Showing posts with label ಯಕ್ಷಗಾನ. Show all posts
Showing posts with label ಯಕ್ಷಗಾನ. Show all posts

15 April 2022

ಚಿತ್ರಪಟ ರಾಮಾಯಣ - ಚಿತ್ರ, ಕತೆ


ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ನಾಟಕ ಶಾಲೆ ವಾರಣಾಸಿಯಲ್ಲೊಂದು ಶಾಖೆ ತೆರೆಯಿತು. ಅದರ ನಿರ್ದೇಶಕರು ರಾಮ್ ಜಿ. ಬಾಲಿ (/ವಾಲಿ). ಪುರಾಣ, ಕಲೆಗಳಲ್ಲೆಲ್ಲ ರಾಮ ಮತ್ತು ವಾಲಿಯ ಹೆಸರುಗಳು ಎದುರು ಬದಿರಾಗಿ ಕಂಡರೆ ಇವರಲ್ಲಿ ಅಪೂರ್ವವಾಗಿ ಸಮನ್ವಯಗೊಂಡಿದೆ. ರಾಮ್ಜೀ ಅಧಿಕಾರದ ಹೊಸತರಲ್ಲೇ ಉಡುಪಿಯ ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣರನ್ನು ಯುಕ್ತ ಸಮ್ಮಾನದೊಡನೆ ವಾರಣಾಸಿಗೆ ಕರೆಸಿಕೊಂಡಿದ್ದರು. ನಾಟಕ ಕಲಿಕೆಯ ಹಿಂದಿ ವಿದ್ಯಾರ್ಥಿಗಳಿಗೆ ಸುವರ್ಣರ ಮೂಲಕ ಕನ್ನಡದ ಯಕ್ಷಗಾನವನ್ನೂ ಕಲಿಸಿದರು! ಅದು ಸಾಲದೆನ್ನುವಂತೆ, ತಿಂಗಳ ಹಿಂದೆ ಇಪ್ಪತ್ತು ವಿದ್ಯಾರ್ಥಿ ವೃಂದವನ್ನು, ಸ್ವತಃ ಉಡುಪಿಗೇ ತಂದು ಯಕ್ಷಗಾನ ಕೇಂದ್ರದಲ್ಲೇ ಬೀಡುಬಿಟ್ಟರು.


ಕನ್ನಡ ಮತ್ತು ಯಕ್ಷಗಾನಗಳನ್ನು ಉಸಿರಾಡುವ ಪರಿಸರದಲ್ಲಿ, ಸಂಜೀವ ಸುವರ್ಣರ ‘ಗುರುಕುಲ’ದಲ್ಲಿ, ಅಹೋರಾತ್ರಿ ಯಕ್ಷ-ಧ್ಯಾನದಲ್ಲಿ ಮುಳುಗೆದ್ದರು. ಅವರ ಕಲಿಕೆಗೆ ಚೂಪುಕೊಡಲು ಸಹಕಾರಿಯಾಗಿ ಒದಗಿದ ಪ್ರಸಂಗ - ಚಿತ್ರಪಟ ರಾಮಾಯಣ.  

 

14 April 2021

ಯಕ್ಷಗಾನ ದೀವಟಿಗೆ ಬೆಳಕಿನಲ್ಲಿ, ಮರುಚಿಂತನೆ


"ಯಕ್ಷಗಾನಕ್ಕೆ ಆರ್ನೂರೋ ಎಂಟ್ನೂರೋ ವರ್ಷಗಳ ಇತಿಹಾಸವಿದೆ ಎಂದು ಕೇಳಿದ್ದೇನೆ, ಇರಬಹುದು. ಆದರೆ ಇಂದು ನಮ್ಮಲ್ಲಿ, ಅಂದರೆ ಕರ್ನಾಟಕದ ಕರಾವಳಿ ಸೇರಿದಂತೆ ಸ್ವಲ್ಪ ಮಲೆನಾಡಿನ ಜಿಲ್ಲೆಗಳಲ್ಲಿ ಬಹಳ ಜನಪ್ರಿಯತೆ ಮಾತ್ರವಲ್ಲ, ಬಹುದೊಡ್ಡ ‘ಉದ್ಯಮ’ವೇ ಆಗಿ (ತೆಂಕು, ಬಡಗು ಮತ್ತು ಬಡಾಬಡಗು ತಿಟ್ಟುಗಳು) ಕಂಡ ಬೆಳವಣಿಗೆಗೆ ಮಾತ್ರ ಈ ಪ್ರಾಚೀನತೆ ಇದ್ದಂತಿಲ್ಲ. ವಾಸ್ತವದಲ್ಲಿ ಇದು ನೂರು ನೂರಿಪ್ಪತ್ತು ವರ್ಷಗಳಷ್ಟು ಆಧುನಿಕವೇ ಇದೆ" ಎಂದು ಗೋವಾ ವಿವಿನಿಲಯದ ಪ್ರಾಧ್ಯಾಪಕ ಕೆ. ಶ್ರೀಪಾದ ಭಟ್ ಹೇಳಿದರು. ಇದು ಈಚೆಗೆ

19 June 2020

ಬಹುಸಂಸ್ಕೃತಿಯ ರಾಜನಗರದಲ್ಲಿ

(ಜಾತಿ ಮತಗಳ ಚಕ್ರಸುಳಿ ಮೀರಿ - ೨) 

ಬೆಂಗಳೂರಿನ ದಿನಗಳು 


[ಕ್ಷಮಿಸಿ, ಮತ್ತೆ ನೆನಪಿಸುತ್ತೇನೆ: ಈ ಮಾಲಿಕೆ ನನ್ನ ಆತ್ಮಕಥೆ ಅಲ್ಲ. ನನ್ನ ಜೀವನದ ಆಯ್ದ ಘಟನೆಗಳನ್ನು ಒಡ್ಡಿಕೊಂಡು, ವ್ಯಕ್ತಿ ರೂಪಣೆಯಲ್ಲಿ ಕಾಲ್ಪನಿಕ ಜಾತಿ, ಮತ, ಅಂತಸ್ತು ಮುಂತಾದವು ವಹಿಸುವ ಪಾತ್ರವನ್ನು ಎತ್ತಿ ತೋರಿಸುವುದಷ್ಟೇ ಇದರ ಉದ್ದೇಶ. ಓದಿನ ಸ್ವಾರಸ್ಯಕ್ಕಾಗಿ ಇತರ ಸ್ವಲ್ಪ ಮಾಹಿತಿಗಳನ್ನೂ ಕೋದಿದ್ದೇನೆ.] 

೧. ವಿಧಾನಸೌಧದ ಬಯಕೆ (ನಗರ ದರ್ಶನ) 


ಬಳ್ಳಾರಿ - ಪುತ್ತೂರು ಓಡಾಟ ಕಾಲದಲ್ಲಿ ನಮ್ಮ ಬೆಂಗಳೂರು ಮಧ್ಯವರ್ತಿ, ಹಿಂದೆ ಹೇಳಿದಂತೆ ಚಿಕ್ಕಪ್ಪ ಮೂರ್ತಿ. ಆತ (೧೯೬೫) ನಮಗೆ ಹನುಮಂತ ನಗರದಲ್ಲಿ ಬಾಡಿಗೆ ಮನೆ ಹಿಡಿದಿಟ್ಟಿದ್ದ. ಒಂದೇ ಯಜಮಾನಿಕೆಯ ಕಟ್ಟಡ ಗೊಂದಲವದು.

06 November 2019

ಇನ್ನೊಂದು ಸಂಸ್ಕೃತಿ ಶಿಬಿರದ ನಿರೀಕ್ಷೆಯಲ್ಲಿ...

