ಲೇಖಕ:
ಜಿ.ಟಿ. ನಾರಾಯಣ
ರಾವ್
[ಮೊದಲ
ಕಂತು] [೧೯೯೩
ಅತ್ರಿ ಬುಕ್ ಸೆಂಟರ್
ಪ್ರಕಟಣೆ. ಮೊದಲ ಮುದ್ರಣ
೧೯೮೧. ಪುಟ ಸುಮಾರು
೯೦ ಬೆಲೆ ರೂ
೧೨]
ಇದರಿಂದ
ತೊಡಗಿದಂತೆ ನಾನು
ಜಿ.ಟಿ. ನಾರಾಯಣ
ರಾಯರ (ನನ್ನ ತಂದೆ,)
ಮುದ್ರಣದಲ್ಲಿ ಅಲಭ್ಯ
ಕೃತಿಗಳನ್ನೆಲ್ಲಾ ನನ್ನ
ಅನುಕೂಲದ ಕಂತುಗಳಲ್ಲಿ ಹೀಗೆ
ಸಾರ್ವಜನಿಕಕ್ಕೆ ಮುಕ್ತವಾಗಿಸುತ್ತಿದ್ದೇನೆ. ಇವುಗಳನ್ನು ಮೂಲಕ್ಕೆ ನಿಷ್ಠವಾಗಿ ಅಕ್ಷರಕ್ಷರ ಬೆರಳಚ್ಚಿಸುವ ಕೆಲಸವನ್ನು ನಾನು ಮಾಡುವ
ಜೊತೆಗೆ ನನ್ನ ಮಿತಿ
ಮತ್ತು ಸೌಕರ್ಯಕ್ಕೆ ನಿಲುಕಿದಂತೆ ಚಿತ್ರಗಳನ್ನೂ ಸೇರಿಸಲಿದ್ದೇನೆ.
ಕಾಲಿಕವಾಗಿ ನನ್ನ
ಅರಿವಿಗೆ ಬಂದ ತಿದ್ದುಪಡಿಗಳೇನಾದರೂ ಇದ್ದರೆ ನಾನೇ
ಅಥವಾ ತಂದೆಯ ವಿಜ್ಞಾನ ಮತ್ತು ಅದರ
ಕನ್ನಡ ಪ್ರಸರಣ ಗರಡಿಯಲ್ಲಿ ಪಟ್ಟ ಶಿಷ್ಯನಂತೇ ಪಳಗಿದ ಎ.ಪಿ. ರಾಧಾಕೃಷ್ಣನ
(ನನ್ನ ಸೋದರಮಾವ ಗೋವಿಂದಯ್ಯನವರ ಮಗ, ಪುತ್ತೂರಿನ ಸಂತ ಫಿಲೊಮಿನಾ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ) ವಿವೇಚನೆ ಬಳಸುತ್ತೇನೆ. ವಿದ್ಯುನ್ಮಾನ ಮಾಧ್ಯಮದ ಅನುಕೂಲದಲ್ಲಿ ಏನಾದರೂ ಸೇತುಗಳನ್ನು ಕಲ್ಪಿಸುವುದಿದ್ದರೆ ಎಂದಿನಂತೆ ನನ್ನ ಜಾಲತಾಣದ ಪೂರ್ಣ ನಿರ್ವಾಹಕ ಅಭಯಸಿಂಹನ (ನನ್ನ
ಮಗ) ಪರಿಣತಿಯೂ ತೊಡಗುತ್ತದೆ - ಅಶೋಕವರ್ಧನ.
ಅರಿಕೆ
ಭವಿಷ್ಯ
ವಿಜ್ಞಾನಕ್ಕೂ
(futurology) ಫಲಜ್ಯೋತಿಷ್ಯಕ್ಕೂ ಸಾಮ್ಯ ವೈಷಮ್ಯಗಳೇನು?
ಎರಡೂ
ಮಾನವಕೃತ
ಅಧ್ಯಯನಪ್ರಕಾರಗಳು.
ಅವು
ಭವಿಷ್ಯ
ಕುರಿತಂತೆ
ಎಣಿಕೆಗಳನ್ನು
ಇಲ್ಲವೇ
ಊಹೆಗಳನ್ನು
ಮಂಡಿಸುತ್ತವೆ.
ಮತ್ತು
ತಿದ್ದುಪಡಿಗಳನ್ನು ಇಲ್ಲವೇ ಪರಿಹಾರಗಳನ್ನು
ಸೂಚಿಸುತವೆ. ಇಲ್ಲಿಗೆ
ಸಾಮ್ಯ
ಮುಗಿಯುತ್ತದೆ.
ವೈಷಮ್ಯ? ಪರಿಪೂರ್ಣ
ವಿರೋಧಿಗಳಿವು.
ಮೊದಲನೆಯದು
ಶುದ್ಧ
ವಿಜ್ಞಾನ, ಎರಡನೆಯದು
ಅನಿರ್ಬಂಧಿತ
ಅವಿದ್ಯೆ. ವಾಸ್ತವವಾಗಿ
ಬೌದ್ಧಿಕ
ವಂಚನೆಯ
ಇನ್ನೊಂದೇ
ಹೆಸರು
ಫಲಜ್ಯೋತಿಷ್ಯ.
ಫಲಜ್ಯೋತಿಷ್ಯವೂ
ಒಂದು
ವಿಜ್ಞಾನ (science) ಎಂದು
ಈ ‘ಪ್ರಾಚೀನ
ವಿದ್ಯೆ’ಯ ಆರಾಧಕರು ಘೋಷಿಸುತ್ತಾರೆ.
ಖಗೋಳ, ಜೀವ, ಭೌತ, ರಸಾಯನ
ಮುಂತಾದ
ವಿಜ್ಞಾನ
ಪ್ರಕಾರಗಳಲ್ಲಿ
ಅನುಸರಿಸುವ
ವೈಜ್ಞಾನಿಕ
ವಿಧಾನವನ್ನೆ
ಫಲಜ್ಯೋತಿಷ್ಯದಲ್ಲಿಯೂ ಅನುಸರಿಸುವುದಾಗಿದೆ. ಅಂದ
ಮೇಲೆ
ಅವು
ಎಷ್ಟರ
ಮಟ್ಟಿಗೆ
ವಿಜ್ಞಾನಗಳೋ
ಇದು (ಫಲಜ್ಯೋತಿಷ್ಯ)
ಅಷ್ಟೇ
ವಿಜ್ಞಾನ
ಎಂದು
ಇವರು
ವಾದಿಸುತ್ತಾರೆ.
ಅಂತಿಮವಾಗಿ
ವಾದವೈಖರಿ
ಅಲ್ಲ, ಶಬ್ದ
ಜಾಲರಿ
ಅಲ್ಲ, ಅವರಿವರ
ಮಾತೂ
ಅಲ್ಲ
ಯಾವುದು
ವಿಜ್ಞಾನ
ಯಾವುದು
ಅವಿಜ್ಞಾನ
ಎಂದು
ನಿರ್ಣಯಿಸುವುದು.
ಸಾಕ್ಷಾತ್
ನಿಸರ್ಗವೇ
ಇಲ್ಲಿ
ನಿರ್ಣಾಯಕ. ಯಾವುದನ್ನು
ಅಥವಾ
ಏನನ್ನು
ನಾವು
ವಿಜ್ಞಾನವೆಂದು
ಗುರುತಿಸುತ್ತೇವೆ?
ನಿಸರ್ಗದ
ಯಾವುದೇ
ವಿದ್ಯಮಾನ
ಕುರಿತಂತೆ
ಕಾರ್ಯ
ಕಾರಣ
ಸಂಬಂಧ
ಅನ್ವೇಷಿಸುವ
ಪ್ರತಿಯೊಂದು
ಪ್ರಯತ್ನವೂ
ವಿಜ್ಞಾನವನ್ನು
ಬೆಳೆಸಿ
ಪೋಷಿಸುತ್ತದೆ.
