ಕತೆ, ಕಾವ್ಯ, ಕಾದಂಬರಿಗಳನ್ನು (ಏನನ್ನೂ) ನಾಟಕವಾಗಿ ಪ್ರಯೋಗಿಸುವುದರಲ್ಲಿ ನನಗೆ ತಿಳಿದಂತೆ ಬಹುಖ್ಯಾತಿ ಗಳಿಸಿದವರು ಬಿವಿ ಕಾರಂತ. ಇಂದು ಅದು ಹೊಸ ವಿಚಾರವಲ್ಲ. ಹಾಗೇ ಸಾರಾ ಅಬೂಬಕ್ಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಸುಮಾರು ಒಂದು ವರ್ಷಕ್ಕೂ ಮೊದಲೇ ರೂಪ ಕೋಟೇಶ್ವರರಿಂದ ರಂಗರೂಪಗಳಿಸಿದ್ದು, ನಯನ ಜೆ. ಸೂಡರಿಂದ ನಿರ್ದೇಶನಗೊಂಡು ಬೆಂಗಳೂರಿನಲ್ಲಿ ಹಲವು ಪ್ರದರ್ಶನಗಳ ಜನಪ್ರಿಯತೆಯನ್ನು ಗಳಿಸಿದ್ದೂ ಹೊಸತಲ್ಲ. ಆ ಪ್ರಯೋಗ, ಕಾದಂಬರಿ ಉಲ್ಲೇಖಿಸುವ ಈ ವಲಯಕ್ಕೇ ಬಂದದ್ದು, ಅದರ ಭಾವ ಇನ್ನೂ ಜೀವಂತವಾಗಿರುವ ಪರಿಸರದಲ್ಲೇ ದಿಟ್ಟವಾಗಿ ರಂಗವೇರಿದ್ದು, ಅದರ ಮೂಲ ಲೇಖಕಿ – ಸಾರಾ ಅವರ ಎದುರೇ ಪ್ರದರ್ಶನಕ್ಕೆ ನಿಂದದ್ದು ನಿಜಕ್ಕೂ ಹೊಸತು ಹಾಗೂ ಸಂತಸದ ವಿಚಾರ. `ಚಂದ್ರಗಿರಿಯ ತೀರದಲ್ಲಿ’ ನಾಟಕ ೨೭-೫-೨೦೧೬ರಂದು ಡಿವೈಎಫ್‍ಐ ಸಂಯೋಜನೆಯಲ್ಲಿ, ಮಂಗಳೂರು ಪುರಭವನದಲ್ಲಿ ಹೆಚ್ಚುಕಡಿಮೆ ತುಂಬಿದ ಗೃಹದಲ್ಲಿ ಪ್ರದರ್ಶನ ಕಂಡಿತು.
ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಸತ್ತ್ವ ಮತ್ತು ಜನಪ್ರಿಯತೆ ಕಂಡೇ ಪಠ್ಯ ಮತ್ತು ಅಧಿಕೃತ ಅನ್ಯಭಾಷಾ ಅನುವಾದಗಳೊಡನೆ ಕೃತಿಚೋರರೂ ಆಕರ್ಷಿತರಾಗಿದ್ದಾರೆ! ಕೃತಿಚೌರ್ಯ ಪ್ರಕರಣದ ವಿರುದ್ಧದ ನ್ಯಾಯಿಕ ಹೋರಾಟದಲ್ಲಿ ಲೇಖಕಿ ಸಾರಾ ಅಬೂಬಕ್ಕರ್ ಅವರಿಗೆ ಸಹಕರಿಸಿದ ಹಿರಿಯ ವಕೀಲ – ಎ.ಪಿ.ಗೌರೀಶಂಕರ್, ಬಹಳ ಆಸಕ್ತಿಯಿಂದಲೇ ನಾಟಕ ವೀಕ್ಷಿಸಿದರು. ಅನಂತರ ಅದೇ ಉತ್ಸಾಹದಲ್ಲಿ ಕಾದಂಬರಿ ಮುಖ್ಯವಾಗಿ ಚರ್ಚಿಸುವ ಮುಸ್ಲಿಂ ಕಾಯದೆಯ ಕುರಿತು ತನ್ನ ಅಧ್ಯಯನ ಆಧರಿಸಿದ ಪುಟ್ಟ ಟಿಪ್ಪಣಿಯೊಂದನ್ನೂ ಪತ್ರಿಕೆಗೆಂದೇ ಬರೆದರು. ಆದರೆ ವಿವಾದಮೂಲವಾಗಬಹುದಾದ ಬರೆಹಗಳನ್ನು ಪ್ರಕಟಿಸುವ ಧೈರ್ಯ ಪತ್ರಿಕೆ ಮಾಡಲಿಲ್ಲ. ಹಾಗಾಗಿ ಆ ಲೇಖನವನ್ನು ಇಲ್ಲಿ ಮೊದಲು ಪ್ರಸ್ತುತಪಡಿಸುತ್ತಿದ್ದೇನೆ.
