಕ ಕೂಟವೊಂದರ ಆನಂದಕ್ಕಾಗಿಯೇ ಶೇಕ್ಸ್‍ಪಿಯರ್ ರಚಿಸಿದ್ದಿರಬೇಕು. ಆದರೆ ದೂರದೃಷ್ಟಿಯಲ್ಲಿ ಅದು ಆತನ ಎಲ್ಲ ನಾಟಕಗಳ ಪ್ರಯೋಗಗಳೂ ನಡೆಯುತ್ತಿದ್ದ ಗ್ಲೋಬ್ ಥಿಯೇಟರ್ ಪರಿಸರಕ್ಕೂ ಹೊಂದುವಂತೆ ರಚಿಸಿದ,

ಪ್ರಮುಖ ಪ್ರಹಸನ ನಾಟಕ" ಎಂಬ (ಶಿಬಿರಾರ್ಥಿಯಾಗಿಯೇ ಬಂದಿದ್ದ ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರ - ಕ್ಷಮಿಸಿ, ಅವರ ಹೆಸರು ನೆನಪಿಲ್ಲ) ಉಪಯುಕ್ತ ಪ್ರಸ್ತಾವದೊಡನೇ ನಾಲ್ಕನೇ ದಿನದ ಮೊದಲ ಕಲಾಪ, ಅಂದರೆ ಹಿಂದಿನ ದಿನದ ರಂಗಪ್ರಯೋಗದ ವಿಮರ್ಶೆ, ತೊಡಗಿತ್ತು. ಹಿಂದೆ ಹೇಳಿದಂತೆ, ಇದು ಹೆಗ್ಗೋಡಿನ ಹತ್ತು ಸಮಸ್ತರ, ಸುಬ್ಬಣ್ಣ ಸ್ಮೃತಿದಿನದ (ಜುಲಯ್ ೧೬) ಪ್ರಸ್ತುತಿಯ, ಎರಡನೆಯ ಪ್ರಯೋಗ ಮತ್ತು ನಿರ್ದೇಶನ ಇಕ್ಬಾಲ್ ಅಹಮದ್ದರದ್ದು. ಅನಿವಾರ್ಯ ಕಾರಣಗಳಿಂದ ಅಂದು ನಿರ್ದೇಶಕರು ಬಂದಿರಲಿಲ್ಲವಾದರೂ ಒಟ್ಟಾರೆ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳಿಗೆ ಏನೂ ಕೊರತೆಯಾಗಲಿಲ್ಲ. ಅದರಲ್ಲೂ ಶಿಷ್ಟ ತಂಡದೊಳಗೊಂದು ಅಪ್ಪಟ ಜನಪದ ತಂಡವನ್ನು ಮಾಡಿ, ನಾಟಕದೊಳಗಿನ ನಾಟಕವನ್ನು

05 November 2019

ಅದ್ವಿತೀಯ ದಿನಗಳ ಚಿತ್ರಣ

(ನೀನಾಸಂ ಕಥನ ಮಾಲಿಕೆ ೩) 


ರಾಕ್ಷಸ ತಂಗಡಿ 

ಮೊದಲೇ ಹೇಳಿದಂತೆ, ಎರಡನೇ ದಿನದ ಮೊದಲ ಕಲಾಪ - ಹಿಂದಿನ ಸಂಜೆ ನೋಡಿದ ನಾಟಕ - ರಾಕ್ಷಸ-ತಂಗಡಿಯ ವಿಮರ್ಶೆ, ಜಶವಂತ ಜಾಧವರ ನಿರ್ವಹಣೆಯಲ್ಲಿ ನಡೆಯಿತು. ಅವರು ಪ್ರಯೋಗದ ಕುರಿತು ಪೀಠಿಕೆ ಕೊಡಲಿಲ್ಲ, ಹೀಗೊಂದು ಸಣ್ಣ ಸೂಚನೆಯನ್ನಷ್ಟೇ ಕೊಟ್ಟರು. ಔಪಚಾರಿಕ ಅಭಿನಂದನೆ, ಹೊಗಳಿಕೆಗಳಲ್ಲಿ ತೇಲಿಹೋಗದೆ, ನೇರ ನಾಟಕದ ಕುರಿತ ನಿಮ್ಮ ಅಭಿಪ್ರಾಯವನ್ನಷ್ಟೇ ಕೊಡಿ. ಚರ್ಚೆಗೆ ಬಂದಲ್ಲಿ ವಿವರಣೆ ಕೊಡಿ. ಮೊದಲ ಅವಕಾಶಗಳು ಕಿರಿಯರವು, ಮುಂದುವರಿದಂತೆ ಹಿರಿಯರೂ ಮುಕ್ತ ಚರ್ಚೆಯಲ್ಲಿ
ಪಾಲ್ಗೊಳ್ಳುತ್ತಾರೆ. ರಾಕ್ಷಸ ತಂಗಡಿಯ ನಾಟಕಕಾರ ಗಿರೀಶ್ ಕಾರ್ನಾಡ್ ಬದುಕಿಲ್ಲ. ಉಳಿದಂತೆ, ನೀನಾಸಂ ಪರಂಪರೆಯಂತೆ, ನಿರ್ದೇಶಕ (ಬಿ. ಆರ್ ವೆಂಕಟ್ರಮಣ ಐತಾಳ) ಹಾಗೂ ತಂಡದ ಯಾರಿಂದಲೂ ‘ಉತ್ತರ’ವನ್ನು ನಿರೀಕ್ಷಿಸಬೇಡಿ. 