ನೈಸರ್ಗಿಕ
‘ಕಾರ್ಯ’ಗಳನ್ನು ಮಾನವಮತಿ
ಗಮನಿಸಿ, ಅರ್ಥವಿಸಿ, ವಿಶ್ಲೇಷಿಸಿ,
ಪ್ರಯೋಗಿಸಿ, ಅರಿತು
ಅವುಗಳ
ಹಿನ್ನೆಲೆಯ
‘ಕಾರಣ’ಗಳನ್ನು ಮಂಡಿಸಿದಾಗ
ವಿಜ್ಞಾನ
ಮೈದಳೆಯುತ್ತದೆ.
ನಿಸರ್ಗದ
ಬಗ್ಗೆ
ಮಾನವಮತಿ
ಬರೆದ
ಭಾಷ್ಯವಿದು, ಮಾಡಿದ
ವ್ಯಾಖ್ಯಾನವಿದು.
ಇದು
ಸರಿಯೇ
ತಪ್ಪೇ
ಎಂದು
ನಿರ್ಣಯಿಸುವವರು
ಯಾರು? ನಿಸರ್ಗವೇ
ಕಾರಣಕರ್ತ, ಕಾರ್ಯಕರ್ತೃ,
ನಿರ್ಣಾಯಕ
ದಾತೃ
ಎಲ್ಲವೂ
ಅದೇ.
ನಿಸರ್ಗಕ್ಕೆ
ಯಾವುದೇ
ಬಗೆಯ
ಮಾನವೀಯ
ಗುಣವಿಲ್ಲ. ತನ್ನ
ರಹಸ್ಯಗಳನ್ನು
(ಸ್ವತಃ
ತನ್ನ
ಸೃಷ್ಟಿಯಾದ) ಮಾನವನಿಗೆ
ತಿಳಿಯಪಡಿಸಬೇಕು
ಎನ್ನುವ
‘ಸದ್ಬುದ್ಧಿ’
ಇದಕ್ಕಿಲ್ಲ, ತಿಳಿಯಪಡಿಸಬಾರದೆಂಬ ‘ದುರ್ಬುದ್ಧಿ’ಯೂ ಇಲ್ಲ. ಆದರೆ
ಒಂದು
ಸಂಗತಿ: ನಿಸರ್ಗ
ಸದಾ
ತಾರ್ಕಿಕವಾಗಿರುವುದು,
ಸಂಗತವಾಗಿರುವುದು,
ಕಾರ್ಯಕಾರಣ
ಸಂಬಂಧ
ಬಂಧಿತವಾಗಿರುವುದು.
ಮಾನವ
ಇದ್ದರೂ
ಇಲ್ಲದಿದ್ದರೂ
ಇದು
ಇರುವುದು
ಹೀಗೆಯೇ, ಸ್ವಯಂಸೃಷ್ಟ
ವಿಧಿನಿಯಮ
ನಿಯಂತ್ರಿತವಾಗಿಯೇ.
ಈ ವಿಧಿನಿಯಮಗಳ
ಅನ್ವೇಷಣೆಯೇ
ವಿಜ್ಞಾನದ
ಪಥ. ಇಲ್ಲಿ
ಗಮನವೊಂದೇ
ಸಾಧು. ಗಮ್ಯ? ನಾಗರಿಕತೆ
ಎಂದೂ
ಅದನ್ನು
ಐದದು.
ಈ ತತ್ತ್ವಗಳನ್ನೂ
ತಥ್ಯಗಳನ್ನೂ
ಫಲಜ್ಯೋತಿಷ್ಯಕ್ಕೆ ಅನ್ವಯಿಸಿದರೆ ತಿಳಿಯುವುದೇನು?
ಇದು
ವಿಜ್ಞಾನವಲ್ಲ,
ಜ್ಞಾನವಲ್ಲ, ವಿದ್ಯೆಯಲ್ಲ
- ಬದಲು
ಅವಿಜ್ಞಾನ, ಅಜ್ಞಾನ, ಅವಿದ್ಯೆ. ಅಸ್ತಿತ್ವರಹಿತ
ಊಹೆಗಳ
ಗಾಳಿಗೋಪುರವಾಸಿ,
ಕುರುಡರೊಡೆಯ
ಬಡಬಡಿಸುವ
ಅಬದ್ಧ
ನುಡಿಗಳ
ಅತಾರ್ಕಿಕ
ಸರಣಿಯೇ
ಫಲಜ್ಯೋತಿಷ್ಯ.
ಈ ಕುರಿತು
ಆಸಕ್ತ
ವಾಚಕರು
ನಾನು
ಬರೆದಿರುವ
ವೈಜ್ಞಾನಿಕ
ಮನೋಧರ್ಮ, ಜಾತಕ
ಮತ್ತು
ಭವಿಷ್ಯ, ಭವಿಷ್ಯ
ವಾಚನ, ನೋಡೋಣು
ಬಾರಾ
ನಕ್ಷತ್ರ, ಸೂಪರ್ನೋವಾ
ಮೊದಲಾದ
ಪುಸ್ತಕಗಳನ್ನು
ಓದಬಹುದು. [ಮೊದಲ
ಎರಡು
ಪುಸ್ತಕಗಳು
ಇಂದು
ಮಾರುಕಟ್ಟೆಯಲ್ಲಿ ಲಭ್ಯ - ಅಶೋಕವರ್ಧನ]
ಪ್ರಸಕ್ತ
ಪುಸ್ತಕ ಭವಿಷ್ಯವಿಜ್ಞಾನ ಎಂಬ
ಪ್ರಕಾರವನ್ನು
ವಿವಿಧ
ಕೋನಗಳಿಂದ
ಪರಾಂಬರಿಸಿರುವ
ಒಂದು
ಅಧ್ಯಯನ. ನಾಗರಿಕತೆ
ನಡೆದುಬಂದ
ದಾರಿಯನ್ನು
ವೈಜ್ಞಾನಿಕವಾಗಿ
ವಿಮರ್ಶಿಸಿ, ವರ್ತಮಾನ
ಸ್ಥಿತಿಗಳನ್ನು
ಪರಿಶೀಲಿಸಿ, ಮುಂಬರಲಿರುವ
ದಿನಗಳ
ಬಗ್ಗೆ
ಮಾಡಿರುವ
ಊಹೆ
ಇದರ
ಹೂರಣ - ಸರ್ಕಾರದ
ವಾರ್ಷಿಕ
ಹಣಕಾಸು
ಮುಂಗಡ
ಪತ್ರದಂತೆ, ಹವೆ
ಕುರಿತ
ಮುನ್ನೋಟದಂತೆ,
ಜನಸಂಖ್ಯೆ
ಏರಿಳಿತ
ಕುರಿತ
ಅಂದಾಜಿನಂತೆ.
ನಾಗರಿಕತೆಯ ಪ್ರಗತಿಗೆ ಪ್ರೇರಕಗಳಾದ
ಮೂರು
ವಿವಿಕ್ತ
ತರಂಗಗಳನ್ನು
ಅಲ್ವಿನ್
ಟಾಫ್ಲರ್
The
Third Wave ಎನ್ನುವ
ಗ್ರಂಥದಲ್ಲಿ
ವಿವೇಚಿಸಿದ್ದಾರೆ.
ಕೃಷಿತರಂಗ, ಕೈಗಾರಿಕಾತರಂಗ,
ಆಧುನಿಕ (ಎಲೆಕ್ಟ್ರಾನಿಕ್)
ತರಂಗ, ನೂತನ
ಸಂಶ್ಲೇಷಣೆಯ
(new
synthesis) ಯುಗದಂಚಿನಲ್ಲಿ
ಇಂದು
ನಾವು
ನಿಂತಿದ್ದೇವೆ.