ಮುಸ್ಲಿಮ್ ವಿವಾಹ ಕಾಯದೆಯ ಅಸಂಗತ ವಿಷಯಗಳು
ಎ.ಪಿ. ಗೌರೀಶಂಕರ, ವಕೀಲರು, ಮಂಗಳೂರು
Photo courtesy: Open magazine |
ಮುಸ್ಲಿಮ್ ವಿವಾಹಕ್ಕೆ ಸಂಬಂಧಿಸಿರುವ ಕಾಯದೆಯ ಬಹುಭಾಗ ಧಾರ್ಮಿಕ ಹಾಗೂ ದೀರ್ಘಕಾಲದಿಂದ ಅನುಸರಿಸಿ ಬಂದಿರುವ ಸಾಂಪ್ರದಾಯಿಕ ಪದ್ಧತಿ. ಅದರಲ್ಲಿರುವಂತೆ ಸಾಮಾನ್ಯವಾಗಿ ಹುಡುಗರು ೧೫ ವರ್ಷ, ಹುಡುಗಿಯರು ೧೨ ವರ್ಷ ವಯಸ್ಸಿಗೆ ವಿವಾಹ ಪ್ರಬುದ್ಧರು. ಮುಸ್ಲಿಮ್ ವಿವಾಹ, ಅಂದರೆ ನಿಖಾವು, ಧಾರ್ಮಿಕ ಸಂಸ್ಕಾರವಲ್ಲ. ಇದಕ್ಕೆ ದೇವರ ಸಾಕ್ಷ್ಯ ಬೇಕಿಲ್ಲ. ಧಾರ್ಮಿಕ ಪೌರೋಹಿತ್ಯ ಅನಗತ್ಯ. ಹುಡುಗ ಮತ್ತು ಹುಡುಗಿಯ ಪಕ್ಷಗಳು ಪರಸ್ಪರ ಸಮಾಲೋಚಿಸಿ, ಸರ್ವ ಸಮ್ಮತಿಯಲ್ಲಿ, ಹಾಗೂ ಎರಡು ಮಂದಿ ಸಾಕ್ಷಿಗಳ ಮುಂದೆ ಮಾಡಿಕೊಳ್ಳುವ ಕೇವಲ ವ್ಯಾವಹಾರಿಕ ಒಪ್ಪಂದ. ಈ ಒಪ್ಪಂದ ಬಾಯ್ದೆರೆ, ಬರವಣಿಗೆ ಅನಗತ್ಯ. ವಿವಾಹ ಒಪ್ಪಂದದ ಕಾಲದಲ್ಲಿ ವಧುವಿನ ಗೌರವಾರ್ಥವಾಗಿ ಕನ್ಯಾದಕ್ಷಿಣೆ ಧನವನ್ನು (ಮೆಹರ್) ವರನು ವಿಧಿವತ್ತಾಗಿ ಪ್ರಕಟಿಸಬೇಕು. ಅದು ೧೦ ದಿರಹಮ್‍ಗಿಂತ ಕಡಿಮೆಯಾಗತಕ್ಕದ್ದಲ್ಲ. ಸಾಧಾರಣ ೧೯೬೧ರ ಕಾಲದಲ್ಲಿ ೧೦ ದಿರಹಮ್ ಮೌಲ್ಯ ರೂಪಾಯಿ ಮೂರರಿಂದ ನಾಲ್ಕಷ್ಟೇ ಆಗುತ್ತಿತ್ತು. (ದಿನ್ ಶಾ ಮುಲ್ಲಾರ ಮುಸ್ಲಿಮ್ ಕಾಯದೆ ಪುಸ್ತಕ) ವಿವಾಹದ ಅನಂತರ ಪತ್ನಿಯನ್ನು ಸಾಕಿ, ಸಲಹಿ, ಸಂರಕ್ಷಿಸುವ ಜವಾಬ್ದಾರಿ ಪತಿಯದು. ಆಕೆ ವಿಧೇಯಳಾಗಿ ಆತನ ಎಲ್ಲಾ ಅಭೀಷ್ಟಗಳನ್ನು ಪೂರೈಸಿ ಆತನೊಂದಿಗೆ ಸಹಜೀವನ ನಡೆಸತಕ್ಕದ್ದು. ಪತಿ, ಇವಳಲ್ಲದೆ ಹೆಚ್ಚಿಗೆ ೩ ಮಂದಿ (ಒಟ್ಟಿಗೆ ೪ ಮಂದಿ) ಪತ್ನಿಯರನ್ನು ಹೊಂದಿರಬಹುದು. ಪತ್ನಿ ಜೀವನಾವಶ್ಯಕವಾಗುವಷ್ಟು ಸೌಕರ್ಯವನ್ನು ಪತಿಯಿಂದ ಪಡೆಯಬಹುದು. ಆದರೆ ಪತಿ ಯಾವ ಕಾರಣವೂ ಇಲ್ಲದೆ, ಮುನ್ಸೂಚನೆ ಕೊಡದೆ ತನ್ನ ಕ್ಷಣಿಕ ಇಚ್ಛೆಯಂತೆ ಪತ್ನಿಯನ್ನುದ್ದೇಶಿಸಿ ಮೂರು ಸಲ ತಲ್ಲಖ್ ಉಚ್ಚರಿಸಿದರೆ ಅವರೊಳಗಿನ ವಿವಾಹ ವಿಚ್ಛೇದನವಾಗುತ್ತದೆ.
ಅನಂತರ ಪತ್ನಿ ೩ ಋತುಕಾಲ ಲೈಂಗಿಕ ಸಂಪರ್ಕವಿಲ್ಲದೆ (ಇದ್ಬತ್) ಪತ್ಯೇಕವಾಗಿ ಕಳೆದ ಮೇಲಷ್ಟೇ ಆಕೆ ಇತರರನ್ನು ವಿವಾಹವಾಗಬಹುದು. ಇದ್ಬತ್ ಕಾಲ ಕಳೆಯುವ ತನಕ ಆಕೆ ಪತಿಯಿಂದ ಜೀವನಾಂಶ ಪಡೆಯಬಹುದು. ಋತು ಕಾಲ ಕಳೆದ ಸ್ತ್ರೀಯಾದರೆ ಆಕೆ ೩ ಚಾಂದ್ರಮಾನ ತಿಂಗಳುಗಳ ಇದ್ಬತ್ ಕಾಲ ಕಳೆಯತಕ್ಕದ್ದು. ಇದ್ಬತ್ ಕಾಲ ಕಳೆದ ಅನಂತರ ಜೀವನಾಂಶ ಪಡೆಯಲು ಹಕ್ಕು ಇರುವುದಿಲ್ಲ. ಮೆಹರ್ ಧನ ಪಾವತಿಸದೆ ವಿಚ್ಛೇದನ ಅಸಾಧ್ಯ. ವಿವಾಹ ವಿಚ್ಛೇದನದ ಅನಂತರ ಜೀವನಾಂಶ ಪಡೆಯುವ ಹಕ್ಕು ಇರುವುದಿಲ್ಲ. ಇದಿಷ್ಟು ಮುಸ್ಲಿಮ್ ಕಾಯದೆಯ ಸ್ಥೂಲ ಸಾರಾಂಶ.
