[ಭಗೀರಥನ ಧ್ಯಾನದೊಡನೆ ಒಂದೇ ವಾರದಲ್ಲಿ ಬಂದು ಈ ಸರಣಿಯನ್ನು ಮುಗಿಸುತ್ತೇನೆಂದವನಿಗೆ ಎರಡು ವಾರದ ಹಿಂದೆ ಡಾ| ರವೀಂದ್ರನಾಥ ಶಾನುಭಾಗರ ಭೇಟಿಯಾಯ್ತು. ಇವರು ಕೆಲವು ವರ್ಷಗಳ ಹಿಂದೆ ಉಡುಪಿಯಲ್ಲಿದ್ದುಕೊಂಡು ಬಸ್ರೂರು ಹೆಸರಿನಲ್ಲಿ ಅಸಂಖ್ಯ ಬಳಕೆದಾರರ ಮತ್ತು ಸಾಮಾಜಿಕರ ನ್ಯಾಯಯುತವಾದ ಸಮಸ್ಯೆಗಳಿಗೆ ಅಪ್ಪಟ ಪ್ರಜಾಸತ್ತಾತ್ಮಕ ಹೋರಾಟವನ್ನು ಕೊಟ್ಟು ಬಗೆಹರಿಸಿದ್ದು ಯಾರೂ ಮರೆಯುವಂತದ್ದಲ್ಲ. ಒಂದು ಹಂತದಲ್ಲಿ ಇವರಿಗೂ ಎಲ್ಲ ಸಾಕೆನ್ನಿಸಿದಾಗ ದೇಶದ ಉತ್ತರ ತಲೆಯಲ್ಲಿ (ವಾಸ್ತವಾಗಿ ಪರದೇಶಿಯಾಗಿ) ಹೋಗಿ ತಣ್ಣಗೆ ನೆಲೆಸಿದ್ದರು. ಆದರೆ ಇಲ್ಲಿನ ಸಂಕಟಗಳು ಬೇರೊಂದೇ ಆಯಾಮಪಡೆದುಕೊಳ್ಳುತ್ತಿರುವುದನ್ನು ನೋಡಲಾಗದೇ ಮತ್ತೆ (ಗುಜರಾತಿನ ಮೂಲಕ) ಹೋರಾಟದ ಕೆಚ್ಚುಳಿಸಿಕೊಂಡು ಬಂದಿದ್ದಾರೆ. ಹಣ ಸೇವೆಗಳ ಸಮಸ್ಯೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಭಂಗಗಳನ್ನು ಮೀರಿದ ಪಾರಿಸರಿಕ ಸಮಸ್ಯೆ, ಒಂದು ಜನ್ಮಕ್ಕಲ್ಲ ಹಲವು ತಲೆಮಾರುಗಳಿಗೆ ವ್ಯಾಪಿಸುವ, ಮಾನವ ಮಾತ್ರರಿಗಲ್ಲ ಜೀವಜಾಲಕ್ಕೇ ಕುತ್ತಾಗುವ ಎಂಡೋ ಸಲ್ಫಾನ್ ಹೆಮ್ಮಾರಿಯ ವಿರುದ್ಧ ಇವರು ರಂಗಕ್ಕಿಳಿದರು. ಶಾನುಭಾಗರನ್ನು ಗುರುವೆಂದೇ ಪರಿಗಣಿಸಿ ಬಂದ ಗೆಳೆಯ ಸುಂದರರಾಯರು ತಿರುಗಲಿರುವ ನೇತ್ರಾವತಿಯಲ್ಲಿ ಮುಳುಗಿದ್ದವರೂ ದಡಬಡಿಸಿ ಹೊರಟು ಆದರೆ ಧೃಢವಾಗಿ ಹಿಂಬಾಲಿಸಿದ್ದಾರೆ. (ಅವಶ್ಯ ಇಲ್ಲೇ ಇರುವ ಸುಂದರ ವಸುಂಧರ ಸೇತನ್ನು ಬಳಸಿ ಅವರ ಬ್ಲಾಗಿಗೆ ಹೋಗಿ ನೋಡಿ) ನನಗೋ ಇವರನ್ನು ಅನುಸರಿಸುವ ಉಮೇದು ಆದರೆ ನಾನೇ ನಡೆಸಬೇಕಾದ ಜವಾಬ್ದಾರಿಯನ್ನು ಬಿಡಲಾಗದ ತುರ್ತಿನಲ್ಲಿ ಪುಸ್ತಕ ಮಾರಾಟಗಾರನ ತಲ್ಲಣಗಳನ್ನು ತುರುಕಿಬಿಟ್ಟೆ. ಈಗ ಬನ್ನಿ, ಜಲಪಾತದೋಟದ ಕೊನೆಯ ಮುಳುಗಿಗೆ ನಿಮ್ಮನ್ನು ಒಯ್ಯುತ್ತಿದ್ದೇನೆ.]