ಮೂರನೆಯ
ತರಂಗ
ಇದರ
ಕಾರಣ
ಎನ್ನುತ್ತಾರೆ
ಟಾಫ್ಲರ್. ಈ ಅಲೆಯ
ಹೊಡೆತಕ್ಕೆ
ಸಿಕ್ಕಿಹಾಕಿಕೊಂಡಿರುವ ನಾವು ಇದರ
ಶಕ್ತಿವಿಶೇಷಗಳನ್ನು ಮಾನವ ಕಲ್ಯಾಣಕ್ಕಾಗಿ
ಸಂಶ್ಲೇಷಿಸಿ
ಬದುಕನ್ನು
ಉಲ್ಲಾಸಮಯ
ಮಾಡಿಕೊಳ್ಳುತ್ತೇವೋ ಇಲ್ಲ, ಇದಕ್ಕೆ ಬಲಿಪಶುಗಳಾಗಿ
ಸರ್ವನಾಶ
ಮಾರ್ಗದಲ್ಲಿ
ತಳ್ಳಲ್ಪಡುತ್ತೇವೋ?
ಜಿ.ಟಿ. ನಾರಾಯಣರಾವ್
ಮುನಿದು
ಪೊಡವಿ ನುಂಗುವಡೆ - ಒಂದು
ಶೀರ್ಷಿಕೆಯ
ಪೂರ್ಣಪಾಠ
ಹೀಗಿದೆ
- “ಮುನಿದು
ಪೊಡವಿ
ನುಂಗುವಡೆ
ಮನೆ
ತಾಗುವುದೇ? ಕವಿದು
ಹೆಗ್ಗಡಲುಕ್ಕಿ
ಜಗವ
ಮೊಗೆವೆಡೆ
ಮೆಳೆಗಳಡ್ಡ
ಬಹವೇ?” ಉತ್ತರ
ತೀರಾ
ಸರಳ. ಈ ನೈಸರ್ಗಿಕ
ಪ್ರಕೋಪಗಳಿಗೆ
ಎದುರಾಗಿ
ಮನೆಯಾಗಲಿ
ಮೆಳೆಯಾಗಲಿ
ನಮಗೆ
ಗುರಾಣಿಕಾಪನ್ನು
ಒದಗಿಸಲಾರವು.
ಇಂಥ
ಭೀಕರ
ಪರಿಸ್ಥಿತಿ
ಮಾನವನಿಗೆ
೧೯೭೦ರ
ದಶಕದಲ್ಲಿಯೇ
ಎದುರಾಗಿತ್ತು.
ಆಗಲೇ
ಪರಿಸರ
ವಿಜ್ಞಾನಿಗಳು
ಎಚ್ಚರಿಕೆಯ
ಗಂಟೆ
ಬಾರಿಸಿದ್ದರು.
ಯಾವುದೇ
ಜೀವಿ (ಸಸ್ಯ
ಮತ್ತು
ಪ್ರಾಣಿ) ಬದುಕಿ
ಬಾಳುವ
ಪ್ರದೇಶಕ್ಕೆ
ಆ ಜೀವಿಯ
ಪರಿಸರವೆಂದು
ಹೆಸರು. ನಿರ್ದಿಷ್ಟವಾಗಿ
ಹೇಳುವುದಾದರೆ
ಜೀವಿಯ
ಮೇಲೆ
ಪ್ರಭಾವ
ಬೀರುವ
ಸಕಲ
ಬಾಹ್ಯಬಲಗಳ
ಮೊತ್ತವೂ
ಅದರ
ಪರಿಸರವಾಗುತ್ತದೆ.
ಉದಾಹರಣೆಗೆ
ಮಾನವನನ್ನು
ಪರಿಶೀಲಿಸೋಣ.
ಇವನಿಗೆ
ಉಸಿರಾಡಲು
ವಾಯು
ಬೇಕು, ನಿಲ್ಲಲು
ನೆಲ
ಬೇಕು, ತಿನ್ನಲು
ಆಹಾರ
ಬೇಕು, ಇವನ್ನೆಲ್ಲ
ಈತ
ಪಡೆಯುವುದು
ಪರಿಸರದಿಂದ. ಮಾನವನನ್ನು
ಅವನ
ಪರಿಸರದಿಂದ
ಬೇರ್ಪಡಿಸಿದರೆ
ತತ್ಕ್ಷಣ
ಆತ
ಮರಣವಪ್ಪುವುದು
ಖಂಡಿತ. ನಮ್ಮ
ಎಂದಿನ
ಉಡುಪಿನಲ್ಲೇ
ನಾವು
ಚಂದ್ರನಲ್ಲಿ
ಇಳಿದದ್ದಾದರೆ
ರಕ್ತನಾಳಗಳು
ಒಡೆದು
ಆಕ್ಷಣವೇ
ಸತ್ತುಹೋದೇವು.
(ಭೂ
ಪರಿಸರದಲ್ಲಿಯ
ವಾಯುಮಂಡಲದ
ಸಂಮರ್ಧ
ಅಲ್ಲಿ
ಇಲ್ಲದಿರುವುದರಿಂದ ಹೀಗಾಗುತ್ತದೆ; ಅಂದರೆ
ಧಮನಿಗಳಲ್ಲಿ
ಹರಿಯುತ್ತಿರುವ
ನೆತ್ತರಿನ
ನೂಕು
ಅಥವಾ
ಹೊರಮುಖ
ಒತ್ತಡವನ್ನು
ಸಂತುಲಿಸಲು
ವಾಯುಮಂಡಲದ
ಅದುಮಿಕೆ
ಅಥವಾ
ಒಳಮುಖ
ಒತ್ತಡ
ಅಗತ್ಯ.)
ಯಾವುದೇ
ಜೀವಿಯ
ದೃಷ್ಟಿಯಿಂದ
ಅದರ
ಪರಿಸರದಲ್ಲಿ
ಎರಡು
ಮುಖ
ವಿಭಾಗಗಳನ್ನು
ಗುರುತಿಸಬಹುದು:
ಇತರ
ಜೀವಿಗಳ
ಸಮುದಾಯ, ಅಜೈವಿಕ
ವಸ್ತುಗಳ
ಸಮುದಾಯ. ಮಾನವನನ್ನು
ಕುರಿತಂತೆ
ಪ್ರಾಣಿ
ಹಾಗೂ
ಸಸ್ಯ
ಪ್ರಪಂಚ
ಇತರ
ಜೀವಿಗಳ
ಸಮುದಾಯವಾಗುತ್ತದೆ;
ಗಾಳಿ
ನೀರು, ಮಣ್ಣು
ಮುಂತಾದವು
ಅಜೈವಿಕ
ವಸ್ತುಗಳ
ಸಮುದಾಯವಾಗುತ್ತದೆ.
ಪರಿಸರದ (ನಿಸರ್ಗದ
ಅನ್ನಿ
ಬೇಕಾದರೆ) ಸುದೀರ್ಘ
ಪ್ರಯೋಗದ
ಫಲ
ಜೀವಿ. ಇದರ
ಉಳಿವಿಗೆ
ಬಾಳ್ವೆಗೆ
ಪರಿಸರ
ಅತ್ಯಗತ್ಯ. ಆದ್ದರಿಂದ
ಪರಿಸರವಿಲ್ಲದೇ
ಜೀವಿ
ಇಲ್ಲ. ಆದರೆ
ಜೀವಿ
ಇಲ್ಲದಿದ್ದರೂ
ಪರಿಸರ
ಉಳಿದೀತು. (ಇದನ್ನು
ಆಗ
ಪರಿಸರವೆಂದು
ಕರೆಯುವುದಿಲ್ಲ
ಮಾತ್ರ.) ಉದಾಹರಣೆಗೆ
ಚಂದ್ರ, ಶುಕ್ರ, ಸೂರ್ಯ
ಮುಂತಾದ
ಆಕಾಶಕಾಯಗಳಲ್ಲಿ
ಪರಿಸರವಿದ್ದರೂ
ಜೀವಿ
ಇಲ್ಲ. ನಮ್ಮ
ಭೂಮಿಯಲ್ಲೇ
ಜೀವಿರಹಿತ
ಪ್ರದೇಶಗಳು
ಸಾಕಷ್ಟು
ಇವೆ.