ಮುಸ್ಲಿಮ್ ದಂಪತಿಗಳ ವಿವಾಹ ವಿಚ್ಛೇದನ ಹಾಗೂ ಪತ್ನಿಗೆ ಸಲ್ಲತಕ್ಕ ಜೀವನಾಂಶ ಮತ್ತು ಮೆಹರ್ ಧನದ ಕುರಿತು ೧೯೮೫ರಲ್ಲಿ ಸರ್ವೋಚ್ಚ ನ್ಯಾಯಾಲಯ ಒಂದು ಚಾರಿತ್ರಿಕ ತೀರ್ಪು ನೀಡಿದೆ. ಇಂದೋರಿನ ಮೊಹಮದ್ ಅಹಮದ್ ಖಾನ್ ಎಂಬ ವಕೀಲನು ೧೯೩೨ರಲ್ಲಿ ಶಹಬಾನೊ ಎಂಬಾಕೆಯನ್ನು ವಿವಾಹವಾದನು.
ಆ ದಾಂಪತ್ಯದಲ್ಲಿ ೨ ಮಗಂದಿರು ಮತ್ತು ೨ ಮಗಳಂದಿರು ಜನಿಸಿದರು. ೧೯೭೫ರಲ್ಲಿ ಪತಿ ಆಕೆಯನ್ನು ವಿನಾ ಕಾರಣ ವೈವಾಹಿಕ ಮನೆಯಿಂದ ಹೊರಗಟ್ಟಿದನು.
ಪತ್ನಿ (ಶಹಾಬಾನೊ) ೧೯೭೮ ಏಪ್ರಿಲ್ಲಿನಲ್ಲಿ ಇಂದೋರಿನ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಪ್ರಕರಣ ೧೨೫ರ ಅಡಿಯಲ್ಲಿ ಅರ್ಜಿ ಸಲ್ಲಿಸಿ, ತನಗೆ ಮಾಸಿಕ ರೂ ೫೦೦ರಂತೆ ಜೀವನಾಂಶ ಕೊಡಿಸಬೇಕೆಂದು ಕೇಳಿಕೊಂಡಳು. ಅಷ್ಟರಲ್ಲಿ ಪತಿ ೧೯೭೮ ನವೆಂಬರ್ ತಿಂಗಳಲ್ಲಿ ಪತ್ನಿಯನ್ನುದ್ದೇಶಿಸಿ ೩ ಸಲ ತಲ್ಲಖ್ ಉಚ್ಚರಿಸಿ ವಿವಾಹ ವಿಚ್ಛೇದನ ಮಾಡಿದನು. ನ್ಯಾಯಾಲಯದಲ್ಲಿ ಆತನ ಪ್ರತಿವಾದವೇನೆಂದರೆ, ಈ ಹಿಂದೆ ೨ ವರ್ಷಗಳ ಕಾಲ ಪ್ರತಿ ತಿಂಗಳು ರೂ ೨೦೦ರಂತೆ ಪತ್ನಿಗೆ ಜೀವನಾಂಶ ಪಾವತಿಸಿರುತ್ತೇನೆ. ಅಲ್ಲದೆ ರೂ ೩೦೦೦ ಮೆಹರ್ ಧನವನ್ನು ನ್ಯಾಯಾಲಯದಲ್ಲಿ ಠೇವಣಿಸಿದ್ದೇನೆ. ಈ ಕಾರಣಗಳಿಂದ ಆತನ ವೈವಾಹಿಕ ಒಪ್ಪಂದದ ಋಣ ಸಂಪೂರ್ಣ ಸಲ್ಲಿಸಿರುವುದರಿಂದ ವಿಚ್ಛೇದನದ ಅನಂತರ ಜೀವನಾಂಶ ಪಾವತಿಸಲು ಬದ್ಧನಲ್ಲ. ಈ ವಾದವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿತು. ಮೇಲ್ಮನವಿಯೂ ತಿರಸ್ಕೃತವಾಗಲು, ದಾವೆಯು ಸರ್ವೋಚ್ಚ ನ್ಯಾಯಾಲಯದ ಎದುರು ಬಂತು. ಸರ್ವೋಚ್ಚ ನ್ಯಾಯಾಲಯ ಮುಸ್ಲಿಮ್ ವಿವಾಹ ಕಾಯದೆಯನ್ನು ತಳಸ್ಪರ್ಶೀ ವಿಶ್ಲೇಷಣೆ ನಡೆಸಿ ತೀರ್ಪು ನೀಡಿದೆ. ಪತ್ನಿಯನ್ನು ವೈವಾಹಿಕ ಮನೆಯಿಂದ ಹೊರಗಟ್ಟಿದರೆ ಅಥವಾ ಆತನಿಗೆ ಪರಸ್ತ್ರೀ ಒಡನಾಟವಿದ್ದರೆ, ಕ್ರಿ.ಪ್ರೊ. ಕೋಡ್ ಪ್ರಕರಣ ೧೨೫ ಮುಸ್ಲಿಮ್, ಹಿಂದೂ ಹಾಗೂ ಸಮಸ್ತ ಭಾರತೀಯರಿಗೆ ಅನ್ವಯಿಸುವ ಕಾಯದೆ. ಇದರ ಅಡಿಯಲ್ಲಿ ಜೀವನಾಂಶ ಮಾಸಿಕ ರೂ ೫೦೦ ಗರಿಷ್ಠ ಮಿತಿ. ನನಗನ್ನಿಸುವಂತೆ ಗರಿಷ್ಠ ಮಿತಿ ರೂ ೫೦೦ ಇಂದಿನ ಕಾಲದಲ್ಲಿ ಅತ್ಯಲ್ಪ. ಕಾಲಮಾನಕ್ಕೆ ಅನುಗುಣವಾಗಿ ಈ ಮೊತ್ತವನ್ನು ಹೆಚ್ಚಿಸಲು ಕಾಯದೆಯಲ್ಲಿ ಅವಕಾಶ ಕಲ್ಪಿಸುವುದು ವಿಹಿತ. ಈ ಬಗ್ಗೆ ಕ್ರಿ.ಪ್ರೊ ಸಂಹಿತೆಯ ಪ್ರಕರಣ ೧೨೫ರ ತಿದ್ದುಪಡಿಯೂ ಅಗತ್ಯ.