ರಾಕ್ಷಸ ತಂಗಡಿ ಇದೇ ಸರ್ವಪ್ರಥಮವಾಗಿ ರಂಗಕ್ಕೇರುತ್ತಿದೆ ಎಂದೊಂದು ಮಾತು ಬಂದಿತ್ತು - ಅದು ತಪ್ಪು. ನಾವು ತಿಂಗಳ ಹಿಂದೆಯೇ, ಉಡುಪಿ ನಿರ್ಮಾಣದಲ್ಲಿ ಇದನ್ನು ಮಂಗಳೂರಿನಲ್ಲೇ ನೋಡಿದ್ದೆವು. ಶಿಬಿರದಲ್ಲಿ ಮುಖ್ಯವಾಗಿ, ಇದು ಗಿರೀಶ ಕಾರ್ನಾಡರು ವಯೋಸಹಜವಾದ ದೌರ್ಬಲ್ಯಗಳ ಕಾಲದಲ್ಲಿ ಬರೆದ (ಕೊನೆಯದ್ದೂ ಹೌದು) ನಾಟಕವಾದ್ದರಿಂದ ತುಂಬ ಜಾಳಾಗಿದೆ. ಐತಿಹಾಸಿಕವಾಗಿ ವಿಜಯನಗರ ಸಾಮ್ರಾಜ್ಯದ ಅವನತಿ ಸಣ್ಣ ಸಂಚುಗಳ ಕೂಟ, ದೊಡ್ಡ ನಾಟಕೀಯ ರೂಪದ್ದಲ್ಲ. ಅಂಥದ್ದನ್ನು ಪ್ರಯೋಗಿಸುವಲ್ಲಿ ಪೂರ್ಣ ಪಠ್ಯಾನುಸರಣೆ ಮಾಡಿದ್ದು ಸರಿಯಾಗಿಲ್ಲ ಎಂಬರ್ಥದ ಮಾತುಗಳು ಬಂದವು. ನಾನು ಪಠ್ಯ ಓದಿಲ್ಲ. ನಾಟಕೀಯತೆಗಿಂತಲೂ

02 November 2019

ಸಂಸ್ಕೃತಿ ಶಿಬಿರ ೨೦೧೯ -‘ಕಲಾನುಭವ’

(ನೀನಾಸಂ ಕಥನ ಮಾಲಿಕೆ ೨)

ಅನೌಪಚಾರಿಕ ಸುಬ್ಬಣ್ಣ

೧೯೭೫ರಲ್ಲಿ ನಾನು ಪುಸ್ತಕದಂಗಡಿ ತೆರೆದಾಗ, ಸಹಜವಾಗಿ ಅಕ್ಷರಪ್ರಕಾಶನದ ನೆಪದಲ್ಲಿ ಹೆಗ್ಗೋಡೆಂಬ ಪಕ್ಕಾ ಹಳ್ಳಿಯ ಸಂಪರ್ಕವಾಯ್ತು. ಆದರೆ ಅದು ಬಲು ಬೇಗನೆ ವ್ಯಾಪಾರಿ ಬಂಧದಿಂದ ಮೇಲೇರಿ ಬಹುಮುಖೀ ಸಾಂಸ್ಕೃತಿಕ ಚಳವಳಿಕಾರ - ಕೆವಿ ಸುಬ್ಬಣ್ಣ, ಮುಂದುವರಿದು ಅವರ ಮಗ ಕೆವಿ ಅಕ್ಷರರ ಬಳಗದ ಗಾಢ ಸಾಂಸ್ಕೃತಿಕ ಸಂಬಂಧವೇ ಆಗಿದೆ. ೧೯೪೯ರಲ್ಲಿ ಹೆಗ್ಗೋಡಿನ ಹಳ್ಳಿಗರು ಗ್ರಾಮೀಣ ಮನರಂಜನೆಗೆಂದು ಕಟ್ಟಿಕೊಂಡ ಕೂಟ - ನೀಲಕಂಠೇಶ್ವರ ನಾಟ್ಯಸೇವಾ ಸಂಘ, ಅಥವಾ ಕಿರುರೂಪದಲ್ಲಿ ನೀನಾಸಂ. ಅದಕ್ಕೆ ಸ್ಪಷ್ಟ ಸಾಂಸ್ಥಿಕರೂಪ ಮತ್ತು ದಿಟ್ಟ ಸಾಂಸ್ಕೃತಿಕ ನಿಲುವು ಕೊಟ್ಟವರು ಕೆವಿ ಸುಬ್ಬಣ್ಣ. (ನೋಡಿ: ಸಹಪಾಠಿ ಗಂಗಾಧರ ಕಲ್ಲಹಳ್ಳ ಕಂಡ ಸುಬ್ಬಣ್ಣ