ಜೀವಿಯನ್ನು
ಸೃಷ್ಟಿಸಿದ್ದು
ಪರಿಸರ
ನಿಜ. ಆದರೆ
ಮುಂದೆ
ಜೀವಿಯೂ
ಪರಿಸರವನ್ನು
ಸೃಷ್ಟಿಸದೆ (ಅಥವಾ
ಪ್ರಭಾವಿಸದೆ)
ಇಲ್ಲ. ಹವಳದ
ದಿಬ್ಬಗಳು, ನಿಬಿಡ
ಕಾನನಗಳು, ವಿಶಾಲ
ಹುಲ್ಲುಗಾವಲುಗಳು,
ಮಾನವಕೃತ
ಭೂಕೃಷಿ
ಇವೆಲ್ಲವೂ
ಪರಿಸರದ
ಮೇಲೆ
ಜೀವಿ
ಬೀರಿರುವ
ಪ್ರಭಾವಕ್ಕೆ
ನಿದರ್ಶನಗಳು.
ಈ ಅಂತರಕ್ರಿಯೆಗಳು
ಲಕ್ಷಾಂತರ
ವರ್ಷಗಳಿಂದ
ಎಡೆಬಿಡದೆ
ಮಂದಗತಿಯಲ್ಲಿ
ನಡೆದುಕೊಂಡು
ಬಂದಿರುವುದರಿಂದ
ನಿಸರ್ಗದ
ಸಮತೋಲ
ಎಂದೂ
ವಿಶೇಷವಾಗಿ
ಕದಲಲಿಲ್ಲ.
ಸ್ಪರ್ಧಾತ್ಮಕವಾದ ಈ ಪ್ರಪಂಚದಲ್ಲಿಯ ಹೋರಾಟದ
ಬದುಕಿನಲ್ಲಿ
ಸಾಹಸ
ಪ್ರವೃತ್ತಿಯ
ಜೀವಿಗಳ
ಸಂಖ್ಯೆಯಲ್ಲಿ
ಇರುವ
ಒಂದು
ಹದವೇ
ನಿಸರ್ಗದ
ಸಮತೋಲ. ಲಭ್ಯ
ಆಹಾರ
ಹಾಗೂ
ಇತರ
ಆವಶ್ಯಕ
ವಸ್ತುಗಳನ್ನು
ಇದು
ಅವಲಂಬಿಸಿದೆ.
ಇಲಿಗಳು
ಮಿತಿ
ಮೀರುವಂತಿಲ್ಲ
- ಹಾವುಗಳಿವೆ. ಹಾವುಗಳು
ಮಿತಿ
ಮೀರುವಂತಿಲ್ಲ
- ಮುಂಗುಸಿಗಳಿವೆ,
ಇತ್ಯಾದಿ. ಅರ್ಥಾತ್
ನಿಸರ್ಗ (ಅಥವಾ
ಪರಿಸರ) ಅವ್ಯಕ್ತವಾದ
ಒಂದು
ವಿಧಾನದಿಂದ
ಜೀವಿಗಳ
ಸಮಗ್ರತೆಯಲ್ಲಿ
ಸಮತೋಲನವನ್ನು
ಕಾದಿರಿಸಲು
ಪ್ರಯತ್ನಿಸುತ್ತಿದೆಯೋ ಎಂಬಂತೆ. ಇದೊಂದು ಸರಪಳಿ
ಕ್ರಿಯೆ. ಸರಪಳಿಯ
ಕೊಂಡಿಗಳೂ
ಶಾಖೋಪಶಾಖೆಗಳೂ
ಅಸಂಖ್ಯಾತ. ಹೀಗೆ
ನಿಸರ್ಗದ
ಸಮತೋಲ
ಒಂದು
ವಿಧವಾದ
ಆಂತರಿಕ
ಗತ್ಯಾತ್ಮಕ
ಹೊಂದಾಣಿಕೆ.
ಇಂಥ
ನೈಸರ್ಗಿಕ
ಕಾರಕಗಳ
ಪ್ರಭಾವವನ್ನು
ಹಠಾತ್ತಾಗಿ
ತಡೆಗಟ್ಟಿದುದಾದರೆ ಅಥವಾ ನಿಶ್ಚಿತ
ರಂಗಗಳಲ್ಲಿ
ವೇಗೋತ್ಕರ್ಷಿಸಿದುದಾದರೆ ಅದರಿಂದ ನಿಸರ್ಗದ
ಸಮತೋಲಕ್ಕೆ
ಭಂಗ
ತಟ್ಟುತ್ತದೆ.
ಒಂದು
ವಲಯದಲ್ಲಿ
ಕಂಡುಬಂದ
ಕೊರತೆ
ಸಾರ್ವತ್ರಿಕವಾಗಿ ಹಬ್ಬುವುದು ಅನಿವಾರ್ಯ. ಹುಲಿಗಳ
ನಿರ್ಮೂಲನ
ಜಿಂಕೆಗಳ
ಅತಿವೃದ್ಧಿಗೂ
ಜಿಂಕೆಗಳ
ಅತಿವೃದ್ಧಿ
ಪೈರಿನ
ನಾಶಕ್ಕೂ
ಪೈರಿನ
ನಾಶ
ಮಾನವನ
ಆರ್ಥಿಕತೆಯ
ಏರುಪೇರಿಗೂ
ಕಾರಣವಾಗುವುದು
ಒಂದು
ಉದಾಹರಣೆ. ಕಾಡಿಗೆ
ಹೊಡೆದ
ಕೊಡಲಿ
ಪೆಟ್ಟು
ನಾಡಿಗೆ
ದಾಳಿ
ಇಡುವ
ಸಲಗದಲ್ಲಿ
ಕೊನೆಗಾಣುವುದು
ಅಪರೂಪವೇನಲ್ಲ.
ಬದುಕನ್ನು
ಹಸನುಗೊಳಿಸಲು
ಯಂತ್ರ
ಸ್ಥಾವರಗಳನ್ನು
ಸ್ಥಾಪಿಸಲಾಯಿತು.
ಇದಕ್ಕಾಗಿ
ವಿಶಾಲ
ಪ್ರದೇಶಗಳಲ್ಲಿ
ನಿಸರ್ಗವನ್ನು
ಬೋಳಿಸಿ
ಭಾರೀ
ಕಟ್ಟಡಗಳನ್ನೂ
ಕಾರ್ಖಾನೆಗಳನ್ನೂ ಕಟ್ಟಲಾಯಿತು. ಈ ಕಾರ್ಖಾನೆಗಳ
ಉತ್ಪಾಟನೆಗಳು
(ಅಂದರೆ
ಕಲುಷಿತ
ರಾಸಾಯನಿಕ
ಮಿಶ್ರಿತ
ದ್ರವ, ಹೊಗೆ, ದೂಳು, ಹರಟೆ, ಕಟ್ಟಡದ
ಪೇರಿಕೆ
ಇತ್ಯಾದಿ) ಅದೇ
ಮಾನವನ
ಬದುಕನ್ನು
ಅಸಹನೀಯವಾಗಿ
ಮಾಡುವುದನ್ನು
ಕಾಣುವಾಗ
ನಮ್ಮ
ಒಟ್ಟು
ಗಣನೆಗಳಲ್ಲಿ
ಏನೋ
ತಪ್ಪು
ನುಸುಳಿದೆ
ಎಂಬುದು
ಸ್ಪಷ್ಟ.
ಪರಿಸರದ
ಬಲಗಳೊಡನೆ
ಪ್ರಗತಿಯ
ಹೆಸರಿನಲ್ಲಿ
ಸೆಣಸುತ್ತಿರುವ
ತಂತ್ರವಿದ್ಯಾವಿಶಾರದ ಮಾನವ ಮಾಡಿರುವುದಾದರೂ
ಏನು? ನಿಸರ್ಗದ
ಸಮತೋಲಕ್ಕೆ
ಬತ್ತಿ
ಇಟ್ಟಿರುವುದು.