ಇಲ್ಲಿ ಇನ್ನೊಂದು ಪ್ರಶ್ನೆಯಿದೆ. ತಲ್ಲಖ್ ಉಚ್ಚರಿಸಿ ವಿಚ್ಛೇದಿತಳಾಗಿರುವ ತನ್ನ ಪತ್ನಿಯನ್ನು ಆತನು ಪುನರ್ ವಿವಾಹವಾಗಬಹುದೇ? ಪುನರ್ ವಿವಾಹದ ಕ್ರಮವೇನು? ಮೇಲಿನ ತೀರ್ಪಿನಲ್ಲಿ ಈ ಪ್ರಶ್ನೆ ಉದ್ಭವಿಸಲಿಲ್ಲ. ಇಲ್ಲಿ ನಿಖಾ ಹಲಾಲ್ ಪದ್ಧತಿಯ ತಡೆಯಿದೆ. ಯಾವನೇ ಮುಸ್ಲಿಮ್ ಯಾವುದೇ ಕಾರಣಕ್ಕೂ ಕ್ಷಣಕಾಲದ ದುಡುಕಿನಲ್ಲಿ ವಿವಾಹ ವಿಚ್ಛೇದಿಸಿದರೆ, ದಂಪತಿಗಳು ಪುನಃ ಮೊದಲಿನಂತೆ ದಂಪತಿಗಳಾಗಿರಲು ಸಾಧ್ಯವಿಲ್ಲ. ತಲ್ಲಖ್ ಉಚ್ಛಾರಣೆಯು ಮೂರು ಸಲವಾದರೆ, ವಿಚ್ಛೇದನೆ ಸ್ಪಷ್ಟ. ಮೂರು ಸಲ ತಲ್ಲಖ್ ಉಚ್ಛಾರಣೆಯು, ಮಾದಕ ದ್ರವ್ಯ ಸೇವನೆಯ ಕಾರಣದಿಂದ, ಮತಿಭ್ರಮಣೆಯಿಂದ ಅಥವಾ ಆತನ ಅಥವಾ ಇತರರನ್ನು ಸಮಾಧಾನ ಪಡಿಸುವ ಉದ್ದೇಶದಿಂದ, ಮಾಡಿರುವುದಾದರೂ ವಿಚ್ಛೇದನ ಖಚಿತ. ಅದನ್ನು ರದ್ದುಪಡಿಸಲು ಸಾಧ್ಯವಿಲ್ಲ. [ದಿನ್ ಶಾ ಮುಲ್ಲಾ ಮುಸ್ಲಿಮ್ ಕಾಯದೆ]. ಅವರ ಸಮಾಗಮಕ್ಕೆ ಮುಂಚಿತ ಶಾಸ್ತ್ರ ಪ್ರಕಾರ ಪುನರ್ ವಿವಾಹ ಅಗತ್ಯ. ಆದರೆ ನೇರಾಗಿ ಪುನರ್ ವಿವಾಹ ಅಸಾಧ್ಯ. ಇಲ್ಲಿರುವ ಒಂದು ಅಸಂಗತೆಯನ್ನು ಗಮನಿಸೋಣ. ಮಾಜಿ ಪತ್ನಿ ಇನ್ನೊಬ್ಬನನ್ನು ವಿವಾಹವಾಗಬಹುದಾದರೂ ವಿಚ್ಛೇದಿತ ಪತಿಯನ್ನು ನೇರವಾಗಿ ವಿವಾಹವಾಗಲು ನಿಖಾ ಹಲಾಲ್ ನಿಯಮದ ತಡೆಯಿದೆ. ಈ ನಿಯಮದಂತೆ ಆಕೆ ಪರಪುರುಷನೊಬ್ಬನನ್ನು ವಿಧಿವತ್ತಾಗಿ ವಿವಾಹವಾಗಿ ಕನಿಷ್ಠ ಒಂದು ರಾತ್ರಿಯ ಮಟ್ಟಿಗೆ ಆತನೊಡನೆ ಲೈಂಗಿಕ ಸಂಪರ್ಕ ಹೊಂದಿದ ಅನಂತರ, ಆತನಿಂದ ವಿಧಿಪ್ರಕಾರ ವಿಚ್ಛೇದನ ಪಡೆದರೆ ಮಾತ್ರ ಮೊದಲಿನ ಪತಿಯನ್ನು ಪುನಃ ವರಿಸಬಹುದು. ದಾಂಪತ್ಯ ಜೀವನದ ಪಾವಿತ್ರ್ಯವನ್ನು ಒಪ್ಪಿಕೊಂಡ ಹೆಣ್ಣಿಗೆ ಈ ನಿಯಮ ಬಹಳ ಆಘಾತಕರ. ಆಕೆಯ ಮನದ ಸಂಕಟವನ್ನು ಪ್ರಸಿದ್ಧ ಲೇಖಕಿ ಸಾರಾ ಅಬೂಬಕ್ಕರ್ ಅವರ ಚಂದ್ರಗಿರಿಯ ತೀರದಲ್ಲಿ ಎಂಬ ಕಾದಂಬರಿಯಲ್ಲಿ ಮನ ಕರಗುವಂತೆ ವರ್ಣಿಸಿದ್ದಾರೆ.
ಅದರಲ್ಲಿ ನಾಯಕಿಯನ್ನು ಮುಂಗೋಪಿ ಪತಿ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದಿಸುತ್ತಾನೆ. ಸ್ವಲ್ಪ ಕಾಲಾನಂತರ ತನ್ನ ತಪ್ಪನ್ನು ಅರಿತು ಪುನಃ ಕರೆಯಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆಕೆ ಸಿದ್ಧಳಿದ್ದರೂ ಮೌಲ್ವಿಗಳು `ನಿಖಾ ಹಲಾಲ್’ ನಿಯಮದನ್ವಯ ಮಾತ್ರ ಪುನರ್ ಮಿಲನ ಸಾಧ್ಯ ಎಂದು ಸ್ಪಷ್ಟಪಡಿಸುತ್ತಾರೆ. ಸಂಪ್ರದಾಯವನ್ನು ಮೀರುವ ಧೈರ್ಯವಿಲ್ಲದ ಪತಿ ಅದಕ್ಕೂ ಒಪ್ಪುತ್ತಾನೆ. ಆ ಬಗ್ಗೆ ಸಕಲ ಸಿದ್ಧತೆಗಳನ್ನೂ ಮಾಡಿ, ಒಂದು ನಿಶ್ಚಿತ ದಿನದ ರಾತ್ರಿ ನಿಖಾ ಹಲಾಲ್ ಪೂರೈಸುವುದೆಂದು ನಿರ್ಧರಿಸಿ, ಒಂದು ದಿನದ ಪತಿಯನ್ನೂ ಅಣಿಗೊಳಿಸಿ, ಪತ್ನಿಯನ್ನು ಖುದ್ದಾಗಿ ಭೇಟಿಯಾಗಿ ನಿಖಾ ಹಲಾಲಿಗೆ ಸಿದ್ಧಳಾಗಿ ಬರಲು ಅತಿ ವಿನೀತನಾಗಿ ಕೇಳಿಕೊಂಡನು. ಆತನ ದೀನತೆಗೆ ಹಾಗೂ ತನ್ನ ಮನದಾಳದ ಬಯಕೆಗೂ ಅರ್ಧ ಮನಸ್ಸಿನಲ್ಲಿ ಒಪ್ಪಿ, ನಿಶ್ಚಿತ ಮನೆಗೆ ರಾತ್ರಿ ವೇಳೆ ಹೋದಳು. ತಾತ್ಕಾಲಿಕ ವಿವಾಹದ ಗಂಡು ಸಕಲ ಸಿದ್ಧತೆಗಳೊಂದಿಗೆ ಶಯ್ಯಾಗೃಹದಲ್ಲಿ ಕಾಯುತ್ತಿರಲು ಆಕೆ ಮನೆಯ ಹಿಂಬಾಗಿಲಿನಲ್ಲಿ ಹೊರಹೋಗಿ ಬೆಳದಿಂಗಳಿನಲ್ಲಿ ಏಕಾಂಗಿಯಾಗಿ ಬಹಳ ದೀರ್ಘ ಕಾಲ ಚಿಂತಿಸಿದಳು.