ಸುಬ್ಬಣ್ಣನವರ ಸಹಯೋಗದ ನೀನಾಸಂ ೧೯೭೨ರಲ್ಲಿ ನಭೂತೋ ಎನ್ನುವಂತೆ, ಹಳ್ಳಿಮೂಲೆಯ ಹೆಗ್ಗೋಡಿನಲ್ಲಿ ಶಿವರಾಮ ಕಾರಂತ ರಂಗಮಂದಿರ ಕಟ್ಟಿ, ಸಿನಿಮಾ ಮತ್ತು ಯಾವುದೇ ರಂಗಪ್ರಯೋಗಗಳಿಗೆ ಮುಕ್ತ ಅವಕಾಶವನ್ನು ಲೋಕಾರ್ಪಣಗೊಳಿಸಿತು. ಇದನ್ನು ಕೇಂದ್ರವಾಗಿಟ್ಟುಕೊಂಡು ವ್ಯಾಪಿಸಿದ ಹೆಚ್ಚಿನ ಚಟುವಟಿಕೆಗಳು ನಾಟಕಕ್ಕೇ ಸಂಬಂಧಿಸಿತ್ತು. ಸಹಜವಾಗಿ (೧೯೮೦ರಲ್ಲಿ) ರಂಗಶಿಕ್ಷಣ ಕೇಂದ್ರವೂ ಅದರ ‘ಪುಣ್ಯಫಲ’ವನ್ನು ರಾಜ್ಯಾದ್ಯಂತ
ಮುಟ್ಟಿಸಲು (೧೯೮೫ರಲ್ಲಿ) ‘ತಿರುಗಾಟ’ವೂ ಹೊರಟಿತು, ಇಂದಿಗೂ ಶಿಸ್ತುಬದ್ಧವಾಗಿ ನಡೆದೇ ಇದೆ. ಇವಕ್ಕೆಲ್ಲ ಅನಿವಾರ್ಯ ಸಂಗಾತಿಗಳಾಗಿ ಕೂಡಿಕೊಂಡ ಕಛೇರಿ, ವಸತಿ, ಭೋಜನಾಲಯ, ಗ್ರಂಥಾಲಯ ಮುಂತಾದವುಗಳೂ ರಂಗ ಮಂದಿರದ ಸರಳ ಉಪಯುಕ್ತತೆಯನ್ನೇ ಸಾರುತ್ತವೆ; ಸರಕಾರೀ ರಂಗದಂತೆ, ಅನುಪಯುಕ್ತ ವೈಭವೀಕರಣದಲ್ಲಿ ಕಳೆದುಹೋಗಿಲ್ಲ. 

29 October 2019

ನೀನಾಸಂ ಹೆಗ್ಗೋಡು ವಠಾರಕ್ಕೆ ....



(ನೀನಾಸಂ, ಕಥನ ಮಾಲಿಕೆ ೧) 


ನೀನಾಸಂನ ಮಹತ್ತರ ನಾಟಕಗಳು ಮತ್ತು ತತ್ಸಂಬಂಧೀ ಕೆಲವು ಕಲಾಪಗಳನ್ನು ಸಂಚಿ ಫೌಂಡೇಶನ್ ವಿಡಿಯೋ ದಾಖಲೀಕರಣಕ್ಕೊಳಪಡಿಸಿ, ಯೂ ಟ್ಯೂಬ್ ಮೂಲಕ ಉಚಿತವಾಗಿ ಲೋಕಾರ್ಪಣಗೊಳಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಈ ದಾಖಲೆಗಳು ಸಾರ್ವಕಾಲಿಕವಾಗುಳಿಯುತ್ತವೆ ಎನ್ನುವ ಎಚ್ಚರದೊಡನೆ ಸಂಚಿ ದುಡಿದರೆ, ಆಯಾ ಕಾಲಘಟ್ಟದ ಅತ್ಯುತ್ತಮ ಪ್ರಯೋಗವನ್ನೇ ಕೊಡಬೇಕೆನ್ನುವ ಕಾಳಜಿ ನೀನಾಸಂನಲ್ಲಿದೆ. ಆ ನಿಟ್ಟಿನಲ್ಲೇ ೧೫-೭-೧೯ರಂದು, ಸದ್ಯದ ಎರಡು ಹೊಸ ರಂಗಪ್ರಯೋಗಗಳ ವಿಶೇಷ ಪ್ರದರ್ಶನವನ್ನು ನೀನಾಸಂ ವ್ಯವಸ್ಥೆ ಮಾಡಿತ್ತು. ಅದಕ್ಕೆ ಪೂರ್ವಭಾವಿಯಾಗಿ ಅಭಯನ ‘ಪಡ್ಡಾಯಿ - ಚಿತ್ರ ಕಟ್ಟಿದ ಕಥೆ, ಚಿತ್ರ ಕಥೆ’ ಪುಸ್ತಕದ ಲೋಕಾರ್ಪಣ (೧೩-೭-೧೯) ಮಂಗಳೂರಿನಲ್ಲಿ ನಡೆಯಿತು. ಪಡ್ಡಾಯಿ ಪುಸ್ತಕದ ಪ್ರಕಾಶಕನ ನೆಲೆಯಲ್ಲೂ ಸ್ವತಃ ಪುಟ ವಿನ್ಯಾಸ ಮಾಡಿದವನ ಭಾಗೀದಾರಿಕೆಯಲ್ಲೂ ಹೆಗ್ಗೋಡಿನಿಂದ ಕೆ.ವಿ. ಶಿಶಿರ (ಕೆವಿ ಅಕ್ಷರರ ಮಗ)
ಕಾರಿನಲ್ಲಿ ಬಂದಿದ್ದರು. ಅವರು ಮಾರಣೇ ದಿನ ವಾಪಾಸು ಹೊರಟಾಗ, ದಾಖಲೀಕರಣದ ಜವಾಬ್ದಾರಿಯೊಡನೆ ಅಭಯ ಮತ್ತು ಆತನ (ಪಡ್ಡಾಯಿಯದ್ದೂ) ಕ್ಯಾಮರಾಮ್ಯಾನ್ ವಿಷ್ಣು ಸೇರಿಕೊಂಡರು. ಹೆಗ್ಗೋಡಿನಿಂದ ಬರುವಾಗಲೇ ಜತೆಗೊಟ್ಟಿದ್ದ, ಪಡ್ಡಾಯಿಯ ನಟ, ಪ್ರಸ್ತುತ ನೀನಾಸಂನ ಅಧ್ಯಾಪಕ ಅವಿನಾಶ್ ರೈ ಜತೆಗೆ ನಾನೂ ಕೇವಲ ಪ್ರೇಕ್ಷಕನ ನೆಲೆಯಲ್ಲಿ ಸೇರಿಕೊಂಡೆ.

