ಚಂದ್ರನ ನೈಸರ್ಗಿಕ ಪರಿಸ್ಥಿತಿಗಳ ವಿಚಾರ ವೀಕ್ಷಣೆ ಮತ್ತು ಪ್ರಯೋಗಗಳಿಂದ ತಿಳಿದಿರುವುದರ ಸಾರಾಂಶವಿಷ್ಟು.
ಹೆಸರು
|
ಸರಾಸರಿ ವ್ಯಾಸ (ಕಿ.ಮೀ)
|
ದ್ರವ್ಯರಾಶಿ ದ್ರವ್ಯರಾಶಿ ಭೂಮಿ = ೧
|
ಸಾಂದ್ರತೆ ನೀರು = ೧
|
ಆವರ್ತನ ಅವಧಿ
|
ಪರಿಭ್ರಮಣ ಅವಧಿ
|
ಗುರುತ್ವಾಕರ್ಷಣ ಬಲ ಭೂಮಿ = ೧
|
ಚಂದ್ರ
|
೩೪೬೦
|
೦.೦೧೨
|
೩.೩೩
|
೨೭.೩೨ದಿ
|
೨೭.೩ದಿ
|
೧/೬
|
ಭೂಮಿ
|
೧೨೬೪೦
|
೧
|
೫.೫೨
|
೨೩ಗಂ.೫೬ಮಿ.
|
೨೩೬.೨೪ದಿ
|
೧
|
ಭೂಮಿಯಿಂದ ಚಂದ್ರನ ಸರಾಸರಿ ದೂರ ೩,೮೨,೨೦೦ ಕಿಮೀ.
ಚಂದ್ರನಲ್ಲಿ ಆಂತರಿಕ ಬಲಗಳು ಇವೆಯೇ ಇಲ್ಲವೇ ಇದು ವಿವಾದದಲ್ಲಿದೆ. ಜ್ವಾಲಾಮುಖಿಗಳು, ಸಾಗರಗಳ ಪ್ರಹಾರ, ವಾಯುಮಂಡಲದ ಹೊಡೆತ ಇತ್ಯಾದಿ ಭೂಮಿಯ ಆಂತರಿಕ ಬಲಗಳು. ಕೊನೆಯವೆರಡು ಹೇಗೂ ಚಂದ್ರನಲ್ಲಿಲ್ಲ. ಜ್ವಾಲಾಮುಖಿಗಳ ಅಸ್ತಿತ್ವದ ಬಗ್ಗೆ ಸ್ಪಷ್ಟ ಪುರಾವೆ ಲಭಿಸಿಲ್ಲ. ಎಂದರೆ ಚಂದ್ರಗರ್ಭ ಸಹ ಘನೀಭವಿಸಿ ಹೋಗಿದೆಯೇ (ಭೂಮಿಯಲ್ಲಿ ಹೀಗಾಗಿಲ್ಲವಷ್ಟೆ?)
ಅಥವಾ ಚಂದ್ರನ ತೊಗಟೆ ಸಾಕಷ್ಟು ದಪ್ಪ ಮತ್ತು ಗಡಸಾಗಿದ್ದು ಸುಪ್ತ ಜ್ವಾಲಾಮುಖಿಗಳ
ಪ್ರಕಟಣೆಯನ್ನು ಅದುಮಿಟ್ಟಿದೆಯೇ ಉತ್ತರ ಖಚಿತವಿಲ್ಲ. ಚಂದ್ರನ ಮೇಲೆ ಬಾಹ್ಯ
ಬಲಗಳ ಪ್ರಹಾರ ಭೂಮಿಯ ಮೇಲೆ ಆಗುವುದಕ್ಕಿಂತ ಅದೆಷ್ಟೊ ಪಾಲು ಹೆಚ್ಚು. ಒಂದನೆಯ
ಹೊಡೆತ ಸೂರ್ಯನಿಂದ. ಸೌರಶಕ್ತಿ (ಎಂದರೆ ವಿದ್ಯುತ್ಕಾಂತ
ತರಂಗಗಳ ಸಂಕೀರ್ಣ ಮೊತ್ತ) ಅವ್ಯಾಹತವಾಗಿ ಆಕಾಶದ ಎಲ್ಲೆಡೆಗೆ ಚೆಲ್ಲುತ್ತಿದೆ.