(ನೀನಾಸಂ ಕಥನ ಮಾಲಿಕೆ ೪) 

ನಿನ್ನೆ ಕಂಡದ್ದು

"ನಡು ಬೇಸಗೆಯಿರುಳ ನಲ್ಗನಸುಗಳನ್ನು ಯಾವುದೋ ಕೌಟುಂಬಿಕ ಕೂಟವೊಂದರ ಆನಂದಕ್ಕಾಗಿಯೇ ಶೇಕ್ಸ್‍ಪಿಯರ್ ರಚಿಸಿದ್ದಿರಬೇಕು. ಆದರೆ ದೂರದೃಷ್ಟಿಯಲ್ಲಿ ಅದು ಆತನ ಎಲ್ಲ ನಾಟಕಗಳ ಪ್ರಯೋಗಗಳೂ ನಡೆಯುತ್ತಿದ್ದ ಗ್ಲೋಬ್ ಥಿಯೇಟರ್ ಪರಿಸರಕ್ಕೂ ಹೊಂದುವಂತೆ ರಚಿಸಿದ,

ಪ್ರಮುಖ ಪ್ರಹಸನ ನಾಟಕ" ಎಂಬ (ಶಿಬಿರಾರ್ಥಿಯಾಗಿಯೇ ಬಂದಿದ್ದ ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರ - ಕ್ಷಮಿಸಿ, ಅವರ ಹೆಸರು ನೆನಪಿಲ್ಲ) ಉಪಯುಕ್ತ ಪ್ರಸ್ತಾವದೊಡನೇ ನಾಲ್ಕನೇ ದಿನದ ಮೊದಲ ಕಲಾಪ, ಅಂದರೆ ಹಿಂದಿನ ದಿನದ ರಂಗಪ್ರಯೋಗದ ವಿಮರ್ಶೆ, ತೊಡಗಿತ್ತು. ಹಿಂದೆ ಹೇಳಿದಂತೆ, ಇದು ಹೆಗ್ಗೋಡಿನ ಹತ್ತು ಸಮಸ್ತರ, ಸುಬ್ಬಣ್ಣ ಸ್ಮೃತಿದಿನದ (ಜುಲಯ್ ೧೬) ಪ್ರಸ್ತುತಿಯ, ಎರಡನೆಯ ಪ್ರಯೋಗ ಮತ್ತು ನಿರ್ದೇಶನ ಇಕ್ಬಾಲ್ ಅಹಮದ್ದರದ್ದು. ಅನಿವಾರ್ಯ ಕಾರಣಗಳಿಂದ ಅಂದು ನಿರ್ದೇಶಕರು ಬಂದಿರಲಿಲ್ಲವಾದರೂ ಒಟ್ಟಾರೆ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳಿಗೆ ಏನೂ ಕೊರತೆಯಾಗಲಿಲ್ಲ. ಅದರಲ್ಲೂ ಶಿಷ್ಟ ತಂಡದೊಳಗೊಂದು ಅಪ್ಪಟ ಜನಪದ ತಂಡವನ್ನು ಮಾಡಿ, ನಾಟಕದೊಳಗಿನ ನಾಟಕವನ್ನು

19 August 2019

ಈಶಾವಾಸ್ಯದ್ದು ಬರಿಯ ತಾಳಮದ್ದಳೆಯಲ್ಲ


ಕೃಷ್ಣಪ್ರಕಾಶ ಉಳಿತ್ತಾಯರ ಮನೆ - ‘ಈಶಾವಾಸ್ಯ’. ಇದು ಮಂಗಳೂರಿನಿಂದ ಸುಮಾರು ಹನ್ನೆರಡರಿಂದ ಇಪ್ಪತ್ತು ಕಿಮೀ ವರೆಗೆ ಹಲವು ಸಾಧನಾಪಥಗಳಿರುವ ಉಳಾಯಿಬೆಟ್ಟು, ಪೆರ್ಮಂಕಿಯಲ್ಲಿದೆ. ಇದನ್ನು ನಾನು ಐದು ತಿಂಗಳ ಹಿಂದೆ ಸೈಕಲ್ ಸರ್ಕೀಟಿನಲ್ಲಿ ಹುಡುಕಿ ಹಿಡಿದದ್ದು ನಿಮಗೆ ತಿಳಿದೇ ಇದೆ (ಫೇಸ್ ಬುಕ್: ೧೭-೩-೧೯, ಸೈಕಲ್ ಸರ್ಕೀಟ್ ೪೬೦). ಅಂದು ಉಳಿತ್ತಾಯರು ಮಾತಿನಲ್ಲಿ, ಅಲ್ಲೇ ತಾವು ನಡೆಸಿದ್ದೊಂದು ತಾಳಮದ್ದಳೆ ಪ್ರಯೋಗದ ಉಲ್ಲೇಖ ಮಾಡಿದ್ದರು. ಆ ಹೆಮ್ಮೆಯಲ್ಲಿ ‘ನನ್ನದು’ ಎನ್ನುವುದಕ್ಕಿಂತ
ಹೆಚ್ಚಿನ ಕಲೋತ್ಕರ್ಷದ ಹೊಳಹಿತ್ತು. ಆಗ ಸಹಜವಾಗಿ ನನಗದು ತಪ್ಪಿತಲ್ಲಾ ಎನ್ನುವ ಕೊರಗು ನನ್ನದಾಗಿತ್ತು. ಅದಕ್ಕೆ ಪರಿಹಾರವೆನ್ನುವಂತೆ ಉಳಿತ್ತಾಯರು, "ಈ ವರ್ಷವೂ ಮಳೆಗಾಲದಲ್ಲಿ ಅಂಥದ್ದೇ ಇನ್ನೊಂದು ಮಾಡುತ್ತೇನೆ. ಆಗ ನೀವು ಸಪತ್ನೀಕರಾಗಿ ಅವಶ್ಯ ಬರಬೇಕು" ಎಂದೂ ಸೇರಿಸಿದ್ದರು. ಅದು ಇದೇ ಆಗಸ್ಟ್ ಹತ್ತು, ಶನಿವಾರ ಬೆಳಿಗ್ಗೆ ಸುಮಾರು ಒಂಬತ್ತರಿಂದ ರಾತ್ರಿ (ಅನಿರ್ದಿಷ್ಟ) ಎಂಟರವರೆಗೆ, ಒಂದು ಅಪೂರ್ವ ಅನುಭವವಾಗಿ ನಮಗೂ ಒದಗಿತು.

16 August 2018

ರಂಗಮನೆಗಳು ಬೆಳೆಯಬೇಕು, ರಂಗಾಯಣವಲ್ಲ


ಜೀವನರಾಂ ಸುಳ್ಯ - ನಾಟಕ ರಂಗದ ಬಹುಮುಖಿ (ನಟ, ನಿರ್ದೇಶಕ, ಸಂಘಟಕ ಇತ್ಯಾದಿ), ಅಪ್ಪಟ ಮನುಷ್ಯಪ್ರೀತಿಯ (ಮನುಜ ನೇಹಿಗ, ಇವರ ಮಗನ ಹೆಸರು!) ಕಲಾವಿದ. ಇವರು ಸ್ವಂತ ವಾಸಕ್ಕೆ ಕಟ್ಟಿಕೊಳ್ಳುವಲ್ಲೂ ರೂಪಿಸಿದ್ದು ‘ರಂಗಮನೆ’ ಎಂಬ ವಿಶಿಷ್ಟ ಆವರಣ. ಇದನ್ನು ನಾನು ಹಿಂದೆ ಕಂಡವನೇ ಮತ್ತು ಅಲ್ಲಿ ನಡೆಯುವ ಕಲಾಪಗಳೂ ನನಗೆ ಸದಾ ಕುತೂಹಲಕಾರಿಯವೇ ಇತ್ತು. ಆದರೆ ಮಂಗಳೂರಿನಿಂದ ಅಲ್ಲಿಗಿರುವ ಭೌತಿಕ ಅಂತರ (ಸುಮಾರು ಎರಡು ಗಂಟೆಯ ಪ್ರಯಾಣಾವಧಿ) ಮತ್ತು ಅವೇಳೆಗಳಲ್ಲಿ 

27 July 2018

ಕರುಣ ಸಂಜೀವ - ಸಂಜೀವ ಸುವರ್ಣ ಅಭಿನಂದನೆ

ದಿನಪೂರ್ತಿ ನಡೆದ ಅಭಿನಂದನಾ ಕಲಾಪಗಳ ಶುದ್ಧ  ವಿಡಿಯೋ ದಾಖಲೀಕರಣ - ಆರು ಭಾಗಗಳಲ್ಲಿ ಲಗತ್ತಿಸಲಾಗಿದೆ. ಹಾಗಾಗಿ ಈ ಬರಹ ವರದಿಯಲ್ಲ, ನನ್ನ ಅನಿಸಿಕೆಗಳು ಮಾತ್ರ