17 September 2018

ದಾಖಲೀಕರಣದ ದುಮ್ಮಾನಗಳು


ನೀನಾಸಂಗೆ ಔಪಚಾರಿಕತೆಯ ಕಟ್ಟುಪಾಡುಗಳು ಹಿಡಿಸುವುದಿಲ್ಲ. ಅನಿವಾರ್ಯತೆಯಲ್ಲಿ ಉದ್ಘಾಟನೆ, ಸಮಾರೋಪ ಕಲಾಪಗಳು ನಡೆದರೂ ದೊಡ್ಡವಾಗುವುದಿಲ್ಲ, ಗಟ್ಟಿ ಕೆಲಸವನ್ನು ತೋರಿಸಿ, ಉಪಯುಕ್ತತೆಯನ್ನು ಸಾರುತ್ತವೆ. ರಂಗಶಿಕ್ಷಣ ಇದರ ಪ್ರಧಾನ ಲಕ್ಷ್ಯ. ಅದರ ಭಾಗವಾಗಿ ಸಜ್ಜುಗೊಳ್ಳುವ ಅನೇಕ ನಾಟಕಗಳು ಅಲ್ಲೇ ಒಂದೋ ಎರಡೋ ಸಾರ್ವಜನಿಕ ಪ್ರದರ್ಶನಕ್ಕಷ್ಟೇ ಉಳಿದು ಬರ್ಖಾಸ್ತಾಗುತ್ತವೆ. ಶಿಕ್ಷಣ ಕೇಂದ್ರದ ಚಟುವಟಿಕೆಯನ್ನು ವಿಸ್ತೃತ ಕನ್ನಡ ಜಗತ್ತಿಗೆ ಪರಿಚಯಿಸುವುದರೊಡನೆ,
ರಂಗಾಸಕ್ತಿ ಪ್ರೇರಿಸಲೆಂದೇ ಪ್ರತ್ಯೇಕವಾಗಿ ಸಂಘಟನೆಗೊಳ್ಳುವ, ಆಹ್ವಾನಿತ ರಂಗ ಪರಿಣತರ ತಂಡ ತಿರುಗಾಟ. ಇವು ನಿರ್ದಿಷ್ಟ ರಂಗಕೃತಿಗಳೊಡನೆ ಎರಡು ಮೂರು ತಿಂಗಳು ‘ಕಸರತ್ತು’ ನಡೆಸಿ, ನೀನಾಸಂನ ವಾರ್ಷಿಕ ‘ಸಂಸ್ಕೃತಿ ಶಿಬಿರ’ದಲ್ಲಿ ಮೊದಲು ಸಾರ್ವಜನಿಕ ಪ್ರದರ್ಶನಕ್ಕಿಳಿಯುತ್ತವೆ. ಪ್ರತಿ ತಿರುಗಾಟ ತಂಡದ ಬಂಧ ಮತ್ತು ಪ್ರದರ್ಶನಾವಧಿ ಒಂದು ವರ್ಷಕ್ಕೇ ಸೀಮಿತ. ತಿರುಗಾಟದಲ್ಲಿ ಕೆಲವು ಮುಖಗಳು ಮತ್ತೆ ಮತ್ತೆ ಕಾಣಿಸಿದರೂ ವ್ಯವಸ್ಥೆಯಲ್ಲಿ ಅವು ಪ್ರತಿವರ್ಷ ಸ್ವಪ್ರೇರಣೆಯಿಂದ

12 October 2017

ಜ್ಞಾನಕಡಲಿಗೆ ಹೆಗ್ಗೋಡಿನ ಹೊಸ ಹನಿಗಳು.....