Showing posts with label ಉ.ಕ. ಜಿಲ್ಲೆಯ ಜಲಪಾತಗಳು. Show all posts
Showing posts with label ಉ.ಕ. ಜಿಲ್ಲೆಯ ಜಲಪಾತಗಳು. Show all posts
01 May 2011
ಸಾಗರದಾಚಿನ ಭಗೀರಥ
(ಜಲಪಾತಗಳ ದಾರಿಯಲ್ಲಿ ಅಂತಿಮ ಮತ್ತು ಆರನೇ ಭಾಗ)
[ಭಗೀರಥನ ಧ್ಯಾನದೊಡನೆ ಒಂದೇ ವಾರದಲ್ಲಿ ಬಂದು ಈ ಸರಣಿಯನ್ನು ಮುಗಿಸುತ್ತೇನೆಂದವನಿಗೆ ಎರಡು ವಾರದ ಹಿಂದೆ ಡಾ| ರವೀಂದ್ರನಾಥ ಶಾನುಭಾಗರ ಭೇಟಿಯಾಯ್ತು. ಇವರು ಕೆಲವು ವರ್ಷಗಳ ಹಿಂದೆ ಉಡುಪಿಯಲ್ಲಿದ್ದುಕೊಂಡು ಬಸ್ರೂರು ಹೆಸರಿನಲ್ಲಿ ಅಸಂಖ್ಯ ಬಳಕೆದಾರರ ಮತ್ತು ಸಾಮಾಜಿಕರ ನ್ಯಾಯಯುತವಾದ ಸಮಸ್ಯೆಗಳಿಗೆ ಅಪ್ಪಟ ಪ್ರಜಾಸತ್ತಾತ್ಮಕ ಹೋರಾಟವನ್ನು ಕೊಟ್ಟು ಬಗೆಹರಿಸಿದ್ದು ಯಾರೂ ಮರೆಯುವಂತದ್ದಲ್ಲ. ಒಂದು ಹಂತದಲ್ಲಿ ಇವರಿಗೂ ಎಲ್ಲ ಸಾಕೆನ್ನಿಸಿದಾಗ ದೇಶದ ಉತ್ತರ ತಲೆಯಲ್ಲಿ (ವಾಸ್ತವಾಗಿ ಪರದೇಶಿಯಾಗಿ) ಹೋಗಿ ತಣ್ಣಗೆ ನೆಲೆಸಿದ್ದರು. ಆದರೆ ಇಲ್ಲಿನ ಸಂಕಟಗಳು ಬೇರೊಂದೇ ಆಯಾಮಪಡೆದುಕೊಳ್ಳುತ್ತಿರುವುದನ್ನು ನೋಡಲಾಗದೇ ಮತ್ತೆ (ಗುಜರಾತಿನ ಮೂಲಕ) ಹೋರಾಟದ ಕೆಚ್ಚುಳಿಸಿಕೊಂಡು ಬಂದಿದ್ದಾರೆ. ಹಣ ಸೇವೆಗಳ ಸಮಸ್ಯೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಭಂಗಗಳನ್ನು ಮೀರಿದ ಪಾರಿಸರಿಕ ಸಮಸ್ಯೆ, ಒಂದು ಜನ್ಮಕ್ಕಲ್ಲ ಹಲವು ತಲೆಮಾರುಗಳಿಗೆ ವ್ಯಾಪಿಸುವ, ಮಾನವ ಮಾತ್ರರಿಗಲ್ಲ ಜೀವಜಾಲಕ್ಕೇ ಕುತ್ತಾಗುವ ಎಂಡೋ ಸಲ್ಫಾನ್ ಹೆಮ್ಮಾರಿಯ ವಿರುದ್ಧ ಇವರು ರಂಗಕ್ಕಿಳಿದರು. ಶಾನುಭಾಗರನ್ನು ಗುರುವೆಂದೇ ಪರಿಗಣಿಸಿ ಬಂದ ಗೆಳೆಯ ಸುಂದರರಾಯರು ತಿರುಗಲಿರುವ ನೇತ್ರಾವತಿಯಲ್ಲಿ ಮುಳುಗಿದ್ದವರೂ ದಡಬಡಿಸಿ ಹೊರಟು ಆದರೆ ಧೃಢವಾಗಿ ಹಿಂಬಾಲಿಸಿದ್ದಾರೆ. (ಅವಶ್ಯ ಇಲ್ಲೇ ಇರುವ ಸುಂದರ ವಸುಂಧರ ಸೇತನ್ನು ಬಳಸಿ ಅವರ ಬ್ಲಾಗಿಗೆ ಹೋಗಿ ನೋಡಿ) ನನಗೋ ಇವರನ್ನು ಅನುಸರಿಸುವ ಉಮೇದು ಆದರೆ ನಾನೇ ನಡೆಸಬೇಕಾದ ಜವಾಬ್ದಾರಿಯನ್ನು ಬಿಡಲಾಗದ ತುರ್ತಿನಲ್ಲಿ ಪುಸ್ತಕ ಮಾರಾಟಗಾರನ ತಲ್ಲಣಗಳನ್ನು ತುರುಕಿಬಿಟ್ಟೆ. ಈಗ ಬನ್ನಿ, ಜಲಪಾತದೋಟದ ಕೊನೆಯ ಮುಳುಗಿಗೆ ನಿಮ್ಮನ್ನು ಒಯ್ಯುತ್ತಿದ್ದೇನೆ.]