ಪರಪುರುಷನೊಂದಿಗೆ ದೇಹ ಸಂಪರ್ಕಿಸುವ ಕೆಲಸ ತನ್ನಿಂದ ಸಾಧ್ಯವಿಲ್ಲವೆಂದು ಕಂಡಳು. ತನ್ನ ದಾಂಪತ್ಯದ ಪಾವಿತ್ರ್ಯವನ್ನು ಮೌಲ್ವಿಗಳ ಆಣತಿಯಂತೆ ಕಡೆಗಣಿಸಿ ದೇಹವನ್ನು ಅನಿಷ್ಠ ಅಗ್ನಿ ಪರೀಕ್ಷೆಗೆ ಒಪ್ಪಿಸಿಕೊಳ್ಳುವುದನ್ನು ಸಹಿಸದಾದಳು. ಆದರೆ, ಅನ್ಯಗತಿಯಿಲ್ಲವೆಂದು ಕಂಡು, ಮಸೀದಿಯ ಹಿಂಬದಿಯ ಕೊಳದಾಳದಲ್ಲಿ ಮುಳುಗಿ ಚಿರಶಾಂತಿ ಪಡೆದಳು. ನಿಖಾ ಹಲಾಲಿನ ಕುರಿತು ಈ ಕಾದಂಬರಿಯಲ್ಲಿ ಲೇಖಕಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕಾದಂಬರಿಗಾಗಿ ಹಲವು ವಿಶ್ವವಿದ್ಯಾನಿಲಯಗಳು ಲೇಖಕಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುತ್ತಾರೆ. ಹಿಂದಿ, ತಮಿಳು, ಮಲೆಯಾಳಂ ಮತ್ತು ಇತರ ಭಾಷೆಗಳಿಗೆ ಇದು ತರ್ಜುಮೆಗೊಂಡಿದೆ. ಹಲವು ಸಂಪ್ರದಾಯಸ್ಥರು ತೀವ್ರ ಆಕ್ಷೇಪಗಳನ್ನೆತ್ತಿ ಲೇಖಕಿಯನ್ನು ಖಂಡಿಸಿದರೂ ಅವರು ಹೆದರಲಿಲ್ಲ. ಇಂಥಾ ಪ್ರಸಂಗದಲ್ಲಿ ಪ್ರಜ್ಞಾವಂತ ಸಮಾಜ ಮುನ್ನಡೆದ ಹೆಜ್ಜೆಯನ್ನು ಅನುಸರಿಸಿ ಕಾಯದೆಯ ತಿದ್ದುಪಡಿ ಅಗತ್ಯವಿದೆಯೆಂದು ಪ್ರತಿಪಾದಿಸಿದರು. ವಿವಾಹ ವಿಚ್ಛೇದನ ನ್ಯಾಯಾಲಯದ ಮೂಲಕವೇ ನ್ಯಾಯವಾದ ಕಾರಣಗಳಿಗಾಗಿ ಮಾತ್ರ ಸಾಧ್ಯವಾಗುವಂತೆ ಕಾಯದೆ ತಿದ್ದುಪಡಿ ಅಗತ್ಯ. ಅಲ್ಲದೆ ಪತ್ನಿಯೂ ಸರಿಯಾದ ಕಾರಣಕ್ಕೆ ಪತಿಯಿಂದ ವಿಚ್ಛೇದನೆ ಪಡೆಯುವ ಸ್ವಾತಂತ್ರ್ಯ ಪಡೆಯಬೇಕು. ಕಾಲಮಾನಕ್ಕೆ ಸರಿಯಾಗಿ ಜೀವನಾಂಶದ ಮೊತ್ತ ನಿರ್ಧರಿಸುವಂತಿರಬೇಕು. ಭಾರತದ ಪ್ರಜೆಗಳೆಲ್ಲರಿಗೂ ಸಮಾನವಾಗಿ ಅನ್ವಯಿಸುವ ಸಾಮಾನ್ಯ ಸಿವಿಲ್ ಕಾಯದೆಯ ಸಂಹಿತೆ (common civil code) ಸಂವಿಧಾನದ ೪೪ನೇ ಅನುಚ್ಛೇದದನ್ವಯ ರಚಿಸುವುದು ಅಗತ್ಯ.