ನೀನಾಸಂನ ವಾರ್ಷಿಕ ಸಂಸ್ಕೃತಿ ಶಿಬಿರ ಅದರ ವಾರ್ಷಿಕ ತಿರುಗಾಟ ನಾಟಕಗಳ ನಾಂದಿಯೂ ಹೌದು. ಎಂದಿನಂತೆ ಈ ವರ್ಷದ ಶಿಬಿರ ಅಕ್ಟೋಬರ್ ಒಂದರಿಂದ ನಡೆಯಲಿದೆ ಎಂದು ತಿಳಿಯುತ್ತಿದ್ದಂತೆ, ಸಂಚಿ ಬಳಗದ ದಾಖಲೀಕರಣದ ದಿನಾಂಕವೂ ಸೆಪ್ಟೆಂಬರ್ ೨೬ಕ್ಕೇ ನಿಗದಿಗೊಂಡಿತು. ಅದು ಎಂದಿನಂತೆ ಸಂಚಿ ದಾಖಲೀಕರಣಕ್ಕಾಗಿ ವಿಶೇಷ ಪ್ರದರ್ಶನ (ಸಾರ್ವಜನಿಕರಿಗಿಲ್ಲ) ಮತ್ತು ದಾಖಲೀಕರಣದ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಗರಿಷ್ಠ ಪ್ರದರ್ಶನಗಳ ವ್ಯವಸ್ಥೆಯೂ ಆಗಿರುತ್ತದೆ. ಸಂಚಿ ಫೌಂಡೇಶನ್, ಭಿನ್ನ ಕಾರ್ಯವಲಯಗಳ ಆದರೆ ಸಾಂಸ್ಕೃತಿಕ ಕನ್ನಡ ಕಟ್ಟುವಲ್ಲಿ ಏಕಾಸಕ್ತಿಯ ಮೂವರ ಕೂಟ. ಸಂಚಿಯಲ್ಲಿ ದಾಖಲೀಕೃತ ಮಾಹಿತಿಯ ಅಂತರ್ಜಾಲ ನಿರ್ವಹಣೆ ಗಣಕತಜ್ಞ ಓಂಶಿವಪ್ರಕಾಶ್ ನಡೆಸಿದರೆ, ವೈಚಾರಿಕ ಹಂದರ ಕಟ್ಟುವವರು ಪ್ರಜಾವಾಣಿ ಬಳಗದ ಬಹುಶ್ರುತ ಸಂಪಾದಕ ಎನ್.ಎ.ಎಂ ಇಸ್ಮಾಯಿಲ್.

03 August 2017

ನೀನಾಸಂನಲ್ಲಿ ನಾಟಕಗಳ ಮಳೆ, ಮಳೆ ನೀರ ಕೊಯ್ಲು!

“ಹೆಗ್ಗೋಡಿನಲ್ಲಿ ಮತ್ತೆ ಮೂರು ನಾಟಕಗಳ, ನಾಲ್ಕು ಪ್ರದರ್ಶನ” ಎಂದು ಅಭಯ (ಮಗ) ನಮಗೆ ಕೊಟ್ಟದ್ದು ವೈಯಕ್ತಿಕ ಸೂಚನೆ ಮಾತ್ರ. ಆದರೆ ನಾನು, ದೇವಕಿ ಎಂದಿನಂತೆ ಅದನ್ನು ಆಮಂತ್ರಣವಾಗಿಯೇ ಗ್ರಹಿಸಿ, ಮಂಗಳೂರಿನಿಂದ ಬಸ್ಸು ಹಿಡಿದು ೧೬-೭-೧೭ರ ಮಧ್ಯಾಹ್ನಕ್ಕೇ ನೀನಾಸಂ ಸೇರಿಕೊಂಡೆವು. ಅಲ್ಲಿನ ಪ್ರದರ್ಶನಗಳನ್ನು ದಾಖಲೀಕರಣಕ್ಕೊಳಪಡಿಸುವ ಯೋಜನೆಯಂತೆ, ಅಭಯ ಅವನ ಕ್ಯಾಮರಾ ತಂಡದೊಡನೆ ಹಿಂದಿನ ರಾತ್ರಿ ಬೆಂಗಳೂರು ಬಿಟ್ಟು, ಅಂದೇ ಬೆಳಿಗ್ಗೆ ಅಲ್ಲಿಗೆ ತಲಪಿದ್ದ. ಅವನಿಗೆ ನೀನಾಸಂ ಕೊಟ್ಟಿದ್ದ ವಸತಿ ವ್ಯವಸ್ಥೆಗೆ ನಾವೂ ಸೇರಿಕೊಂಡೆವು.

06 November 2015

ನೆಲ ನಿಲ್ಲಿಸುವುದು, ನೆಲ ಮುಳುಗಿಸುವುದು!