ಅದ್ವಿತೀಯ ಯಕ್ಷಗಾನ ಗುರು-ಕಲಾವಿದ ಬನ್ನಂಜೆ ಸಂಜೀವ ಸುವರ್ಣರಿಗಂದು (೧೫-೭-೧೮) ಅಭಿನಂದನ ಸಮಾರಂಭ - ಕರುಣ ಸಂಜೀವ. ಉಡುಪಿಯ ಪುರಭವನದಲ್ಲಿ ತುಸು ಬೇಗ ಎನ್ನುವ ಬೆಳಿಗ್ಗೆ ಒಂಬತ್ತೂವರೆ ಗಂಟೆಯ ಮುಹೂರ್ತದ ನಿರೀಕ್ಷೆಯಲ್ಲಿ ಎಲ್ಲೆಲ್ಲಿನ ಕಲಾಪ್ರೇಮಿಗಳು, ಸಂಜೀವರ ಅಸಂಖ್ಯ ಶಿಷ್ಯರು ಮತ್ತು ಅಭಿಮಾನಿಗಳು ಬಂದು ಸೇರುತ್ತಲೇ ಇದ್ದರು. ಮಳೆ ಬಿರಿದ ಲವಲವಿಕೆ, ಎದುರು ಜಗುಲಿಯಲ್ಲಿ ದೊಡ್ಡದಾದ ಹೂವಿನೆಸಳುಗಳನ್ನೇ ತುಂಬಿ ಮಾಡಿದ್ದ ದೊಡ್ಡ ಪುಷ್ಪ ವಿನ್ಯಾಸ, ಪಕ್ಕದ
ಭೋಜನಶಾಲೆಯಲ್ಲಿನ ಸರಳ ಉಪಾಹಾರ, ಎಲ್ಲೆಡೆ ಭಾರಿ ಸಂಭ್ರಮ. ಪ್ರೇಕ್ಷಾಂಗಣದಲ್ಲೂ ಜನ ಗಿಜಿಗುಟ್ಟಿ, ಬಹುತೇಕ ತುಂಬಿದ ಭಾವವೇ ಬಂದರೂ ಯಾಕೋ ನಾವು ಸಾಮಾನ್ಯ ಸಮ್ಮಾನ ಸಮಾರಂಭಗಳಲ್ಲಿ ಕಾಣುವ ಅಲಂಕಾರ ಸಾಮಗ್ರಿಗಳ ಸಂತೆ, ಉದಾರ ಕೊಡುಗೆಯಿತ್ತವರ ಸ್ಮರಣ ತಟ್ಟಿಗಳು, ಬೆಳಕಿನ ಹೊಳೆ ಕಾಣಲೇ ಇಲ್ಲ. ವೇದಿಕೆಯ ಮೇಲೆ ಆಚೀಚೆ ಎರಡು ತುಂಡು ಹಲಿಗೆ ಸರಳವಾಗಿ ಸಂದರ್ಭ ಸೂಚಿಸಿದರೆ, ನಡುವಣ ದೊಡ್ಡ ಹಲಿಗೆಯಲ್ಲಿ ಏನೋ ಅಮೂರ್ತ ಚಿತ್ರ. ಉಳಿದಂತೆ ಮಂಕು ಬೆಳಕಿನ ವೇದಿಕೆ

16 July 2018

ಮೂಡಾಯಿಯ ಕಗುರಾಕ್ಕೆ ತೆಂಕು, ಬಡಗುಗಳ ಯಕ್ಷ ಸಲಾಂ!


ದಿನವಿಡೀ ಭೋರ್ಗುಟ್ಟುತ್ತಿತ್ತು ಮಳೆ, ಸಹಜವಾಗಿ ೭-೭-೧೮ರ ಸಂಜೆ ಡಾನ್ ಬಾಸ್ಕೋ ಸಭಾಂಗಣ ಪ್ರೇಕ್ಷಾವೃಂದದ ಕೊರತೆಯಲ್ಲಿ ಸೊರಗಿತ್ತು. ಆದರೇನು ಆ ಸಂಜೆಯ (ನಾಲ್ಕರಿಂದ ಸುಮಾರು ಎಂಟು ಗಂಟೆಯವರೆಗೆ) ಕಲಾಪದ ಪ್ರಧಾನ ಕಣ್ಮಣಿಯಾಗಿ, ಸಮ್ಮಾನಿತರಾಗಲಿದ್ದ, ಸುದೂರದ ಜಪಾನಿನ ಪ್ರೊ| ಸುಮಿಯೋ ಮೊರಿಜಿರಿ, ಸಪತ್ನೀಕರಾಗಿ ಸಕಾಲದಲ್ಲಿ ಬಂದಿದ್ದರು. ಅಧ್ಯಕ್ಷತೆ ವಹಿಸಲಿದ್ದ ಪ್ರೊ| ಬಿ.ಎ. ವಿವೇಕ ರೈ, ಸಮ್ಮಾನದ ನುಡಿಮಾಲೆ ಹೆಣೆಯುವ ಪ್ರೊ| ಪುರುಷೋತ್ತಮ ಬಿಳಿಮಲೆ
ಮತ್ತು ಪ್ರೊ| ಚಿನ್ನಪ್ಪ ಗೌಡರೂ ಉತ್ಸುಕರಾಗಿಯೇ ಸೇರಿಕೊಂಡಿದ್ದರು. ಒಟ್ಟು ಕಲಾಪವನ್ನು ಶುದ್ಧ ಪ್ರೀತಿಯಿಂದ ಸಂಘಟಿಸಿದ ಕಲಾಗಂಗೋತ್ರಿ ಬಳಗ (ಸೋಮೇಶ್ವರ-ಉಚ್ಚಿಲ, ಮಂಗಳೂರು), ಕರೆಯೋಲೆಯ ಸಮಯ ನಿಷ್ಠೆ ಕಾಯ್ದುಕೊಂಡು, ಮೂರು ಹಂತದ ಕಲಾಪಕ್ಕಿಳಿದೇ ಬಿಟ್ಟಿತು. 

ಸುಮಾರು ಎರಡು ದಶಕಗಳ ಕಾಲ ಯಕ್ಷಗಾನ, ದೈವಾರಾಧನೆಗಳನ್ನು ಅಧ್ಯಯನ ಮಾಡಿ, ಜಪಾನೀ ಭಾಷೆಯಲ್ಲಿ ಎರಡು ಉದ್ಗ್ರಂಥಗಳನ್ನೇ ಬರೆದು, ಪ್ರಕಟಿಸಿದ

06 July 2018

ಮೊರಿಜಿರಿ ಮತ್ತು ಹಯಾಚಿನ್ ಟಕೆ ಕಗುರ

ಶನಿವಾರ (೭-೭-೧೮) ಸಂಜೆ ನಾಲ್ಕಕ್ಕೆ ಮಂಗಳೂರಿನ ಡಾನ್ ಬಾಸ್ಕೋ ಹಾಲಿನಲ್ಲಿ ‘ಮೊರಿಜಿರಿ ಸಮ್ಮಾನ’ 