(ಎ.ಪಿ. ಗೌರೀಶಂಕರರ ಲೇಖನ ಮುಗಿಯಿತು)
ಚಂದ್ರಗಿರಿಯ ತೀರದಲ್ಲಿ ಪ್ರದರ್ಶನ ಮತ್ತು ಜಿಜ್ಞಾಸೆ
ಚಂದ್ರಗಿರಿಯ ತೀರದಲ್ಲಿ ನಾಟಕ, ಕಾದಂಬರಿಗೆ ನಿಷ್ಠವಾಗಿ ರೂಪಗೊಂಡದ್ದು ಅದರ ಗೆಲುವೂ ಹೌದು, ಸೋಲೂ ಹೌದು. ಪ್ರಯೋಗ ಬಹಳ ಚುರುಕಿನಲ್ಲಿ ಮತ್ತು ಶಕ್ತವಾಗಿ ಇಡಿಯ ಕಾದಂಬರಿಯನ್ನು ನಮ್ಮ ಕಣ್ಣು ಕಿವಿಗಳೆದುರು ತೆರೆದಿಟ್ಟಿತು. ಬದಲಿಗೆ, ಧರ್ಮದ ಹೆಸರಿನಲ್ಲಿ ಸ್ತ್ರೀಶೋಷಣಾ ಅಭಿವ್ಯಕ್ತಿಯ ಒಂದು ಮಾದರಿಯಾಗಿ ನಾಟಕ ರೂಪುಗೊಂಡಿದ್ದರೆ ಇನ್ನೂ ಪರಿಣಾಮಕಾರಿಯಾಗುತ್ತಿತ್ತು ಎನ್ನುವ ಭಾವ ಕೊನೆಯಲ್ಲಿ ಉಳಿಯಿತು. ಹೆಚ್ಚು ಕಡಿಮೆ ನಾಲ್ಕು ಮದುವೆ, ಒಂದು ವಿಚ್ಛೇದಗಳೊಡನೆ ಸುಮಾರು ಮೂರು ದಶಕಗಳ ಉದ್ದನ್ನ ಕಥಾ ವಿವರಗಳನ್ನು, ಪರಿಸರದ ವಿವರಗಳ ಸಹಿತ ಹೇಳುವ ಧಾವಂತದಲ್ಲಿ ಪ್ರೇಕ್ಷಕರಲ್ಲಿ ರಸಸೃಷ್ಟಿಗೆ ಅವಕಾಶದ ಕೊರತೆಯನ್ನೇ ಮೂಡಿಸಿತು.
ಲಿಖಿತ ಕೃತಿಗಳು, ಅಭಿವ್ಯಕ್ತಗೊಳ್ಳುವ ಮಾಧ್ಯಮದ ಶಕ್ತಿ ಅಥವಾ ಮಿತಿಯ ಮೇಲೆ, ಅದನ್ನು ಅಲ್ಲಿ ಬಳಸಿಕೊಳ್ಳುವ ನಿರ್ದೇಶಕನ ದೃಷ್ಟಿಕೋನದ ಮೇಲೆ ಮೂಲರೂಪ ಬದಲುವುದು ಅವಶ್ಯ ಮತ್ತು ತಪ್ಪೂ ಅಲ್ಲ. ಭೂತ, ಅಂಬಿಗ, ಮೀನುಮಾರುವವಳು - ಇಲ್ಲಿನ ಪರಿಸರ ಕಟ್ಟಿಕೊಡುವ ಪ್ರಯತ್ನಗಳನ್ನು ನಿವಾರಿಸಿ ಸಮಯ ಗಳಿಸಿದ್ದಲ್ಲಿ, ಪ್ರದರ್ಶನ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು ಎಂದೇ ಅನ್ನಿಸಿತು. ಆದರೆ ಆ ವೇಗದಲ್ಲೂ ತಡವರಿಕೆಯಿಲ್ಲದೆ, ಯುಕ್ತ ಭಾವಗಳನ್ನು ಸಹಜ ಎನ್ನುವಷ್ಟು ಚೆನ್ನಾಗಿಯೇ ಉಸಿರಾಡಿಸಿದ ಎಲ್ಲ ಕಲಾವಿದರಿಗೂ ಹಾರ್ದಿಕ ಅಭಿನಂದನೆಗಳು. ಭಾಷಾಪ್ರಯೋಗದಲ್ಲಿ ಬಹುತೇಕ ಈ ವಲಯದ ಆಡುನುಡಿಯ ಹಿಡಿತವನ್ನು ಕಾಯ್ದುಕೊಂಡ ತಂಡದ ಸಾಧನೆ ಅಸಾಧಾರಣವಾದದ್ದು.
ಪ್ರದರ್ಶನದ ಕೊನೆಯಲ್ಲಿ ಸಾರಾ ಅಬೂಬಕ್ಕರ್ ಅವರಿಗೆ ನಾಟಕ ತಂಡ ವೇದಿಕೆಯಲ್ಲೇ ಗೌರವಸಹಿತ ಕೃತಜ್ಞತೆಯನ್ನು ಸಲ್ಲಿಸಿತು. ಈ ಕಾದಂಬರಿಯೊಡನೆ ಸ್ವಂತ ಸಮಾಜದಿಂದ ಬಂದ ಅನಾವಶ್ಯಕ ಆಂಶಿಕ ವಿರೋಧ ಮತ್ತೆ ಸಿನಿಮಾ ಹಾಗೂ ಮಲೆಯಾಳ ಅನುವಾದಗಳಲ್ಲಿ ಅನುಭವಕ್ಕೆ ಬಂದ ಕಹಿಗಳನ್ನು ಲೇಖಕಿ ಇನ್ನೂ ಪೂರ್ತಿ ಕಳಚಿಕೊಂಡಿಲ್ಲ. ಆದರೆ ಅವನ್ನು ಮೀರಿದ ಧನ್ಯತೆಯನ್ನು ಎರಡು ಮಾತಿನಲ್ಲಿ ವ್ಯಕ್ತಪಡಿಸಿದರು. ಕೊನೆಯಲ್ಲಿ ಒಂದು ಸಣ್ಣ ತಿದ್ದುಪಡಿಯನ್ನು ಒತ್ತುಕೊಟ್ಟು ಹೇಳಿದ್ದು ನನಗೆ ಚರ್ಚಾಸ್ಪದ ಎಂದೇ ಅನ್ನಿಸಿತು.