(ನೀನಾಸಂ ನಾಟಕಗಳ ದಾಖಲೀಕರಣ

ಹಿಂದೆ, ಮುಂದೆ - ೩)

ನೀನಾಸಂ ತಿರುಗಾಟದ ದಾಖಲೀಕರಣದ ಮೂರನೇ ಹಂತ ಸಂದರ್ಶನಗಳದ್ದು. ಇದನ್ನು ವೈಯಕ್ತಿಕ ನೆಲೆಯಲ್ಲಿ ಇಸ್ಮಾಯಿಲ್, ಅಭಯ ಮತ್ತು ವಿಷ್ಣು ನಡೆಸುತ್ತಿದ್ದರು. ಅಲ್ಲಿ ತಾಂತ್ರಿಕವರ್ಗದಿಂದ ಹೊರಗಿನವರ ಉಪಸ್ಥಿತಿ ಉಪದ್ರವಾಗುವುದೇ ಹೆಚ್ಚು. ಇದನ್ನು ಮುಂದಾಗಿಯೇ ಯೋಚಿಸಿ ನಾವು ಮರಳುವ ಯೋಚನೆ ಮಾಡಿದ್ದೆವು.

ಕೆ.ವಿ.ಸುಬ್ಬಣ್ಣ ವಿದ್ಯಾಭ್ಯಾಸದ ಅನಿವಾರ್ಯತೆಗೆ ಮೈಸೂರಿನವರೆಗೆ (ಬಿ.ಎ. ಆನರ್ಸ್) ಹೋದರೂ ಸಾಂಸ್ಕೃತಿಕ ರಂಗದ ತನ್ನ ಪ್ರಯೋಗಗಳನ್ನು ರೂಢಿಸಲು ತನ್ನ ಹುಟ್ಟೂರ ವಲಯ - ಹೆಗ್ಗೋಡು, ಉಳಿಸಿಕೊಂಡೇ ಇದ್ದರು. ಆದರೆ ಕಲಿಕೆ (ಇಂಜಿನಿಯರಿಂಗ್), ಆಸಕ್ತಿಗಳಿಂದ (ರಾಷ್ಟ್ರೀಯ ನಾಟಕ ಶಾಲೆ, ದಿಲ್ಲಿಯ ಪದವೀಧರ) ಸ್ಪಷ್ಟ ನಗರಮುಖಿಯಾಗಬೇಕಿದ್ದವರು ಪ್ರಸನ್ನ. ಇವರು ತನ್ನ ಸಮುದಾಯ ಸಂಘಟನಾ ಚಟುವಟಿಕೆಗಳಿಗೆ ಆರಿಸಿಕೊಂಡದ್ದು ಹೆಗ್ಗೋಡು – ಒಂದು ಆಕಸ್ಮಿಕ. ಆದರೆ `ಚರಕ’ ಎಂಬ ಹೆಸರಿನಲ್ಲಿ ಇವರು ಗ್ರಾಮೀಣ ಜನತೆಯನ್ನು ಅದರಲ್ಲೂ ಮುಖ್ಯವಾಗಿ ಮಹಿಳೆಯರನ್ನು ಸಂಘಟಿಸಿ, ಮುಖ್ಯವಾಗಿ ಕೈಮಗ್ಗದಲ್ಲಿ ನಡೆಸುತ್ತಿರುವ ಕೆಲಸಗಳು ಸಾಕಷ್ಟು ದೊಡ್ಡದೇ ಇರಬೇಕು. ಮೊದಮೊದಲು ಯಾವುದೇ ಸಾಂಸ್ಕೃತಿಕ ಸಮಾವೇಶಗಳು ಇದ್ದಲ್ಲಿ ಚರಕ ಸಂಸ್ಥೆಯ ಪ್ರತಿನಿಧಿಗಳು ತಮ್ಮದೇ ತಯಾರಿಯ, ವಿವಿಧ ನಮೂನೆಯ ಕೈಮಗ್ಗದ ಉಡುಪುಗಳ ಮಳಿಗೆ ತೆರೆಯುತ್ತಿದ್ದರು. ಈಚೆಗೆ ಬೆಂಗಳೂರು ಮಂಗಳೂರೂ ಸೇರಿದಂತೆ ಕೆಲವೆಡೆಗಳಲ್ಲಿ ತಮ್ಮ ಖಾಯಂ `ದೇಸೀ’ ಮಳಿಗೆಗಳ ಮಟ್ಟಕ್ಕೂ ವಹಿವಾಟನ್ನು ವಿಸ್ತರಿಸಿದ್ದಾರೆ.

30 October 2015

ಸಿನಿಮಾವಲ್ಲ, ದಾಖಲೀಕರಣ!


ಸಿನಿಮಾವಲ್ಲ, ದಾಖಲೀಕರಣ!
(ನೀನಾಸಂ ನಾಟಕಗಳ ದಾಖಲೀಕರಣ, ಹಿಂದೆ, ಮುಂದೆ - ೨)

ನೀಲಕಂಠೇಶ್ವರ ನಾಟ್ಯ ಸಂಘ, ಕಿರಿದರಲ್ಲಿ ನೀನಾಸಂ, ತನ್ನ ವರ್ಷ ಪೂರ್ಣ ರಂಗ ಶಿಕ್ಷಣ, ಅಕ್ಷರ ಪ್ರಕಾಶನದ ಮೂಲಕ ಸಾಹಿತ್ಯ ಸೇವೆ ಮತ್ತು ವೈಚಾರಿಕ ಚಿಂತನೆಗಳಿಗೊಂದು ದೊಡ್ಡ ಸಾರ್ವಜನಿಕ ಭಾಗೀದಾರಿಕೆಗೆ ಕೊಡುವ ಅವಕಾಶಕ್ಕೆ ಸದ್ಯದ ಹೆಸರು ಸಂಸ್ಕೃತಿ ಶಿಬಿರ.