ಹಯಾಚಿನ್ ಟಕೆ ಕಗುರ - ಜಪಾನೀ ಆರಾಧನಾ ನೃತ್ಯ, ಇದರ ಒಂದು ತಂಡ (ಸುಮಾರು ಹದಿನೈದು ಮಂದಿ), ಈ ವಲಯದಲ್ಲಿ ಸುಮಾರು ಮೂರು ವರ್ಷಗಳ ಹಿಂದೆ, ಅದೇ ಪ್ರಥಮವಾಗಿ ನಮ್ಮ ವಲಯದಲ್ಲಿ ತಿರುಗಾಟ ನಡೆಸಲು ಏಕೈಕ ಕಾರಣ ಜಪಾನೀ ಪ್ರೊ| ಸುಮಿಯೋ ಮೊರಿಜಿರಿ.
ಸುಮಾರು ಎರಡೂವರೆ ದಶಕಗಳ ಹಿಂದೆ ಕೇರಳದ ಜನಪದ ಕಲೆಗಳ ಅಧ್ಯಯನಕ್ಕೆಂದು ಭಾರತಕ್ಕೆ ಬಂದಿದ್ದರಂತೆ ಈ ವಾಮನಮೂರ್ತಿ ಮೂರ್ತಿ. ಆದರೆ ಅವರೊಳಗಿನ ತ್ರಿವಿಕ್ರಮ ನಮ್ಮ ವಲಯದ ಯಕ್ಷಗಾನ, ಭೂತಾರಾಧನೆಗಳತ್ತ ಹೆಜ್ಜೆಗಳನ್ನಿಟ್ಟದ್ದು, ಇಲ್ಲಿನ ಯಕ್ಷಗಾನ ತಂಡವನ್ನು ಜಪಾನಿಗೆ ಕರೆಸಿಕೊಂಡದ್ದು, ಅಲ್ಲಿನ ಅಸಂಖ್ಯ ವಿದ್ಯಾರ್ಥಿಗಳನ್ನು ಇಂದಿಗೂ ಪ್ರೇರಿಸುತ್ತಿರುವುದು, ಆ ಕುರಿತು ಜಪಾನೀ ಭಾಷೆಯಲ್ಲಿ ಉದ್ಗ್ರಂಥಗಳಿಗೆ ಕಾರಣರಾದದ್ದು, ವೈಯಕ್ತಿಕವಾಗಿ ನನ್ನ ಅಂಗಡಿಯ ಪುಸ್ತಕಗಳಿಗೆ ದೊಡ್ಡ

03 May 2018

ಕಿರಿದರೊಳ್ ಪಿರಿದರ್ಥಮನ್....

(‘ಪಡ್ಡಾಯಿ’ ಚಿತ್ರ ನಿರ್ಮಾಣದ ಅನಧಿಕೃತ ಕಥನ - ೫)

ಆರು ಗಂಟೆಯ ಯಕ್ಷಗಾನ, ನೂರು ಮಿನಿಟಿನ ಸಿನಿಮಾದೊಳಗೆ?! 

‘ಪಡ್ಡಾಯಿ’ ಸಿನಿಮಾವನ್ನು ಪೂರ್ಣ ಆವರಿಸಿದ ಕಡಲು ಮತ್ತು ಮೀನುಗಾರಿಕೆ ಪ್ರಥಮದಲ್ಲೇ ಇದನ್ನು ಕರಾವಳಿಯ ಪ್ರತಿನಿಧಿ ಎಂದೇ ಸ್ಥಾಪಿಸುತ್ತದೆ. ಅದಲ್ಲದೆ ಪ್ರಾದೇಶಿಕತೆಯ ಹೆಚ್ಚಿನ ಮುದ್ರೆ ಒತ್ತಲು ಚಿತ್ರದಲ್ಲಿ ಬಳಸಿಕೊಂಡ ಇನ್ನೆರಡು ಬಹುಶಕ್ತ ಅಂಶಗಳು - ಭೂತಾರಾಧನೆ ಮತ್ತು ಯಕ್ಷಗಾನ. ಭೂತಾರಾಧನೆ ನೇರ ಕಥಾನಕದ ಭಾಗವಾಗಿಯೇ ಸೇರಿದೆ. 

26 February 2018

ಲಕ್ಷ್ಮಿ ಭಾಗ್ಯ ಮತ್ತು ಸಮಕಾಲೀನ ಟಿಪ್ಪಣಿಗಳು


೧. ಭಾಗ್ಯದ ‘ಲಕ್ಷ್ಮಿ’ (ಅಮ್ಮನ ಹೆಸರು ಕೂಡಾ) ನೆನಪುಗಳಲ್ಲಿ ಮೈದಳೆದ ಪರಿ
ಹತ್ತು ವರ್ಷಗಳ ಹಿಂದೆ ತಂದೆ, ಈಚೆಗೆ ತಾಯಿಯ ವಿಯೋಗವನ್ನು ನಾವು ಅತ್ರಿ ಸೋದರರು (ಅಶೋಕ, ಆನಂದ, ಅನಂತ) ಸ್ವೀಕರಿಸಿದ ಕ್ರಮ ಲೋಕಮುಖಕ್ಕೆ ಒಂದೇ ಇತ್ತು. ಅಂದರೆ, ಇಬ್ಬರ ದೇಹಗಳನ್ನೂ ವೈದ್ಯಕೀಯ ಆಸ್ಪತ್ರೆಗೆ ದಾನ ಕೊಟ್ಟೆವು. ಅವರಿಬ್ಬರ ಇಚ್ಛೆ ಮತ್ತು ನಮ್ಮ ನಂಬಿಕೆಯ ಭಾಗವಾಗಿಯೂ ಸಾಂಪ್ರದಾಯಿಕ ಸೂತಕ ಮತ್ತು ಶುದ್ಧಕ್ರಿಯೆಗಳನ್ನು ಕೈಗೊಳ್ಳಲಿಲ್ಲ. ಇದ್ದಷ್ಟು ಕಾಲ ತಾಯಿಯ ಬಾಹ್ಯ ಅಲಂಕಾರ ಮತ್ತು ಸಾಮಾಜಿಕ ಸ್ಥಿತಿಗಳಲ್ಲಿ ಯಾವುದೇ ಊನ ಬಾರದಂತೆ ಆಕೆಯ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದೆವು. ಇದರ ಮೇಲೆ.....

ಅಪ್ಪಮ್ಮರ ಜತೆಗಿದ್ದು, ಮುಖ್ಯವಾಗಿ ಅವರ ಕಷ್ಟಗಳಲ್ಲಿ ನೇರ
ಭಾಗಿದಾರಿಕೆ ವಹಿಸಿಕೊಂಡ ಅನಂತ - ನಮ್ಮೂವರಲ್ಲಿ ಕಿರಿಯ. ಹಿರಿಯನಾದ ನಾನು ಮತ್ತು ಎರಡನೆಯವನಾದ ಆನಂದ ಹುಟ್ಟಿನ ಆಕಸ್ಮಿಕದ ಹಿರಿತನವನ್ನು ಅನಂತನ ಕ್ರಿಯಾ ಹಿರಿತನಕ್ಕೆ ಎಂದೋ ನಿಸ್ಸಂದೇಹವಾಗಿ ಒಪ್ಪಿಸಿದ್ದೆವು. ಹೋದವರಿಗಿಂತ ಇರುವವರ ಜೀವನ ಹೆಚ್ಚು ಹಸನಾಗಬೇಕೆಂಬ ಮಾತಿದೆ. ತಂದೆಯೂ ಈ ಮಾತನ್ನು ಒಪ್ಪುತ್ತಿದ್ದರು. ಅದಕ್ಕೇ ಅವರು ಸ್ವಂತಕ್ಕೆ ಯಾವ ವೈದಿಕ ಆಚರಣೆಗಳನ್ನು ಇಟ್ಟುಕೊಳ್ಳದಿದ್ದರೂ ತಾಯಿಯ ಪೂಜೆ, ವ್ರತಾದಿ ನಂಬಿಕೆಗಳಿಗೆ ಎಂದೂ ಭಂಗ ಉಂಟುಮಾಡುತ್ತಿದ್ದಿಲ್ಲ. ಅದೇ ರೀತಿಯಲ್ಲಿ, ಮೊದಲು ಅಪ್ಪನ ಉತ್ತರಕ್ರಿಯಾ ಆಶಯಕ್ಕೆ, ಮುಖ್ಯವಾಗಿ ಅಮ್ಮನ ಸಣ್ಣ ಆಸೆಗಳನ್ನೂ ಅನಂತರ ಅಮ್ಮನ ವಿದಾಯದಂದು ಅನಂತನ ಅಗತ್ಯಗಳಿಗಾಗಿಯೂ ಸಣ್ಣ

02 November 2017

ದ್ರೌಪದಿಯ ಪಂಚಪತಿತ್ವದ ಪ್ರಶ್ನೆ!