ಸಾರಾ ಅಬೂಬಕ್ಕರ್ ಪ್ರದರ್ಶನದ ಬಗ್ಗೆ ಹೇಳಿದ ಮಾತು “ಇಲ್ಲಿ ಕೊನೆಯಲ್ಲಿ ಕಥಾನಾಯಕಿ ಚಂದ್ರಗಿರಿ ನದಿಗೆ ಹಾರಿಕೊಳ್ಳುತ್ತಾಳೆ. ಅದಲ್ಲ, ಅವಳು ಮಸೀದಿಯ ಕೊಳಕ್ಕೇ ಹಾರಿಕೊಳ್ಳುವುದಾಗಬೇಕು” ಎಂದರು. `ಚಂದ್ರಗಿರಿಯ ತೀರ’ ಎನ್ನುವ ತಲೆಬರಹ ಮತ್ತು ಇದು ಓದುಗ ಅಥವಾ ಪ್ರೇಕ್ಷಕನಲ್ಲಿ ಮೂಡಿಸುವ ಸಾಂಸ್ಕೃತಿಕ ಹಾಗೂ ಪಾರಿಸರಿಕ ಭಾವ ಶುದ್ಧ ಮುಸ್ಲಿಂ ವಾತಾವರಣಕ್ಕೆ ಭಿನ್ನವಾದದ್ದು. ಕಾದಂಬರಿಯಲ್ಲೂ ನಾಟಕದಲ್ಲೂ ಇದಕ್ಕೆ ಎಷ್ಟೂ ಪುರಾವೆಗಳಿವೆ. ಈ ಭಿನ್ನತೆಯ ಪ್ರಭಾವ ಇಲ್ಲದ ಪರಿಸರ ಅರ್ಥಾತ್ ಇಸ್ಲಾಂ ಧರ್ಮದ ಮೂಲ ನಾಡಿನಲ್ಲಿ ಈ ಪ್ರತಿಭಟನೆ ಹೀಗೆ ರೂಪುಗೊಳ್ಳುತ್ತಲೇ ಇರಲಿಲ್ಲ.
ಹಾಗೆ ನೋಡುವಾಗ ಅಂಬಿಗ, ಮೀನು ಮಾರುವ ಗೆಳತಿ, ಊರಿನ ಅನ್ಯ ಧರ್ಮೀಯ ಜನ ಮತ್ತು ಉತ್ಸವ ಮುಂತಾದ ಪ್ರಭಾವಗಳಿಗೆಲ್ಲ ಬಹುದೊಡ್ಡ ಪ್ರಾತಿನಿಧಿಕ ಮತ್ತು ಏಕೈಕ ಹೆಸರಾಗಿ ನಿಲ್ಲುತ್ತದೆ ಚಂದ್ರಗಿರಿ ನದಿ. ಕಥಾನಾಯಕಿಗೂ `ಒಬ್ಬಳೇ ದಾಟಿ ಗೊತ್ತಿಲ್ಲ’ದ ಸಂಕೇತವಾಗಿಯೇ ಕಾಡುವುದೂ ಚಂದ್ರಗಿರಿ ನದಿಯೇ. ಮತ್ತೆ ನನಗೆ ತಿಳಿದಂತೆ, ಇಸ್ಲಾಂನಲ್ಲಿ ಮಸೀದಿ ಅಥವಾ ಅದರ ಕೊಳದ ಕುರಿತು ನಮ್ಮಲ್ಲಿ ರೂಢಿಸಿದ ಆರಾಧನೀಯ (ಮಂದಿರ, ತೀರ್ಥ) ಗುಣಗಳನ್ನು ಗುರುತಿಸುವುದಿಲ್ಲ. ಹಾಗಾಗಿ ಕಥಾನಾಯಕಿ ಚಂದ್ರಗಿರಿಗೇ ಧುಮುಕುವುದು ಹೆಚ್ಚು ಅರ್ಥಪೂರ್ಣವಾಗಿಯೇ ಇದೆ. ನಾಟಕ ನಿರ್ದೇಶಕನ ಮಾಧ್ಯಮ ಎನ್ನುವ ನೆಲೆಯಲ್ಲಂತೂ ನಿಂತ ನೀರನ್ನು (ಮಸೀದಿಯ ಕೊಳ ಅಥವಾ ಸಂಕುಚಿತಾರ್ಥದ ಧರ್ಮ) ಧಿಕ್ಕರಿಸಿ, ಜೀವನಕ್ಕೆ ಅಥವಾ ಬದಲಾವಣೆಗೆ ಪರ್ಯಾಯನಾಮವೇ ಆದ ನದಿಗೆ ಹಾರಿಕೊಳ್ಳುವುದು ವಿಸ್ತೃತ ಆಯಾಮವನ್ನೂ ಕೊಡುತ್ತದೆ.

ಕೊಳಕ್ಕೆ ಹಾರಿ ಸಾಯುವ ಬಗ್ಗೆ. ಕಾದಂಬರಿಯಲ್ಲಿ ಕೊಳಕ್ಕೆ ಹಾರಿ ಅಂತ ಇರುವುದನ್ನು ಬದಲಿಸಿ ನದಿಗೆ ಹಾರಿಸುವ ಸ್ವಾತಂತ್ರ್ಯ ನಾಟಕ ನಿರ್ದೇಶಕರಿಗೆ ಇದ್ದೇ ಇದೆ. ಆದರೆ ಹಿಂದೆ ಹಲವು ವಿಮರ್ಶಕರು ಕೂಡ ನದಿಯಲ್ಲಿ ಹಾರಿ ಸಾಯುತಾಳೆ ಅಂತಲೇ ಬರೆದದ್ದನ್ನು ನಾನು ೧೯೯೩ ರ ಆಸುಪಾಸು ಓದಿದ್ದೆ. ವಿಮರ್ಶಕರು ಹಾಗೆ ಬರೆಯಲು ಕಾರಣ ಏನು? ಬಹುಶಃ ಆರಂಭದ ಆವೃತ್ತಿಯಲ್ಲಿ ಹಾಗೇನಾದರೂ ಇದ್ದದ್ದನ್ನು ಮುಂದಿನ ಆವೃತ್ತಿಯಲ್ಲಿ ಲೇಖಕಿ ಬದಲಿಸಿದ್ದರೇ? ಆದರೆ ಏನಿದ್ದರೂ ಮಸೀದಿ ಕೊಳ ಎಂದಿದ್ದುದು ಸಾಹಿತ್ಯಕವಾಗಿ ಧ್ವನಿಪೂರ್ವಕ/ಉದ್ದೇಶಪೂರ್ವಕ ಅಂತ ನಾನು ಆಗ(ನನ್ನ ಎಂ.ಎ. ಅಂತಿಮ ಪರೀಕ್ಷೆ ಉತ್ತರದಲ್ಲಿ ಸದ್ರಿ ನದಿಯೆಂದು ವ್ಯಾಖ್ಯಾನಿಸಿದ ವಿಮರ್ಶಕರನ್ನು ಆಕ್ಷೇಪಿಸಿ ಬರೆದಂತೆ) ಅಂದುಕೊಂಡಫದ್ದು ಸರಿ ಅಂತ ಈಗ ಸಾರಾ ಅವರ ಈ ಮಾತುಗಳಿಂದ ಸರಿಯೆಂದು ತೋರಿತು. ಅಜಕ್ಕಳ ಗಿರೀಶ