[ಭಗೀರಥನ ಧ್ಯಾನದೊಡನೆ ಒಂದೇ ವಾರದಲ್ಲಿ ಬಂದು ಈ ಸರಣಿಯನ್ನು ಮುಗಿಸುತ್ತೇನೆಂದವನಿಗೆ ಎರಡು ವಾರದ ಹಿಂದೆ ಡಾ| ರವೀಂದ್ರನಾಥ ಶಾನುಭಾಗರ ಭೇಟಿಯಾಯ್ತು. ಇವರು ಕೆಲವು ವರ್ಷಗಳ ಹಿಂದೆ ಉಡುಪಿಯಲ್ಲಿದ್ದುಕೊಂಡು ಬಸ್ರೂರು ಹೆಸರಿನಲ್ಲಿ ಅಸಂಖ್ಯ ಬಳಕೆದಾರರ ಮತ್ತು ಸಾಮಾಜಿಕರ ನ್ಯಾಯಯುತವಾದ ಸಮಸ್ಯೆಗಳಿಗೆ ಅಪ್ಪಟ ಪ್ರಜಾಸತ್ತಾತ್ಮಕ ಹೋರಾಟವನ್ನು ಕೊಟ್ಟು ಬಗೆಹರಿಸಿದ್ದು ಯಾರೂ ಮರೆಯುವಂತದ್ದಲ್ಲ. ಒಂದು ಹಂತದಲ್ಲಿ ಇವರಿಗೂ ಎಲ್ಲ ಸಾಕೆನ್ನಿಸಿದಾಗ ದೇಶದ ಉತ್ತರ ತಲೆಯಲ್ಲಿ (ವಾಸ್ತವಾಗಿ ಪರದೇಶಿಯಾಗಿ) ಹೋಗಿ ತಣ್ಣಗೆ ನೆಲೆಸಿದ್ದರು. ಆದರೆ ಇಲ್ಲಿನ ಸಂಕಟಗಳು ಬೇರೊಂದೇ ಆಯಾಮಪಡೆದುಕೊಳ್ಳುತ್ತಿರುವುದನ್ನು ನೋಡಲಾಗದೇ ಮತ್ತೆ (ಗುಜರಾತಿನ ಮೂಲಕ) ಹೋರಾಟದ ಕೆಚ್ಚುಳಿಸಿಕೊಂಡು ಬಂದಿದ್ದಾರೆ. ಹಣ ಸೇವೆಗಳ ಸಮಸ್ಯೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಭಂಗಗಳನ್ನು ಮೀರಿದ ಪಾರಿಸರಿಕ ಸಮಸ್ಯೆ, ಒಂದು ಜನ್ಮಕ್ಕಲ್ಲ ಹಲವು ತಲೆಮಾರುಗಳಿಗೆ ವ್ಯಾಪಿಸುವ, ಮಾನವ ಮಾತ್ರರಿಗಲ್ಲ ಜೀವಜಾಲಕ್ಕೇ ಕುತ್ತಾಗುವ ಎಂಡೋ ಸಲ್ಫಾನ್ ಹೆಮ್ಮಾರಿಯ ವಿರುದ್ಧ ಇವರು ರಂಗಕ್ಕಿಳಿದರು. ಶಾನುಭಾಗರನ್ನು ಗುರುವೆಂದೇ ಪರಿಗಣಿಸಿ ಬಂದ ಗೆಳೆಯ ಸುಂದರರಾಯರು ತಿರುಗಲಿರುವ ನೇತ್ರಾವತಿಯಲ್ಲಿ ಮುಳುಗಿದ್ದವರೂ ದಡಬಡಿಸಿ ಹೊರಟು ಆದರೆ ಧೃಢವಾಗಿ ಹಿಂಬಾಲಿಸಿದ್ದಾರೆ. (ಅವಶ್ಯ ಇಲ್ಲೇ ಇರುವ ಸುಂದರ ವಸುಂಧರ ಸೇತನ್ನು ಬಳಸಿ ಅವರ ಬ್ಲಾಗಿಗೆ ಹೋಗಿ ನೋಡಿ) ನನಗೋ ಇವರನ್ನು ಅನುಸರಿಸುವ ಉಮೇದು ಆದರೆ ನಾನೇ ನಡೆಸಬೇಕಾದ ಜವಾಬ್ದಾರಿಯನ್ನು ಬಿಡಲಾಗದ ತುರ್ತಿನಲ್ಲಿ ಪುಸ್ತಕ ಮಾರಾಟಗಾರನ ತಲ್ಲಣಗಳನ್ನು ತುರುಕಿಬಿಟ್ಟೆ. ಈಗ ಬನ್ನಿ, ಜಲಪಾತದೋಟದ ಕೊನೆಯ ಮುಳುಗಿಗೆ ನಿಮ್ಮನ್ನು ಒಯ್ಯುತ್ತಿದ್ದೇನೆ.]09 April 2011
ಮಾಗೋಡು, ಕವಡಿ ಕೆರೆ
(ಜಲಪಾತಗಳ ದಾರಿಯಲ್ಲಿ ಭಾಗ ಐದು)

ಕೆಂಜಳಿಲಿಗೆ ಕಿವಿಯಾಗುವಂತೆ ಮಾಡಿ, ಜಗತ್ತಿನ ಅತಿ ಎತ್ತರದ ಜಲಪಾತ ಚಿರಿಪಿರಿಯಡಿಯಲ್ಲಿ ನಿಮ್ಮನ್ನು ವಾರಕಾಲ ಮಾತ್ರ ಕಾಯಲು ಬಿಟ್ಟವನು ಸುಮಾರು ಹದಿನೈದು ದಿನದ ಮಟ್ಟಿಗೆ ದಾರಿ ತಪ್ಪಿ ಹೋದೆ. ವಾಸ್ತವದಲ್ಲಿ ಯಲ್ಲಾಪುರ ದಾರಿಯಂಚಿನಲ್ಲಿ ನಿಂತ ನಮ್ಮನ್ನು ಮಳೆ, ಅಲ್ಲಲ್ಲ ಜಲಪಾತ ಬೇಗನೇ ಬಿಡುಗಡೆ ಮಾಡಿತ್ತು. ಆದರೆ ನಮ್ಮ ಒಟ್ಟಾರೆ ಓಡಾಟದ ಫಲವಾಗಿ ನಾವು ಎಷ್ಟು ಚುರುಕಾಗಿ ಮುಂದುವರಿದು ಯಲ್ಲಾಪುರ ತಲಪಿದರೂ ಹೋಟೆಲುಗಳಲ್ಲಿ ಊಟಾ ಖೋತಾ ಆಗಿತ್ತು. ಅವಸರವಸರವಾಗಿ ಏನೋ ಒಂದಿಷ್ಟು ಹೊಟೆಲ್ ತಿನಿಸುಗಳನ್ನು (ಜಡ್ಡಿಗದ್ದೆಯ ವಿರಹದಲ್ಲೇ) ಹೊಟ್ಟೆಗೆ ಜಡಿದು, ರಾತ್ರಿಯ ಊಟ-ವಾಸಕ್ಕಿದ್ದ ಅನಿಶ್ಚಿತತೆಯನ್ನು ನಿವಾರಿಸಲು ಮಾಗೋಡಿನತ್ತ ದೌಡಾಯಿಸಿದೆವು.