ಇದರ
ವಿಷಫಲವೇ
ಪರಿಸರ
ಮಾಲಿನ್ಯ, ಮಾನವ
ಜೀವನದ
ಪೂರ್ಣಾಹುತಿಯನ್ನು ತೆಗೆದುಕೊಳ್ಳಲು ಎದ್ದಿರುವ
ಹೊಸ
ಹಾಲಾಹಲ. ಇದರಿಂದ
ವಿಮೋಚನೆ
ಪಡೆದು
ಬಾಳುವುದು
ಖಂಡಿತ
ಸಾಧ್ಯವುಂಟೆಂದು
ಪರಿಸರ
ವಿಜ್ಞಾನಿಗಳು
ಪದೇ
ಪದೇ
ಹೇಳುತ್ತ
ಬಂದಿದ್ದಾರೆ.
ಪರಿಸರಮಾಲಿನ್ಯ
ಉಲ್ಬಣಾವಸ್ಥೆಗೆ
ಹೋಗಿರುವ
ಈಚಿನ
ದಿನಗಳಲ್ಲಿ
ಇವರ
ಮಾತಿಗೆ
ಅಧಿಕಾರವಲಯಗಳಲ್ಲಿ ಹೆಚ್ಚಿನ ತೂಕ
ಬಂದಿದೆ.
ಜೀವಿಗಳು
ಮತ್ತು
ಅವುಗಳ
ಪರಿಸರವನ್ನು
ಶಾಸ್ತ್ರೀಯವಾಗಿ
ಅಭ್ಯಸಿಸುವ
ವಿಜ್ಞಾನ
ವಿಭಾಗವೇ
ಪರಿಸರ
ವಿಜ್ಞಾನ. ನಿಸರ್ಗದ
ಸಮತೋಲನವನ್ನು
ಕುರಿತ
ಅಧ್ಯಯನವಿದು.
ಜೀವಿಗಳ
ಅಂತರಸಂಬಂಧಗಳನ್ನೂ ಅಂತರಕ್ರಿಯೆಗಳನ್ನೂ ಪರಿಸರ
ವಿಜ್ಞಾನದಲ್ಲಿ
ಪರಿಶೀಲಿಸಲಾಗುವುದು.
ಜೀವವಿಜ್ಞಾನದ
ಶಾಖೆಯಾದ
ಇದಕ್ಕೆ
೧೯೬೦ರಿಂದ
ಈಚೆಗೆ
ಸ್ವತಂತ್ರವಾದ
ಮತ್ತು
ಮುಖ್ಯವಾದ
ಒಂದು
ವಿಜ್ಞಾನ
ವಿಭಾಗ
ಎಂಬ
ಅಂತಸ್ತು
ಪ್ರಾಪ್ತವಾಗಿದೆ.
ಶುಕ್ರಾವತರಣ
- ಎರಡು
ಭೂಮಿಯಿಂದ
ಕಾಣುವ
ಪ್ರಕಾರ, ಮತ್ತು
ಮಾನವ
ನಿಯೋಗಿಗಳಾದ
ಉಪಗ್ರಹಗಳು
ಶುಕ್ರನನ್ನು
ಸಮೀಪದಿಂದ
ವೀಕ್ಷಿಸಿ
ಭೂಮಿಗೆ
ವರದಿ
ಸಲ್ಲಿಸಿರುವ
ಪ್ರಕಾರ
ಅದೊಂದು
ಅನಿಲಾವರಣಾಚ್ಛಾದಿತ ವಿಸ್ಮಯಕಾಯ. ಸರಳ ಭಾಷೆಯಲ್ಲಿ
ಮುಸುಕು
ತೆಗೆಯದ
ಮಾಯಾಂಗನೆ. ಮುಸುಕಿನೊಳಗೆ
ಧಗಧಗಿಸುವ
ಕುಂಭೀಪಾಕ
ಇರಬಹುದೆಂದು
ಊಹೆ. ಇಡೀ
ಭೂಮಿಯನ್ನು
ದಟ್ಟ
ಮೋಡ
ಸುತ್ತುವರಿದುಕೊಂಡಿದ್ದರೆ ಅನ್ಯ ಗ್ರಹದಿಂದ
ಭೂಮಿ
ದರ್ಶನಾರ್ಥ
ಬರುವ
ಜೀವಿಗೆ
ಏನು
ದೃಶ್ಯ
ಕಾಣಬಹುದೋ
ನಮ್ಮ
ಗಗನ
ನೇತ್ರಕ್ಕೆ
ಕಾಣುವ
ಶುಕ್ರನ
‘ಪೋಸ್’
ಅದು. ಇಂಥ
ಒಂದು
ಅನುಭವ
ಕೆಲವು
ವರ್ಷಗಳ
ಹಿಂದೆ
ಖುದ್ದು
ನನಗೆ
ಇದೇ
ಸುಂದರ
ವಸುಂಧರೆಯಲ್ಲಿ
ಒದಗಿತ್ತು.
ನಾನು
ಮೈಸೂರಿನ
ಒಂದು
ಬಡಾವಣೆಯ
ನಿವಾಸಿ. ಇಲ್ಲಿ
ವಾತಾವರಣ
ಸಾಕಷ್ಟು
ಶಾಂತವಾಗಿ
ಇಂದಿಗೂ (೧೯೯೩) ಇದೆ! ನನ್ನ
ಮನೆಯ
ಕಕ್ಕಟ್ಟಿನ
ಒಳಗೆ
ಮತ್ತು
ಅಕ್ಕಪಕ್ಕದ
ಮನೆಗಳ
ಒಳಗೆ
ಕೂಡ
ತಕ್ಕಮಟ್ಟಿಗಾದರೂ ಹಸುರು ಕಂಗೊಳಿಸುತ್ತಿದೆ.
ಎಳೆ
ಮುಂಜಾನೆಯ
ತಾಸುಗಳಲ್ಲಿ
ಇದು
ಥೇಟ್
ಹಳ್ಳಿಯಂತೆಯೇ
ಇರುವುದು - ಶಬ್ದರಾಹಿತ್ಯದಲ್ಲಿ.
ಆದರೆ
ಹಕ್ಕಿಗಳ
ಇಂಚರ
ಇಲ್ಲಿಲ್ಲ. ನೇಸರು
ಏರಿದಂತೆ
ರಸ್ತೆಯಲ್ಲಿಯ
ಆಟೋ
ಆರ್ಭಟ, ಬಸ್ಸು
ಲಾರಿಗಳ
ಹರಟೆಯ
ಜೊತೆಗೆ
ಅವು
ಉರುಚುವ
ದಟ್ಟ
ಕಪ್ಪಿನ
ಹೊಗೆ
ಇವುಗಳಿಂದ
ಈ ಪ್ರದೇಶ
ಕೂಡ
ಬದುಕಲು
ಅಸಹನೀಯವಾಗುತ್ತಿದೆ.
ಆದರೆ
ದಿಲ್ಲಿ, ಮುಂಬಯಿ, ಕೊಲ್ಕತ್ತಾಗಳಿಂದ ಬರುವ ನನ್ನ
ಮಿತ್ರರು
ಮಾತ್ರ
“ಎಂಥಾ
ಋಷ್ಯಾಶ್ರಮ
ಕಟ್ಟಿಕೊಂಡು
ಹಾಯಾಗಿದ್ದೀರಲ್ಲ”
ಎಂದು
ನನಗೆ
ಅಭಿನಂದನೆ
ಸಲ್ಲಿಸುತ್ತಾರೆ.
ಅಪರೂಪಕ್ಕೆ
ನಾನು
ಬೆಂಗಳೂರಿಗೆ
ಹೋಗುವುದುಂಟು.