(ಒಂದು ದಾಖಲೀಕರಣದ ಆಯೋಜನಾ ಕಥನ)

ಕುಂಟು ನೆಪವೊಂದರಿಂದ ದ್ರೌಪದಿ ಪಾಂಡವರೈವರ ಪತ್ನಿಯಾದಳು. ಇದನ್ನೇ ನೆಪವಾಗಿಟ್ಟುಕೊಂಡು  ಬಳ್ಳಾರಿ ಮೂಲದ, ಬೆಂಗಳೂರು ವಾಸಿಯಾದ ವಸುಧೇಂದ್ರರು ಈ ಸಲದ ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲೊಂದು ಲೇಖನ ಪ್ರಕಟಿಸಿದರು. ಹಿಂಬಾಲಿಸಿದಂತೆ ಲೇಖನವನ್ನು ೧೭-೧೦-೧೭ರಂದು ಫೇಸ್ ಬುಕ್ಕಿನ ತಮ್ಮ ಖಾತೆಗೂ ಏರಿಸಿದರು. ಅವರ ವಿಶ್ಲೇಷಣೆ ಚೆನ್ನಾಗಿಯೇ ಇತ್ತು. ಆದರೆ ಕರಾವಳಿ ಅರ್ಥಾತ್ ತಾಳಮದ್ದಳೆಯ ವಲಯದೊಳಗೆ ಸಾಕಷ್ಟು ಉಸಿರಾಡಿದ ನನಗೆ ಬಿಟ್ಟಿ ಸಲಹೆ ಕೊಡದಿರಲು ಸಾಧ್ಯವಾಗಲಿಲ್ಲ. ಯಕ್ಷಗಾನ ಅರ್ಥಧಾರಿಗಳು (ರಂಗದಲ್ಲೂ ಕೂಟದಲ್ಲೂ) ಇಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ, ನಿತ್ಯ ನೂರರಂತೆ ಪುರಾಣಪಾತ್ರಗಳಲ್ಲಿ ಉಸಿರಾಡುತ್ತಾರೆ. ಸ್ಥಳ, ಕಾಲ, ವ್ಯಕ್ತಿ ಪ್ರಭಾವದಲ್ಲಿ ಆ ಪಾತ್ರಗಳು ಎತ್ತಿ ಹಾಕುವ

26 February 2016

ಯಕ್ಷಗಾನ ಪುನರುತ್ಥಾನದ ಸಿಂಹ ಗುರುತುಗಳು

(ಉಡುಪಿ ಯಕ್ಷಗಾನ ಕೇಂದ್ರ, ಪರ್ಯಾಯವಾಗಿ ಗುರು ಬನ್ನಂಜೆ ಸಂಜೀವ ಸುವರ್ಣರ ಎರಡು ಪ್ರದರ್ಶನ-ಪ್ರಯೋಗಗಳ ಕುರಿತ ಸಾಮಾನ್ಯ ಗ್ರಹಿಕೆಯ ಸಾಮಯಿಕ ವಿಶ್ಲೇಷಣೆ)

ಪೂರ್ವಾರ್ಧ ಲಂಕಿಣಿಮೋಕ್ಷ:

ಮೊನ್ನೆಯಷ್ಟೇ (೨೧-೧-೨೦೧೬) ದಿಲ್ಲಿ ನಾಟಕಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ಹಿಡಿಸಿ, ಅಭಿಮನ್ಯುವಧ ನಡೆಸಿ (ವಿಶ್ಲೇಷಣೆ ಇಲ್ಲೇ ಉತ್ತರಾರ್ಧದಲ್ಲಿದೆ), ಪ್ರದರ್ಶನದ ಯಶಸ್ಸು ಇಲ್ಲಿ ಮಾತ್ರವಲ್ಲ ದಿಲ್ಲಿಯಲ್ಲೂ ಉರವಣಿಸುವಂತೆ ಮಾಡಿದವರು ಗುರು ಬನ್ನಂಜೆ ಸಂಜೀವ ಸುವರ್ಣ. ಅವರು ಇನ್ನೊಂದೇ ಯಕ್ಷ-ಪ್ರಯೋಗದ ವೀಕ್ಷಣೆಗೆ (೧೮-೨-೨೦೧೬) ಮತ್ತೆ ಫೋನಾಯಿಸಿದರು “ಈಗದ್ದು ನಮ್ಮ ಮಕ್ಕಳದ್ದೇ ಸಾರ್”. ಸುವರ್ಣರ ನಿಜದ ಕೌಟುಂಬಿಕ ಲೆಕ್ಕ ತೆಗೆದರೆ ಮಕ್ಕಳು ಎರಡೇ. ಆದರೆ ಎಲ್ಲೆಲ್ಲಿನ ಊಟಕ್ಕಿಲ್ಲದ, ವಿದ್ಯಾವಕಾಶ ನಿಲುಕದ ಮಕ್ಕಳು ಉಡುಪಿಯ ಈ ಯಕ್ಷಗಾನ ಕೇಂದ್ರದಲ್ಲಿ, ಅಲ್ಲೇ ನೆಲೆ ನಿಂತ ಸುವರ್ಣರ ಕುಟುಂಬದ ನೇರ ಸುಪರ್ದಿನಲ್ಲಿ ವಿಕಸಿಸುವುದನ್ನು ಕಂಡ ಯಾರೂ ಆಶ್ಚರ್ಯಪಡುವುದಿಲ್ಲ. ಆ ಮಕ್ಕಳಿಗೆ (ಎಲ್ಲ ಉಚಿತ) ಅಶನ, ವಸನ, ವಸತಿ ಮತ್ತು ಶಾಲಾಶಿಕ್ಷಣವನ್ನೂ ಕಲ್ಪಿಸಿ, ಕೊನೆಯಲ್ಲಿ ಯಕ್ಷಶಿಕ್ಷಣವನ್ನೂ ಕೊಡುವಲ್ಲಿ ಸಂಜೀವರಿಗೆ ಅವರು ಅನ್ಯರಾಗುವುದು ಸಾಧ್ಯವೂ ಇಲ್ಲ.

13 February 2015

ಯಕ್ಷ ನೆಲೆಯಲ್ಲಿ ರಾಷ್ಟ್ರೀಯ ನಾಟ್ಯೋತ್ಸವ

ಶ್ರೀ ಇಡಗುಂಜಿ ಮೇಳದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ನಾಟ್ಯೋತ್ಸವ ಇದೇ ಫೆಬ್ರುವರಿ ೬ರಿಂದ ಹತ್ತರವರೆಗೆ ಮೇಳದ್ದೇ ಸ್ವಂತ ನೆಲೆ – ಯಕ್ಷಾಂಗಣ, ಗುಣವಂತೆಯಲ್ಲಿ ನಡೆಯಿತು. ಅದರ ಎರಡನೇ ದಿನದ ಚಟುವಟಿಕೆಯಲ್ಲಿ ಸ್ವಲ್ಪವಾದರೂ ಪ್ರೇಕ್ಷಕರಾಗುವ ಬಯಕೆಯಲ್ಲಿ ಗೆಳೆಯ ಡಾ| ಮಹಾಲಿಂಗ ಭಟ್ಟರ ಜತೆ ನಾನು ಮತ್ತು ದೇವಕಿ ಏಳರ ಬೆಳಗ್ಗಿನ ಆರು ಗಂಟೆಯ ರೈಲೇರಿದೆವು. ಉತ್ತರ ಕನ್ನಡ ಜಿಲ್ಲೆಯ ಮಂಕಿ ನಿಲ್ದಾಣದಲ್ಲಿಳಿದು, ಅರ್ಧ ಕಿಮೀ ಅಂತರದ ಹೆದ್ದಾರಿಗೆ ನಡೆದು, ಸರ್ವಿಸ್ ವ್ಯಾನಿನ ಮಂದೆಯಲ್ಲಿ ಒಂದಾಗಿ, ಸುಮಾರು ನಾಲ್ಕೈದು ಕಿಮೀ ಅಂತರದ ಗುಣವಂತೆಯ ಸಭಾಂಗಣ ಸೇರುವಾಗ ಗಂಟೆ ಹನ್ನೊಂದು ಕಳೆದಿತ್ತು.