ಉತ್ತರಕನ್ನಡದಲ್ಲಿ (ಸರಕಾರೀ ಭಾಷೆ) ‘ಸುಮ್ಮನೇ ಸಮುದ್ರ ಸೇರುವ ನೀರನ್ನು ಜನೋಪಯೋಗಿ ಮಾಡುವ ಅಥವಾ ಜನಜೀವನಕ್ಕೇನೂ ಬಾಧೆಯಾಗದಂತೆ ಬರಿಯ ಕಾಡು ಮಾತ್ರ ಮುಳುಗಿಸಿ’ ವಿದ್ಯುತ್ ಬಸಿಯುವ ಭಾರೀ ಯೋಜನೆಗಳು ಬಹು ಪ್ರಚಾರದಲ್ಲಿದ್ದ ಕಾಲವದು. (ಈಗ ಅಭಿವೃದ್ಧಿ ಸಮಷ್ಟಿಗಾಗಿ ವ್ಯಕ್ತಿ ಎಂದು ಘೋಷಿಸಿ, ಪ್ರತಿಯೊಬ್ಬರನ್ನೂ ಒಂದಲ್ಲಾ ಒಂದು ಯೋಜನೆಯಲ್ಲಿ ಹುತಾತ್ಮರನ್ನಾಗಿಸುವಷ್ಟು ಮುಂದುವರಿದಿದೆ. ಕೆಲವೊಮ್ಮೆ ನೀವು ಯಜಮಾನರಾಗಿದ್ದ ನೆಲದಲ್ಲೇ ಕಾಯಿಲಸ್ಥ ಗುಮಾಸ್ತನೋ ಪ್ಯಾದೆಯೋ ಆಗಿ ಉಳಿಯುವಷ್ಟು ಔದಾರ್ಯವನ್ನು ತೋರಿಸುವುದೂ ಇದೆ!) ಸೋಂದಾ ಸ್ವರ್ಣವಲ್ಲಿ ಮಠದ ಸ್ವಾಮಿಗಳು ಇವೆಲ್ಲವುಗಳ ಪ್ರಬಲ ವಿರೋಧೀ ಚಳವಳಿಯ ಮುಂದಾಳ್ತನವನ್ನು ವಹಿಸಿಕೊಂಡು ಮಾಧ್ಯಮಗಳಲ್ಲೆಲ್ಲಾ ರಾರಾಜಿಸುತ್ತಿದ್ದ ಕಾಲವೂ ಹೌದು. ಆಗ ನಾನು ಕೇಳಿದಂತೆ ಒಂದೋ ಜಲಸಮಾಧಿಯಾಗುವ ಅಥವಾ ಜೋಗದಂತೆ ಕೇವಲ ಗತವೈಭವವಾಗುಳಿಯುವ ದೊಡ್ಡ ಹೆಸರು ಮಾಗೋಡು ಅಬ್ಬಿ. ಉ.ಕದಲ್ಲಿ ಪ್ರವಾಸಿಗಳನ್ನೇ ನೆಚ್ಚಿ ಅಂದ ಕಾಲತ್ತಿಲೇ ‘ಅಭಿವೃದ್ಧಿ’ಗೊಂಡ ಏಕೈಕ ಪ್ರಾಕೃತಿಕ ತಾಣ ಈ ಮಾಗೋಡು ಅಬ್ಬಿ. ಆದರೆ ಎಲ್ಲಾ ಸರಕಾರೀ ಯೋಜನೆಗಳಂತೆ ಇಲ್ಲೂ ಹೂಡಿಕೆಯ ತೋರಿಕೆಗೇ ಪ್ರಾಶಸ್ತ್ಯ. ‘ಬಾಳ್ತನ’ ಅಥವಾ ‘ಊರ್ಜಿತ’ ಎಂಬ ಶಬ್ದಗಳು ಸರಕಾರೀ ಕೋಶದಲ್ಲಿ ಎಂದೋ ಅಪಮೌಲ್ಯಗೊಂಡಿರುವುದಕ್ಕೆ ಸ್ಪಷ್ಟ ಸಾಕ್ಷಿ ಇಲ್ಲಿ ಕಾಣಬಹುದಿತ್ತು. ಹುಬ್ಬಳ್ಳಿ ಬಿಟ್ಟ ಹೆದ್ದಾರಿ ಯಲ್ಲಾಪುರ ದಾಟಿ ಕರಾವಳಿಯ ಅಂಕೋಲೆಯತ್ತ ಕೊಳ್ಳ ಹಾರಿಕೊಳ್ಳುವ ಮುನ್ನ ನಾವು ಎಡದ ಕವಲು ಹಿಡಿದೆವು. ಆರೇಳು ಕಿಮಿ ಅಂತರದಲ್ಲಿ ನಿರ್ವಸಿತಗೊಂಡ ಪೊಲೀಸ್ ತರಬೇತಿ ಕೇಂದ್ರ (ಬರಲಿದ್ದ ಅಣೆಕಟ್ಟೆಯ ಮುಳುಗಡೆ ವಲಯವಾದ್ದರಿಂದ ಈಚೆಗಷ್ಟೇ ಸ್ಥಳಾಂತರಗೊಂಡಿತ್ತು) ಮುಂದೆ ಯಾವುದೋ ಹಳ್ಳಿಯತ್ತ ಸಾಗುವ ದಾರಿಯನ್ನು ಬಲಕ್ಕೆ ಬಿಟ್ಟು ನೇರ ಅಬ್ಬಿವಲಯಕ್ಕೊಳಪಟ್ಟೆವು.