ಎಷ್ಟು
ಬೇಗನೆ
ಅಲ್ಲಿಂದ
ತೊಲಗಿ
ಹೋದೇನೆಂಬುದು
ಅಲ್ಲಿ
ಮೊದಲು
ಮೂಡುವ
ಭಾವನೆ. ಇಡೀ
ನಗರಕ್ಕೆ
ದುರ್ವಾಸನೆ
ಸಿಂಪಡಿಸಿರುವಂತೆ ಅನ್ನಿಸುತ್ತದೆ. ಕಟ್ಟಡಗಳ, ವಾಹನಗಳ
ಮತ್ತು
ಜನರ
ನೀರಸ
ಯಾಂತ್ರಿಕತೆ,
ಹುಚ್ಚು
ಅಲೆತ
ಮೊರೆತ
ಮತ್ತು
ಗಬ್ಬು
“ಎನ್ನನ್ನು
ಕುರುಡನನ್ನಾಗಿ
ಮಾಡಯ್ಯ, ಕಿವುಡನನ್ನಾಗಿ
ಮಾಡಯ್ಯ, ಮೂಗಿಲ್ಲದವನನ್ನಾಗಿ ಮಾಡಯ್ಯ” ಎಂದು
ಮೊರೆಯಿಡುವಂತೆ
ಮಾಡುತ್ತವೆ.
ಕೆಲವು
ವರ್ಷಗಳ
ಹಿಂದೆ
ಸಾಕ್ಷಾತ್
ಮುಂಬಯಿಗೆ
ವಿಮಾನದಲ್ಲಿ
ಹಾರಿ
ಹೋಗಿ
ಇಳಿದು
ಅಲ್ಲಿ
ಒಂದಿಷ್ಟು
ದಿವಸ
ಇರುವ
ಸುಯೋಗ (?) ಲಭಿಸಿತ್ತು. ವಿಮಾನ
ನೆಲಕ್ಕೆ
ಇಳಿಯುವ
ಮುನ್ನ
ಮಡಿಕೇರಿಯ
ಮಂಜನ್ನು
ಬೇಸಗೆಯ
ಆ ಸಂಜೆ
ಅಲ್ಲಿ
ಕಂಡು
ನನ್ನ
ಭೂಗೋಳದ
ಪಾಠಗಳನ್ನು
ಮರುಜಪಿಸಿದೆ.
ನನ್ನ
ನೆನಪು
ತಪ್ಪಿರಲಿಲ್ಲ.
ಅನುಭವ
ಮಾತ್ರ
ಆ ಸೀಮೆಗೆ
ತಲಪಿರಲಿಲ್ಲ.
ಅದು
ಮಂಜಲ್ಲ, ನಗರದ
ಪಾಪಾವಶೇಷದ
ಮುಸುಕು. ದೈತ್ಯ
ಯಂತ್ರ
ಸ್ಥಾವರಗಳ
ರಾಕ್ಷಸಾಕಾರದ
ಚಿಮಣಿಗಳು
ನಿರಂತರವಾಗಿ
ಕಾರುತ್ತಿದ್ದ
ರಾಸಾಯನಿಕ
ಧೂಮದ
ಕವಚ. ಇಡೀ
ಮುಂಬಯಿ
ಒಂದು
ಬೃಹತ್
ಅನಿಲಕೋಷ್ಠ. ಅಲ್ಲಿ
ನಾನಿದ್ದ
ಹತ್ತು
ದಿವಸಗಳ
ಕಾಲ
ಉಸಿರಾಟಕ್ಕಾಗಿ
ಚಡಪಡಿಸಿದ್ದುಂಟು.
ನನ್ನ
ಬಿಳಿ
ಬಟ್ಟೆ
ಎಲ್ಲವೂ
ಮಸಿಲೇಪಿತವಾಗಿ
ಮಡಿಕೆಗಳಿರುವಲ್ಲಿ ಕರಿಪಟ್ಟಿಗಳಿಂದ ಅಲಂಕೃತವಾಗಿ
ಹೊಸ
‘ಮೆರುಗ’ನ್ನು ಪಡೆದುವು. ಖಂಡಿತ
ಮಾನವ
ಈ ಕುಂಭೀಪಾಕದಲ್ಲಿ
ತೊಳಲಲೆಂದು
ಹುಟ್ಟಿದವನಲ್ಲ.
ನಾನು
ಮಡಿಕೇರಿಯವ. ಕೊಡಗಿನ
ಒಂದೊಂದು
ಗಿರಿಶಿಖರವೂ
ಕಾಡು
ಕಂದರಗಳ
ಆಳವೂ
ಹೊಳೆ
ತೊರೆಗಳ
ಹರಿವೂ
ನನಗೆ
ವಿಶೇಷ
ಸಂದೇಶ
ಮತ್ತು
ಶಿಕ್ಷಣ
ನೀಡಿ
ನನ್ನನ್ನು
ಬೆಳೆಸಿವೆ. ಹಸುರು
ಹುಚ್ಚೆದ್ದು
ಹರಿಯುತ್ತಿದ್ದ
ಈ ನೆಲದಲ್ಲಿ
“ನೀಂ
ನಡೆದು
ನೋಡು
ಕೊಡಗಿನ
ಬೆಡಗಂ”
ಎಂಬ
ಕವಿ
ಉದ್ಗಾರವನ್ನು
ಸಹಜವಾಗಿ
ಗಳಿಸಿದ್ದ
ಈ ಕಾವೇರಿ
ಮಂಡಲದಲ್ಲಿ, ಈಗ (೧೯೯೩) ಬೋಳು
ಬೆಟ್ಟಗಳು, ಹಾಳು
ಹಾದಿಗಳು, ಬರಡು
ಹೊಳೆಗಳು
ಗೋಗರೆಯುತ್ತಾ
ಮೂಕ
ವೇದನೆಯನ್ನು
ಪ್ರದರ್ಶಿಸುತ್ತಿವೆ.
ಯಾವುದೇ
ದಿನ
ನೀವು
ಮೈಸೂರಿನಿಂದ
ಮಡಿಕೇರಿ
ಹಾದಿಯಾಗಿ
ಮಂಗಳೂರಿಗೆ
ಪಯಣಿಸಿ
ನೋಡಿ, ಎಷ್ಟೊಂದು
ಭರ್ತಿ
ಸೌದೆ
ಲಾರಿಗಳು
ನಿಮ್ಮನ್ನು
ಅಡ್ಡಹಾಯುತ್ತವೆ.
ಎಂಟು
ಗಂಟೆಗಳ
ಪಯಣದ
ವೇಳೆ
ಏನಿಲ್ಲ
ಎಂದರೂ
ಹತ್ತು
ಲಾರಿಗಳನ್ನು
ನಾನು
ಎಣಿಸಿದ್ದುಂಟು.
ನಾಗರಿಕ
ಮಾನವ
‘ಝೀರೋ
ಮಶೀನ್’
ಹೊಡೆದು
ಪ್ರಕೃತಿಯ
ಹರವನ್ನು
ಬೋಳಿಸಿದ್ದಕ್ಕೆ
ಅವು
ಕೆಲವೇ
ಜಂಗಮ
ನಿದರ್ಶನಗಳು
ಮಾತ್ರ. ಕೊಡಗಿನ
ಅನೇಕ
ಕಡೆಗಳಲ್ಲಿ
ಈಗ
ಬೇಸಗೆಯಲ್ಲಿ
ಕುಡಿವ
ನೀರಿಗೆ
ಬರ
ಎಂಬ
ಹೊಸ
ಸಮಸ್ಯೆ
ಉದ್ಭವಿಸಿದೆ.