ದಿನದ ಮೊದಲ ಗೋಷ್ಠಿ – ಅಪೂರ್ವ ಪೂರ್ವ ಸ್ಮರಣದ ಕೊನೆಯ ಕಲಾಪವಾಗಿ ಹೊಸ್ತೋಟ ಮಂಜುನಾಥ ಭಾಗವತರ ಅಧ್ಯಕ್ಷೀಯ ಭಾಷಣ ನಡೆದಿತ್ತು. ಎಸ್.ಎನ್. ಪಂಜಾಜೆಯವರು ಉದ್ಘಾಟಿಸಿದ ಆ ಗೋಷ್ಠಿಯಲ್ಲಿ, ಉತ್ಸವದ ಪೂರ್ಣ ಸಮರ್ಪಣೆಗೆ ಪಾತ್ರರಾದ ಮಾಯಾರಾವ್ (- ಬಿ.ಎನ್. ಮನೋರಮಾ) ಅಲ್ಲದೆ, ಯು. ಆರ್. ಅನಂತಮೂರ್ತಿ (- ಕೆ.ವಿ ಅಕ್ಷರರ ಲಿಖಿತ ಭಾಷಣ, ಓದಿದವರು ಲಕ್ಷ್ಮೀ ನಾರಾಯಣ ಕಾಶಿ), ಮೂಡ್ಕಣಿ ನಾರಾಯಣ ಹೆಗಡೆ (- ನಾರಾಯಣ ಭಟ್ಟ ಸಂತೆಗುಳಿ) ಹಾರಾಡಿ ರಾಮ ಗಾಣಿಗರ (- ಕೆ.ಎಂ. ಉಡುಪ) ಸಾರ್ಥಕ ಸ್ಮರಣೆಯಾದಂತಿತ್ತು.

28 November 2014

ಒಡವೆ ಇದ್ದೂ ಬಡವೆ!

ಯಕ್ಷಗಾನ ಕಲಾರಂಗ, ಉಡುಪಿ ತನ್ನ ನಲ್ವತ್ತನೇ ವಾರ್ಷಿಕೋತ್ಸವವನ್ನು ಪ್ರಥಮ ಬಾರಿಗೆ ಉಡುಪಿಯಿಂದ ಹೊರಗೆ, ಅದೂ ಕರ್ನಾಟಕದ ರಾಜಧಾನಿಯಲ್ಲೇ ನಡೆಸುವುದಿತ್ತು. ಹಿಂದೆ ಅವರ ಕೆಲವು ಉಡುಪಿ ವಾರ್ಷಿಕೋತ್ಸವಗಳಿಗೆ ನಾನು ಹಾಜರಿ ಹಾಕಿದ್ದಿದೆ. ಆದರೆ ಈ ಬಾರಿ ಬೆಂಗಳೂರೆಂದ ಕೂಡಲೇ ನಾನು ಆಸಕ್ತಿ ಕಳೆದುಕೊಂಡೆ.

ಯಕ್ಷಗಾನ ಕಲಾರಂಗ ಸಾರ್ವಜನಿಕ (ಮತ್ತು ಆಂಶಿಕ ಸರಕಾರೀ) ಪೋಷಣೆಯಿಂದಷ್ಟೇ ಬೆಳೆದ ಸಂಸ್ಥೆ. ಹಾಗಾಗಿ ತನ್ನ ಕಲಾಪಗಳನ್ನು ರಾಜ್ಯದ ರಾಜಧಾನಿಯಲ್ಲೇ ಪ್ರದರ್ಶಿಸಿ, ಅಹವಾಲುಗಳ ಕುರಿತು ಸರಕಾರದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಅನಿವಾರ್ಯತೆ ಕಂಡುಕೊಂಡಿರಬೇಕು. ಇದಕ್ಕೆ ಪೂರಕವಾಗಿ ಕಲಾರಂಗಕ್ಕೆ ಪ್ರಥಮ ಬಾರಿಗೆ, ತನ್ನ ಕುರಿತೊಂದು ಸಾಕ್ಷ್ಯಚಿತ್ರ ನಿರ್ಮಿಸಬೇಕೆನ್ನಿಸಿತು. ಮತ್ತು ನಮ್ಮ ಯಾವ ಸೂಚನೆ ಇಲ್ಲದೆಯೂ (ನಮ್ಮ ಮಗ) ಅಭಯಸಿಂಹನನ್ನು ಬೆಂಗಳೂರಿನಿಂದ ಕರೆಸಿಕೊಂಡು ವಹಿಸಿತು. ಒಂದೇ ವಾರದೊಳಗೆ ತಯಾರಾಗುವ ಈ ಚಿತ್ರವೂ ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದಾದಾಗ ನನ್ನ ಕುತೂಹಲ ಕೆರಳಿತು.


26 September 2014

ಅಮೃತಗೀತ

ಚಿತ್ರ, ಲೇಖನ: ಶ್ಯಾಮಲಾ ಮಾಧವ
[ಅಮೃತ ಸೋಮೇಶ್ವರರಿಗೆ ನಾಳೆ ಎಂಬತ್ತನೇ ಜನ್ಮದಿನದ ಅಭಿನಂದನಾ ಸಮಾರಂಭ ನಡೆಯಲಿದೆ. ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ವಠಾರದಲ್ಲಿ ಪೂರ್ವಾಹ್ನ ಹತ್ತರಿಂದ ಸಂಜೆ ಐದೂವರೆಯವರೆಗೆ ನಡೆಯುವ ಕಲಾಪಕ್ಕೆ ಪೂರ್ವಭಾವಿಯಾಗಿ ಹೀಗೊಂದು ಲೇಖನ ಹಾಗೂ ಯುಕ್ತ ಚಿತ್ರ ಸರಣಿಯನ್ನೂ ಕೊಟ್ಟು ತಾವೂ ಈ ಮೂಲಕ ಪರೋಕ್ಷವಾಗಿ ನನಗೂ ಅಮೃತರನ್ನು ಅಭಿನಂದಿಸಲು ಮತ್ತು ನನ್ನ ಜಾಲತಾಣವನ್ನು ಸಮೃದ್ಧಗೊಳಿಸಲೂ ಕಾರಣರಾದ ಶ್ಯಾಮಲಾ ಮಾಧವರಿಗೆ ಕೃತಜ್ಞ – ಅಶೋಕವರ್ಧನ]

ನಮ್ಮ ನಾಡ ಜನಪದ ಸಂಸ್ಕೃತಿ ಮತ್ತು ಸಾಹಿತ್ಯಸಿರಿ, ಅಮೃತ ಸೋಮೇಶ್ವರರ ನುಡಿಸಿರಿಯನ್ನು ನಾನು ಪ್ರಥಮ ಬಾರಿಗೆ ಆಲಿಸಿದ್ದು, ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ಮುಂಬೈಯ ವೈ.ಎಮ್.ಬಿ.ಎ. ವಾರ್ಷಿಕ ಸಮಾರಂಭದಲ್ಲಿ.  ಅಂದು  ಅತಿಥಿಯಾಗಿ  ಆಗಮಿಸಿ  ಸಭೆಯನ್ನುದ್ದೇಶಿಸಿ  ಅವರು ಮಾತನಾಡಿದಾಗ.  ಸುಲಲಿತವಾಗಿ, ಮನಃಸ್ಪರ್ಶಿಯಾಗಿ, ಮೆಲುಮಾತಿನಲ್ಲಿ ಹರಿದ ವಾಕ್‌ಝರಿಗೆ, ಅವರ ಉದಾತ್ತ ವಿಚಾರಗಳಿಗೆ ನಾನು ಅಂದೇ ಮಾರು ಹೋದೆ.