ಇದು ವರ್ಷಾವಧಿ ಜಾತ್ರೆಯಂತೆ ನಡೆಸಲೇ ಬೇಕಾದ ಹರಕೆ ಏನು ಅಲ್ಲ. ಅನುಲ್ಲಂಘನೀಯ ವಿಧಿ ನಿಷೇಧಗಳು, ಔಪಚಾರಿಕ ಉದ್ಘಾಟನೆ ಸಮಾರೋಪ ಸಮಾರಂಭಗಳು, ಸಾವಿರದೊಂದು ಋಣಸಂದಾಯಕ್ಕೆಂದೇ ಮಂತ್ರಿ, ಉದ್ಯಮಿಗಳಿಗೆ ವೇದಿಕೆಯ ಮೇಲೆ ಸ್ಥಾನ ಅಥವಾ ಮಾತಿಗವಕಾಶ, ಸಮ್ಮಾನ ಇತ್ಯಾದಿ ಏನೂ ಇಲ್ಲಿ ಸಲ್ಲುವುದಿಲ್ಲ. ಆದರೂ ಮೂರು ದಶಕಗಳಿಗೂ ಮಿಕ್ಕು ಕಾಲದಿಂದ ನಿರಂತರವಾಗಿ, ಇತಿಹಾಸದ ಭಾರ ತಲೆಯ ಮೇಲೆ ಹೊತ್ತುಕೊಳ್ಳದೇ ಪ್ರತಿ ಸಲವೂ ಹೊಸತೆಂಬ ಭಾವದಿಂದಲೇ ನಡೆದು ಬಂದಿದೆ. ತೀರಾ ಮೊದಲು ಸಿನಿಮಾ ರಸಗ್ರಹಣದಿಂದ ತೊಡಗಿದ ಈ ಶಿಬಿರಸರಣಿ, ನಾಟಕ, ಸಾಹಿತ್ಯ, ಸಂಗೀತ ಎಂದಿತ್ಯಾದಿ ಹಾಯ್ದು ಇಂದು `ಸಂಸ್ಕೃತಿ’ ಹೆಸರಿನಲ್ಲಿ, ಆದರೆ ಎಂದೂ ಮನೋವಿಕಾಸದ ಉಪಯುಕ್ತತೆಗೆ ಎರವಾಗದಂತೆ ಗಂಭೀರವಾಗಿ ನಡೆಯುತ್ತಲೇ ಬಂದಿದೆ. ಈ ವರ್ಷದ ಸಂಸ್ಕೃತಿ ಶಿಬಿರಕ್ಕೆ ನೀನಾಸಂ ಮನೆ ಹಬ್ಬದಂತೇ ಅಣಿಗೊಳ್ಳುತ್ತಿತ್ತು.