ಋತುಗಳ
ಪುನರಾವರ್ತನೆಯಲ್ಲಿ ಏರುಪೇರು, ಅತಿವೃಷ್ಟಿ ಅನಾವೃಷ್ಟಿಗಳ
ಭೀಕರ
ಪ್ರಹಾರ, ತತ್ಪರಿಣಾಮವಾಗಿ
ಜನರ
ಸಾಮಾಜಿಕ
ಮತ್ತು
ಆರ್ಥಿಕ
ವ್ಯವಹಾರಗಳಲ್ಲಿ
ತಲೆದೋರಿರುವ
ಕ್ಷೋಭೆ
ಇವೆಲ್ಲವುಗಳಿಗೂ
ಕಾರಣವನ್ನು
ನಿಸರ್ಗದ
ಅವ್ಯಾಹತ
ಸೂರೆಯಲ್ಲಿ
ಕಾಣುವುದು
ಕಷ್ಟವಲ್ಲ.
ನಾನು
ಕಟ್ಟಾ
ಸಸ್ಯಾಹಾರಿ. ಒಂದು
ಜಿರಲೆಯನ್ನು
ಕೊಲ್ಲುವುದೂ
ನನ್ನಿಂದಾಗದು.
ಹೇಡಿ
ಅನ್ನಿ
ಬೇಕಾದರೆ. ಆದರೆ
ನಮ್ಮೂರಿನ
ಮಹಾಪರಾಕ್ರಮಿಗಳು ಬೇಟೆ ಆಡುವ
ವೈಖರಿ
ನೋಡಿ. ಹುಲಿ, ಚಿರತೆ
ಇಲ್ಲವೇ
ಕಾಡುಹಂದಿ
ಇವರ
ಲಕ್ಷ್ಯ. (ಈಗೀಗ
ಇವನ್ನು
ಮೃಗಶಾಲೆಗಳಲ್ಲಿಯ ತೀರಾ ಅಸ್ವಾಭಾವಿಕ
ಪರಿಸರದಲ್ಲಿ
ಮಾತ್ರ
ನೋಡಬಹುದಷ್ಟೆ.)
ಅದರ
ಹತ್ತಿರ
ಯಾವ
ಶಸ್ತ್ರವೂ
ಇಲ್ಲ. ಅದಕ್ಕೆ
ಬೇಟೆಯ
ಯಾವ
ಹಿಕ್ಮತ್ತೂ
ತಿಳಿದಿಲ್ಲ. ಅದರ
ವಿರುದ್ಧ
ನಮ್ಮ
ಬುದ್ಧಿವಂತರ
ಹೊಂಚೇನು, ಸಂಚೇನು, ಶಸ್ತ್ರಾಸ್ತ್ರಗಳ ಅಟ್ಟಹಾಸವೇನು? ಆ ನಿರಪರಾಧಿಯನ್ನು ಇರುಕಿನಲ್ಲಿ ಸಿಲುಕಿಸಿ, ಅದು
ಆತ್ಮರಕ್ಷಣೆಗಾಗಿ ಏನಾದರೂ ಮಾಡಿದಾಗ
ಅದನ್ನು
ಕ್ರೌರ್ಯ
ಎಂದು
ಸಾರಿ
ಸಾರ್ವಜನಿಕವಾಗಿ
ಕೊಲೆಗೈದು
ಮೆರೆಯುವ
ಅತಿರಥಮಹಾರಥರ
ಮರ್ಜಿ
ನನಗೆ
ಅರ್ಥವಾಗುವುದಿಲ್ಲ.
‘ಕವಿಶಿಷ್ಯ’
ಪಂಜೆ
ಮಂಗೇಶರಾಯರು
(೧೮೭೪-೧೯೩೭) ತಾವು
ಕಂಡು
ನಲಿದ
ಕೊಡಗನ್ನು
ಕುರಿತು
ಬರೆದರು
“ಇದು
ಅಗಸ್ತ್ಯನ
ತಪದ
ಮಣೆ
ಕಾವೇರಿತಾಯ
ತವರ್ಮನೆ.” ಅದೇ
ಪಂಜೆಯವರು ಇಂದಿನ ಕೊಡಗನ್ನು (ಅಷ್ಟೇಕೆ
ಭಾರತದ
ಯಾವುದೇ
ಅರಣ್ಯವಲಯವನ್ನು
- ಹಾಗೆಂದರೇನು?
- ಇಲ್ಲವೇ
ನಿಸರ್ಗರಮ್ಯ
ಪ್ರದೇಶವನ್ನು)
ನೋಡಿದ್ದರೆ, ಪ್ರಾಯಶಃ
ಹೀಗೆ
ಬರೆದಿರುತ್ತಿದ್ದರು:
“ಇದು
ಕಿರಾತರ
ಬೇಟೆಕಳ
ಮರಕಟುಕರಾಡುಂಬೊಲವಲ!”
ನಿಸರ್ಗದ
ನಿರಂತರ
ಕಬಳಿಕೆ, ಸೂರೆ, ದರೋಡೆಗಳು
ತೊಡಗಿದ್ದು
ಇಂದು
ನಿನ್ನೆ
ಅಲ್ಲ. ಆದರೆ
ಕಳೆದ
ಸಮಸ್ತ
ಶತಮಾನಗಳಲ್ಲಿಯೂ
ನಡೆಯದಿದ್ದಷ್ಟು
ಹಾನಿ
ಈ ಶತಮಾನದಲ್ಲಿ
ನಡೆದುಹೋಗಿದೆ.
ಪರಿಸರದ
ಶಿಶುವಾದ
ಮಾನವ
ನಡೆಸುತ್ತಿರುವ
ಈ ಘೋರ
ಹತ್ಯಾಕಾಂಡದ
ಪರಿಣಾಮವಾಗಿ
ಭೂಗೋಳದಲ್ಲಿ
ಸಾಕಷ್ಟು
ಅಸ್ತವ್ಯಸ್ತಗಳು
ತಲೆದೋರಿವೆ. ಇವು
ಅಂತಿಮವಾಗಿ
ಸ್ವತಃ
ಮಾನವನಿಗೆ
ಮುಳುವನ್ನು
ತಂದೊಡ್ಡದಿರವು
(ಈಗಾಗಲೇ
ತಂದೊಡ್ಡಿವೆ)
ಎಂಬುದಾಗಿ
ಪರಿಸರ
ವಿಜ್ಞಾನಿಗಳು
ಪದೇ
ಪದೇ
ಎಚ್ಚರಿಸುತ್ತಿದ್ದಾರೆ.
ಭೂಮಂಡಲದ
ಯಾವ
ಭಾಗವೂ
ಇಂದು
ಪರಿಸರ
ಮಾಲಿನ್ಯದಿಂದ
ವಿಮೋಚಿತವಾಗಿಲ್ಲ ಎಂಬುದಾಗಿ ಸಾಕ್ಷ್ಯಾಧಾರಗಳಿಂದ ರುಜುವಾತಿಸುತ್ತಿದ್ದಾರೆ.
ಮಂಗಳೂರು, ಅಮ್ಮಸಂದ್ರ, ದಾಂಡೇಲಿ, ಭದ್ರಾವತಿ, ಹರಿಹರ, ಕಾರವಾರ, ಈಗ
ಮೈಸೂರು
ಕೂಡ
ಮುಂತಾದ
ಪ್ರದೇಶಗಳಲ್ಲಿ
ವಾಸಿಸುವವರಿಗೆ
ಪರಿಸರ
ಮಾಲಿನ್ಯದ
ಪ್ರತ್ಯಕ್ಷ
ಅನುಭವ
ಸಾಕಷ್ಟು
ಆಗಿದೆ, ಆಗುತ್ತಿದೆ.
[ಭವಿಷ್ಯವಿಜ್ಞಾನ ಪುಸ್ತಕದ ಮುಂದಿನ
ಭಾಗಗಳನ್ನು ಹೀಗೇ
ಅಧ್ಯಾಯಗಳ ಅಂತ್ಯದ
ಅನುಕೂಲ ನೋಡಿಕೊಂಡು ಕಂತುಗಳಲ್ಲಿ ಪ್ರತಿ ಮಂಗಳವಾರ ಬೆಳಗ್ಗೆ ಪ್ರಕಟವಾಗುವಂತೆ ವ್ಯವಸ್ಥೆ ಮಾಡುತ್ತಿದ್ದೇನೆ.