ಕರುನಾಡಿಗೆ ಭೂಷಣಪ್ರಾಯರಾಗಿ, ಕಲೆ, ಸಂಸ್ಕೃತಿಯ  ದಾರಿದೀಪವಾಗಿ, ಜಾನಪದ ಸಿರಿಯಾಗಿ ಬೆಳಗುತ್ತಿರುವವರು, ನಾಡ ಹಿರಿಜೀವ ಅಮೃತ ಸೋಮೇಶ್ವರರು. ಮೆಲುಮಾತಿನ, ನಲ್ವಾತಿನ, ಸಹೃದಯಿ! ಜಾನಪದ, ಯಕ್ಷಗಾನ, ಕಥೆ, ಕವನ, ವಿನೋದ ಬರಹ, ವಿಮರ್ಶೆ, ಸಂಶೋಧನೆ, ವೈಚಾರಿಕ ಲೇಖನಗಳಿಂದ ನಮ್ಮ  ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಸಿರಿವಂತರಾಗಿಸಿದ ಅಮೃತ ಚೇತನ! ಅಪೂರ್ವ ಕಲಾನಿಧಿ !

27 June 2014

ಮೂರರ ಸುಳಿಯೊಳಗೆ ಮಂಟಪ – ಯಕ್ಷಗಾನ, ಇತ್ಯಾದಿ

“ಹೌದು, ಆಟ ನೋಡದೆ ಬಹಳ ದಿನಗಳಾಯ್ತು” ಅಭಯ ಬರೆದುಕೊಟ್ಟ ಈ ಮಾತುಗಳನ್ನು ಇನ್ನೂ ಕ್ರಿಯಾಶೀಲರಾಗಿರುವ ಯಕ್ಷಗಾನದ ಹಿರಿಯ ಕಲಾವಿದ ಪೇತ್ರಿ ಮಾಧೂ ನಾಯ್ಕರು ಪುಣೆಯ ಪಿಲ್ಮ್ ಇನ್ಸ್‍ಟ್ಯೂಟಿನಲ್ಲಿ ಮನೆಯ ಮಾದರಿಯೊಂದರಲ್ಲಿ ಕುಳಿತು (೨೦೦೪ರ ಸುಮಾರಿಗೆ) ಮನನ ಮಾಡುತ್ತಿದ್ದರು. ಸನ್ನಿವೇಶ ಅಭಯನ ಮೂರು ವರ್ಷ ಸಿನಿ-ನಿರ್ದೇಶನ ಕಲಿಕೆಯ ಪರೀಕ್ಷಾರಂಗ. ಮಾಧೂನಾಯ್ಕರದ್ದು ದೈಹಿಕ ಕಾರಣಗಳಿಗಾಗಿ ನಿವೃತ್ತನಾದ ಹಿರಿಯ ಯಕ್ಷ-ಕಲಾವಿದನ ಪಾತ್ರ. ಈ ಪಾತ್ರದ ಉತ್ತರಾಧಿಕಾರಿಯಾಗಿ ಹೊಳೆದ ಯುವಮಿಂಚಿನ ನಿರ್ವಹಣೆ - ಉಡುಪಿಯ ಯಕ್ಷಗಾನ ಕೇಂದ್ರದ ಪರಮಗುರು ಬನ್ನಂಜೆ ಸಂಜೀವ ಸುವರ್ಣರದ್ದು. ಹೊಸ ತಲೆಮಾರಿನ ಆಟಗಳ ಬಗ್ಗೆ ಹೇವರಿಕೆಯಿಂದ ಯಕ್ಷ-ವೀಕ್ಷಣಾ ಸನ್ಯಾಸವನ್ನು ಪರಿಗ್ರಹಿಸಿದ್ದ `ಮಾಧೂನಾಯ್ಕ’ರಿಗೆ `ಸಂಜೀವಸುವರ್ಣ’ರಿಂದ ತನ್ನ ಪಾತ್ರಪೋಷಣೆಯನ್ನು ನೋಡಲು ಸವಿನಯ ಆಮಂತ್ರಣ ಬಂದಿತ್ತು. ಆಗ ಬಿಟ್ಟರೂ ಬಿಡಲಾಗದ ಕಲಾಮೋಹದಲ್ಲಿ ಉದ್ಗರಿಸಬೇಕಿದ್ದ ನುಡಿಗಳವು. (ನಾನಿಲ್ಲಿ ಆ ಕತೆ ವಿಸ್ತರಿಸುವುದಿಲ್ಲ, ಇಲ್ಲಿ ಚಿಟಿಕೆ ಹೊಡೆದು ಅವಶ್ಯ ಆ ಕಿರು ಚಿತ್ರವನ್ನೇ ಹಿಂದೆ ಬೆಳ್ಳಿತೆರೆಯ ಮೇಲೆ ಎಂದನ್ನುತ್ತಿದ್ದಂತೆ ನಿಮ್ಮ ಗಣಕದ ಕರಿತೆರೆಯ ಮೇಲೆ ನೋಡಿರಿ, ಆನಂದಿಸಿರಿ, ಮರೆತು ನಿರಾಶರಾಗದಿರಿ!!) ಶಿವಮೊಗ್ಗದ ಗೆಳೆಯ ಡಾ| ರತ್ನಾಕರ ಉಪಾಧ್ಯ (ಅವರ ದೊಡ್ಡಣ್ಣ) ಮಂಟಪ ಪ್ರಭಾಕರ ಉಪಾಧ್ಯರ ಮೂರು ಪಾತ್ರ ಪ್ರಧಾನವಾದ `ಮಂಟಪ ತ್ರಿವಳಿ’ – ಮೂರು ದಿನಗಳ ಯಕ್ಷಗಾನ ಪ್ರದರ್ಶನ (ಜೂನ್ ೨೦ ರಿಂದ ೨೨, ೨೦೧೪), ವ್ಯವಸ್ಥೆ ಮಾಡಿ ಆಮಂತ್ರಣ ಕಳಿಸಿದಾಗ ಮತ್ತು ಮಂಗಳೂರಿನಲ್ಲೇ ಇರುವ ಡಾ| ಮನೋಹರ ಉಪಾಧ್ಯ (ಅವರ ಕಿರಿತಮ್ಮ) ಒಂದು ಪ್ರದರ್ಶನಕ್ಕಾದರೂ ಪ್ರೀತಿಯ ಕರ್ತವ್ಯವಾಗಿ  ಹೋಗಿಬರಲಿದ್ದವರು ಅಷ್ಟೇ ವಿಶ್ವಾಸದಿಂದ ನನ್ನನ್ನು ಜತೆ ಸೇರಿಸಿಕೊಳ್ಳಲು ಒತ್ತಾಯಿಸಿದಾಗ ನನಗೆ ಬಂದ ಮಾತಾದರೂ ಅದೇ – “ಬರ್ತೇನೆ, ಆಟ ನೋಡದೆ ಬಹಳ ದಿನಗಳಾಯ್ತು!”

10 January 2014

ಸರಳ ಜೀವನಮೌಲ್ಯದ ಪ್ರತಿಮೆ - ಬಿ. ರಾಮ ಭಟ್ಟ!