23 March 2011
ಬನವಾಸಿ, ಶಿವಗಂಗೆ, ಸಹಸ್ರಲಿಂಗೇಶ್ವರ
ಸರಬರ ಊಟ ಮುಗಿಸಿ ಸೊರಬದ ದಾರಿ ಹಿಡಿದೆವು. ನಮ್ಮ ಧಾವಂತ ನೋಡಿ ನಿಧಾನಿಸಲು ಯಾರೇ ಹೇಳಿದರೂ ಉತ್ತರ ಸಿದ್ಧವಿತ್ತು “ಆರು ಭರ್ಚಿಗಳಲ್ಲಿ ಚುಚ್ಚಿದರೂ ನಮ್ಮ ಗುರಿ ಬನವಾಸಿ ದೇಶ.” ಕಿಮೀ ಕಲ್ಲುಗಳನ್ನು ಎಳೆದೆಳೆದು ಹಿಂದಿಕ್ಕಿದಂತೆ ನಾವು ಸಾಗಿದ್ದರೂ ಮಳೆ ನಮ್ಮಿಂದ ಒಂದು ಕೈ ಮುಂದೆ ಇದ್ದದ್ದು ಒಮ್ಮೆಗೇ ಅರಿವಾಯ್ತು. ಬನವಾಸಿ ಪೇಟೆಯಂಚು ತಲಪುತ್ತಿದ್ದಂತೆ ಬಾನ ಬೋಗುಣಿ ಕವುಚಿದಂತಪ್ಪಳಿಸಿತು ಮಳೆ. ಪುಡಾರಿ ಭಾಷಣದಿಂದ ದಿಕ್ಕೆಟ್ಟು ಓಡಿದಂತೆ ನಾವು ದಾರಿ, ಬೈಕ್ ಬಿಟ್ಟು ಸಿಕ್ಕ ಅಂಗಡಿ, ಮನೆ, ಮರಗಳ ಮರೆಗೆ ಓಡಿದೆವು (ಇಲ್ಲವಾದರೆ ನೆನೆವುದೆಮ್ಮ ದೇಹಂ ಬನವಾಸಿ ದೇಶದಿಂ!). ಅರ್ಧ ಗಂಟೆಯಲ್ಲಿ ಆಕಾಶ ತಿಳಿಯಾದ ಮೇಲೆ ನಮ್ಮ ಸೈನ್ಯವನ್ನು ಮರುಸಂಘಟಿಸಿ ಮಹಾಕವಿ ಪಂಪನನ್ನು ಸ್ಮರಿಸುತ್ತಾ ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಮುತ್ತಿಗೆ ಹಾಕಿದೆವು.
17 March 2011
ಒಂದೇಟಿಗೆ ಮೂರಕ್ಕಿ
ಉಂಚಳ್ಳಿ, ಲ್ಯುಸಿಂಗ್ ಟನ್, ಕೆಪ್ಪ ಜೋಗ...
(ಜಲಪಾತಗಳ ದಾರಿಯಲ್ಲಿ ಭಾಗ ಮೂರು)
“ಏನ್ಸಾಮೀ ಜಲಪಾತಗಳ ಎರೆ ಇಟ್ಟು ರೀಲು ಬಿಚ್ತೀರಿ! ಯಾಣದ ತೊರೆ, ಚಂಡಿಕಾ ತೀರ್ಥನ್ನೇ ಜಲಪಾತ ಅಂದ್ಕೋಬೇಕಾ” ಎನ್ನಬೇಡಿ. ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯ ಉತ್ತರೋತ್ತರದಲ್ಲಿ, ಅದರ ದಕ ವಲಯದ ನಾಯಕರಾದ ಶಂಪಾ ದೈತೋಟ, ಸೋಮನಾಥ ನಾಯಕ್, ರಂಜನ ರಾವ್ ಎರಡೂರ್ ಮುಂತಾದವರಿಗೆ ಅದ್ಯಾರೋ (ಅಗರ್ವಾಲ್?) ತಲೆಗೊಂದು ಕೀಟ ಹೊಕ್ಕಿಸಿದ್ದರು. ‘ನೂರು, ಸಾವಿರ ಹೆಕ್ಟೇರ್ ನೆಲ-ಕಾಡು ಮುಳುಗಿಸಿ, ಜೀವ ವೈವಿಧ್ಯವನ್ನು ಇನ್ನಿಲ್ಲವಾಗಿಸಿ, ವಿರಳವಾಗಿಯೇ ಆದರೂ ಅಲ್ಲೂ ಜೀವನ ರೂಢಿಸಿಕೊಂಡ ಗಣನೀಯ ಆದಿವಾಸಿಗಳನ್ನು, ಕೃಷಿಕರನ್ನು ಅತಂತ್ರಗೊಳಿಸುವ ಭಾರೀ ಜಲವಿದ್ಯುತ್ ಯೋಜನೆಗಳು ಪರಿಸರ ದ್ರೋಹಿಗಳು. ಏಕೈಕ ಪರಿಹಾರ ಕಿರು ವಿದ್ಯುತ್ ಯೋಜನೆ (mini hydel projects).’ ಸಹಜವಾಗಿ ಅವರು ನನ್ನಲ್ಲಿ ಜಲಪಾತಗಳ ಪಟ್ಟಿಯನ್ನೇ ಕೇಳಿದ್ದರು. ನನಗೋ ಪ್ರಾಕೃತಿಕ ಶೋಧಗಳನ್ನು ಮಾಡಿ, ಇತರರಲ್ಲಿ ಸಾಹಸ ಪ್ರೇಮ ಮತ್ತು ಪರಿಸರ ಪ್ರೇಮವನ್ನು ಏಕಕಾಲಕ್ಕೆ ಜಾಗೃತಗೊಳಿಸಲು ಸಾರ್ವಜನಿಕಕ್ಕೆ ತೆರೆದಿಡುವ ಉಮೇದಿನ ಪ್ರಾಯ! ಇಲ್ಲಿ ಇಲ್ಲದ್ದು ಇಲ್ಲ ಎಂದು ತೋರುವ ಉತ್ಸಾಹದ ಕಾಲ. ಅವರಿಗೆ ಹಲವು ಹೆಸರುಗಳನ್ನು ಪಟ್ಟಿ ಮಾಡಿ ಕೊಟ್ಟದ್ದೂ ನೆನಪು. ಸರ್ವೇಕ್ಷಣ ಇಲಾಖೆಯ ನಕ್ಷೆ ನೋಡುನೋಡುತ್ತಾ ಪಶ್ಚಿಮ ಘಟ್ಟದ ಕರಾವಳಿಯ ಮೈಯಲ್ಲಿ ಹೆಜ್ಜೆಗೊಂದು ಸಮೃದ್ಧ* ಜಲಪಾತ ಎಂದೇ ನಂಬಿದ್ದೆ. ಮತ್ತವುಗಳ ಪ್ರತ್ಯಕ್ಷ ದರ್ಶನದ ಹುಚ್ಚಿನಲ್ಲಿ ನಾಲ್ಕೆಂಟು ಮಂದಿಯ ಬೈಕ್ ತಂಡ ಕಟ್ಟಿ ಕಾಡ ಮೂಲೆಗಳಿಗೆ ನುಗ್ಗಿ, ಅಸಾಧ್ಯವಾದಲ್ಲಿ ಬೈಕ್ ಬಿಟ್ಟು ಮೈ ನುಗ್ಗು ನುರಿ ಮಾಡಿ, ಹಲವು ಚಿಕ್ಕಪುಟ್ಟ ನೀರ ಬೀಳುಗಳನ್ನೂ ಅಬ್ಬಾ ಎನ್ನಬಹುದಾದ ಅಬ್ಬಿಗಳನ್ನು ಕಂಡುಕೊಂಡದ್ದೂ ಇತ್ತು. ಅವುಗಳ ಮುಂದುವರಿಕೆಯೇ ಈ ಉಕ ಜಲಪಾತಗಳತ್ತಣ ಓಟ. ನನಗೆ ಲಕ್ಷ್ಯಛೇದನದಷ್ಟೇ ಮಾರ್ಗಕ್ರಮಣವೂ ಮುಖ್ಯ ಎನ್ನುವುದಕ್ಕೆ ಗೋಕರ್ಣ, ಯಾಣಗಳಾದವು. ಈಗ ಬನ್ನಿ. . .
(ಜಲಪಾತಗಳ ದಾರಿಯಲ್ಲಿ ಭಾಗ ಮೂರು)
“ಏನ್ಸಾಮೀ ಜಲಪಾತಗಳ ಎರೆ ಇಟ್ಟು ರೀಲು ಬಿಚ್ತೀರಿ! ಯಾಣದ ತೊರೆ, ಚಂಡಿಕಾ ತೀರ್ಥನ್ನೇ ಜಲಪಾತ ಅಂದ್ಕೋಬೇಕಾ” ಎನ್ನಬೇಡಿ. ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯ ಉತ್ತರೋತ್ತರದಲ್ಲಿ, ಅದರ ದಕ ವಲಯದ ನಾಯಕರಾದ ಶಂಪಾ ದೈತೋಟ, ಸೋಮನಾಥ ನಾಯಕ್, ರಂಜನ ರಾವ್ ಎರಡೂರ್ ಮುಂತಾದವರಿಗೆ ಅದ್ಯಾರೋ (ಅಗರ್ವಾಲ್?) ತಲೆಗೊಂದು ಕೀಟ ಹೊಕ್ಕಿಸಿದ್ದರು. ‘ನೂರು, ಸಾವಿರ ಹೆಕ್ಟೇರ್ ನೆಲ-ಕಾಡು ಮುಳುಗಿಸಿ, ಜೀವ ವೈವಿಧ್ಯವನ್ನು ಇನ್ನಿಲ್ಲವಾಗಿಸಿ, ವಿರಳವಾಗಿಯೇ ಆದರೂ ಅಲ್ಲೂ ಜೀವನ ರೂಢಿಸಿಕೊಂಡ ಗಣನೀಯ ಆದಿವಾಸಿಗಳನ್ನು, ಕೃಷಿಕರನ್ನು ಅತಂತ್ರಗೊಳಿಸುವ ಭಾರೀ ಜಲವಿದ್ಯುತ್ ಯೋಜನೆಗಳು ಪರಿಸರ ದ್ರೋಹಿಗಳು. ಏಕೈಕ ಪರಿಹಾರ ಕಿರು ವಿದ್ಯುತ್ ಯೋಜನೆ (mini hydel projects).’ ಸಹಜವಾಗಿ ಅವರು ನನ್ನಲ್ಲಿ ಜಲಪಾತಗಳ ಪಟ್ಟಿಯನ್ನೇ ಕೇಳಿದ್ದರು. ನನಗೋ ಪ್ರಾಕೃತಿಕ ಶೋಧಗಳನ್ನು ಮಾಡಿ, ಇತರರಲ್ಲಿ ಸಾಹಸ ಪ್ರೇಮ ಮತ್ತು ಪರಿಸರ ಪ್ರೇಮವನ್ನು ಏಕಕಾಲಕ್ಕೆ ಜಾಗೃತಗೊಳಿಸಲು ಸಾರ್ವಜನಿಕಕ್ಕೆ ತೆರೆದಿಡುವ ಉಮೇದಿನ ಪ್ರಾಯ! ಇಲ್ಲಿ ಇಲ್ಲದ್ದು ಇಲ್ಲ ಎಂದು ತೋರುವ ಉತ್ಸಾಹದ ಕಾಲ. ಅವರಿಗೆ ಹಲವು ಹೆಸರುಗಳನ್ನು ಪಟ್ಟಿ ಮಾಡಿ ಕೊಟ್ಟದ್ದೂ ನೆನಪು. ಸರ್ವೇಕ್ಷಣ ಇಲಾಖೆಯ ನಕ್ಷೆ ನೋಡುನೋಡುತ್ತಾ ಪಶ್ಚಿಮ ಘಟ್ಟದ ಕರಾವಳಿಯ ಮೈಯಲ್ಲಿ ಹೆಜ್ಜೆಗೊಂದು ಸಮೃದ್ಧ* ಜಲಪಾತ ಎಂದೇ ನಂಬಿದ್ದೆ. ಮತ್ತವುಗಳ ಪ್ರತ್ಯಕ್ಷ ದರ್ಶನದ ಹುಚ್ಚಿನಲ್ಲಿ ನಾಲ್ಕೆಂಟು ಮಂದಿಯ ಬೈಕ್ ತಂಡ ಕಟ್ಟಿ ಕಾಡ ಮೂಲೆಗಳಿಗೆ ನುಗ್ಗಿ, ಅಸಾಧ್ಯವಾದಲ್ಲಿ ಬೈಕ್ ಬಿಟ್ಟು ಮೈ ನುಗ್ಗು ನುರಿ ಮಾಡಿ, ಹಲವು ಚಿಕ್ಕಪುಟ್ಟ ನೀರ ಬೀಳುಗಳನ್ನೂ ಅಬ್ಬಾ ಎನ್ನಬಹುದಾದ ಅಬ್ಬಿಗಳನ್ನು ಕಂಡುಕೊಂಡದ್ದೂ ಇತ್ತು. ಅವುಗಳ ಮುಂದುವರಿಕೆಯೇ ಈ ಉಕ ಜಲಪಾತಗಳತ್ತಣ ಓಟ. ನನಗೆ ಲಕ್ಷ್ಯಛೇದನದಷ್ಟೇ ಮಾರ್ಗಕ್ರಮಣವೂ ಮುಖ್ಯ ಎನ್ನುವುದಕ್ಕೆ ಗೋಕರ್ಣ, ಯಾಣಗಳಾದವು. ಈಗ ಬನ್ನಿ. . .10 March 2011
ಯಾಣ ಅಂದ್ರೆ ಏನ?