ನಿಮ್ಮ ಪ್ರತಿಕ್ರಿಯೆ, ಚರ್ಚೆಯ
ನುಡಿಗಳಿಗೆ ಎಂದಿನಂತೇ ಸ್ವಾಗತವಿದೆ]
ಜಿ.ಟಿ.ನಾರಾಯಣ ರಾಯರ ಭವಿಷ್ಯ ವಿಜ್ಞಾನ ಹಲವಾರು ಬಾರಿ ಓದಿ ಮೆಚ್ಚಿಕೊಂಡ ಪುಸ್ತಕ. ಈಗಲೂ ಅಷ್ಟೇ ಪ್ರಸ್ತುತವಿರುವ ಈ ಪುಸ್ತಕವನ್ನು ಮತ್ತೊಮ್ಮೆ ವಿದ್ಯುನ್ಮಾನ ಮಾಧ್ಯಮದಲ್ಲಿ ಕಂತಿನ ರೂಪದಲ್ಲಿ ಓದುವ ಅನುಕೂಲ ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು.
ReplyDeleteತಮ್ಮೆಲ್ಲರ ನಿಸ್ವಾರ್ಥ ಪ್ರಯತ್ನ ಮತ್ತು ಜ್ಞಾನ ಸೇವೆಗೆ ಅಭಿನಂದನೆಗಳು.
ReplyDelete- ಪೆಜತ್ತಾಯ ಎಸ್. ಎಮ್.
ಶ್ರೀಮಾನ್ ರಾಯರ ಪುಸ್ತಕಗಳನ್ನ ವಿದ್ಯುನ್ಮಾನ ರೀತಿಯಲ್ಲಿ ಕೊಡುತ್ತಿರುವುದಕ್ಕೆ ಧನ್ಯವಾದಗಳು. ಪುಸ್ತಕಗಳನ್ನು ಕೊಂಡುಕೊಳ್ಳಬೇಕು, ಎಲ್ಲಿ ದೊರೆಯುತ್ತದೆ ಎಂದು ತಿಳಿಸಿ ಉಪಕಾರವಾಗುತ್ತದೆ
ReplyDeleteಇಂತಿ
ರಘು
ಜಿ.ಟಿ.ನಾರಾಯಣ ರಾಯರ ನನ್ನಲ್ಲಿ ಲಭ್ಯ ಕೃತಿಗಳು: ಬಾನಬಯಲಾಟ ಗ್ರಹಣ ರೂ ಹತ್ತು, ಜಾತಕ ಮಾತ್ತು ಭವಿಷ್ಯ ರೂ ಹದಿನೈದು, ಸಂಗೀತ ರಸನಿಮಿಷಗಳು ರೂ ಅರವತ್ತು, ವಿಜ್ಞಾನ ಸಪ್ತರ್ಷಿಗಳು ರೂ ಮೂವತ್ತೈದು, ಫರ್ಮಾ ಯಕ್ಷಪ್ರಶ್ನೆ ರೂ ಅರವತ್ತು, ಎನ್ಸಿಸಿ ದಿನಗಳು ರೂ ಐವತ್ತೈದು, ಕುವೆಂಪು ದರ್ಶನ ಸಂದರ್ಶನ ರೂ ನಲವತ್ತೈದು, ಸಪ್ತಸಾಗರದಾಚೆಯೆಲ್ಲೋ ರೂ ಅರವತ್ತು, ಅತ್ರಿಸೂನು ಉವಾಚ ರೂ ಮೂವತ್ತು, ಕೊಪರ್ನಿಕಸ್ ಕ್ರಾಂತಿ ರೂ ಮೂವತ್ತು, ಕೃಷ್ಣವಿವರಗಳು ರೂ ಮೂವತ್ತು, Scientific Temper 15/- Crossing the dateline Rs 40/- With the great minds Rs. 30/-
Deleteಪುಸ್ತಕದ ಹೆಸರು ಮತ್ತು ಮುದ್ರಿತ ಬೆಲೆ ಮುಂಗಡ ಕಳಿಸಿದವರಿಗೆ ಅಂಚೆ ವೆಚ್ಚ ನಾನೇ ಹಾಕಿಕೊಂಡು ಪುಸ್ತಕ ಕಳಿಸಬಲ್ಲೆ. ಇವು ನವಕರ್ನಾಟಕದವರ ಮಳಿಗೆಗಳಲ್ಲೂ ಲಭ್ಯ. ನನ್ನ ವಿಳಾಸ: ಅಶೋಕವರ್ಧನ ಜಿ.ಎನ್.ಅಭಯಾದ್ರಿ, ಪಿಂಟೋರವರ ಓಣಿ, ಕರಂಗಲ್ಪಾಡಿ, ಮಂಗಳೂರು ೫೭೫೦೦೩
ಮಿಂಚಂಚೆ ವಿಳಾಸ:athreebook@gmail.com
ಒಳ್ಳೆಯ ಕಾರ್ಯ...ಬಹಳ ಮಂದಿಗೆ ಉಪಕಾರವಾಗುತ್ತದೆ.
ReplyDeleteತುಂಬ ಒಳ್ಳೇ ಕೆಲಸಕ್ಕೆ ಮನಸ್ಸು ಮಾಡಿದ್ದೀರಿ. ಧನ್ಯವಾದ.
ReplyDeleteಭವಿಷ್ಯ ವಿಜ್ಞಾನಕ್ಕೂ (futurology) ಫಲಜ್ಯೋತಿಷ್ಯಕ್ಕೂ ಇರುವ ಸಾಮ್ಯ ವೈಷಮ್ಯಗಳನ್ನು ಶ್ರಿ ಜಿ.ಟಿ ನಾರಾಯಣ ರಾಯರು ಸರಳವಾಗಿ ವರ್ಣಿಸಿದ್ದಾರೆ. ನಿಸರ್ಗಕ್ಕೆ ಯಾವುದೇ ಬಗೆಯ ಮಾನವೀಯ ಗುಣವಿಲ್ಲ ಎಂಬುದು ಸತ್ಯ. ಫಲಜ್ಯೋತಿಷ್ಯ ವಿಜ್ಞಾನವಲ್ಲ, ಜ್ಞಾನವಲ್ಲ, ವಿದ್ಯೆಯಲ್ಲ - ಬದಲು ಅವಿಜ್ಞಾನ, ಅಜ್ಞಾನ, ಅವಿದ್ಯೆ. ಅಸ್ತಿತ್ವರಹಿತ ಊಹೆಗಳ ಗಾಳಿಗೋಪುರವಾಸಿ. ಕುರುಡರೊಡೆಯ ಬಡಬಡಿಸುವ ಅಬದ್ಧ ನುಡಿಗಳ ಅತಾರ್ಕಿಕ ಸರಣಿಯೇ ಫಲಜ್ಯೋತಿಷ್ ಎಂಬ ಶ್ರಿ ಜಿ.ಟಿ ನಾರಾಯಣ ರಾಯರ ವಾದ ಸ್ಪಷ್ಟವಾಗಿದೆ. ಅವರ ಬರವಣಿಗೆಯನ್ನು ನಿಮ್ಮ ಬ್ಲಾಗ್ ಮೂಖಾಂತರ ಓದುಗರಿಗೆ ಮುಟ್ಟಿಸುವ ನಿಮ್ಮ ಪ್ರಯತ್ನ ಶ್ಲಾಘ್ಹನೀಯ. ಧನ್ಯವಾದಗಳು.
ReplyDeleteCompiling all the ages into a pdf document would help students- more so, students from schools in village with no definitive library. Your efforts are highly appreciable.
ReplyDeleteಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ |
ReplyDeleteವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ ||
ಸಹಿಸದಲ್ಲದೆ ಮುಗಿವ ದಾವದಶೆ ಬಂದೊಡಂ |
ಸಹನೆ ವಜ್ರದ ಕವಚ ಮಂಕುತಿಮ್ಮ ||