ಮೊನ್ನೆ ಆದಿತ್ಯವಾರ (೨೯-೧೨-೨೦೧೩) ವಿಭಿನ್ನ ಮಂಗಳೂರು ಶ್ರೀರಾಮಕೃಷ್ಣ ಮಠದ ಸಹಯೋಗದಲ್ಲಿ ವ್ಯವಸ್ಥೆ ಮಾಡಿದ್ದ ಐದನೆಯ ವರ್ಷದ ಯಕ್ಷದರ್ಪಣ ಕಾರ್ಯಕ್ರಮಕ್ಕೆ ನಾನು, ದೇವಕಿ ಕಾಲು ಗಂಟೆ ಮೊದಲೇ ಹೋಗಿದ್ದೆವು. ವಾಹನವನ್ನು ತಂಗುದಾಣದಲ್ಲಿ ಇಡುವ ಮೊದಲು ದೇವಕಿಯನ್ನಿಳಿಸಲು ನಾನು ಸಭಾಭವನದ ಎದುರು ನಿಲ್ಲಿಸಿದಾಗ, ಆಶ್ರಮದ ಪ್ರಶಾಂತತೆ ಮತ್ತು ಶುಚಿಯನ್ನು ಮೆಚ್ಚಿಕೊಳ್ಳುವಂತೆ ಅಲ್ಲೇ ದಾರಿಗೆ ಅಂಚು ಕಟ್ಟಿದ್ದ ಕಲ್ಲಿನ ಮೇಲೆ ಕುಳಿತಿದ್ದರು ಬಿ. ರಾಮಭಟ್ಟರು. ನನ್ನನ್ನು ಗುರುತಿಸಿದ್ದೇ ಮುಖ ತುಂಬ ನಗು ತುಂಬಿ, ವೀಳ್ಯರಾಗರಂಜಿತ ಬಾಯರಳಿಸಿ ದೊಡ್ಡ ನಮಸ್ಕಾರ ಹೇಳುತ್ತ ಏಳತೊಡಗಿದ್ದರು. ಇಲ್ಲ, ಇಲ್ಲ ಕುಳಿತಿರಿ. ತಂಗುದಾಣದಲ್ಲಿ ರಥ ಬಿಟ್ಟು ಬರುತ್ತೇನೆ ಎಂದೆ. ಹಾಗೆ ನಾನು ಮತ್ತೆ ಬರುವಾಗ ಎಂದಿನಂತೆ ಶ್ವೇತ ಶುಭ್ರವಸನಧಾರಿಯಾಗಿದ್ದ ರಾಮ ಭಟ್ಟರು ಪ್ರಾಯ ಎಪ್ಪತ್ನಾಲ್ಕಾದರೂ ಯಾವ ದೈಹಿಕ ಬಳಲಿಕೆ ಇಲ್ಲದಂತೆ, ನನಗಿಂತ ಹನ್ನೆರಡು ವರ್ಷಕ್ಕೆ ಹಿರಿಯರಾದರೂ ಯಾವ ಮಾನಸಿಕ ತಡೆಗಳೂ ಇಲ್ಲದೆ ಪ್ರೀತಿ ಸಂಭ್ರಮವೇ ಮೂರ್ತಿವೆತ್ತಂತೆ ನಾಲ್ಕು ಹೆಜ್ಜೆ ನನ್ನತ್ತಲೇ ಧಾವಿಸಿ ಬಂದು ಎರಡೂ ಕೈ ತೆರೆದು ಸ್ವಾಗತಿಸಿದರು. ಈಗ ಸುಮಾರು ಹತ್ತು ವರ್ಷದ ಹಿಂದೆ ಮೊದಲ ಬಾರಿಗೆ ನನಗೆ ಇವರ ಪರಿಚಯವಾದಲ್ಲಿಂದ ಇವರು ಬದಲಲೇ ಇಲ್ಲವೋ ಎನ್ನುವ ರೂಪ ಅವರದು. ಅದೇ ಕುಳ್ಳು, ತೆಳ್ಳು, ದೃಢ ದೇಹ.  ಕನ್ನಡಕದ ಹಿಂದೆ ಇಂದು ಕಂಡೆ ಎಂಬ ಪ್ರೀತಿ ಸೂಸುವ ಕಣ್ಣು. ಒತ್ತಿ ಬಾಚಿದ (ಪ್ರಾಯ ಸಹಜವಾಗಿ ತುಸು ವಿರಳವೇ ಆದರೂ) ಎಣ್ಣೆ ಹೊಳಪಿನ ಬಿಳಿ ಕೂದಲು, ಒತ್ತು ಕೊಟ್ಟಂತೆ ನೊಸಲಿಗೇರಿದ ಗಂಧ, ಕುಂಕುಮದ ಬೊಟ್ಟು. ಅವರಿಗೆ ಅವಸರವಿಲ್ಲ, ಆದರೆ ಬಂದಷ್ಟೂ ಮಾತು ಕಟ್ಟೆ ತುಂಬಿದ ಹರಿವಿನಂತೆ ವಿಚಾರಪೂರ್ಣ, ಸ್ಪಷ್ಟ. ಎಷ್ಟು ಸಮಯವಾಯ್ತು ನಿಮ್ಮನ್ನು ಕಂಡು. (ಹೌದು, ನನ್ನಂಗಡಿ ಮುಚ್ಚಿದ ಮೇಲೆ ಕಂಡಂತಿಲ್ಲ - ನಾನೂ ನೆನಪಿಸಿಕೊಳ್ಳುತ್ತಿದ್ದೆ.) ನಿಮ್ಮ ಅಂಗಡಿಯತ್ತ ಹೋಗಲೇ ಇಲ್ಲ. ಪುಸ್ತಕ ಬೇಡವೆಂದಲ್ಲ, ಅಲ್ಲಿ ನೀವಿಲ್ಲವಲ್ಲ. (ಇಂಥವರಿಗೆಲ್ಲ ಅಲ್ಲಿ ಮುಂದುವರಿದಿರುವುದೂ ಪುಸ್ತಕದಂಗಡಿಯೇ ಎನ್ನುವ ನನ್ನ ಮಾತು ಪಥ್ಯವಾಗುವುದೇ ಇಲ್ಲ!)

26 July 2013

ರಘುರಾಮಾಭಿನಂದನಮ್ - ತಪ್ಪಿದ ಒತ್ತು

ರಘುರಾಮಾಭಿನಂದನಮ್ - ತಪ್ಪಿದ ಒತ್ತು
(ಕಲೌಚಿತ್ಯ ಮೀರಿದ ಕಲಾವಿದ ಗೌರವ?)


05 July 2013

ಸುದರ್ಶನೋಪಖ್ಯಾನ

‘ಸಾಧ್ಯೋ ನಾರಾಯಣೋ ಹರಿ:’ ಎಂಬ ಘೋಷ ಉಕ್ತಿಯೊಡನೆ ಕಟೀಲಿನಲ್ಲಿ ಆಯೋಜಿತವಾದ ತಾಳಮದ್ದಳೆ ಸಪ್ತಾಹದಲ್ಲಿ ೨೦-೬-೨೦೧೩ರಂದು ಸುದರ್ಶನೋಪಖ್ಯಾನ ಎಂಬೊಂದು ಕಥಾನಕಕ್ಕೆ ನಾನು ಸಾಕ್ಷಿಯಾಗಿದ್ದೆ. ನನ್ನ ರಸಿಕ ಮನಸ್ಸು ಮತ್ತು ಕೈಯಲ್ಲಿದ್ದ ಪುಟ್ಟ ಸ್ಥಿರ ಕ್ಯಾಮರಾವನ್ನು ಪ್ರದರ್ಶನದ ಉದ್ದಕ್ಕೂ ಚುರುಕಾಗಿಟ್ಟಿದ್ದೆ. ಹಾಗೆ ನಾನು ಗ್ರಹಿಸಿದ ಕಥಾ ಎಳೆಯಲ್ಲಿ, ನಾನೇ ದಾಖಲಿಸಿದ ಸ್ಥಿರ ಹಾಗೂ ವಿಡಿಯೋ ತುಣುಕುಗಳನ್ನು ಪೋಣಿಸುವ ಕೆಲಸವನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಈ ಪರಿಯ ದಾಖಲಾತಿ ಪೂರ್ವ ಯೋಜಿತವಲ್ಲ. ಮತ್ತೆ ಈಗಲೂ ನಾನು ಆಯ್ಕೆ ಅಥವಾ ಪರಿಷ್ಕರಣೆಗಳನ್ನು ಅಳವಡಿಸಿಯೂ ಇಲ್ಲ. ವಿಮರ್ಶೆಯ ದೃಷ್ಟಿಕೋನವನ್ನೂ ಬದಿಗಿರಿಸಿ, ಪ್ರದರ್ಶನವನ್ನು ಯಥಾಸಾಧ್ಯ ಸಾರ್ವಜನಿಕದಲ್ಲಿ ಹಂಚಿಕೊಳ್ಳಲು ಇದೊಂದು ಕಿರುಪ್ರಯತ್ನ. ಇಲ್ಲಿ ಮೂಡಿರುವ ‘ಅರ್ಥ’ದಲ್ಲಿ ಗುಣವಿದ್ದರೆ ಭಾಗಿಗಳಾದ ಕಲಾವಿದರದ್ದು, ಕೊರತೆಗಳಿದ್ದರೆ ನನ್ನ ಗ್ರಹಿಕೆಯ ಮಿತಿಯದ್ದು ಎಂದು ಭಾವಿಸಬೇಕಾಗಿ ಮೊದಲಲ್ಲೇ ಕೇಳಿಕೊಳ್ಳುತ್ತೇನೆ.