ಆದರೆ ಭೂಮಿಯ ವಾಯುಮಂಡಲ ಇದರ ಎಷ್ಟೋ ಅಂಶಗಳನ್ನು ತಡೆದೋ ಹೀರಿಯೋ ಜರಡಿ ಕೆಲಸ ಮಾಡಿ
ಹಿತಮಿತವೆನ್ನುವಷ್ಟನ್ನು ಮಾತ್ರ ನೆಲದೆಡೆಗೆ ಹರಿಯ ಬಿಡುವುದು. ಚಂದ್ರನಲ್ಲಿ
ವಾಯುಮಂಡಲದ ರಕ್ಷಾ ಕವಚ ಇಲ್ಲದಿರುವುದರಿಂದ ಹಗಲಿನ ಭಾಗ ಸೌರಶಕ್ತಿಯ ಪೂರ್ಣ ಪ್ರವಾಹದಿಂದ ತೊಯ್ದಿರುತ್ತದೆ.
ಅದೇ ವೇಳೆಯಲ್ಲಿ ರಾತ್ರಿಯ ಭಾಗಕ್ಕೆ ಉಪವಾಸ. ಇದರಿಂದ ಚಂದ್ರತಲದ
ಕಲ್ಲು ಮಣ್ಣು ಲೋಹಾಂಶಗಳ ಮೇಲೆ ಆಗುವ ಪರಿಣಾಮಗಳು ತೀವ್ರ ಮತ್ತು ಭೂಮಿಯ ಮೇಲಿನ ಪರಿಣಾಮಗಳಿಗಿಂತ ಬೇರೆ.
ಎರಡನೆಯ ಹೊಡೆತ ಉಲ್ಕೆಗಳಿಂದ. ಭೂಮಿಗೆ ವಾಯು ಕವಚವಿರುವುದರಿಂದ
ನಮಗೆ ಉಲ್ಕೆಗಳಿಂದ ರಕ್ಷೆ ಇದೆ. ಆದರೆ ಚಂದ್ರ ತಲದ ಮೇಲೆ ಚಿಕ್ಕ ದೊಡ್ಡ
ಉಲ್ಕೆಗಳ ಅವಿಚ್ಛಿನ್ನ ಪ್ರಹಾರ ನಡೆದಿರುವುದು. ಚಂದ್ರನ ಹೊರಮೈ ಮೇಲೆ ಕಾಣುವ
ಸಿಡುಬು ಕಲೆಗಳಂಥ ಚಿಕ್ಕ ಗುಳಿಗಳು, ಕೂಪಗಳು ಇಂಥ ಬಡಿತಗಳಿಂದಾಗಿರಬಹುದು.
ಗಡಸು ತೊಗಟೆಯ ಮೇಲೆ ಈ ತರದ ಗಾಯಗಳಾಗುವುದು ಸಾಧ್ಯವಿಲ್ಲ; ತೊಗಟೆ ಮೆದುವಾಗಿದ್ದಾಗ ಇವು ಆಗಿರಬಹುದು. ಆದ್ದರಿಂದ ಗುಳಿಗಳ
ಕೂಪಗಳ ರಚನೆ, ಪ್ರಾಯ ಮುಂತಾದವುಗಳ ವಿಶ್ಲೇಷಣೆ ಚಂದ್ರನ ರಚನೆಯನ್ನು ವಿವರಿಸಬಹುದೆಂಬ
ನಿರೀಕ್ಷೆ ಇದೆ. ಕೂಪ ಮತ್ತು ಗುಳಿಗಳು ಚಂದ್ರನ ಜ್ವಾಲಾಮುಖಿಗಳ ಸ್ಫೋಟನೆಯಿಂದಲೂ
ಆಗಿರಬಹುದೆಂದು ಕೆಲವರ ಮತ. ಹಿಂದೊಮ್ಮೆ ಕ್ರಿಯಾಪಟುಗಳಾಗಿದ್ದ ಜ್ವಾಲಾಮುಖಿಗಳಿಂದ
ಪ್ರವಹಿಸಿದ ಲಾವಾರಸ ಆಕಾರ ರಹಿತ ಕೊರಕಲು ಕಣಿವೆಗಳಿಗೆ ಲೇಪನಗೊಂಡು ಕೂಪಗಳಾಗಿರಬಹುದೆಂದು ಅವರ ವಾದ.
ಈ ಕೂಪಗಳ ಗಾತ್ರ ರೂಪ ಬದಲಾದದ್ದನ್ನು ಗಮನಿಸಲಾಗಿದೆ. ಪೂರ್ಣ
ಚಂದ್ರಗ್ರಹಣ ಕಾಲದಲ್ಲಿ ಕೆಲವು ಕೂಪಗಳು ಸ್ವಯಂ ಪ್ರಭೆ ಬೀರಿವೆ. ಅವುಗಳ
ಒಳಗೆ ಇರುವ ಲೋಹಾಂಶಗಳ ವಿಶ್ಲೇಷಣೆ ಸಾಕಷ್ಟು ಆದ ಮೇಲೆ ಇದರ ಕಾರಣ ತಿಳಿಯಬಹುದು.

