(ಮರಣೋತ್ತರ
ನುಡಿನಮನಗಳು ೪)
(ಬಾಗಲೋಡಿ
ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ
ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೧೫)
-
ಎಂ. ರಾಮಚಂದ್ರ
ನಾನು ಹೈಸ್ಕೂಲು ದಾಟಿ, ಮಂಗಳೂರಲ್ಲಿ
ಅಲೋಶಿಯಸ್ ಕಾಲೇಜನ್ನು ಸೇರಿದೆ. ಹಾಸ್ಟೆಲ್ ನಿವಾಸಿಯಾದೆ. ನನ್ನ ಸಹವಾಸಿಯೊಬ್ಬನ ಹೆಸರಿನ ಹಿಂದೆ
‘ಬಾಗಲೋಡಿ’ ಎಂಬ ಸ್ಥಳನಾಮವಿತ್ತು. ಆಸಕ್ತಿಯಿಂದ ವಿಚಾರಿಸಿದಾಗ ಆತ ಬಾಗಲೋಡಿ ದೇವರಾಯರ ಸಂಬಂಧಿಯೆಂಬುದು
ತಿಳಿಯಿತಲ್ಲದೆ, ದೇವರಾಯರ ಬಗ್ಗೆ ಹೆಚ್ಚಿನ ವಿವರಗಳು ಸಿಕ್ಕಿದುವು.