(ಜಲಪಾತಗಳ ದಾರಿಯಲ್ಲಿ ಭಾಗ ಎರಡು)

‘ರೊಕ್ಕಿದ್ದವಗೆ ಗೋಕರ್ಣ, ಸೊಕ್ಕಿದ್ದವಗೆ ಯಾಣ’ ಎಂಬ ಜಾಣ್ಣುಡಿ ನಾನು ಕೇಳಿದ್ದೆ. ೧೯೭೭, ನನ್ನಲ್ಲದು ರೊಕ್ಕವಿಲ್ಲದ ಕಾಲವೇ ಆಗಿದ್ದರೂ ಸೊಕ್ಕಿಗೇನೂ ಕಡಿಮೆಯಿರಲಿಲ್ಲ. ಉದ್ದೇಶಪಡದೆ ಅಂಕಿಯಲ್ಲಿ ಅಧ್ಯಾತ್ಮ ಕಾಣುವವರನ್ನು ಸೋಲಿಸಲೆಂಬಂತೆ ಮೂರು ಜನರ ತಂಡ ಕಟ್ಟಿ ಒಂದು ಶನಿವಾರ (೧೯೭೭) ಕಾರವಾರದ ರಾತ್ರಿ ಬಸ್ಸು ಹಿಡಿದೆ. (ಕೊಣಾಜೆಯ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ಮಿತ್ರ ಪ್ರಕಾಶ್ ಮತ್ತು ಮಾವನ ಮಗ ಚಂದ್ರಶೇಖರ). ರಾತ್ರಿ ಎರಡು ಗಂಟೆಯ ಸುಮಾರಿಗೆ ಕುಮಟಾ ನಿಲ್ದಾಣದಲ್ಲಿಳಿದು ಸರದಿಯ ಮೇಲೆ ಒಬ್ಬನ ಪಹರೆಯಲ್ಲಿ ಇಬ್ಬರು ಚೂರುಪಾರು ನಿದ್ದೆ ಹೆಕ್ಕಿದೆವು. ಬೆಳಿಗ್ಗೆ ನಮ್ಮ ಮೇಲೆ ಕೃಪೆಯಿಟ್ಟು ಸ್ವಲ್ಪ ಬೇಗ ಬಾಗಿಲು ತೆರೆದ ಕ್ಯಾಂಟೀನಿನವ ಕೊಟ್ಟದ್ದಷ್ಟನ್ನು ಹೊಟ್ಟೆಗೆ ಸೇರಿಸಿ ಮೊದಲ ಶಿರಸಿ ಬಸ್ಸು ಹಿಡಿದೆವು. ಸುಮಾರು ಹದಿನೆಂಟು ಕಿಮೀ ದೂರದ ಮಾಸ್ತಿಕಟ್ಟೆ ಎಂಬಲ್ಲಿಳಿದು ಕಾಡು ದಾರಿ ತುಳಿದೆವು. (ಕುಮಟ ಬಸ್ ನಿಲ್ದಾಣ ಒದಗಿಸದ ಶೌಚ ವ್ಯವಸ್ಥೆಯನ್ನು ಇಲ್ಲಿ ಕಾಡ ತೊರೆಗಳು ಪರಿಹರಿಸಿದವು) ದಾರಿಯೇನೋ ತೀರಾ ಕಚ್ಚಾವಿತ್ತು. ಆದರೆ ನಮ್ಮ ನಿರೀಕ್ಷೆ ಮೀರಿ ಪೂರ್ಣ ಮಟ್ಟಸ ಭೂಮಿ. ಸರಕಾರೀ ನೆಡುತೋಪು ಸಾಕಷ್ಟಿದ್ದರೂ ಖಾಸಗಿ ಕೃಷಿಕ್ಷೇತ್ರ ಮತ್ತು ವಿಚಾರಿಸಲು ಜನ ಸಿಕ್ಕುತ್ತಿದ್ದುದರಿಂದ ನಮಗೆ ದಾರಿ ತಪ್ಪಿದ, ಅನಾವಶ್ಯ ವಿಳಂಬಿಸಿದ ತೊಂದರೆಗಳೇನೂ ಆಗಲಿಲ್ಲ. ಸುಮಾರು ನಾಲ್ಕು ಗಂಟೆಯ ತರಾತುರಿಯ ನಡಿಗೆಯಲ್ಲಿ ಹಗಲನ್ನು ರಾತ್ರಿ ಮಾಡುವ ಕಾಡು ಕಾಣಿಸಲಿಲ್ಲ. ಚಾರಣ ಶಿಲಾರೋಹಣದ ಮುನ್ನೆಲೆಯಲ್ಲಿ ದಾಪುಗಾಲಿಕ್ಕಿದರೂ ಒಂದೇ ಒಂದು ಬಂಡೆ, ಕಟ್ಟೇರೂ ಕಾಣಿಸದೆ ಇನ್ನೇನು ಯಾಣ ಎಂದರೆ ಮರೀಚಿಕೆಗೆ ಇನ್ನೊಂದು ಹೆಸರೋ ಎನ್ನುವಂತಾಗಿತ್ತು.