16 October 2015

ಕುಂಭಾಸಿ, ಕಮಲಶಿಲೆ, ನಗರ

(ನೀನಾಸಂ ನಾಟಕಗಳ ದಾಖಲೀಕರಣ, ಹಿಂದೆ ಮತ್ತು ಮುಂದೆ, ಭಾಗ -೧)
ಅಭಯಸಿಂಹ (ಮಗ), ಇಸ್ಮಾಯಿಲ್ ಮತ್ತು ಓಂಶಿವಪ್ರಕಾಶ್ ಸೇರಿಕೊಂಡು ಕಟ್ಟಿದ ಸಂಚಿ ಫೌಂಡೇಶನ್ ನಿಮಗೆ ತಿಳಿಯದ್ದೇನಲ್ಲ. ಈ ಸಲ ಅದರ ಮಹತ್ತ್ವಾಕಾಂಕ್ಷೆಯ ಕಲಾಪವಾಗಿ ಹೆಗ್ಗೋಡಿನ, ವಿಶ್ವಖ್ಯಾತಿಯ ನೀನಾಸಂ ತಿರುಗಾಟದ, ೨೦೧೫ನೇ ಸಾಲಿನ ನಾಟಕಗಳ ದಾಖಲೀಕರಣ ಯೋಜಿಸಿದ್ದರು.
ಒಂದೆರಡು ತಿಂಗಳ ಹಿಂದೆ ಅಭಯ ನೀನಾಸಂನಲ್ಲೇ ಕಿರುಚಿತ್ರ ನಿರ್ಮಾಣದ ಕಮ್ಮಟವೊಂದನ್ನು ನಡೆಸಿದ್ದ. ಅದರ ಅನುಭವದ ಬಲದಲ್ಲಿ ನೀನಾಸಂ ಮುಖ್ಯಸ್ಥ - ಕೆ.ವಿ. ಅಕ್ಷರ, ದಾಖಲೀಕರಣದ ಯೋಜನೆಯನ್ನು ಪೂರ್ಣ ಹೃದಯದಿಂದಲೇ ಒಪ್ಪಿ, ಅಪ್ಪಿಕೊಳ್ಳುವವರಿದ್ದರು. ಆದರೆ ನೀನಾಸಂಗೆ ಎಂದೂ ಬಾರದ ಆರ್ಥಿಕ ಅಸಹಾಯಕತೆ ಇಂದು ಬಂದಿದೆ! ಕಾರಣ ಇಷ್ಟೆ: ಇಂಥವಕ್ಕೆಲ್ಲ ಪೋಷಕ ಜೀವಾತುಗಳನ್ನು ಕೊಡಲೆಂದೇ ಕೇಂದ್ರ ಸರಕಾರ ಬಹುಮುಖಗಳನ್ನೇ ಹೊಂದಿದೆ. ಆದರೆ ಇಂದಿನ ದಿಲ್ಲಿ ದರ್ಬಾರಿಗೆ ಚತುರ್ಮುಖನ (ಸೃಷ್ಟಿಕರ್ತ) ದೇವಗುಣ ಬಿಟ್ಟು, ದಶಕಂಠನ (ವಿಧ್ವಂಸಕ) ರಕ್ಕಸಗುಣ ಆವಾಹನೆಯಾಗಿದೆ. ಬಹುರಂಗೀ ಭಾರತೀಯ ಸಾಂಸ್ಕೃತಿಕ ವೈವಿಧ್ಯಕ್ಕೆ ಕೇಸರಿ ಅಂಗಿ ಹೊಲಿಯುವ ಗದ್ದಲದಲ್ಲಿ ಕೇಂದ್ರ ಸರ್ಕಾರದ ಕಲಾಪೋಷಕ ಇಲಾಖೆ ನೀನಾಸಂ ಮನವಿಗೆ ಜಾಣ ಕಿವುಡು ತಾಳಿದೆ. ಆದರೆ ಸಂಚಿ ಟ್ರಸ್ಟ್ ಹಿಂದುಳಿಯಲಿಲ್ಲ. ಹಳ್ಳಿಯಂಗಳದಲ್ಲೇ ಇದ್ದುಕೊಂಡು, ಅಂತಾರಾಷ್ಟ್ರೀಯ ಮ್ಯಾಗ್ಸೇಸೆ ಪ್ರಶಸ್ತಿಯವರೆಗೆ ಕನ್ನಡ ಸಂಸ್ಕೃತಿಯನ್ನು ನಿರಪೇಕ್ಷವಾಗಿ ಶ್ರೀಮಂತಗೊಳಿಸಿದ ನೀನಾಸಂಗೆ ಬಹು ಸಣ್ಣ ಋಣಸಂದಾಯಕ್ಕೆ ಸಜ್ಜಾಯಿತು. ನಾಟಕಗಳ ದಾಖಲೀಕರಣ ಪರೋಕ್ಷವಾಗಿ ಕನ್ನಡಕ್ಕೇ ಬಹು ದೊಡ್ಡ ಆಸ್ತಿಯೂ ಆಗುವ ಸಾಧ್ಯತೆಯನ್ನು ಮನಗಂಡ ಸಂಚಿ ಟ್ರಸ್ಟ್, `ಸಾರ್ವಜನಿಕ ಬಿಕ್ಷೆ’ ನಡೆಸಿತು. ಸ್ವಂತ ಸೇವೆಯೊಡನೆ, ಕೊರತೆ ಬಂದಲ್ಲಿ ಸ್ವಂತ ಹಣವನ್ನೂ ತೊಡಗಿಸುವ ಉಮೇದು ತೋರಿತು.

http://www.ninasam.org/tirugata/current-productions/

ನೀನಾಸಂ ತನ್ನಳವಿಯೊಳಿರುವ ಎಲ್ಲ ಸವಲತ್ತುಗಳನ್ನು ಸಂಚಿ ಟ್ರಸ್ಟಿಗೆ ಮುಕ್ತಗೊಳಿಸಿತು. ಅದರಲ್ಲಿ ಮುಖ್ಯವಾದವು, ತಿರುಗಾಟದ ಎರಡು ಮತ್ತು ಶಿಬಿರದ ಒಂದು ನಾಟಕಗಳ ವಿಶೇಷ ಪ್ರದರ್ಶನ (೨-೧೦-೨೦೧೫) ಹಾಗೂ ದಾಖಲೀಕರಣದ ತಾಂತ್ರಿಕ ವರ್ಗಕ್ಕೆ ಉಚಿತ ಆತಿಥ್ಯ. ಈ ಅಪೂರ್ವ ಸನ್ನಿವೇಶದಲ್ಲಿ ಸೇರಿಕೊಳ್ಳುವ ಸಂಭ್ರಮಕ್ಕೆ, `ಅಳಿಯನೊಂದಿಗೆ ಗಿಳಿಯ’ ಎಂಬ ನೆಲೆಯಲ್ಲಿ ನಾನು ದೇವಕಿಯೂ ಅಕ್ಟೋಬರ್ ಒಂದರ ಬೆಳಿಗ್ಗೆ ಮಂಗಳೂರು ಬಿಟ್ಟೆವು.