ReplyDelete"ಕೊಳಕ್ಕೆ ಹಾರಿ ಅಂತ ಇರುವುದನ್ನು ಬದಲಿಸಿ ನದಿಗೆ ಹಾರಿಸುವ ಸ್ವಾತಂತ್ರ್ಯ ನಾಟಕ ನಿರ್ದೇಶಕರಿಗೆ ಇದ್ದೇ ಇದೆ."- ಈ ಮಾತು ಅಂತಿಮವಾಗಿ ಒಬ್ಬ ಲೇಖಕನ ಕೃತಿಯಲ್ಲಿ ಒಬ್ಬ ನಿರ್ದೇಶಕ ಏನು ಬೇಕಾದರೂ ಬದಲಾವಣೆ ಮಾಡಿಕೊಳ್ಳಬಹುದೇ ಎಂಬ ಪ್ರಶ್ನೆಗೆ ಬರುತ್ತದೆ. ಹಾಗೆ ಮಾಡಬಹುದೆಂದಾದರೆ, ನಿರ್ದೇಶಕ ಲೇಖಕನಿಗೆ ಅಪಚಾರ ಮಾಡಿದಂತಾಗುವುದಿಲ್ಲವೆ? ಅಂಥ ನಿರ್ದೇಶಕನಿಗೆ ಲೇಖಕನ ಹಂಗೇಕೆ? ತನ್ನ ಚಿತ್ರಕ್ಕೆ ತಾನೇ ಕಥೆ ಬರೆದುಕೊಂಡು ತಾನೇ ನಿರ್ದೇಶಿಸಬಹುದಲ್ಲ?
ReplyDeleteಮಸೀದಿಯ ಕೊಳಕ್ಕೆ ಹಾರಿದಳು ಎನ್ನುವುದೇ ಹೆಚ್ಚು ಉಚಿತವಾಗಿ ನನಗೆ ಕಾಣುತ್ತದೆ. "ಬಾವಿಯೊಳಗಿನ ಕಪ್ಪೆ"ಯನ್ನು ನೆನಪು ಮಾಡಿಕೊಳ್ಳೋಣ. ಕಥಾನಾಯಕಿಯನ್ನು ಆತ್ಮಹತ್ಯೆಗೆ ದೂಡಿದ್ದು, "ಬಾವಿಯೊಳಗಿನ ಕಪ್ಪೆ"ಯ ಮನೋಭಾವವು ರೂಪಿಸಿದ ನಿಯಮವಲ್ಲವೆ?
ಸುಂದರರಾಯರು ಹೇಳಿದ್ದು ನಿಜ. ಆದರೆ ಅದು ಲೇಖಕರು ನಿರ್ದೇಶಕರಿಗೆ ಅನುಮತಿ ಕೊಡುವಾಗ ಯಾವ ಷರತ್ತನ್ನು ವಿಧಿಸಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ. ನನಗೆ ಅನ್ನಿಸುವಂತೆ ಚಾಚೂತಪ್ಪದೆ ನನ್ನ ಕೃತಿಯನ್ನು ನಾಟಕದಲ್ಲಿ/ಸಿನೆಮಾದಲ್ಲಿ ಅಳವಡಿಸಬೇಕು ಅಂತ ಲೇಖಕರು ಕಂಡೀಶನ್ ಹಾಕಿದರೆ ಅದನ್ನು ಒಪ್ಪಿಕೊಂಡು ನಿರ್ದೇಶಿಸುವ ನಿರ್ದೇಶಕರು ಸಿಗಬಹುದೇ? ಎಷ್ಟೋ ಲೇಖಕರು ಕೃತಿಯನ್ನು ಹಾಳು ಮಾಡುತ್ತಾರೆ ಅಂತ ಸಿನೆಮ/ನಾಟಕಕ್ಕೆ ಅನುಮತಿ ಕೊಡದೆ ಇರೋದೂ ಇದೆ.
Deleteಮತ್ತೆ ನನ್ನ ವೋಟು ಕೂಡ ಕೋಳಕ್ಕೇ. ಯಾಕೆಂದರೆ ನಿಂತ ನೀರೇ ಉತ್ತಮ ಸಂಕೇತ ಹೊರತು ಹರಿವ ನೀರಲ್ಲ ಕಾದಂಬರಿಯ ಈ ಸನ್ನಿವೇಶಕ್ಕೆ. ಅದಕ್ಕಾಗೇ ಮೇಲೆ ಹೇಳಿದಂತೆ ನದಿಯೆಂದ ವಿಮರ್ಶಕರ ಬಗ್ಗೆ ನನ್ನ ಆಕ್ಷೇಪವಿದ್ದದ್ದು. - ಅಜಕ್ಕಳ ಗಿರೀಶ
ನಾದಿರಾ ಲೌಕಿಕಕ್ಕೆ ಹೇಸಿಕೊಂಡರೂ ಸ್ಪಷ್ಟ ಹೇಳುತ್ತಾಳೆ "ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ದೇವನಿಗೆ ದೂರು ಕೊಡಲು (ತುರ್ತು ದಾರಿ) ಹೋಗುತ್ತಿದ್ದೇನೆ." ಈ ನಿಟ್ಟಿನಲ್ಲಿ ಹಿಂದೂಗಳಿಗಿರುವ `ಪಾಪನಾಶಿನಿ, ಪುಣ್ಯವಾಹಿನಿ'ಯಂಥ ಮೌಲ್ಯಗಳು ಇಸ್ಲಾಂನ ಕೊಳಗಳಿಗಿದ್ದಂತಿಲ್ಲ. ಆಗ ದೊಡ್ಡ ಆಯಾಮದ ನದಿಗೆ ಬೀಳುವುದು.....
Delete