03 March 2011
ಗೋಕರ್ಣ
(ಜಲಪಾತಗಳ ದಾರಿಯಲ್ಲಿ ಭಾಗ ಒಂದು)
ಮೂರು ಕಂತಿನಲ್ಲಿ ಬಂಡೆಗೆ ಮಂಡೆ ಕೊಟ್ಟು ಬಿಸಿಯಾದ್ದಕ್ಕೆ ಬನ್ನಿ, ಜಲಪಾತಗಳ ಸಣ್ಣ ತಿರುಗಾಟ ನಡೆಸೋಣ. ಅರೆ ಆಗಲೇ ‘ಎಂದು, ಎಲ್ಲಿ, ಹೇಗೆ’ ಕೇಳದೆ, ಮುಂಡು ಹೆಗಲಿಗೆಸೆದು, ಬದಲಿ ಬಟ್ಟೆಗಳ ಚೀಲ ಬಗಲಿಗೇರಿಸಿ ನೀವು ಹೊರಟದ್ದಾ?! ತಡೀರಿ, ಹಿರಿಯ ಗೆಳೆಯ ಪೆಜತ್ತಾಯರ ಪ್ರೀತಿಯ ನುಡಿಗಟ್ಟನ್ನು ಬಳಸುವುದಾದರೆ ಇದು ನಿಮಗೆ ಕೇವಲ ಮಾಯಾಜಮಖಾನದ ಪಯಣ. ವಾಸ್ತವವಾಗಿ ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕಥೆಯಿದು. ಜಿಲ್ಲೆಯ ಖ್ಯಾತ ಪತ್ರಿಕೆಯೊಂದರ ಹಿರಿಯ ಉಪಸಂಪಾದಕ ಮಿತ್ರರು ತಮ್ಮ ವಿಶೇಷ ಸಂಚಿಕೆಗಾಗಿ ನನ್ನಿಂದ ಇದನ್ನು ಬರೆಸಿದರು. ಸಕಾಲದಲ್ಲಿ ಒದಗಿದ ನನ್ನ ದೀರ್ಘ ಲೇಖನ ಅಂದಿನ ಮುದ್ರಣ ತಂತ್ರಕ್ಕನುಗುಣವಾಗಿ ಸೂಕ್ತ ಚಿತ್ರಗಳ ಸಮೇತ ಫೋಟೋ ನೆಗೆಟಿವ್ ಆಗಿಯೂ ಕಾದಿತ್ತು. ಅದರೆ ತಿಂಗಳಾರು ಕಳೆದರೂ ಮುದ್ರಣಪೂರ್ವ ಕೆಲಸಗಳನ್ನೆಲ್ಲ ಮುಗಿಸಿ ಕೂತರೂ ಪತ್ರಿಕಾ ಆಡಳಿತಕ್ಕೆ ಕವುಚಿಕೊಳ್ಳುತ್ತಿದ್ದ ಜಾಹೀರಾತು ಮೊತ್ತದಲ್ಲಿ ಇದಕ್ಕೆ ಪ್ರಕಟಣಾ ಯೋಗ ಬರಲೇ ಇಲ್ಲ. ಸುಮಾರು ಒಂಬತ್ತು ತಿಂಗಳನಂತರ ತನ್ನ ಅಸಹಾಯಕತೆಯನ್ನು ನಿವೇದಿಸಿಕೊಳ್ಳುತ್ತಾ ಮಿತ್ರ-ಉಪಸಂಪಾದಕ ನೆಗೆಟಿವ್‌ಗಳೂ ಸೇರಿದಂತೆ ಇಡಿಯ ಕಡತವನ್ನು ನನಗೆ ಮರಳಿಸಿದ್ದರು. ಸುಮಾರು ಏಳು ವರ್ಷಗಳನಂತರ ಇನ್ನೊಂದೇ ಪತ್ರಿಕೆಯ ಮಿತ್ರ-ಉಪಸಂಪಾದಕರಿಗೆ ಇದರ ಸುಳಿವು ಹತ್ತಿ, ನನ್ನಿಂದ ಪಡೆದು, ತಮ್ಮ ಪತ್ರಿಕೆಯ ಸಾಪ್ತಾಹಿಕದಲ್ಲಿ ನಾಲ್ಕು ಕಂತುಗಳ ಧಾರಾವಾಹಿ ಮಾಡಿ ‘ಉ.ಕ. ಜಿಲ್ಲೆಯೊಳಗೊಂದು ಪ್ರಾಕೃತಿಕ ನೋಟ ಸಹಿತವಾದ ಓಟ’ ಎಂದೇ ಪ್ರಕಟಿಸಿದರು. ಅದನ್ನಿಂದು ಕೆಲವು ಪರಿಷ್ಕರಣೆ, ವಿಸ್ತರಣೆ ಸಹಿತ ಇಲ್ಲಿ ಧಾರಾವಾಹಿಸುತ್ತಿದ್ದೇನೆ.
Subscribe to:
Posts (Atom)