[ಖ್ಯಾತ
ನಾಟ್ಯಗುರು ಕೆ. ಮುರಲೀಧರ ರಾವ್ ಈಚೆಗೆ (ಮೇ ೧, ೨೦೧೭) ನಿಧನರಾದರು. ಮುರಲೀಧರರಾಯರು ನಾಟ್ಯಕೆ ಗುರುವೆನಲು
ಬರೆದ ಮತ್ತು ರೂಪಿಸಿದ (ರೇಖಾಚಿತ್ರ ಹಾಗೂ ಛಾಯಾಚಿತ್ರಗಳೂ ಅವರವೇ) ‘ನೃತ್ಯಲೋಕ’ದ ಪ್ರಕಾಶಕ ನಾನು.
ಅವರ ಗಣ್ಯ ಶಿಷ್ಯವರ್ಗದಲ್ಲಿ ಹೆಸರಾಂತ ಶ್ರೀವಿದ್ಯಾಮುರಲೀಧರ್ ಈಚೆಗೆ (೨-೯-೨೦೧೭) ಮಂಗಳೂರ ಪುರಭವನದಲ್ಲಿ
‘ಗುರುಸ್ಮರಣೆ’ಯನ್ನು ತುಂಬ ಅರ್ಥಪೂರ್ಣವಾಗಿ ನಡೆಸಿದರು. ಆ ಕಲಾಪದ ದೊಡ್ಡ ಹಾಸಿನಲ್ಲಿ ಅಯಾಚಿತವಾಗಿ
ನನಗೂ ಒಂದು ಸಣ್ಣ ಅಭಿಪ್ರಾಯ ಮಂಡನೆಗೆ ಅವಕಾಶ ಒದಗಿದ ಬಲದಲ್ಲಿ, ಇಲ್ಲಿ ಮುರಳೀಧರರಾಯರ ಸ್ಮರಣೆಗೊಂದು
ದಾಖಲೀಕರಣದ ನೆಲೆ ಕೊಡಲು ಪ್ರಯತ್ನಿಸಿದ್ದೇನೆ.]
ದ್ರೋಣರ
ಪಾದಕ್ಕೆ ಬಾಣ ಹೊಡೆದಂತೆ....
ಹದಿನೈದು ದಿನಗಳ ಹಿಂದೆ ಶ್ರೀವಿದ್ಯಾ
ಮುರಲೀಧರ್ ನನಗೆ ದೂರವಾಣಿಸಿ "ಗುರುಸ್ಮರಣೆ ಮಾಡ್ತಾ ಇದ್ದೇವೆ, ನೀವೂ ಭಾಗವಹಿಸಬೇಕು"
ಎಂದು ಕರೆದರು. ಆಗ ನನ್ನ ಮನಸ್ಸು ೧೯೯೮ರ ಮೇ ೨೮ರಷ್ಟು ಹಿಂದಕ್ಕೆ ಜಾರಿತು. ಅಂದು ನನಗೆ ಅಷ್ಟೇನೂ
ಪರಿಚಯವಿಲ್ಲದ ನಾಟ್ಯಾಚಾರ್ಯ ಕಾಸರಗೋಡು (ಕೆ.) ಮುರಲೀಧರರಾವ್ ಎನ್ನುವವರು, ಮೈಸೂರಿನಲ್ಲಿದ್ದುಕೊಂಡು
ಬರೆದ, ಮಂಗಳೂರಿನ ನನ್ನ ಬಡ-ಪ್ರಕಾಶನ ವ್ಯವಸ್ಥೆ - ಅತ್ರಿಗೆ, ಬೃಹತ್ ಗ್ರಂಥವೇ ಆದ ನೃತ್ಯಲೋಕದ ಲೋಕಾರ್ಪಣೆ.
ಆಗ "ಈಕೆ ಮಡಿಕೇರಿಯ ಕಾಲೇಜ್
ಹುಡುಗಿ, ಮುರಳೀಧರರಾಯರ ಶಿಷ್ಯೆ, ಪುಸ್ತಕದಲ್ಲಿ ಪ್ರಕಟವಾದ ಚಿತ್ರಗಳ ರೂಪದರ್ಶಿ" ಎಂದು ನನ್ನ ತಂದೆ (ಜಿಟಿನಾ) ಪರಿಚಯಿಸಿದ್ದು ಶ್ರೀವಿದ್ಯಾರಾಮನ್ನರನ್ನು (ಹೆಸರಿನ ಉತ್ತರಾರ್ಧ ಆಕೆಯ ತಂದೆಯದ್ದು). ಅಂದು ಸಭಾಕಲಾಪದ ಬೆನ್ನಿಗೆ ಗುರುವಿನ ಪ್ರತಿಭಾ ಅಭಿವ್ಯಕ್ತಿಯಾಗಿ ರಂಗದಲ್ಲಿ ನೃತ್ಯ ಕಲಾಪದೊಂದಿಗೆ ಮೆರೆದವರೂ ಈಕೆಯೇ. ಅನಂತರದ ದಿನಗಳಲ್ಲಿ ಶ್ರೀವಿದ್ಯಾ ಮಂಗಳೂರು ವಿವಿನಿಲಯದ ಸ್ನಾತಕೋತ್ತರ ವಿದ್ಯಾರ್ಥಿನಿ, ಸಂಶೋಧನಪಟು, ಎಲ್ಲೋ ಅಧ್ಯಾಪಿಕೆ ಎಂದೆಲ್ಲಾ ಕಾಣುತ್ತಿದ್ದಂತೆ ಗೃಹಿಣಿಯಾಗಿ ಶ್ರೀವಿದ್ಯಾಮುರಲೀಧರ್ (ಈಗ ಹೆಸರಿನ ಉತ್ತರಾರ್ಧ ಆಕೆಯ ಪತಿಯದ್ದು) ಅನ್ನಿಸಿಕೊಂಡದ್ದೂ ಆಯ್ತು. ಮತ್ತೆ ಪತಿಯನ್ನನುಸರಿಸಿ ವಿದೇಶದಲ್ಲಿ ಕೆಲಕಾಲ ಇದ್ದದ್ದು, ಮರಳಿ ಮಂಗಳೂರನ್ನೇ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡದ್ದೂ ಆಯ್ತು.